ಖಾನಾಪುರ: ತಾಲೂಕಿನ ಬೀಡಿ ಗ್ರಾಮದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋ ಜನೆಯ ವತಿಯಿಂದ ಸಬಲ ಮಹಿಳೆ ಸದೃಢ ಸಮಾಜ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮಾತನಾಡಿ ಮಹಿಳೆಯರಿಗೆ ಮನೆಯಲ್ಲಿ ಜವಾಬ್ದಾರಿ ವಹಿಸಬೇಕಾದ ನಿರ್ವಹಿಸಬೇಕಾದ ನಿರ್ವಹಣೆಯಲ್ಲಿ ಬಗ್ಗೆ ಮಾಹಿತಿ ನೀಡಿ 48 ಜನ ವಿದ್ಯಾರ್ಥಿನಿಯರಿಗೆ ಯೋಜನೆಯಿಂದ ಮಂಜೂರಾತಿಯಾದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಿಸಿದರು. ಎಚ್ಚರಿಕೆಯ
ಅತಿಥಿಯಾಗಿ ಮುಖ್ಯ ಭಾಗವಹಿಸಿದ್ದ ಪಿ.ಎಸ್.ಐ ನಾಗರತ್ನ ಹಿರೇಮಠ ಮಾತನಾಡಿ, ಮಹಿಳೆಯರು ಧೈರ್ಯ ಮಾಡಿ ಮುಂದೆ ಬಂದಲ್ಲಿ
ಎಂದರು. ಕುಟುಂಬದ ನಿರ್ವಹಣೆ ಸುಲಭ
ಸಂಪನ್ಮೂಲ ವ್ಯಕ್ತಿ ಡಾ.ನಿರ್ಮಲಾ ಬಟ್ಟಲ್ ಮಾತನಾಡಿ, ಮಹಿಳೆಯರು ಯಾವುದಕ್ಕೂ ಹಿಂದೆ ಸರಿಯದೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯೆ ದೀಪಾ ಪಾಟೀಲ ವಹಿಸಿದ್ದರು. ಜನಜಾಗೃತಿ
ವೇದಿಕೆಯ ಸದಸ್ಯೆ ರೂಪಾ ಕುಲಕರ್ಣಿ, ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಒಕ್ಕೂಟಗಳ ಅಧ್ಯಕ್ಷೆ ವೀಣಾ ಸೀಗಿಹಳ್ಳಿ, ಜ್ಞಾನ ವಿಕಾಸ ಯೋಜನಾಧಿಕಾರಿ ಸುಧಾ ಭಾಸ್ಕರ, ತಾಲೂಕು ಯೋಜನಾಧಿಕಾರಿ ಗಣಪತಿ ನಾಯ್ಕ ಹಾಗೂ ಜ್ಞಾನ ವಿಕಾಸ ಸಮನ್ವಯಧಿಕಾರಿ ಸುನೀತಾ ಹಿರೇಮಠ ಸೇರಿದಂತೆ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಇತರರು ಉಪಸ್ತಿತರಿದ್ದರು.

