Skip to main content
BELAGAVI SPOORTI

ಪ್ರಾಥಮಿಕ ಕೃಷಿ ಪತ್ತಿನ ಗೋದಾಮಿಗೆ ಶಂಕುಸ್ಥಾಪನೆ ತುರಮರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ

ಪ್ರಾಥಮಿಕ ಕೃಷಿ ಪತ್ತಿನ ಗೋದಾಮಿಗೆ ಶಂಕುಸ್ಥಾಪನೆ  ತುರಮರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ  image

ಪ್ರಾಥಮಿಕ ಕೃಷಿ ಪತ್ತಿನ ಗೋದಾಮಿಗೆ ಶಂಕುಸ್ಥಾಪನೆ

ತುರಮರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಾಣಗೊಳ್ಳಲಿರುವ ನೂತನ ಗೋದಾಮಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

DCC ಬ್ಯಾಂಕಿನ ನಿರ್ದೇಶಕರಾದ ನಾನಾ ಸಾಹೇಬ ಪಾಟೀಲ ಅವರು ಶಂಕುಸ್ಥಾಪನೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದರು. ರೈತರಿಗೆ ಕೃಷಿ ಉತ್ಪನ್ನಗಳ ಸಂಗ್ರಹಣೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಗೋದಾಮಿನ ನಿರ್ಮಾಣವು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಮಹಾಂತೇಶ ಬೋಗುರ ಮತ್ತು ಉಪಾಧ್ಯಕ್ಷರಾದ ಕಲ್ಮೇಶ ಕೋಟಿ ಕೆಪಿಸಿಸಿ ಸದಸ್ಯರಾದ ಶಂಕರ ಹೊಳಿ ಸೋಮೇಶ್ವರ ಶುಗರ್ ಫ್ಯಾಕ್ಟರಿ ನಿರ್ದೇಶಕರಾದ ಶೇಖಪ್ಪ ಯರಗೊಪ್ಪ ಡಿಸಿಸಿ ಬ್ಯಾಂಕಿನ ತಾಲೂಕಾ ನಿಯಂತ್ರಣಾಧಿಕಾರಿಗಳಾದ ಶ್ರೀ ಶಿವಾನಂದ ಕೋಟಗಿ ಕೃಷಿಕ ಸಮಾಜದ ಅಧ್ಯಕ್ಷರು ಶ್ರೀ ಪಡೆಪ್ಪ ಬೋಗೂರ ಶ್ರೀ ಅಶೋಕಗೌಡ ಪಾಟೀಲ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರು ಮತ್ತು

ಗ್ರಾಮೀಣ ಭಾಗದ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಗೋದಾಮಿನ ವ್ಯವಸ್ಥೆ ಸಹಕಾರಿಯಾಗಲಿದೆ. ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನು ಸೂಕ್ತ ಸಮಯದಲ್ಲಿ ಮಾರಾಟ ಮಾಡಲು ಅನುಕೂಲವಾಗುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ.

ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ತುರಮರಿ ಗ್ರಾಮದ ಗ್ರಾಮಸ್ಥರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಗ್ರಾಮದ ಅಭಿವೃದ್ಧಿಗೆ ಪೂರಕವಾಗುವ ಇಂತಹ ಕಾಮಗಾರಿಗಳು ಮುಂದುವರಿಯಬೇಕು. ರೈತರು ಹಾಗೂ ಗ್ರಾಮಸ್ಥರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಎಲ್ಲರೂ ಸಹಕರಿಸಬೇಕು ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.


Comments