25th June 2025
ಬಳ್ಳಾರಿ ಜೂನ್ 25 : ಇದೇ ಡಿಸೆಂಬರ್ ನಲ್ಲಿ ಬಳ್ಳಾರಿ ನಗರದಲ್ಲಿ ಜರುಗುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಗೊಳಿಸಲು ಬಳ್ಳಾರಿ ನಗರದ ರಸ್ತೆಯ ತಗ್ಗು ಗುಂಡಿಗಳನ್ನು ಮುಚ್ಚಿ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುವುದರ ಮೂಲಕ ಸಜ್ಜುಗೊಳಿಸಬೇಕಾದ ಅವಶ್ಯಕತೆ ನಮ್ಮ ನಿಮ್ಮ ಮೇಲಿದೆ ಕಾರಣ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಂಡು ಸಮ್ಮೇಳನಕ್ಕೆ ಯಾವುದೇ ತೊಂದರೆ ಆಗದಂತೆ ನಗರವನ್ನು ಸಜ್ಜುಗೊಳಿಸಬೇಕೆಂದು ಕನ್ನಡ ನಾಡು ರೈತ ಸಂಘದ ಜಿಲ್ಲಾಧ್ಯಕ್ಷ ಮೆಣಸಿನ ಕಾಯಿ ಈಶ್ವರಪ್ಪ ಮನವಿ ಮಾಡಿದರು.
ಅವರಿಂದು ಮಹಾನಗರ ಪಾಲಿಕೆಯಲ್ಲಿ ಮೇಯರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ನಮ್ಮ ರೈತ ಸಂಘದ ಹೆಸರನ್ನು ಕನ್ನಡ ನಾಡು ಎಂದು ಇಟ್ಟುಕೊಂಡಿರುವುದಕ್ಕೆ ನಮಗೆ ಅತ್ಯಂತ ಹೆಮ್ಮೆ ಇದೆ ಈ ದೃಷ್ಟಿಯಿಂದ ನಾವು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಳ್ಳಾರಿಯನ್ನು ಅತ್ಯಂತ ಸುಸಜ್ಜಿತ ರೀತಿಯಲ್ಲಿ ರೀತಿಯಲ್ಲಿ ಸಜ್ಜಿಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಅಷ್ಟೇ ಅಲ್ಲದೆ ನಮ್ಮ ಕನ್ನಡ ನಾಡು ರೈತ ಸಂಘದಿಂದ ಸಮ್ಮೇಳದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಈಶ್ವರಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ನಾಡು ರೈತ ಸಂಘದ ಪದಾಧಿಕಾರಿಗಳು ಹಲವು ರೈತರ ಮುಖಂಡರುಗಳು ಇದ್ದರು.
25th June 2025
ಬಳ್ಳಾರಿ ಜೂನ್ 25. ಯಾವುದೇ ಕೈಗಾರಿಕೆ ಅಥವಾ ಕಾರ್ಖಾನೆ ಸ್ಥಾಪನೆಯ ಸಂದರ್ಭದಲ್ಲಿ ಜಮೀನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಜಮೀನು ಮಾಲೀಕರಿಗೆ ಪರಿಹಾರ ಮತ್ತು ಉದ್ಯೋಗ ನೀಡಬೇಕೆಂಬ ನಿಯಮವಿದೆ, ಈ ರೀತಿಯಾಗಿ ಜೆ ಎಸ್ ಡಬ್ಲ್ಯೂ ಕಾರ್ಖಾನೆ ನಮ್ಮ ಜಮೀನನ್ನು ರಸ್ತೆಗಾಗಿ ವಶಪಡಿಸಿಕೊಂಡು ಇಂದಿಗೆ ಸುಮಾರು ಐದು ವರ್ಷಗಳಾಗಿವೆ, ನಮ್ಮ ಜಮೀನಿಗೆ ಕೇವಲ ಪರಿಹಾರವನ್ನು ಮಾತ್ರ ನೀಡಿರುವ ಕಾರ್ಖಾನೆ ನಮ್ಮ ಕುಟುಂಬಕ್ಕೆ ಉದ್ಯೋಗವನ್ನು ನೀಡದೇ ವಂಚನೆ ಮಾಡುತ್ತಾ ಬರುತ್ತಿದೆ ಕಾರಣ ತಾವುಗಳು ನಮಗೆ ನ್ಯಾಯ ಕೊಡಿಸಬೇಕೆಂದು ಕುಡುತಿನಿ ಗ್ರಾಮದ ಭೂಸಂತ್ರಸ್ತ ರೈತರು ಇಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು.
