Skip to main content
BELAGAVI SPOORTI

ರೈತರ ಸಾಲಮನ್ನಾ, ಖಾನಾಪುರ ತಾಲೂಕು ಬರಪೀಡಿತ ಘೋಷಣೆ ಮತ್ತು ಬರಪರಿಹಾರ ಕಾಮಗಾರಿ ಆರಂಭಿಸಲು ಕೃಷಿಕ ಸಮಾಜ ಆಗ್ರಹ

ರೈತರ ಸಾಲಮನ್ನಾ, ಖಾನಾಪುರ ತಾಲೂಕು ಬರಪೀಡಿತ ಘೋಷಣೆ ಮತ್ತು ಬರಪರಿಹಾರ ಕಾಮಗಾರಿ ಆರಂಭಿಸಲು ಕೃಷಿಕ ಸಮಾಜ ಆಗ್ರಹ image

ರೈತರ ಸಾಲಮನ್ನಾ, ಖಾನಾಪುರ ತಾಲೂಕು ಬರಪೀಡಿತ ಘೋಷಣೆ ಮತ್ತು ಬರಪರಿಹಾರ ಕಾಮಗಾರಿ ಆರಂಭಿಸಲು ಕೃಷಿಕ ಸಮಾಜ ಆಗ್ರಹ


ಖಾನಾಪುರ: ತಾಲೂಕಿನಲ್ಲಿ ಈ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೇ ಮಳೆ‌ನಂಬಿ ಉಳುಮೆ ಮಾಡಿದ ರೈತರು ಆತಂಕದಲ್ಲಿದ್ದಾರೆ. ಹೀಗಾಗಿ ತಾಲೂಕಿನ ರೈತರು ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಬೇಕು, ನಮ್ಮ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಹಾಗೂ ಕೂಡಲೇ ತಾಲೂಕಿನಲ್ಲಿ ಬರಪರಿಹಾರ ಕಾಮಗಾರಿ ಆರಂಭಿಸಬೇಕು ಎಂದು ಆಗ್ತಹಿಸಿ ಕೃಷಿಕ ಸಮಾಜ ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರ ಪಟ್ಟಣದಲ್ಲಿ ತಹಸೀಲ್ದಾರ್ ಮೂಲಕ‌ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.



ಮನವಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಉಚಿತವಾಗಿ ಬೀಜ ವಿತರಿಸಬೇಕು, ಕೃಷಿ ಪಂಪ್ ಸೆಟ್‌ಗಳಿಗೆ ೭ ಗಂಟೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು, ಭೂ ಕಂದಾಯ ಮನ್ನಾ ಮಾಡಬೇಕು ಮತ್ತು ರೈತರ ಪಂಪ್ ಸೆಟ್ ಕೆಟ್ಟಾಗ ಕೂಡಲೇ ದುರಸ್ತಿ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಕೃಷಿಕ ಸಮಾಜ ತಾಲೂಕು ಘಟಕದ ಅಧ್ಯಕ್ಷ ಕೋಮಲ ಜಿನಗೊಂಡ, ಜಿಲ್ಲಾ ಪ್ರತಿನಿಧಿ ಕೃಷ್ಣಾಜಿ ಪಾಟೀಲ, ನಿರ್ದೇಶಕರಾದ ವಿಜಯ ಕಾಮತ, ಜ್ಯೋತಿಬಾ ರೇಮಾಣಿ, ಗಂಗಪ್ಪ ಹೊಸೂರ, ಪಾರೀಸ ಮುತಗಿ, ಈರಪ್ಲ ಕಣಬರ್ಗಿ ಮತ್ತಿತರರು ಇದ್ದರು.

Comments