


26th November 2025
ಕುಷ್ಟಗಿ : ಸರ್ವಧರ್ಮಗಳ ಆರಾಧಕರು, ಅಧ್ಯಕ್ಷರು ಶ್ರೀ ಬನ್ನಿ ಮಹಾಂಕಾಳಿ ದೇವಿ ಸೇವಾ ಸಮಿತಿ ಕುಷ್ಟಗಿ, ಅಧ್ಯಕ್ಷರು ಭಗತಸಿಂಗ್ ಸೇವಾ ಸಂಸ್ಥೆ ಕುಷ್ಟಗಿ ಇದರ
ಅಧ್ಯಕ್ಷರಾದ ವಜೀರ್ ಬಿ. ಗೋನಾಳ್ ಅವರ ನೇತೃತ್ವದಲ್ಲಿ ದಿನಾಂಕ 27-11-2025 ಗುರುವಾರದಂದು ಕುಷ್ಟಗಿ ನಗರದಲ್ಲಿ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲಿದ್ದು
ಈ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 42 ಹಿಂದೂ ಹಾಗೂ 1 ಮುಸ್ಲಿಮ್ ಸೇರಿದಂತೆ ಒಟ್ಟು 43 ಜೋಡಿಗಳ ಮದುವೆ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ವಜೀರ್ ಬಿ. ಗೋನಾಳ್ ತಿಳಿಸಿದರು.
ಇದುವರೆಗೂ ಸುಮಾರು ಸಾವಿರಕ್ಕೂ ಹೆಚ್ಚು ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿರುವ ವಜೀರ್ ಬಿ. ಗೋನಾಳ್ ಅವರು ಬಡವರ ಪಾಲಿಗೆ ದೇವರ ಸಮಾನರಾಗಿದ್ದಾರೆ. ಮುಸ್ಲಿಂ ಸಮಾಜದ ವ್ಯಕ್ತಿಯಾಗಿದ್ದರು ಕೂಡ ತಮ್ಮ ಧರ್ಮಕ್ಕೆ ಸೀಮಿತವಾಗಿರದೆ ಎಲ್ಲಾ ಸಮಾಜದವರ ಪಾಲಿಗೆ ಹಾಗೂ ಅವರ ನೋವು ನಲಿವುಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ.
ನಾಳೆ ಮುಂಜಾನೆ ನಗರದ ಸಂತೆ ಬಜಾರದಲ್ಲಿ ಇರುವ ಶ್ರೀ ಬನ್ನಿ ಮಹಾಂಕಾಳಿ ದೇವಿಯ ಮಹಾಭಿಷೇಕದ ಪ್ರಯುಕ್ತ ಸರ್ವ ಧರ್ಮ ಶ್ರೀಗಳ ಸಾನಿಧ್ಯದಲ್ಲಿ ಜರಗುವ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಮುಂಜಾನೆ ಹೋಮ ಹವನ, ಕುಂಭ ಹೊತ್ತ ಮಹಿಳೆಯರಿಂದ ಮೆರವಣಿಗೆ, ನಂತರ 43 ಜೋಡಿಗಳ ವಿವಾಹ ಸಾಮೂಹಿಕ ಕಾರ್ಯಕ್ರಮ ಜರುಗಿಲಿದೆ. ನಂತರ ಸರ್ವರಿಗೂ ಅನ್ನ ಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಕುಷ್ಟಗಿಯ ವಿಷ್ಣು ತೀರ್ಥ ನಗರದ ಬಹಿರಂಗ ವೇದಿಕೆಯ ಕಾರ್ಯಕ್ರಮ ನಡೆಯಲಿದ್ದು ದಿವ್ಯ ಸಾನಿಧ್ಯವನ್ನು ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಕುಷ್ಟಗಿ, ಶ್ರೀ ನೀಲಕಂಠ ತಾತನವರು ಸುಕ್ಷೇತ್ರ ಎಂ ಗುಡದೂರು, ಶ್ರೀ ಶಿವಲಿಂಗ ಮಹಾಸ್ವಾಮಿಗಳು ವಿರಕ್ತಮಠ ಬಿಜಕಲ್, ಶ್ರೀ ವೀರ ಸಂಗಮೇಶ್ವರ ಮಹಾಸ್ವಾಮಿಗಳು ಹಿರೇಮಠ ಚಳಗೇರಾ, ಹಜರತ್ ಸೈಯದ್ ಷಾ ಅಬ್ದುಲ್ ಖಾದ್ರಿ ಪೈಜಲ್ ಭಾಷಾ ಇಲಕಲ್ಲ, ಶ್ರೀ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು ಸುಕ್ಷೇತ್ರ ಅಂಕಲಿಮಠ, ಡಾ. ಮಹದೇವ ಮಹಾಸ್ವಾಮಿಗಳು ಕುಕನೂರು, ಶ್ರೀ ಮರುಳಸಿದ್ಧ ದೇವರು ವಿಜಯ ಚಂದ್ರಶೇಖರ ಮಹಾಸ್ವಾಮಿಗಳ ಮಠ ಮುದೇನೂರು, ಶ್ರೀ ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ನಿಡಸೆಸಿ, ಶ್ರೀ ಪರಮಪೂಜ್ಯ ಚಂದ್ರಶೇಖರ ದೇವರು ದೋಟಿಹಾಳ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ದೊಡ್ಡನಗೌಡ ಎಚ್ ಪಾಟೀಲ್ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕ್ಷೇತ್ರದ ಶಾಸಕರು ಮಾಡಲಿದ್ದು, ಅಧ್ಯಕ್ಷತೆಯನ್ನು ಅಮರೇಗೌಡ ಪಾಟೀಲ್ ಬಯ್ಯಾಪುರ,ರಾಜ್ಯ ಉಪಾಧ್ಯಕ್ಷರು ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಮಾಜಿ ಶಾಸಕರು ವಹಿಸಲಿದ್ದಾರೆ.