ಕುಡುತಿನಿ ಗ್ರಾಮದ ಸುಮಾರು ಹತ್ತು ಕುಟುಂಬಗಳ ರೈತರು ಇಂದು ಲೋಕಾಯುಕ್ತ ಕಚೇರಿಗೆ ದೂರ ಸಲ್ಲಿಸಿ ಮಾಧ್ಯಮದ ಜೊತೆ ಮಾತನಾಡಿ, ಜಮೀನು ಕಳೆದುಕೊಂಡ ರೈತನ ಮಗ ಸಿ ಆನಂದ್ ಕುಮಾರ್, ಜೆ ಎಸ್ ಡಬ್ಲ್ಯೂ ಕಾರ್ಖಾನೆ ನಮ್ಮ ಜಮೀನನ್ನು ವಶಪಡಿಸಿಕೊಂಡಿದ್ದು ನಮ್ಮ ಕುಟುಂಬಕ್ಕೆ ಕೈಗಾರಿಕಾ ಕಾನೂನು ಪ್ರಕಾರ ಒಂದು ಉದ್ಯೋಗವನ್ನು ನೀಡಬೇಕಾಗಿರುತ್ತದೆ ಆ ಉದ್ಯೋಗಕ್ಕಾಗಿ ನಾವು ಪದೇ ಪದೇ ಅಲೆದು ಅಲೆದು ನಮಗೆ ಸಾಕಾಗಿ ಹೋಗಿ ಮೇಲ್ಕಂಡ 10 ಕುಟುಂಬಗಳ ರೈತರ ಮನೆಗೆ ಒಂದರಂತೆ 10 ಉದ್ಯೋಗಗಳನ್ನು ಕೊಡಿಸಬೇಕೆಂದು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಿಕೊಂಡಿದ್ದವು ನಮ್ಮ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಜಿಂದಾಲ್ ಕಾರ್ಖಾನೆಗೆ ಉದ್ಯೋಗ ನೀಡುವಂತೆ ಪತ್ರವನ್ನು ಸಹ ಬರೆದಿರುತ್ತಾರೆ ಈ ಪತ್ರಕ್ಕೆ ಕ್ಯಾರೆ ಎನ್ನದ ಜೆ ಎಸ್. ಡಬ್ಲ್ಯೂ ಅಧಿಕಾರಿಗಳು ಇಂದಿಗೂ ಸಹ ನಮಗೆ ಉದ್ಯೋಗವನ್ನು ನೀಡದೆ ಆಗ ಈಗ ಎಂದು ವಂಚಿಸುತ್ತಾ ಬರುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶಕ್ಕೂ ಸಹ ಮಣಿಯದ ಜಿಂದಾಲ್ ಅಧಿಕಾರಿಗಳು ಇಲ್ಲಿಯವರೆಗೂ ನಮಗೆ ಉದ್ಯೋಗವನ್ನು ಒದಗಿಸಿರುವುದಿಲ್ಲ ಇದರಿಂದ ನಮ್ಮ ಕುಟುಂಬ ನಡೆಸುವುದು ಬಹಳ ದುಃಸ್ತರವಾಗಿದೆ.
ಜಿಲ್ಲಾಧಿಕಾರಿಗಳು ಸಹ ನಮಗೆ ನ್ಯಾಯ ಒದಗಿಸಿ ಕೊಡದೆ ನಿರ್ಲಕ್ಷ್ಯ ಧೋರಣೆ ತಳೆದಿರುತ್ತಾರೆ, ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿ, ಡಿ ವೈ ಎಸ್ಪಿ ಇವರುಗಳು ಜಿಂದಾಲ್ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ನಮಗೆ ಅನುಮಾನ ಉಂಟು ಮಾಡಿದೆ ಎಂದು ಅವರು ಅನುಮಾನವನ್ನು ವ್ಯಕ್ತಪಡಿಸಿದರು.
25th June 2025
ಬಳ್ಳಾರಿ, ಜೂ.25: ಗಡಿಗಿ ಚನ್ನಪ್ಪ ವೃತ್ತದ ಕಾಮಗಾರಿಯನ್ನು ಅತ್ಯಂತ ಉತ್ತಮ ಗುಣಮಟ್ಟದಿಂದ ನಿರ್ಮಾಣ ಮಾಡಲಾಗುತ್ತಿರುವುದರಿಂದ ವಿಳಂಬ ಆಗುತ್ತಿದೆ ವಿನಹ ಬೇರೆ ಯಾವ ಕಾರಣಗಳಿಲ್ಲ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬುಧವಾರ ಬೆಳಿಗ್ಗೆ ಸಲಾಂ ಬಳ್ಳಾರಿ ಅಭಿಯಾನದಂಗವಾಗಿ ನಗರದ 16ನೇ ವಾರ್ಡಿನ ಶ್ರೀರಾಂಪುರ ಕಾಲೋನಿಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.
