


19th January 2026
ಮೂಲತ ತಾವರಗೇರಾ ಪಟ್ಟಣದವರಾದ ಪ್ರಸ್ತುತ ಕುಷ್ಟಗಿ ಪಟ್ಟಣದ ವಿದ್ಯಾನಗರದ ಕರ್ನಾಟಕ ಬ್ಯಾಂಕ್ ಹತ್ತಿರದ ನಿವಾಸಿ, ವೀರಶೈವ ಲಿಂಗಾಯತ ಸಮಾಜದವರಾದ ಶ್ರೀಮತಿ ಗಿರಿಜಮ್ಮ ಗಂಡ ಉಮಾಪತಿ ಅಕ್ಕಿ (50) ಇಂದು ಬೆಳಗ್ಗೆ 6:00 ಗಂಟೆಗೆ ಸಿರಾ ಪಟ್ಟಣದ ಹತ್ತಿರ ರಸ್ತೆ ಅಪಘಾತದಲ್ಲಿ ನಿಧನರಾಗಿರುತ್ತಾರೆ.
ಮೃತರು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಕುಷ್ಟಗಿ ತಾಲೂಕಾ ಅಧ್ಯಕ್ಷರಾದ ಉಮಾಪತಿ ಅಕ್ಕಿ ಅವರ ಧರ್ಮಪತ್ನಿಯಾಗಿದ್ದಾರೆ.
ಮೃತರ ಪಾರ್ಥಿವ ಶರೀರವು ಇಂದು ಸಂಜೆ ಕುಷ್ಟಗಿ ಪಟ್ಟಣಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಮೃತರ ಅಂತಕ್ರಿಯೆಯು ಇಂದೆ ಸಾಯಂಕಾಲ ಕುಷ್ಟಗಿ ಪಟ್ಟಣದ ವೀರಶೈವ ಲಿಂಗಾಯತ ರುದ್ರ ಭೂಮಿಯಲ್ಲಿ ಜರುಗುವುದು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮೃತ ಗಿರಿಜಮ್ಮ ಅಕ್ಕಿ ಇವರಿಗೆ ಕುಷ್ಟಗಿ ಹಾಗೂ ತಾವರಗೇರಾ ಪಟ್ಟಣದ ಜನತೆಯಿಂದ ಭಾವಪೂರ್ಣ ಶ್ರದ್ಧಾಂಜಲಿ.

2nd January 2026
ಕುಷ್ಟಗಿ : ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹತ್ತಿರದ ನಿವಾಸಿಗಳಾದ 86 ವರ್ಷದ ಹಿರಿಯ ಜೀವಿ ರಾಘವೇಂದ್ರಾಚಾರ್ ಸೇತುರಾಮಾಚಾರ್ ದಿಗ್ಗಾವಿ ಇವರು ವಯೋ ಸಹಜವಾಗಿ ದಿನಾಂಕ: 01-01-2026 ಗುರುವಾರ ರಾತ್ರಿ 10-00 ಗಂಟೆಗೆ ನಿಧನರಾಗಿದ್ದಾರೆ.
ಇವರ ಅಂತ್ಯಕ್ರೀಯೆಯೂ ಇಂದು ದಿನಾಂಕ: 02-01-2026 ರಂದು ಮುಂಜಾನೆ 10-30ಕ್ಕೆ ಕುಷ್ಟಗಿಯ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ನಡೆಯಿತು.

2nd January 2026
ಕುಷ್ಟಗಿ : ಪಟ್ಟಣದ ನಿವಾಸಿಗಳಾದ ವಿಶ್ವಕರ್ಮ ಸಮಾಜದ ಶ್ರೀಕಾಂತ ಬಡಿಗೇರ್ (51 ವರ್ಷ) ಇವರು ಇಂದು ದಿನಾಂಕ: 02-01-2026 ಶುಕ್ರವಾರದಂದು ಬೆಳಗಿನ ಜಾವ 3-00 ಗಂಟೆಗೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಹಾರ್ಟ್ ಅಟ್ಯಾಕ್ ನಿಂದಾಗಿ ನಿಧನ ರಾಗಿರುತ್ತಾರೆ.
ಮೃತರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳು ಹಾಗೂ ಧರ್ಮಪತ್ನಿ ಮತ್ತು ಅಣ್ಣಂದಿರಾದ
ಶಂಕ್ರಪ್ಪ ಬಡಿಗೇರ್ ಮತ್ತು ಗಂಗಾವತಿ ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷರಾದ ಕಾಳೇಶ್ ಬಡಿಗೇರ್
ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃದು ಸ್ವಭಾವದ ಶ್ರೀಕಾಂತ ಬಡಿಗೇರ್ ಇವರು ಕುಷ್ಟಗಿ ನಗರದ ಕೃಷ್ಣಗಿರಿ ಕಾಲೋನಿಯಲ್ಲಿ ಸ್ವಂತ ಬಡಗಿತನದ ಉದ್ಯೋಗ ಮಾಡಿಕೊಂಡಿದ್ದರು. ಹಾಗೂ ವೈಯಕ್ತಿಕವಾಗಿ ನಮಗೆ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು.
ಇವರ ಅಂತ್ಯಕ್ರಿಯೆಯು ಗಂಗಾವತಿಯಲ್ಲಿ ಸಾಯಂಕಾಲ 5-30 ಗಂಟೆಗೆ ನೆರವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಸದ್ಗತಿ ಪ್ರಾಪ್ತಿಯಾಗಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಸ್ ಕುಷ್ಟಗಿ.🙏🙏

31st December 2025
ಕುಷ್ಟಗಿ : ಹೊಸ ವರ್ಷದ ಆಚರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಗಟ್ಟುವ ಸಲುವಾಗಿ 108 ಆರೋಗ್ಯ ಕವಚ ಆಂಬುಲೆನ್ಸ್ ಕೊಪ್ಪಳ ಜಿಲ್ಲೆಯಲ್ಲಿ ಸಿದ್ದವಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ 108 ಆಂಬುಲೆನ್ಸ್ ಸೇವೆ ಸನ್ನದ್ಧವಾಗಿದ್ದು ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆ ವೇಳೆಯ ಹೆಚ್ಚು ಅಪಘಾತ ಪ್ರಕರಣಗಳು ದಾಖಲಾಗುವುದರಿಂದ ಈ ಸಂದರ್ಭದಲ್ಲಿ ವಿಶೇಷ ಕ್ರಮ ವಹಿಸಲಾಗಿದೆ. 108 ಆಂಬುಲೆನ್ಸ್ ಸೇವೆಯು ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದು ಹೆಚ್ಚಿನ ತುರ್ತು ಪರಿಸ್ಥಿತಿಯನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಆಂಬುಲೆನ್ಸ್ ಸೇವೆ ನಿಯೋಜಿಸಲಾಗಿದೆ. ಹೆಚ್ಚುವರಿ ಸೇವೆಗಾಗಿಯೇ ಸಿಬ್ಬಂದಿಯ ಸಾಪ್ತಾಹಿಕ ರಜೆಯನ್ನು ರದ್ದುಗೊಳಿಸಲಾಗಿದೆ.
ಮುಂಜಾಗ್ರತೆ ಕ್ರಮವಾಗಿ ಎಲ್ಲ ಆಂಬುಲೆನ್ಸ್ ಗಳಲ್ಲಿ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಎಲ್ಲಾ 14ಆಂಬುಲೆನ್ಸ್ ಗಳಿಗೂ ತಜ್ಞ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಯಾವುದೇ ತೂರ್ತು ಪರಿಸ್ಥಿತಿ ಎದುರಾದಲ್ಲಿ 108 ನಂಬರ್ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

15th October 2025
ಕುಷ್ಟಗಿ : ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಬುಧವಾರ ಸಂಜೆ ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮದ ಜಿಯೋ ಪೆಟ್ರೋಲ್ ಬಂಕ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ದುರ್ಧೈವಿ ಯುವಕನನ್ನು ತಾಲೂಕಿನ ಕೆ. ಬೋದೂರು ಗ್ರಾಮದ ನಿವಾಸಿ ಅಮರೇಶ ಗದ್ದೆಪ್ಪ 35 ವರ್ಷ ಎಂದು ತಿಳಿದು ಬಂದಿದೆ.