ಕಮಲಪ್ಪ ಜಾಲಿಹಾಳ್ ಗ್ರಾನೈಟ್ ಉದ್ಯಮಿಗಳು ಹುಲಗೇರಾ ಹಾಗೂ ಪ್ರಭಾಕರ್ ಹೆಚ್ ಚಿಣಿ, ನಿವೃತ್ತ ಪ್ರಧಾನ ಇಂಜಿನಿಯರ್ ವಿಶೇಷ ಆಹ್ವಾನಿತರಾಗಿ
ಭಾಗವಹಿಸಲಿದ್ದಾರೆ. ಗೌರವ ಆಹ್ವಾನಿತರಾಗಿ ಕಾಡಾ ಅಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ಹಸನ್ ಸಾಬ್ ದೋಟಿಹಾಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 6:30ಕ್ಕೆ ಬೃಹತ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಲನ ಚಿತ್ರರಂಗದ ನಟರದ ನಿನಾಸಂ ಸತೀಶ್ ಹಾಗೂ ಸಪ್ತಮಿಗೌಡ ಸೇರಿದಂತೆ ಇತರೇ ನಟ ನಟಿಯರು ಹಾಗೂ ಹಿನ್ನೆಲೆ ಗಾಯಕ ಗಾಯಕಿಯರು ಹಾಗೂ ಜಿ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಜ್ಯೂರಿ ಮೆಂಬರ್ ಶ್ರೀಮತಿ ಶಶಿಕಲಾ ಸುನಿಲ್, ಅಜಯ್ ವಾರಿಯರ್, ಪೃಥ್ವಿ ಭಟ್ಟ, ಶ್ರೀಹರ್ಷ, ಕುಮಾರಿ ಶಿವಾನಿ ಹಾಗೂ ಉದಯ ಟಿವಿ ಕಾಮೆಡಿ ಬೆಳ್ಳಿತೆರೆ ಮತ್ತು ಕಿರುತೆರೆ ನಟಿ ರಾಜೇಶ್ವರಿ , ಹಾಗೂ ಕಾಮಿಡಿ ಕಿಲಾಡಿಗಳು ತಂಡದ ತುಕಾಲಿ ಸಂತೋಷ್, ಮಾನಸ ಸಂತೋಷ್, ಸೂರಜ್ ಹಾಗೂ ಬೆಂಗಳೂರಿನ ವಿವಿಧ ತಂಡದ ಕಲಾವಿದರಿಂದ
ಭಾವೈಕ್ಯ ಸಂಗೀತ ಮಹಾಹಬ್ಬ ಕಾರ್ಯಕ್ರಮ ಜರುಗಲಿದೆ.
ಡಾ. ಶಿವಕುಮಾರ ಸ್ವಾಮೀಜಿ ದಾಸೋಹ ಹಾಗೂ ಕಲಾ ಪೋಷಕ ಮಠ, ಸಿದ್ದನಕೊಳ್ಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಸರ್ವ ಸಮಾಜದವರು ಭಾಗವಹಿಸಬೇಕೆಂದು ಕಾರ್ಯಕ್ರಮದ ಆಯೋಜಕರಾದ ವಜೀರ್ ಬಿ. ಗೋನಾಳ್ ಅಧ್ಯಕ್ಷರು
ಶ್ರೀ ಭಗತಸಿಂಗ್ ಸಂಸ್ಥೆ ಹಾಗೂ ಶ್ರೀ ಬನ್ನಿ ಮಹಾಂಕಾಳಿ ಸೇವಾ ಸಮಿತಿ ಹಾಗೂ ಶಂಕರನಾಗ್ ಆಟೋ ಚಾಲಕರ ಸಂಘ ಕುಷ್ಟಗಿ ಇವರು ತಿಳಿಸಿದ್ದಾರೆ.....
ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

3rd November 2025
-:ಸಿರಿಗನ್ನಡ ಉತ್ಸವ:-
ಕನ್ನಡ ನಾಡು ಪುಣ್ಯದ ಬೀಡು,
ಸಾವಿರ ಸಂಸ್ಕೃತಿಗಳಿಗೆ ನೆಲೆಯ ಹಾಡು,
ಸುಂದರ ಸಂಪ್ರೀತಿ ಸೌಹಾರ್ದತೆ ನೋಡು,
ವಚನ, ಕಾವ್ಯ ಅರಿವಿನ ದೀಪದ ಸಿರಿಗನ್ನಡ ನಾಡು.
