Skip to main content
BELAGAVI SPOORTI

ಹುಣ್ಣಶೀಕಟ್ಟಿಯಲ್ಲಿ DCC ಬ್ಯಾಂಕ್ ನಿರ್ದೇಶಕರಿಗೆ ಆತ್ಮೀಯ ಸನ್ಮಾನ

ಹುಣ್ಣಶೀಕಟ್ಟಿಯಲ್ಲಿ DCC ಬ್ಯಾಂಕ್ ನಿರ್ದೇಶಕರಿಗೆ ಆತ್ಮೀಯ ಸನ್ಮಾನ image

ಹುಣ್ಣಶೀಕಟ್ಟಿಯಲ್ಲಿ DCC ಬ್ಯಾಂಕ್ ನಿರ್ದೇಶಕರಿಗೆ ಆತ್ಮೀಯ ಸನ್ಮಾನ


ಹುಣ್ಣಶೀಕಟ್ಟಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ DCC ಬ್ಯಾಂಕಿನ ನಿರ್ದೇಶಕರಾದ ನಾನಾ ಸಾಹೇಬ ಪಾಟೀಲ ಅವರು ಆಗಮಿಸಿದ ಸಂದರ್ಭದಲ್ಲಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.


ಗ್ರಾಮದ ರೈತರು ಹಾಗೂ ಸಹಕಾರ ಸಂಘದ ಸದಸ್ಯರ ಹಿತದೃಷ್ಟಿಯಿಂದ ಸಂಘದ ಕಾರ್ಯಚಟುವಟಿಕೆಗಳು, ರೈತರಿಗೆ ದೊರೆಯುತ್ತಿರುವ ವಿವಿಧ ಸೌಲಭ್ಯಗಳು ಹಾಗೂ ಸಂಘದ ಮುಂದಿನ ಅಭಿವೃದ್ಧಿ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ಸಹಕಾರ ಕ್ಷೇತ್ರವು ಗ್ರಾಮೀಣ ಭಾಗದ ರೈತರ ಆರ್ಥಿಕ ಪ್ರಗತಿಗೆ ಪ್ರಮುಖ ಆಧಾರವಾಗಿದ್ದು, ಸಂಘದ ಮೂಲಕ ರೈತರಿಗೆ ಅಗತ್ಯವಾದ ಸೇವೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ದೊರೆಯಬೇಕು ಎಂಬ ಆಶಯ ವ್ಯಕ್ತವಾಯಿತು.


ನಾನಾ ಸಾಹೇಬ ಪಾಟೀಲ ಅವರನ್ನು ಸನ್ಮಾನಿಸಿ ಮಾತನಾಡಿದ ಸಂಘದ ಪದಾಧಿಕಾರಿಗಳು, ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು, ಸಹಕಾರ ಸಂಘವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಗ್ರಾಮದ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘ ಸದಾ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಚನ್ನಬಸಪ್ಪ ಶಿವಲಿಂಗಪ್ಪ ಮೋಕಾಶಿ, ಉಪಾಧ್ಯಕ್ಷರಾದ ಶಂಕ್ರಪ್ಪ ಮಲ್ಲೇಶಪ್ಪ ಹುಬ್ಬಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಅವ್ವಕ್ಕನವರ, ಗ್ರಾಮದ ಗುರುಹಿರಿಯರು, ಪಿಕೆಪಿಎಸ್‌ನ ಸರ್ವ ಸದಸ್ಯರು ಹಾಗೂ ರೈತರು ಉಪಸ್ಥಿತರಿದ್ದರು.


ಕಾರ್ಯಕ್ರಮವು ಆತ್ಮೀಯ ವಾತಾವರಣದಲ್ಲಿ ಜರುಗಿದ್ದು, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು DCC ಬ್ಯಾಂಕ್ ನಿರ್ದೇಶಕರಾದ ನಾನಾ ಸಾಹೇಬ ಪಾಟೀಲ ಅವರಿಗೆ ಶುಭಾಶಯಗಳನ್ನು .

Comments