ಗಡಿಗಿ ಚನ್ನಪ್ಪ ವೃತ್ತ ನಗರದ ಹೃದಯ ಭಾಗದಲ್ಲಿದೆ, ಜನರಿಗೆ ಒಂದೆರಡು ತಿಂಗಳು ಸಂಚಾರಕ್ಕೆ ತೊಂದರೆ ಆಗುತ್ತಿರುವುದು ನಿಜ, ಹಾಗಂತ ಅವಸರದಿಂದ ಕಾಮಗಾರಿಯನ್ನು ಮಾಡಿ, ತದನಂತರ ಅದೇ ಸಮಸ್ಯೆಯಾಗಿ ರೂಪ ತಾಳಬಾರದು ಎಂಬ ಉದ್ಧೇಶ ನಮ್ಮದು ಎಂದು ತಿಳಿಸಿದರು.
ಎರಡು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ, ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದ ಅವರು, ಸಿಎಂ-ಡಿಸಿಎಂ ಅವರನ್ನು ಕರೆಸಿ ಕಾಮಗಾರಿಯನ್ನು ಉದ್ಘಾಟಿಸಲಾಗುವುದು ಎಂದರು.
*ಹಿರಿಯ ಶಾಸಕರ ಆಕ್ಷೇಪಕ್ಕೆ ಕಾರಣ ಗೊತ್ತಿಲ್ಲ:* ಶಾಸಕ ಬಿ.ಆರ್.ಪಾಟೀಲ್, ರಾಜು ಕಾಗೆ ಅವರು ಅನುದಾನ ಸಂಬಂಧಿಸಿ ನೀಡಿರುವ ಹೇಳಿಕೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾರಾ ಭರತ್ ರೆಡ್ಡಿ; ಅನುದಾನ ಬಿಡುಗಡೆಗೆ ಸಂಬಂಧಿಸಿ ಹಿರಿಯ ಶಾಸಕರು ವ್ಯಕ್ತಪಡಿಸಿರುವ ಹೇಳಿಕೆಗಳಿಗೆ ಕಾರಣ ಏನೆಂದು ನನಗೆ ಗೊತ್ತಿಲ್ಲ, ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಷ್ಟು ನಾನು ದೊಡ್ಡವನಲ್ಲ, ಆದರೆ ಬಳ್ಳಾರಿ ನಗರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದೆ, ಕುಡಿಯುವ ನೀರು ಯೋಜನೆ, ರಸ್ತೆ, ಮಸೀದಿ, ಮಂದಿರ, ಒಳ ಚರಂಡಿ ಹೀಗೆ ಹತ್ತು ಹಲವು ಕಾಮಗಾರಿಗಳಿಗಾಗಿ ಸಿಎಂ-ಡಿಸಿಎಂ-ಜಿಲ್ಲಾ ಉಸ್ತುವಾರಿ ಸಚಿವರು ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.
ಸಲಾಂ ಬಳ್ಳಾರಿ ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ, ಸಮಸ್ಯೆ ಆಧರಿಸಿ ಯೋಜನೆಗಳನ್ನು ರೂಪಿಸುತ್ತಿದ್ದೇವೆ, ನೂರಕ್ಕೆ ನೂರರಷ್ಟಾಗದಿದ್ದರೂ ಗರಿಷ್ಠ ಪ್ರಮಾಣದಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಈ ಸಂದರ್ಭ ಮಾಜಿ ಮೇಯರ್, ಪಾಲಿಕೆಯ ಸದಸ್ಯೆ ಎಂ.ರಾಜೇಶ್ವರಿ, ಜಬ್ಬಾರ್, ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಮಂಜುಳಾ, ಹೊನ್ನಪ್ಪ, ಹಗರಿ ಗೋವಿಂದ, ಚಂಪಾ ಚವ್ಹಾಣ್, ಯಶೋಧಾ, ಸ್ಥಳೀಯ ಮುಖಂಡರಾದ ಬಾಲರಾಜ್, ನಾಗರಾಜ, ಅಭಿರಾಮ್, ರಾಮಚರಣ್, ರಾಕಿ, ದೇವಣ್ಣ, ಯಲ್ಲಪ್ಪ, ವಿನೋದ್, ಅರವಿಂದ ಮೊದಲಾದವರು ಹಾಜರಿದ್ದರು.
