AKSHARA KHUSHI
News

ಎಳ್ಳ ಅಮಾವಾಸ್ಯೆ ಸಡಗರ; ರೈತ ಬಾಂಧವರ ಸಂಭ್ರಮ

30th December 2024

*ಎಳ್ಳ ಅಮಾವಾಸ್ಯೆ ಸಡಗರ; ರೈತ ಬಾಂಧವರ ಸಂಭ್ರಮ*


ಯಾದಗಿರಿ ನಗರದ ರೈಲ್ವೆ ನಿಲ್ದಾಣದ ಸಮೀಪದ ನಗರದ ನಿವಾಸಿಯಾದ ಆಂಜನೇಯ ಕೌಳೂರ್ ಪರಿವಾರದ ವತಿಯಿಂದ ಎಳ್ಳಮವಾಸ್ಯೆ ಹಬ್ಬದ ಪ್ರಯುಕ್ತ ಕುಟುಂಬ ಸದಸ್ಯರು ಹಾಗೂ ಸ್ನೇಹಿತ ವರ್ಗದವರು ಸೇರಿ ತಮ್ಮ ಹೊಲದಲ್ಲಿ ಹಸಿರಿನಿಂದ ಕಂಗೊಳಿಸುವ ಭೂತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು. ಜೋಳದ ಕಡಬು, ರೊಟ್ಟಿಯ ಮಿಶ್ರಣದಿಂದ ಮಾಡಿದ ಚರಗವನ್ನು ಹೊಲದ ತುಂಬೆಲ್ಲಾ ಚೆಲ್ಲುವ ಮೂಲಕ ಈ ಸುಗ್ಗಿ ಸಮೃದ್ಧಿಯಾಗುವಂತೆ ಮಾಡು ತಾಯಿ ಅಂತ ಭೂತಾಯಿಗೆ ಬೇಡಿಕೊಂಡು ಭೋಜನವನ್ನು ಸವಿದರು.


ಈ ಸಂದರ್ಭದಲ್ಲಿ ನಗರವಾಸಿಗಳಾದ ವಿಶಾಲ್ ಕೌಳೂರು, ಸತೀಶ್ ಕಟ್ಟಿಮನಿ, ಮಾರ್ತಾಂಡಪ್ಪ ಕಟ್ಟಿಮನಿ, ಶಿಕ್ಷಕರಾದ ಜಾಫರ್ ಬಾಬು ಶರಮುದ್ದೀನ್, ಅರುಣ್ ಕುಮಾರ್ ಬಂದಳ್ಳಿ ಹಾಗೂ ಇನ್ನಿತರರು ಭಾಗವಹಿಸಿದ್ದರು.