Skip to main content
BELAGAVI SPOORTI

ಅಭಿಮಾನ ಸಾಂಸ್ಕೃತಿಕ ವೇದಿಕೆ ಚಿನ್ಮಯ ವಿಶಾಲನಗರ ಸಿರ್ಸಿ ಇವರು

ಅಭಿಮಾನ ಸಾಂಸ್ಕೃತಿಕ ವೇದಿಕೆ ಚಿನ್ಮಯ ವಿಶಾಲನಗರ ಸಿರ್ಸಿ ಇವರು  image

ಅಭಿಮಾನ ಸಾಂಸ್ಕೃತಿಕ ವೇದಿಕೆ ಚಿನ್ಮಯ ವಿಶಾಲನಗರ ಸಿರ್ಸಿ ಇವರು ದಿನಾಂಕ.29.08.2026 ರಂದು ಯೋಗ ಮಂದಿರ ಶಿರಸಿಯ ಸರ್ವಜ್ಞೇಂದ್ರ ಸರಸ್ವತಿ ವೇದಿಕೆಯಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ರಾಷ್ಟ್ರೀಯ ನಾಯಕರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಆಗಿದ್ದ ದಿ, ಶ್ರೀ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಡೆಸಿರುತ್ತಾರೆ . ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ, ಆರ್.ಎನ್.ಹೆಗಡೆ ಬಂಡಿಮನೆ ನಿವೃತ್ತ ಜನರಲ್ ಮೆನೇಜರ್ ನಬಾರ್ಡ, ಹಾಗೂ ಮುಖ್ಯ ಅಥಿತಿಗಳಾಗಿ ಶ್ರೀ ಕೆ.ಎನ್. ಹೊಸ್ಮನಿ ನಿವೃತ್ತ ಪ್ರಾಚಾರ್ಯರು, ಶ್ರೀ ಆರ್.ಡಿ. ಹೆಗಡೆ ಅಲ್ಮನೆ ನಿವೃತ್ತ ಪ್ರಾಚಾರ್ಯರು,

ಶ್ರೀ ಆರ್.ಜಿ.ಹೆಗಡೆ ಕೆರೆಮನೆ ಹಿರಿಯ ನ್ಯಾಯವಾದಿಗಳು, ಶ್ರೀಮತಿ ಎನ್.ಆರ್.ರೂಪಶ್ರೀ ಲೇಖಕಿ. ಈ ಎಲ್ಲ ಗಣ್ಯರ ಸಮ್ಮುಖದಲ್ಲಿ ದಿ.ಶ್ರೀ ರಾಮಕೃಷ್ಣ ಹೆಗಡೆಯವರ ನೂರು ವರ್ಷಗಳ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು ಶ್ರೀ ವಿ.ಎನ್.ಭಾಗ್ವತ್ ವಕೀಲರು ಬರಬಳ್ಳಿ ಸಿರ್ಸಿ ಇವರು ಕಾರ್ಯಕ್ರಮ ಆಯೋಜನೆ ಮಾಡಿದ್ದರು ಇದು ಇವರು ನಡೆಸುವ 37 ನೆಯ ಕಾರ್ಯಕ್ರಮ ಆಗಿದೆ.


ಕಾರ್ಯಕ್ರದ ಮುಂಚಿತ ನಾಲ್ಕು ತಿಂಗಳ ಹಿಂದೆ ಇವರು ಮಾಜಿ ಮುಖ್ಯಮಂತ್ರಿಗಳ ಕುರಿತಾಗಿ ಲೇಖನ ಸ್ಪರ್ಧೆ ಮತ್ತು ಯಕ್ಷಗಾನ ಅರ್ಥಗಾರಿಕೆ ಸ್ಪರ್ಧೆಯನ್ನು ಏರ್ಪಡಿಸಿದ್ದರು.ಈ ಎರಡೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು . ಶ್ರೀಮತಿ ರಾಜೇಶ್ವರಿ ಎಸ್ ಹೆಗಡೆ ನಿವೃತ್ತ ಅಧೀಕ್ಷಕರು ಶಿಕ್ಷಣ ಇಲಾಖೆ ಬೆಳಗಾವಿಯ ಶ್ರೀಮತಿ ರಾಜೇಶ್ವರಿ ಎಸ್ ಹೆಗಡೆ ಯವರಿಗೆ ಲೇಖನ ಸ್ಪರ್ಧೆಯಲ್ಲಿ ಚತುರ್ಥ ಸ್ಥಾನ ಹಾಗೂ ಯಕ್ಷಗಾನ ಅರ್ಥಗಾರಿಕೆ ಆಡಿಯೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

ದೊರೆತಿದ್ದು ಇಂದು ಇವರಿಗೆ ಈ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗಿದೆ. ಕಾರ್ಯಕ್ರಮ ಸಾಯಂಕಾಲ

ಸಮಯದಲ್ಲಿ ಸುಂದರವಾಗಿ ನಡೆಯಿತು.

Comments