ಶಾಸಕ ನಾರಾ ಭರತ್ ರೆಡ್ಡಿ ವಾರ್ಡಿನಾದ್ಯಂತ ಸಂಚರಿಸಿ ಜನರ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸಿದರು. ಮಹಾನಗರ ಪಾಲಿಕೆಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
23rd June 2025
ಬಳ್ಳಾರಿ ಜೂನ್ 20: ಬಳ್ಳಾರಿ ಜಿಲ್ಲಾ ಹಾಗೂ ಬಳ್ಳಾರಿ ತಾಲ್ಲೂಕಿನ ಪ್ರಮುಖ ಬೆಳೆಯು ಜೋಳವಾಗಿದ್ದು, ಸದರಿ ಜೋಳವು ಡಿಸೆಂಬರ್ ಅಥವಾ ಜನವರಿಯಲ್ಲಿ ಕಟಾವುಗೊಂಡು ರೈತರು ತಾವುಗಳು ಬೆಳದಿರುವ ಬೆಳೆಗಳನ್ನು ಮನೆಯ ಮುಂದುಗಡೆ ಹಾಕಿಕೊಂಡಿರುತ್ತಾರೆ. ಅದು ಅಲ್ಲದೇ, ಹಿಂಗಾರು ಬೆಳೆ ಪ್ರಾರಂಭಗೊಂಡಲ್ಲಿ ರೈತರು ಬೆಳೆದಿರುವ ಬೆಳೆಯು ಸಂಪೂರ್ಣ ನಷ್ಟ ಉಂಟಾಗುತ್ತದೆ. ಹಾಗೂ ಸದರಿ ಒಂದೇ ಬೆಳೆಯನ್ನು ಬೆಳೆದು ಸಾಕಷ್ಟು ಹಣವನ್ನು ವ್ಯಯ ಮಾಡಿ, ರೈತರು ಸಂಕಷ್ಟದಲ್ಲಿರುತ್ತಾರೆ. ಇಂತಹ ಸ್ಥಿತಿಯಲ್ಲಿ ಇನ್ನೂ ಖರೀದಿ ಕೇಂದ್ರದಲ್ಲಿ ಜೋಳ ಚಿಂತಲ್ ಮಾಡಿ ಮಾಡಿ, ಜೋಳವನ್ನು ಗೋದಾಮಿಗೆ ಸಾಗಿಸಬೇಕೆಂದು ಕನ್ನಡ ನಾಡು ರೈತ ಸಂಘದ ಜಿಲ್ಲಾಧ್ಯಕ್ಷ ಮೆಣಸಿನ ಈಶ್ವರಪ್ಪ ಬತ್ತಾಯಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ,
ಇದೇ ತಿಂಗಳ 30ರಂದು ಜೋಳವನ್ನು ತೆಗೆದುಕೊಳ್ಳುವುದನ್ನು ತಡೆಹಿಡಿಯುವುದಾಗಿ ಹೇಳಿರುತ್ತಾರೆ. ಆದುದರಿಂದ ಈ ಆದೇಶವನ್ನು ರದ್ದು ಮಾಡಬೇಕೆಂದು ಮತ್ತು ಅದನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಬೇಕೆಂದರು.
23rd June 2025
ಬಳ್ಳಾರಿ,ಜೂ.20: ನಗರದ ಬೆಂಗಳೂರಿನ ಕೃಷಿ ಇಲಾಖೆಯಲ್ಲಿ ಶರಣಪ್ಪ ಮುದಗಲ್ ಅವರು ಸಹಾಯಕ ನಿರ್ದೇಶಕರಾಗಿ ಇತ್ತೀಚೆಗೆ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ಈ ಸಮಾರಂಭದಲ್ಲಿ ಬಳ್ಳಾರಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷರಾದ ಹೆಚ್.ತಿಮ್ಮನ ಗೌಡ ಅವರು ಮತ್ತು ಅವರ ಎಲ್ಲಾ ಸಹಪಾಠಿಗಳು ಶರಣಪ್ಪ ಮುದುಗಲ್ ಅವರನ್ನು ಗೌರವಿಸುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುರುಗೋಡು ಉಪಾಧ್ಯಕ್ಷರಾದ ಅರವಿ
ಶರಣಬಸವನ ಗೌಡ, ಸಿರುಗುಪ್ಪ ತಾಲೂಕು ಅಧ್ಯಕ್ಷರಾದ ಮಾಧವಯ್ಯ, ಅಮೃತ ಅಗ್ರೋ ಏಜೆನ್ಸಿಸ್ ಸಿದ್ದಪ್ಪ, ಲಕ್ಷ್ಮಿ ಸಾಯಿ ಟ್ರೇಡಿಂಗ್ ಕಂಪನಿ ಸುರೇಶ್, ಮೋಕಾ ವೆಂಕಟೇಶ್ವರ ಅಗ್ರೊ ಏಜೆನ್ಸಿಸ್ ಜಾಲಿಹಾಳ್ ನವೀನ್ ಕುಮಾರ್, ಬಳ್ಳಾರಿ ಮೂರ್ತಿ ರೆಡ್ಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
20th June 2025
ಬಳ್ಳಾರಿ ಜೂನ್ 20. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ಅವರು ಈಗಾಗಲೇ ಅನೇಕ ಆರ್ಥಿಕ ಅಶಿಸ್ತು ಮತ್ತು ಸರ್ವಾಧಿಕಾರದ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದ್ದು, ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿಯವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಿರಿಯ ಸಾಹಿತಿಗಳೂ ಆದಂತಹ ಡಾ. ಹಂಪನಾಗರಾಜಯ್ಯ ಅವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟಿರುವ ಕಾರಣಕ್ಕೆ ಅವರ ಬಗ್ಗೆ ಡಾ. ಮಹೇಶ್ ಜೋಶಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಸುಮಾರು 45 ವರ್ಷಗಳ ಹಿಂದಿನ ದೂರುಗಳನ್ನು ಇಟ್ಟುಕೊಂಡು ಪ್ರಸ್ತುತ ದ್ವೇಷದ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ?
ದಿನಾಂಕ: 24-04-2025ರಂದು ಬೆಂಗಳೂರಿನಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ದಿನಾಂಕ:25-04-2025 ರಂದು ಮಾನ್ಯ ಮುಖ್ಯಮಂತ್ರಿಗಳಿಗೆ ಬೆಂಗಳೂರಿನಲ್ಲಿ, ಹಾಗೂ ಅದಕ್ಕೂ ಮೊದಲು ದಿನಾಂಕ: 23-04-2025ರಂದು ಮಂಡ್ಯದ ನಾಗಮಂಗಲದ ದೊಡ್ಡಬಾಲದಲ್ಲಿ ಮನವಿ ಪತ್ರ ಸಲ್ಲಿಸಲಾಗಿತ್ತು. ಈ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಇದುವರೆವಿಗೂ ಮಾಹಿತಿ ಬಾರದಿರುವುದಕ್ಕೆ ವಿಷಾಧ ವ್ಯಕ್ತಪಡಿಸುತ್ತೇವೆ. ಹಾಗೂ ತತಕ್ಷಣ ಸರ್ಕಾರ ಮಧ್ಯ ಪ್ರವೇಶ ಮಾಡಬೇಕೆಂದು ವಿನಂತಿಸುತ್ತೇವೆ ಎಂದರು.
ದಿನಾಂಕ 30-04-2025 ರಂದು ಜೋಶಿಯವರು ಖಾಸಗಿ ವಾಹಿನಿಯಲ್ಲಿ ಮಾತನಾಡುತ್ತಾ 4 ಲಕ್ಷ ಜನ ಸದಸ್ಯರಿರುವ ಸಾಹಿತ್ಯ ಪರಿಷತ್ತಿನಲ್ಲಿ ಕೇವಲ ಯಾರೋ ನೂರು ಮಂದಿ ಹೋರಾಟ ಮಾಡಿದರೆ ನನ್ನನ್ನು ಏನೂ ಮಾಡೊಕ್ಕೆ ಆಗೋಲ್ಲ ಎಂಬ ಮಾತುಗಳನ್ನಾಡಿ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಿ ಉದ್ಧಟತನ ತೋರಿದ್ದಾರೆ. ಹಾಗೂ ಪ್ರಸ್ತಾಪಿತ ತಿದ್ದುಪಡಿ ಬೈಲಾದಲ್ಲಿ 20 ಅಂಶಗಳನ್ನು ತಿದ್ದುಪಡಿ ಮಾಡುತ್ತಿದ್ದು ಇದರಲ್ಲಿ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಇರುವ ಎಲ್ಲಾ ಅಧಿಕಾರಗಳನ್ನು ಮೊಟಕುಗೊಳಿಸಿ ಕೇಂದ್ರಕ್ಕೆ ಸರ್ವಾಧಿಕಾರವನ್ನು ಉಳಿಸಿಕೊಳ್ಳುವ ಹುನ್ನಾರ ಮಾಡಿರುವುದು ಕಂಡುಬಂದಿರುತ್ತದೆ. ಆದರೆ ಅವರ ಹೇಳಿಕೆಗೂ, ಪ್ರಸ್ತಾಪಿಸುತ್ತಿರುವ ಬೈಲಾ ತಿದ್ದುಪಡಿಗೂ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಎಂದರು.