ಕುಷ್ಟಗಿ NH ಹೈವೇ ಮೊಬೈಲ್ ASI ಮುತ್ತಣ್ಣ ಅವರು ಅಪಘಾತವಾದ ಸುದ್ದಿ ತಿಳಿದ ತಕ್ಷಣ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿದರು. ಮೃತಪಟ್ಟ ಬೈಕ್ ಸವಾರನನ್ನು ಕುಷ್ಟಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಗಳಲ್ಲಿ ಓಡಾಡುತ್ತಿದ್ದು ಯಾವುದೇ ವಾಹನಕ್ಕೆ ಅಡೆತಡೆಯಾಗದಂತೆ ಹೈವೇ ಮೊಬೈಲ್ ASI ಮುತ್ತಣ್ಣ ಅವರು ನೋಡಿಕೊಂಡರು.
ಘಟನೆ ನಡೆದ ಸ್ಥಳಕ್ಕೆ ಸಿಪಿಐ ಯಶವಂತ್ ಬಿಸನಹಳ್ಳಿ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ ಮತ್ತು ಅಲ್ಲಿ ಗುಂಪುಗುಡಿದ್ದ ಜನರನ್ನು ತಿಳಿಗೊಳಿಸಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ.
ಮೃತ ಅಮರೇಶನು ಪೆಟ್ರೋಲ್ ಪಂಪಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಕುಷ್ಟಗಿ ಕಡೆ ತೆರಳುವ ಮಾರ್ಗದಲ್ಲಿ ಈ ದುರ್ಘಟನೆ ನಡೆದಿದ್ದು ಮೃತನಿಗೆ
ಯಲ್ಲಮ್ಮ 7 ತಿಂಗಳ ಗರ್ಭಿಣಿ ಪತ್ನಿ, ಓರ್ವ ಪುತ್ರ ಹರೀಶ್ ಕುಮಾರ್ 4 ವರ್ಷ, ಓರ್ವ ಪುತ್ರಿ ಆದ್ಯ 3 ವರ್ಷ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಈ ಕುರಿತು ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಜ್ ಕುಷ್ಟಗಿ.

8th October 2025
ಕುಷ್ಟಗಿ : ಸದಾ ನಗುಮುಖದಿಂದ ಲವಲವಿಕೆಯಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮುಂದಿರುತ್ತಿದ್ದ 27 ವರ್ಷದ ಭಾಷಾ ಸವಡಿ (ಗುಮಗೇರಿ) ತಂದೆ ಮೂರ್ತಜಾಸಾಬ ತೆಗ್ಗಿನಓಣಿ ಕುಷ್ಠಗಿ ಇವರು
ಇಂದು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.
ಕುಟುಂಬಕ್ಕೆ ಆಸರೆಯಾಗಬೇಕಿದ್ದ ವಯಸ್ಸಿನಲ್ಲಿ ಹಿರಿಯ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಒಂದು ಕಡೆಯಾದರೆ ತಮ್ಮ ಆಪ್ತ ಮಿತ್ರನನ್ನು ಕಳೆದುಕೊಂಡ ಸ್ನೇಹಿತರ ಹಾಗೂ ಬಂಧುಬಳಗ ನೋವು ಇಡೀ ತೆಗ್ಗಿನ ಓಣಿಯಲ್ಲಿ ಮೌನದ ಛಾಯೆ ಆವರಿಸಿತ್ತು.
ಹಲವಾರು ಸಮಾಜ ಸೇವೆ ಕಾರ್ಯಗಳಲ್ಲಿ ತನ್ನಿಂದಾದ ಸೇವೆ ಸಲ್ಲಿಸುತ್ತಾ ಹಾಗೂ ಯಾವುದೇ ದುಷ್ಟ ಚಟಗಳಿಲ್ಲದ ಅತ್ಯಂತ ಸರಳ ಸಜ್ಜನಿಕೆಯ ಯುವಕನ ಸಾವು ಎಲ್ಲರಲ್ಲಿ ನೋವು ಉಂಟುಮಾಡಿದೆ.