ಕನ್ನಡದ ಕಾವೇರಿ ಕೃಷ್ಣಯರ ನಾಡಿದು, ಹಚ್ಚ ಹಸಿರ ಗೂಡಿದು ಸಾಂಸ್ಕೃತಿಕ ಭೌಗೋಳಿಕ ಚಿನ್ನದ ತೇರಿದು, ಹಳದಿ ಕೆಂಪು ಬಾವುಟ ಹಿಡಿದ ಭುವನೇಶ್ವರಿಯ ನಾಡಿದು,
ರತ್ನತ್ರೆಯರ ಕವಿಪುಂಗವರ ಶ್ರೇಷ್ಠ ಮನೆತನಗಳ ತವರೂರಿದು,
ಎಲ್ಲೆಲ್ಲೂ ಕನ್ನಡದ ಕಲರವ ಮೂಡಿದೆ
ಮನಸ್ಸಿಗೆ, ಹೃದಯಕ್ಕೆ ಸವಿಭಾವ ತಂದಿದೆ,
ಹೃದಯದಲಿ ಕನ್ನಡ ಡಿಂಡಿಮ ಮೊಳಗಿದೆ,
ತಾಯಿ ಭುವನೇಶ್ವರಿಗೆ ಮನವು ಶರಣೆಂದಿದೆ,
ಎಲ್ಲೆಲ್ಲೂ ಕೇಳಲಿ ಕನ್ನಡದ ಸ್ವರ ಸಂಗಮದಲಿ,
ವಿಶ್ವದೆಡೆ ಸಾರಲಿ ಕನ್ನಡದ ಝೇಂಕಾರ ಕಹಳೆಯಲಿ,
ಅಖಂಡ ಕರ್ನಾಟಕದ ಹೃದಯ ಕಣ್ತೆರೆಯಲಿ,
ಸಿರಿಗನ್ನಡ ಉತ್ಸವದ ತೇರು ಸಂಭ್ರಮದಿ ಸಾಗುತಿರಲಿ....
- ರಶ್ಮಿ ಪ್ರಶಾಂತ್ ಕುಲಕರ್ಣಿ
ಕನ್ನಡ ರಾಜ್ಯೋತ್ಸವದ
ಶುಭಾಶಯಗಳು.

15th October 2025
ಕುಷ್ಟಗಿ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರದಂದು ಚಳಗೇರಾ ಹಿರೇಮಠದ ಲಿಂಗೈಕ್ಯ ಪರಮಪೂಜ್ಯ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ 11ನೇ ವರ್ಷದ
ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆಯು 16-10-2025 ಗುರುವಾರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಕುಷ್ಟಗಿ ಪಟ್ಟಣದಲ್ಲಿ ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ರಂಭಾಪುರಿ ಹಾಗೂ ಉಜ್ಜಯಿನಿ ಜಗದ್ಗುರುಗಳು,
ಹುಬ್ಬಳ್ಳಿ ಮೂರುಸಾವಿರಮಠ ಮತ್ತು ನೊಣವಿನಕೆರೆ
ಕಾಡಸಿದ್ದೇಶ್ವರಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಅನೇಕ
ಕಾರ್ಯಕ್ರಮಗಳು ನಡೆಯಲಿವೆ ಎಂದರು.
ನಾಳೆ 15 ನೇ ದಿನಾಂಕದಂದು ಶ್ರೀಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಹಾಗೂ ಧರ್ಮಸಭೆ ಸಮಾರಂಭ ಮತ್ತು ರುದ್ರಮುನಿ ದೇವರಿಂದ ಯೋಗ ಪ್ರದರ್ಶನ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ಪುರಸ್ಕಾರ, ಗೌರವ ಸನ್ಮಾನ ಕಾರ್ಯಕ್ರಮ ಇರುತ್ತದೆ.
ನಾಡಿದ್ದು 16ರಂದು ಬೆಳಗ್ಗೆ ಮೂಲ ಕರ್ತೃ ಗದ್ದುಗೆಗೆ ಪೂಜಾ ಕಾರ್ಯಕ್ರಮಗಳು, ಅಡ್ಡಪಲ್ಲಕ್ಕಿ
ಮಹೋತ್ಸವ ಚಳಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠ ತಲುಪಿದ ನಂತರ ನೂತನ ಶ್ರೀಮಠದ ಉದ್ಘಾಟನೆ ಹಾಗೂ ರೇಣುಕಾಚಾರ್ಯರ ಮಂಗಲಮೂರ್ತಿಗೆ
ಸ್ವರ್ಣಕಿರೀಟ ಧಾರಣೆ ನಡೆಯುತ್ತದೆ. ಈ ಸ್ವರ್ಣ ಕಿರೀಟ ಸೇವೆಯನ್ನು ಶ್ರೀಮತಿ ಸುನಿತಾ ಡಾಕ್ಟರ್ ಅಂದಾನಯ್ಯ ಶ್ಯಾಡ್ಲಗೇರಿ ಹಿರೇಮಠ ಮತ್ತು ಪರಿವಾರ ಸಾಕಿನ್ ಮುಧೋಳ ಇವರು ಮಾಡಲಿದ್ದಾರೆ.
ನಂತರ ಉಚಿತ ಆರೋಗ್ಯ ಶಿಬಿರ, ಧರ್ಮಸಭೆ ಉದ್ಘಾಟನೆ ನಡೆಯಲಿದೆ. ಸಂಜೆ ರಥೋತ್ಸವ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಡಾಕ್ಟರ್ ಪ್ರಸನ್ನರೇಣುಕ ವೀರಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದಂಗಳವರು, ವೀರಸಿಂಹಾಸನ ಮಹಾಸಂಸ್ಥಾನಪೀಠ ಬಾಳೆಹೊನ್ನೂರು, ಹಾಗೂ
ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಮಹಾಭಗವತ್ಪಾದಂಗಳವರು, ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನಪೀಠ ಉಜ್ಜಯಿನಿ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮುಕ್ತಿಮಂದಿರ ವಹಿಸಲಿದ್ದಾರೆ.
ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು, ಡಾಕ್ಟರ್ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು, ಪ್ರಭುಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಡಾಕ್ಟರ್ ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮತ್ತು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಸಂಸದರಾದ ರಾಜಶೇಖರ ಹಿಟ್ನಾಳ್, ಶಾಸಕರಾದ ದೊಡ್ಡನಗೌಡ ಎಚ್. ಪಾಟೀಲ, ವಿಜಯಾನಂದ ಕಾಶಪ್ಪನವರು, ಮಹೇಶ ಟೆಂಗಿನಕಾಯಿ, ಎಸ್.ಎಲ್.
ಭೋಜೇಗೌಡರು, ಹೇಮಲತಾ ನಾಯಕ್, ಶರಣಗೌಡ ಬಯ್ಯಾಪುರ, ಅಮರೇಗೌಡ ಪಾಟೀಲ್ ಬಯ್ಯಾಪುರ, ಸಂಗಣ್ಣ ಕರಡಿ, ಕೆ. ಶರಣಪ್ಪ ವಕೀಲರು, ಹಸನಸಾಬ್ ದೋಟಿಹಾಳ್, ಪರಣ್ಣ ಮುನವಳ್ಳಿ, ದೊಡ್ಡನಗೌಡ ಪಾಟೀಲ್ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಲಘು ರಥೋತ್ಸವ ನಡೆದ ನಂತರ ಮದ್ದು ಸಿಡಿಸುವ ಕಾರ್ಯಕ್ರಮ ಇರುತ್ತದೆ ಎಂದು ಹೇಳಿದರು.
ರೈತ ನಾಯಕರಾದ ಡಾಕ್ಟರ್ ದೇವೇಂದ್ರಪ್ಪ ಬಳೂಟಗಿ ಅವರು ಮಾತನಾಡಿ, ನಾನು ಕೂಡಾ ಶ್ರೀ ಮಠದ ಹಳೆಯ ವಿದ್ಯಾರ್ಥಿಯಾಗಿದ್ದು ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷದಾಯಕ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರುದ್ರಮುನಿ ದೇವರು ಹಾಗೂ ಇತರರು ಉಪಸ್ಥಿತರಿದ್ದರು.
ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ರಥ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಈ ಕಾರ್ಯಕ್ಕೆ ಕಾಣಿಕೆ ಸಲ್ಲಿಸುವವರು, ಶ್ರೀ ರುದ್ರಮುನಿ ಶಿವಾಚಾರ್ಯ ವಿದ್ಯಾವರ್ಧಕ ಸಂಸ್ಥೆ ಸೋಲ್ ಟ್ರಸ್ಟ್ ಚಳಗೇರಾ. ಅಕೌಂಟ್ ನಂಬರ್. 10085714525.
IFSC ಕೋಡ್. 1DFB0080353.
ಬ್ರಾಂಚ್ ಕುಷ್ಟಗಿ ಕಳುಹಿಸಬೇಕೆಂದು ತಿಳಿಸಲಾಗಿದೆ.
ಗೂಗಲ್ ಪೇ ಫೋನ್ ಪೇ ಮತ್ತು ಪೇಟಿಎಂ ಮುಖಾಂತರ ದೇಣಿಗೆ ಸಲ್ಲಿಸುವವರು, 9071126655
ಈ ನಂಬರಿಗೆ ಕಳುಹಿಸಬೇಕೆಂದು ಶ್ರೀ ಮಠದಿಂದ ತಿಳಿಸಲಾಗಿದೆ.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ - ಸುದ್ದಿಗಳಿಗಾಗಿ ಸಂಪರ್ಕಿಸಿರಿ. 9482935606 ಮತ್ತು 8660935572.
ಧನ್ಯವಾದಗಳು.

5th October 2025
ಕುಷ್ಟಗಿ : ಸೌರಭ ಸಾಂಸ್ಕೃತಿಕ ಕಲಾ ಬಳಗ ಹಿರೇಮನ್ನಾಪುರ ಸಂಘದ ಪ್ರಥಮ ಸಭೆಯು ಶುಕ್ರವಾರ ಕುಷ್ಟಗಿ ತಾಲೂಕಿನ ತಾವರಗೇರಿ ಪಟ್ಟಣದ ಶ್ರೀ ಶ್ಯಾಮೀದಲಿ ದರ್ಗಾದಲ್ಲಿ ಜರುಗಿತು.
ಸಭೆಯಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸೌರಭ ಸಾಂಸ್ಕೃತಿಕ ಕಲಾ ಬಳಗದ ಗೌರವಾಧ್ಯಕ್ಷರನ್ನಾಗಿ ಹಿರಿಯರಾದ ಹಾಗೂ ರಂಗ ನಿರ್ದೇಶಕರಾದ ಹಿರೇಹುಸೇನಸಾಬ್ ಕೋಳೂರು ಇವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರೆಹಮಾನಸಾಬ್ ಕೋಳೂರು, ಹಾಗೂ
ಉಪಾಧ್ಯಕ್ಷರಾಗಿ ನಮ್ಮ ತುಂಗಾಕಿರಣ ಪತ್ರಿಕೆಯ ಕುಷ್ಟಗಿ ತಾಲೂಕಾ ವರದಿಗಾರರಾದ ಭೀಮಸೇನರಾವ್ ಕುಲಕರ್ಣಿ ಇವರನ್ನು ಆಯ್ಕೆ ಮಾಡಲಾಯಿತು. ಅದರಂತೆ ಕಾರ್ಯದರ್ಶಿಯಾಗಿ ಶ್ರೀಮತಿ ಫೈಮುನ್ನಿಸಾ ಕೋಳೂರು, ಸಹ ಕಾರ್ಯದರ್ಶಿಯಾಗಿ ಬಾಳನಗೌಡ ಕನ್ನಾಳ್, ಸಂಘಟನ ಕಾರ್ಯದರ್ಶಿಯಾಗಿ ಹನುಮಣ್ಣ ಗೌಡ್ರ, ಖಜಾಂಚಿಯಾಗಿ ಹುಸೇನಭಾಷಾ ಮುಜಾವರ್, ಹಾಗೂ ಸಂಘದ ಸದಸ್ಯರನ್ನಾಗಿ ಶರಣಗೌಡ ಪೋಲಿಸ್ ಪಾಟೀಲ್, ಮಾನಪ್ಪ ಹಳ್ಳಿ , ರಾಜಮೊಹಮ್ಮದ ದಲಾಯತ್, ಸುನೀಲಕುಮಾರ್ ಮಧುಕರ್, ಬಷೀರ್ ಅಹಮ್ಮದ್ ಸಾಬಾದ್, ವಿರುಪಾಕ್ಷಪ್ಪ ದೇಸಾಯಿ, ಮುದಕಪ್ಪ ಕಲ್ಮಂಗಿ ಇವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾದ ಭೀಮಸೇನರಾವ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾ ಬದಕಿನ ಸಂಗೀತದ ಉದ್ದೇಶವನ್ನು ಉಳಿಸಿ ಬೆಳೆಸುವ ಬಗ್ಗೆ ಹಾಗೂ ಸಂಘದ ಉದ್ದೇಶಗಳ ಕುರಿತು ಮಾತನಾಡಿದರು.
ಗೌರವಾಧ್ಯಕ್ಷರಾದ ಹಿರೇಹುಸೇನಸಾಬ ಕೋಳೂರು ಮಾತನಾಡಿ, ಭಜನಾಪದ, ಲಾವಣಿ ಪದ, ತತ್ವಪದ, ದಾಸರಪದ ಮತ್ತು ಕರೋಕೆ ಹಾಡಿನ ಜೊತೆಗೆ ಇನ್ನಿತರ ಪದಗಳನ್ನು ಹಾಡುವುದಲ್ಲದೇ ಸಂಘದ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಹಾಡುವ ಅವಕಾಶ ಕೊಟ್ಟು ಒಬ್ಬ ಕಲಾವಿದರನ್ನಾಗಿ ಮಾಡುವ ಕೆಲಸವಾಗಬೇಕು. ನಿಜಗುಣಿ ಶಿವಯೋಗಿಗಳ ಹಾಡುಗಳನ್ನು ಹಾಡುವ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಇದಕೆ ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.
ಅಧ್ಯಕ್ಷರಾದ ರೆಹಮಾನಸಾಬ್ ಕೋಳೂರು ಮಾತನಾಡಿ ಸಂಗೀತವು ಎಲ್ಲರ ಆರೋಗ್ಯದ ಮಾರ್ಗವಾಗಿದ್ದು ಎಲ್ಲರೂ ಇದರ ಬಗ್ಗೆ ಆಸಕ್ತಿಯಿಂದ ಭಾಗವಹಿಸಬೇಕು. ಸರ್ಕಾರದಿಂದ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಇದೇ ವೇಳೆ ಸಂಘದ ನೂತನ ಪದಾಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಹಿರೇಹುಸೇನಸಾಬ್ ಕೋಳೂರು, ಅಧ್ಯಕ್ಷರಾದ ರೆಹಮಾನಸಾಬ್ ಕೋಳೂರು, ಉಪಾಧ್ಯಕ್ಷರಾದ ಭೀಮಸೇನರಾವ್ ಕುಲಕರ್ಣಿ, ಸಹ ಕಾರ್ಯದರ್ಶಿ ಬಾಳನಗೌಡ ಕನ್ನಾಳ್, ಸಂಘಟನ ಕಾರ್ಯದರ್ಶಿ ಹನುಮಣ್ಣ ಗೌಡ್ರ, ಖಜಾಂಚಿ ಹುಸೇನಭಾಷಾ ಮುಜಾವರ್, ಸದಸ್ಯರಾದ ಶರಣಗೌಡ ಪೋಲಿಸ್ ಪಾಟೀಲ್, ಮಾನಪ್ಪ ಹಳ್ಳಿ , ವಿರುಪಾಕ್ಷಪ್ಪ ದೇಸಾಯಿ, ಮುದಕಪ್ಪ ಕಲ್ಮಂಗಿ ಹಾಗೂ ಇತರರಿದ್ದರು.
ವರದಿಗಾರರು: ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

16th September 2025
ಕುಷ್ಟಗಿ: ಹನುಮನಾಳ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕುಷ್ಟಗಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕ್ರೀಡಾಕೂಟದಲ್ಲಿ ಕುಷ್ಟಗಿ ನಗರದಲಎಸ್ ವಿ ಸಿ ಸೈನ್ಸ್ ಮತ್ತು ಕಾಮರ್ಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶಟಲ್ ಬ್ಯಾಡ್ಮಿಂಟನ್ ಆಟದಲ್ಲಿ ಎಸ್ ವಿ ಸಿ ಕಾಲೇಜು ವಿದ್ಯಾರ್ಥಿಗಳು ಅನ್ನದಾನೇಶ್ವರ ಪದವಿಪೂರ್ವ ಕಾಲೇಜು ತಂಡದ ವಿರುದ್ಧ 15 - 9 ಅಂತರದ ಜಯ ದಾಖಲಿಸಿದರು.