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು ತಿಂಗಳು ಪೂರ್ಣಗೊಂಡಿದ್ದರೂ ಇದುವರೆಗೆ ಸ್ಮರಣಸಂಚಿಕೆ ಮುದ್ರಣಗೊಂಡು ಪ್ರಕಟಗೊಂಡಿರುವುದಿಲ್ಲ. ಈ ಬಗ್ಗೆ ಡಾ. ಮಹೇಶ್ ಜೋಶಿಯವರು ಪತ್ರಿಕಾ ಹೇಳಿಕೆ ನೀಡಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ
ಪರಿಷತ್ತಿನ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಯಾರ ಭಾವಚಿತ್ರ ಪ್ರಕಟಿಸಬೇಕು ಎಂಬ ಸ್ಪಷ್ಟತೆ ಇಲ್ಲ. ಇತ್ಯರ್ಥವಾದ ನಂತರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿರುತ್ತಾರೆ. ಆದರೆ ನ್ಯಾಯಾಲಯದ ಪ್ರಕರಣಕ್ಕೂ. ಸ್ಮರಣ ಸಂಚಿಕೆ ಬಿಡುಗಡೆಗೂ ಯಾವುದೇ ಸಂಬಂಧವಿರುವುದಿಲ್ಲ. ಆದುದರಿಂದ ಮಾನ್ಯ ಸ್ವಾಗತ ಸಮಿತಿಯ ಅಧ್ಯಕ್ಷರೂ ಮತ್ತು ಜಿಲ್ಲಾಧಿಕಾರಿಗಳು ಮುಂದಿನ ಹತ್ತು ದಿನಗಳೊಳಗಾಗಿ ಮುದ್ರಣ ಕಾರ್ಯ ಆರಂಭಿಸದಿದ್ದರೆ ಅದರ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡಿದ್ದ 30 ಕೋಟಿ ಅನುದಾನದಲ್ಲಿ 2.5 ಕೋಟಿಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಪಡೆದಿರುತ್ತದೆ. ಈಗಾಗಲೇ ಜಿಲ್ಲಾಡಳಿತ ಮತ್ತು ಸ್ವಾಗತ ಸಮಿತಿಯು 27.50 ಕೋಟಿಗೆ ಕೆ.ಎಸ್.ಎಂ.ಸಿ. & ಎ ಅಡಿಯಲ್ಲಿ ವೆಚ್ಚ ಮಾಡಿ ಲೆಕ್ಕ ಪತ್ರಗಳನ್ನು ನೀಡಿರುತ್ತಾರೆ. ಆದರೆ ಮಹೇಶ್ ಜೋಶಿಯವರು 2.5 ಕೋಟಿಗೆ ಇದುವರೆಗೂ ಲೆಕ್ಕ ನೀಡದೆ. ಇನ್ನೂ 6 ತಿಂಗಳ ಸಮಯವಿದೆ. ನಂತರ ಲೆಕ್ಕ ಕೊಡುತ್ತೇನೆಂದು ಹೇಳುವ ಮೂಲಕ ಉದ್ದಟತನ ಮೆರೆದಿರುತ್ತಾರೆ.
2023-24ನೇ ಸಾಲಿನ ವಾರ್ಷಿಕ ವರದಿಯಲ್ಲಿ ಮತ್ತು ಲೆಕ್ಕ ಪರಿಶೋಧಕರ ತನಿಖಾ ವರದಿಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ, ಕಾಮಗಾರಿಗಳ ಬಗ್ಗೆ, ಕಟ್ಟಡ ನವೀಕರಣದ ಬಗ್ಗೆ ಇನ್ನಿತರ ಲೋಪದೋಷಗಳನ್ನು ಈಗಾಗಲೆ ಎತ್ತಿ ಹಿಡಿದಿದ್ದಾರೆ. ಇದಕ್ಕೆ ಅಧ್ಯಕ್ಷರು ಸರಿಯಾದ ಉತ್ತರಗಳನ್ನು ನೀಡದೆ ಮುಂದೆ ಸರಿಪಡಿಸಿಕೊಳ್ಳುತ್ತೇನೆ ಎಂಬಂತಹ ತಾತ್ಸಾರದ ಮಾತುಗಳನ್ನೇ ಆಡುತ್ತಾ ಬಂದಿದ್ದಾರೆ. ಹಾಗಾಗಿ ಅವ್ಯವಹಾರಗಳು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ನಾವು ನಿಖರವಾದ ಮಾಹಿತಿ ತೋರಬೇಕು ಎಂದು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ.