ಮೃತ ಭಾಷಾ ಸವಡಿ, ಸದ್ದಾಂ ಗುಮಗೇರಿ ಅವರ ಅಕ್ಕನ ಮಗನಾಗಿದ್ದು ಅಪಾರ ಬಂಧು ಮಿತ್ರರನ್ನು ತೊರೆದು ಬಾರದ ಲೋಕಕ್ಕೆ ತೆರಳಿದ್ದಾನೆ, ಇವರ ಅಂತ್ಯ ಸಂಸ್ಕಾರ ಇಂದು ಸಂಜೆ 6.30ಕ್ಕೆ ಕುಷ್ಟಗಿ ಪಟ್ಟಣದ ವಣಗೇರಿ ರಸ್ತೆಯ ಕಬರಸ್ಥಾನದಲ್ಲಿ ನೆರೆವೆರಲಿದೆ.
ಮೃತ ಭಾಷಾ ಸವಡಿ ಅವರಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಸುಸ್ತು, ತಲೆ ಚಕ್ರ ಹಾಗೂ ಭೇದಿ ಉಂಟಾಗಿತ್ತು, ವೈದ್ಯರು ಪರೀಕ್ಷೆ ಮಾಡಿದಾಗ ದೇಹದಲ್ಲಿ ಬಿಳಿ ಹಾಗೂ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಿವೆ ಹಾಗೂ ಎದೆಯಲ್ಲಿ ಕಫ ಕಟ್ಟಿದೆ ಎಂದಿದ್ದರು.ಕಳೆದ ಎರಡು ದಿನಗಳಿಂದ ಹೊಸಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಇಂದು ಬೆಳಗ್ಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಹೊಸಪೇಟೆಯಿಂದ ಹುಬ್ಬಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕೊಪ್ಪಳದ ಹತ್ತಿರ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರು ಎಳೆದಿದ್ದಾರೆ.
ನಿನ್ನೆ ರಾತ್ರಿ 10.45ಕ್ಕೆ ಆತನನ್ನು ಹೊಸಪೇಟೆ ಆಸ್ಪತ್ರೆಯಲ್ಲಿ ಭೇಟಿಯಾಗಿ ವಿಚಾರಸಿದಾಗ ನಗು ನಗುತ್ತಾ ಮಾತಾನಾಡುತ್ತಾ, ಇವಾಗ ಸ್ವಲ್ಪ ಆರಾಮ ಆಗಿನಿ ಎಂದಿದ್ದ. ಆದರೆ ಬೆಳಿಗ್ಗೆ ಎಷ್ಟೇ ಪ್ರಯತ್ನ ಪಟ್ಟರು ಕಫ ಕಡಿಮೆಯಾಗಲಿಲ್ಲ, ರಕ್ತ ಕಣಗಳ ಸಂಖ್ಯೆ ಹೆಚ್ಚಾಗಲಿಲ್ಲ, ಶುಗರ್ ಇರಲಿಲ್ಲ ಆದರೆ ಬೆಳಿಗ್ಗೆ ಶುಗರ್ ಲೇವಲ್ 500ಕ್ಕೂ ಹೆಚ್ಚು ಕಾಣಿಸಿದೆ ಎಂದು RT ಸುಬಾನಿ ತಿಳಿಸಿದ್ದಾರೆ.
ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರ, ಆ ದೇವರಿಗೆ ನಿಜಕ್ಕೂ ಕರುಣೆಯಿಲ್ಲವೇ, ಇಷ್ಟು ಚಿಕ್ಕ ವಯಸ್ಸಿನ ಯುವಕ ಯಾರಿಗೂ ಅನ್ಯಾಯ ಮಾಡದ ಜೀವ, ಯಾರೊಂದಿಗೂ ಕೆಟ್ಟದಾಗಿ ಮಾತನಾಡುವವನಲ್ಲ ಇಂತಹ ವ್ಯಕ್ತಿತ್ವದಲ್ಲಿ ಏನು ದೋಷ ಹುಡುಕಿದ ಆ ಭಗವಂತ ಎಂದು RT ಸುಬಾನಿ ಅವರು ನೋವು ತೋಡಿಕೊಂಡಿದ್ದಾರೆ.