ಗುಂಡು ಎಸೆತ ಸ್ಪರ್ಧೆಯಲ್ಲಿ ಪೃಥ್ವಿ ಹೆಚ್ ಎಸ್ ಪ್ರಥಮ ಸ್ಥಾನ, ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಚಿರಂಜೀವಿ ದ್ವಿತೀಯ ಸ್ಥಾನ, ಚೆಸ್ ಸ್ಪರ್ಧೆಯಲ್ಲಿ ವಿರೇಶ್ ಮತ್ತು ಮಾರುತಿ ಪ್ರಥಮ ಸ್ಥಾನ,
ಕರಾಟೆ ಸ್ಪರ್ಧೆಯಲ್ಲಿ ಸಂಜಯ್ ಪ್ರಥಮ ಸ್ಥಾನ, ಪೃಥ್ವಿ ಎಚ್.ಎಸ್ ದ್ವಿತೀಯ ಸ್ಥಾನ, ಈಜು ಸ್ಪರ್ಧೆಯಲ್ಲಿ ಸಂಜಯ್ ಪ್ರಥಮ ಸ್ಥಾನ ಹಾಗೂ ಅಜಯ್ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.
ಎಸ್ ವಿ ಸಿ ಕಾಲೇಜಿನ ವಿದ್ಯಾರ್ಥಿನಿಯರು ಹ್ಯಾಂಡ್ ಬಾಲ್ ಆಟದಲ್ಲಿ ಹನುಮನಾಳ ಸರಕಾರಿ ಪದವಿ ಪೂರ್ವ ಕಾಲೇಜು ತಂಡದ ವಿರುದ್ಧ 5-3 ಗೋಲುಗಳ ಅಂತರದ ಜಯ ದಾಖಲಿಸಿದರು.
ದೈಹಿಕ ಶಿಕ್ಷಕರಾದ ಸಂತೋಷ್ ಮತ್ತು ರಮೇಶ್ ಬೆಸ್ಟ್ ರೆಫರಿ ಅವಾರ್ಡ್ ಪಡೆದರು.
ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸಿ ವಿ ಚಂದ್ರಶೇಖರ್, ಸಿಇಓ ಡಾ ಜಗದೀಶ್ ಅಂಗಡಿ, ಪ್ರಾಂಶುಪಾಲರಾದ ಭೀಮಸೇನ್ ಆಚಾರ್ ಹಾಗೂ ಉಪನ್ಯಾಸಕ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ವರದಿ: ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

6th September 2025
ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮೂರನೇ ದಿನ ಶುಕ್ರವಾರ ದಿನಾಂಕ: 5-9-2025 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮುಂಜಾನೆ ಶ್ರೀಗುರು ಶಂಕರ ಲಿಂಗೇಶ್ವರ ಗುರುವರ್ಯರ ಮೂರ್ತಿಗೆ ಮಹಾರುದ್ರಾಭಿಷೇಕದ
ಪೂಜೆಯೊಂದಿಗೆ ಅಲಂಕಾರ ಮಾಡಲಾಯಿತು.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ ಬೆಟ್ಟದಲ್ಲಿ ಸತತ 24 ತಾಸು ಭಜನೆ ಕಾರ್ಯಕ್ರಮದ ಉದ್ಘಾಟನೆಯು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗುರು ಶಂಕರಲಿಂಗ ಮಠ ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ಹಾಗೂ
ಸುರೇಶ ಸ್ವಾಮಿಗಳು, ವೀರಬಸಯ್ಯ ಸ್ವಾಮಿಗಳು,
ಕಳಕಪ್ಪ ಸೂಡಿ, ಶರಣಪ್ಪ ನೆರೆಬೆಂಚಿ, ಕಳಕಪ್ಪ ಪುರದ್, ಬಸವರಾಜ ಬಿದರಕುಂದಿ, ಫಕೀರಪ್ಪ ಈಳಗೇರ್, ಹುಸೇನ್ ಸಾಬ್ ಕೋಳೂರ್, ಶಿವಾನಂದ್ ಹಿರೇಮಠ ಹಾಗೂ ಇತರರಿದ್ದರು.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

5th September 2025
ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 3-9-2025 ರಿಂದ 13-9-2025 ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ಅನವರತ 11 ದಿನಗಳವರೆಗೆ ನಡೆಯುತ್ತಿದೆ.
ಗುರುವಾರ ದಿನಾಂಕ: 4-9-2025 ರಂದು ನಡೆದ ಎರಡನೇ ದಿನದ ಪುರಾಣದಲ್ಲಿ ಪರಮ ಪೂಜ್ಯ ಶ್ರೀ ಕೇಶವಾನಂದ ಶ್ರೀಗಳು ಶಿದ್ದರೂಡ ಬಸವ ಆಶ್ರಮ ಹಾಗೂ ಶ್ರೀ ಶಿವಾಚಾರ್ಯ ಶ್ರೀಗಳು ಗಿನಿವಾರ ಇವರು
ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಇದೇ ವೇಳೆ ಪೂಜ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು.