ಉದಾಹರಣೆಗೆ, ಅವರೇ ಸಿದ್ದಪಡಿಸಿರುವ ಜಮಾ ಖರ್ಚಿನ ವಿವರದಲ್ಲಿ ಲೋಪ ದೋಷಗಳಿದ್ದು ಆರ್ಥಿಕ ಅಶಿಸ್ತು ಎದ್ದು ಕಾಣುತ್ತಿದೆ. ಅದ್ಯಕ್ಷರ ವೇತನ - ರೂ. 4,20.000/-, ದಿನಭತ್ಯೆ ರೂ. 7,62,329/-, ಪ್ರಯಾಣ ವೆಚ್ಚ - ರೂ 6,70.267/-, ವಾಹನ ನಿರ್ವಹಣೆ ವೆಚ್ಚ – ರೂ. 93.319/-, ಮನೆ ದಿನಪತ್ರಿಕೆಗಳ ವೆಚ್ಚ - ರೂ.33,419/-. ದೂರವಾಣಿ ಜಂಗಮವಾಣಿಗಳ ವೆಚ್ಚ: . 43,519/-, ಇಂಧನ ವೆಚ್ಚ – ರೂ.18,310/-, ಒಟ್ಟು ರೂ.22, 06,553/- ವೆಚ್ಚವನ್ನು ಪಡೆದಿರುತ್ತಾರೆ. ಆದರೆ ಇದುವರೆಗೂ ಸಾಹಿತ್ಯ ಪರಿಷತ್ತಿನ 108 ವರ್ಷಗಳ ಇತಿಹಾಸದಲ್ಲಿ ಯಾರು ಕೂಡ ದಿನಭತ್ಯೆ, ಪ್ರಯಾಣ ಭತ್ಯೆ, ವೇತನ ಪಡೆಯದೆ ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ.
28th September 2024
ರಾಯಚೂರು,ಸೆ.28- ಅನೇಕ ಏಳು ಬೀಳುಗಳ ನಡುವೆಯೂ, ನನ್ನ ಪರಿಶ್ರಮ ಗುರುತಿಸಿ ನನ್ನನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು, ಮತ್ತಷ್ಟು ಸೇವೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಹೇಳಿದರು.
ನಗರದ ಟಾಗೋರ ಸ್ಮಾರಕ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು, ಸನ್ಮಾನ ಸ್ವೀರಿಸಿದ್ದು ಸಂತೋಷ ದಾಯಕವಾಗಿದೆ, ಕಿಲ್ಲೆ ಬೃಹನ್ಮಠದ ಶಾಂತಮಲ್ಲಾ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸನ್ಮಾನಿಸಿ ಆಶೀರ್ವದಿಸಿದ್ದು, ನಾನು ಅಪರೂಪದ ವ್ಯಕ್ತಿಯಾಗಿದ್ದೇನೆ ಎಂದರು.
ಯಾವುದೇ ರೀತಿಯ ಒಳ್ಳೆದು ಕೆಟ್ಟದ್ದು ಯಾರು ಏನು ಬೇಕಾದರೂ ಮಾತನಾಡಿದರೂ ನಾವೆಲ್ಲ ಸ್ನೇಹಿತರು, ಯಾವುದೇ ಕೆಟ್ಟ ವಿಚಾರ, ಕೆಟ್ಟ ಕೆಲಸ ಮಾಡದವರಲ್ಲ, ಯಾವುದೇ ವ್ಯಕ್ತಿ ಬಗ್ಗೆ ಹಗುರವಾಗಿ ಮಾತನಾಡುವವರಲ್ಲ, ಎಲ್ಲವನ್ನು ಸ್ವೀಕಾರ ಮಾಡುತ್ತಿದ್ದೆವು.
ರಾಜಕೀಯಕ್ಕೆ ಬರಲು ಆಸಕ್ತಿ ಇರಲಿಲ್ಲ, ಇಚ್ಚೆಯೂ ನನ್ನದಾಗಿರಲಿಲ್ಲ, ಇಂಜಿನಿಯರಿAಗ್ ವಿದ್ಯಾಭ್ಯಾಸ ಮಾಡುವ ವೇಳೆ ಅಂತಿಮ ವರ್ಷದಲ್ಲಿ ವಿದ್ಯಾರ್ಥಿ ಚುನಾವಣೆ ವೇಳೆ ಗಲಾಟೆಯಾಗಿ ಈ ವಿಚಾರ ತಂದೆ ಗಮನಕ್ಕೆ ಬಂದಾಗ, ವಿದ್ಯಾರ್ಥಿಗಳ ಸಂಗ ಬಿಡಿಸಿ ತಮ್ಮ ಪರಿಚಯದ ವ್ಯಕ್ತಿ ಜೊತೆಗೆ ಬಿಟ್ಟರು, ಶಾಸಕರು ಕಚೇರಿಯಲ್ಲಿ ವಿದ್ಯಾಭ್ಯಾಸ ಮಾಡಿದೆ, ಆವಾಗ ಎಲ್ಲರ ಪರಿಚಯವಾಯಿತು, ನಂತರ ನಗರಸಭೆ ಚುನಾವಣೆ ನಡೆಯಿತು, ನಮ್ಮ ತಂದೆಯವರ ನಗರಸಭೆ ಸ್ಪರ್ಧೆ ಮಾಡಿದ್ದು ಅಂದು ರಾಜಕೀಯ ಪ್ರವೇಶ ಆರಂಭವಾಯಿತು ಎಂದರು.
ಅAದಿನಿAದ ಅನೇಕ ಏಳು ಬೀಳುಗಳು ಎದುರಿಸಿ ಅನೇಕ ರೀತಿಯ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದ್ದೇನೆ, ಇಂದು ಪರಿಶ್ರಮಕ್ಕೆ ಫಲ ದೊರೆತಿದೆ ಎಂದರು.
ಟಾಗೋರ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಕೆ.ಶಾಂತಪ್ಪ ಮಾತನಾಡಿ, ಅಧಿಕಾರಕ್ಕಾಗಿ ನಾವು ಹುಡಿಕಿಕೊಂಡು ಹೋಗುವುದಲ್ಲ ಅಧಿಕಾರ ನಮ್ಮನ್ನು ಹುಡುಕಿಕೊಂಡು ಬರಬೇಕು ಎನ್ನುವ ಮಾತಿಗೆ ಎ.ವಸಂತ ಕುಮಾರ ಅವರೇ ಸಾಕ್ಷಿಯಾಗಿದ್ದಾರೆ.
ವಸಂತಕುಮಾರ ಅವರು ತಳ ಮಟ್ಟದಿಂದ ಬೆಳೆದು ಯಾವುದೇ ಸ್ವಾರ್ಥಯಿಲ್ಲದೆ ಸೇವೆ ಮಾಡುತ್ತಾ ಬಂದಿದ್ದಾರೆ, ಅವರು ಕಠಿಣ ಶ್ರಮದಿಂದಲೇ ಇಂದು ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಅವರನ್ನು ಚಿಕ್ಕಂದಿನಿAದಲೂ ನೋಡುತ್ತಾ ಬಂದಿದ್ದೇವೆ,
ನಗರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ, ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷರಾಗಿ ಜಿಲ್ಲಾಧÀ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಅವರು ಯಾವುದೇ ಕೆಲಸ ನಿಬಾಯಿಸಿದರೂ ಚಾಚು ತಪ್ಪದೆ ಜವಾಬ್ದಾರಿ ಯುತವಾಗಿ ಮಾಡುತ್ತಿದ್ದರು, ಅನೇಕ ಏಳು ಬೀಳುಗಳನ್ನು ಎದುರಿಸಿ ಅನೇಕ ರೀತಿಯ ಅನುಭವ ಕಂಡಿದ್ದಾರೆ, ಅವರ ಕಠಿಣ ಪರಿಶ್ರಮ ಗುರುತಿಸಿ ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ, ಅವರನ್ನು ಅಧಿಕಾರ ಹುಡುಕಿಕೊಂಡು ಬಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಟಾಗೋರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಕೆ.ಅಮರೇಶ. ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜ ಪಾಟೀಲ್, ಬೂದೆಪ್ಪ ರಾಯಚೂರುಕರ್, ಜಗದೀಶ ಗುಪ್ತಾ ಸೇರಿದಂತೆ ಅನೇಕರು ಇದ್ದರು.