ನಂತರ ನವ ದುರ್ಗೆಯರ ಪಾದ ಪೂಜೆಯು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಗುರು ಶಂಕರಲಿಂಗ ಮಠ ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ಹಾಗೂ ಪರಮ ಪೂಜ್ಯ ಶ್ರೀ ಕೇಶವಾನಂದ ಶ್ರೀಗಳು ಶಿದ್ದರೂಡ ಬಸವ ಆಶ್ರಮ, ಶ್ರೀ ಶಿವಾಚಾರ್ಯ ಶ್ರೀಗಳು ಗಿನಿವಾರ, ನಾಗರಾಜ್ ಜಿಗಜಿನ್ನಿ, ಶರಣಪ್ಪ ಮ್ಯಾಗೇರಿ,
ಶಿವಾನಂದ ಗುರುಗಳು ಸೇರಿದಂತೆ ಇತರರಿದ್ದರು.
ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

5th September 2025
ಕುಷ್ಟಗಿ : ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಕೊಪ್ಪಳ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಕುಷ್ಟಗಿ, ಮತ್ತು NSS ಘಟಕ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
HIV ವೈರಸ್ಸಿನಿಂದ ಉಂಟಾಗುವ ಏಡ್ಸ್ ಪ್ರತಿರಕ್ಷಣಾ
ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ರೋಗದ ಹರಡುವಿಕೆ ಮತ್ತು ತಡೆಗಟ್ಟುವಿಕೆಯ ಕುರಿತು ಯುವ ಜನರಲ್ಲಿ ಸರಿಯಾದ ಮಾಹಿತಿಯ ಕೊರತೆ ಇದೆ.
ಈ ವೈರಸ್ಸಿಗೆ ಸರಿಯಾದ ಚಿಕಿತ್ಸೆ ಇಲ್ಲದಿದ್ದರೂ
ಅಂಟಿರೆಟ್ರೋವೈರಲ್ ಥೇರೆಪಿಯಿಂದ ನಿಯಂತ್ರಿಸಬಹುದು. HIV ಪೀಡಿತರಿಗೆಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಾಯವಾಣಿ ಕೇಂದ್ರಗಳು ಇರುತ್ತವೆ ಎಂದು ಶ್ರೀಮತಿ ವಿಜಯಲಕ್ಷ್ಮಿ ICTC ಆಪ್ತ ಸಮಾಲೋಚಕರು ತಾಲೂಕು ಆಸ್ಪತ್ರೆ ಕುಷ್ಟಗಿ ಇವರು,
ಕುಷ್ಟಗಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಏಡ್ಸ್ ರೋಗ ನಿಯಂತ್ರಣ ಹಾಗೂ ಮುಂಜಾಗೃತಾ ಎಂಬ ವಿಷಯ ಕುರಿತು ಮಾತನಾಡಿದರು.
RKSK ಆಪ್ತ ಸಮಾಲೋಚಕರಾದ ಖಾದಿರ್ ಭಾಷಾ ಮಗಿ ಹಾಗೂ ಶಿವಾನಂದ್ ಪೂಜಾರ್
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ವಾದಿರಾಜ್ ಮಠದ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾಕ್ಟರ್ ಸೌಮ್ಯ TG ಕಾರ್ಯಕ್ರಮ ನಿರುಪಿಸಿದರು. ಕುಮಾರಿ ಚೈತ್ರಾ ಉಪನ್ಯಾಸಕರು ಅತಿಥಿಗಳನ್ನು ಸ್ವಾಗತಿಸಿದರು.
ವಿಜಯಕುಮಾರ್ ವೆಲ್ಲೂರೆ ವಂದಿಸಿದರು.
ಕಾರ್ಯಕ್ರಮದಲ್ಲಿ ವೀರಣ್ಣಗೌಡ, ಮಂಜುಳಾ, ಆನಂದ ದೇಸಾಯಿ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

4th September 2025
ಕುಷ್ಟಗಿ ತಾಲೂಕಾ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬುಧವಾರ 3-4-2025 ರಂದು ಕುಷ್ಟಗಿ ನಗರದ ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯರು ಹಾಗೂ ಹಿರೇಮನ್ನಾಪುರದ ಶ್ರೀ ಮಲ್ಲಯ್ಯ ತಾತನವರು,
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಪುರಾಣದ ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮ
ಉದ್ಘಾಟಿಸಿದರು. ಹಾಗೂ ಗೋ ಮಾತೇ ಪೂಜೆ ಮಾಡುವದರ ಮೂಲಕ ಶ್ರೀ ಶಿವಯೋಗಿಗಳ ಪುರಾಣವನ್ನು ಪ್ರಾರಂಭಿಸಲಾಯಿತು.
ಇದೇ ವೇಳೆ ಶ್ರೀ ಗುರು ಶಂಕರಲಿಂಗ ಮಠ ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಜಯ ಸ್ವಾಮಿಗಳು, ವೀರಯ್ಯ ಸ್ವಾಮಿಗಳು, ಪ್ಯಾಟಯ್ಯ ಸ್ವಾಮಿಗಳು ಹಾಗೂ ಶಿವಾನಂದ ಗುರುಗಳು ಸೇರಿದಂತೆ ಇತರರಿದ್ದರು.
ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

3rd September 2025
ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕಾ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ, ಶ್ರೀ ಶಂಕರಲಿಂಗ ಶಿವಯೋಗಿಗಳ ಪುರಾಣ ಪ್ರಾರಂಭೋತ್ಸವ ಹಾಗೂ
ಶ್ರೀ ಶಂಕರಲಿಂಗ ಮಹಾತ್ಮೆ ಭಕ್ತಿ ಪ್ರದಾನ ನಾಟಕ ಗ್ರಂಥ ಲೋಕಾರ್ಪಣೆ ಹಾಗೂ ಧರ್ಮಸಭೆಯು ಇಂದು ದಿನಾಂಕ : 3-09-2025 ರಿಂದ 13-9-2025 ರ ವರೆಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಅನವರತ 11 ದಿನಗಳವರೆಗೆ ನಡೆಯುತ್ತದೆ ಎಂದು ಗೌರವಾಧ್ಯಕ್ಷರು ಶ್ರೀ ಬಾಲಚಂದ್ರಪ್ಪನವರು ಧರ್ಮಾಧಿಕಾರಿಗಳು, ಶ್ರೀ ಗುರು ಶಂಕರಲಿಂಗ ಮಠ, ಹಿರೇಮನ್ನಾಪೂರ ಇವರು ಮಾಹಿತಿ ನೀಡಿದ್ದಾರೆ.
ನಂತರ ಮಾತನಾಡಿದ ಅವರು, ಈ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯುತ್ತದೆ. ನಾಳೆ ಬುಧುವಾರ ಸಾಯಂಕಾಲ 7 ಗಂಟೆಗೆ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಗೋಮಾತೆ ಪೂಜೆಯೊಂದಿಗೆ ಶ್ರೀ ಶಿವಯೋಗಿ ಶಂಕರಲಿಂಗ ಪುರಾಣ ಪ್ರಾರಂಭೋತ್ಸವ ಆಗಲಿದೆ.
ದಿನಾಂಕ: 4-9-2025 ರಂದು ಸಾಯಂಕಾಲ ನವದುರ್ಗಾ ಮಾತೆಯರ ಪಾದಪೂಜೆ ಕಾರ್ಯಕ್ರಮ ಇರುತ್ತದೆ.
ದಿನಾಂಕ: 5-9-2025 ರಂದು ಬೆಳಗ್ಗೆ 9=30ಕ್ಕೆ ಭಜನಾ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ.
ದಿನಾಂಕ: 7-9-2025 ರಂದು ಮುಂಜಾನೆ 9-30 ರಿಂದ ಕರೋಕೆ ಗಾಯನ ಕಾರ್ಯಕ್ರಮವು, ಸ್ವರಸಂಗಮ ಕಲಾವೃಂದ ಬೆಂಗಳೂರು ಹಾಗೂ ಶಿಲೆಗಳು ಸಂಗೀತವಾ ಹಾಡಿವೆ ಗೆಳೆಯರ ಬಳಗ ಕುಷ್ಟಗಿ ಮತ್ತು ಹಿರೇಮನ್ನಾಪೂರ, ನೀರಲೂಟಿ ಗ್ರಾಮದ ಸಕಲ ಸದ್ಭಕ್ತರ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗುವುದು.
ದಿನಾಂಕ: 8-09-2025 ರಂದು ಸಾಯಂಕಾಲ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಇರಲಿದೆ.
ದಿನಾಂಕ: 10-9-2025 ರಂದು ಮುಂಜಾನೆ 9-30ಕ್ಕೆ ಎಲ್ಲಾ ಮಹಿಳೆಯರಿಗಾಗಿ ಬಾಯಲ್ಲಿ ಚಮಚ ನಿಂಬೆಹಣ್ಣಿನ ಓಟದ ಸ್ಪರ್ಧೆ ಇರಲಿದೆ.
ದಿನಾಂಕ: 12-09-2025 ಸಾಯಂಕಾಲ 4-30 ಕ್ಕೆ ಕಳಸಾರೋಹಣ ಹಾಗೂ ರಾತ್ರಿ 8-30ಕ್ಕೆ ನಾಟಕ ಗ್ರಂಥ ಬಿಡುಗಡೆ ಇರಲಿದೆ.
13-09-2025 ರಂದು ಶ್ರೀ ಶಂಕರಲಿಂಗ ಶಿವಯೋಗಿಗಳ ಮೂಲಮಠದಿಂದ ಶಿವಯೋಗಿ ಬೆಟ್ಟಕ್ಕೆ ಕುಂಭ ಕಳಸದೊಂದಿಗೆ ಪಲ್ಲಕ್ಕಿ ಮೆರವಣಿಗೆ,
ಮಧ್ಯಾಹ್ನ 1 ಗಂಟೆಗೆ ಧರ್ಮಸಭೆ ಹಾಗೂ ಸಂಜೆ 5-45ಕ್ಕೆ ಲಘು ರಥೋತ್ಸವ ಮತ್ತು ರಾತ್ರಿ 9-30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ದಿನಾಂಕ: 14-09-2025 ರಂದು ಮರಿಪ್ರಸ್ಥವಿದ್ದು ಶಿವಯೋಗಿ ಬೆಟ್ಟದಿಂದ ಮೂಲಮಠಕ್ಕೆ ಪಲ್ಲಕ್ಕಿ ಬಂದು ತಲುಪುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಕಲ ಸದ್ಭಕ್ತರು ಆಗಮಿಸಬೇಕೆಂದು ಶ್ರೀ ಗುರು ಶಂಕರಲಿಂಗ ಮಠ, ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ತಿಳಿಸಿದ್ದಾರೆ.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.