ವರದಿ : ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ

22nd August 2025
ಕುಷ್ಟಗಿ :- ಮುಸ್ಲಿಂ ಯುವ ಸಮಿತಿ, ಕುಷ್ಟಗಿ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಇವರ ಸಹಯೋಗದಲ್ಲಿ
ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ಇಂದು ದಿನಾಂಕ : 22 ಹಾಗೂ 23 ಮತ್ತು 24 ಆಗಸ್ಟ್, 2025 ರಂದು ಪ್ರತಿದಿನ ಸಾಯಂಕಾಲ 6-45 ಗಂಟೆಗೆ, ಕುಷ್ಟಗಿ ನಗರದ ಬೀಬಿ ಫಾತಿಮಾ ಶಾದಿ ಮಹಲ್ ದಲ್ಲಿ ಜರುಗಲಿದೆ. ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕೂಡಾ ಮಾಡಲಾಗಿದೆ. ಸರ್ವ ಧರ್ಮದವರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅಲ್ತಾಫ್ ಹುಸೇನ್ ಮುಜಾವರ್, ಸ್ಥಾನಿಯ ಸಂಚಾಲಕರು, ಜಮಾತೆ ಇಸ್ಲಾಮಿ ಹಿಂದ್ ಸ್ಥಾನಿಯ ಘಟಕ ಕುಷ್ಟಗಿ, ಹಾಗೂ ಮಹ್ಮದ್ ಆಫ್ತಾಬ್ ಕಾರ್ಯಕರ್ತರು, ಜಮಾತೆ ಇಸ್ಲಾಮಿ ಹಿಂದ್ ಕುಷ್ಟಗಿ, ಸೈಯದ್ ಅಮೀನುದ್ದಿನ್ ಮುಲ್ಲಾ ಅಧ್ಯಕ್ಷರು, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕೊಪ್ಪಳ,
ಮತ್ತು ಮೌಲಾ ಗುಮಗೇರಿ, ಯುವ ಮುಸ್ಲಿಂ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.
ಇಂದು ದಿನಾಂಕ 22-8-2025 ಶುಕ್ರವಾರದಂದು ನಡೆಯುವ ಮಾನವನ ಘನತೆ ಎನ್ನುವ ವಿಷಯದ
ಕಾರ್ಯಕ್ರಮದ ಸಾನಿಧ್ಯ, ಉದ್ಘಾಟನೆಯನ್ನು ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮದ್ದಾನೇಶ್ವರ ಮಠ, ಕುಷ್ಟಗಿ ಮಾಡಲಿದ್ದಾರೆ.
ನೇತೃತ್ವವನ್ನು ಮೌಲಾನಾ ಹಾಫೀಜ್ ಫಜ್ಲೆ ಅಜೀಮ್
ವ್ಯವಸ್ಥಾಪಕರು, ಮದರಸಾ ಅರೇಬಿಯಾ ದಾರೂಲ್ ಉಲೂಮ್ ಅಶ್ರಫೀಯಾ, ಕುಷ್ಟಗಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದೊಡ್ಡನಗೌಡ ಹೆಚ್. ಪಾಟೀಲ್
ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರು, ಕುಷ್ಟಗಿ,.
ಹಸನಸಾಬ ದೋಟಿಹಾಳ್ ಕಾಡಾ ಅಧ್ಯಕ್ಷರು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮುನಿರಾಬಾದ್,.
ಮಹಾಂತೇಶ ಕಲಭಾವಿ ಅಧ್ಯಕ್ಷರು ಪುರಸಭೆ, ಕುಷ್ಟಗಿ.
ದೇವೆಂದ್ರಪ್ಪ ಬಳೂಟಗಿ ಮುಖಂಡರು, ಕುಷ್ಟಗಿ,.
ಅಹ್ಮದ ಹುಸೇನ್ ಆದೋನಿ ಅಧ್ಯಕ್ಷರು, ಅಂಜುಮನ್ ಇಸ್ಲಾಂ ಪಂಚ್ ಕಮಿಟಿ, ಕುಷ್ಟಗಿ,.
ಅಬ್ದುಲ್ ರಹಿಮಾನ್ ಹಸನಸಾಬ್ ದೋಟಿಹಾಳ
ಮುಖಂಡರು, ಉದ್ದಿಮೆದಾರರು, ಹಾಗೂ
ಅಶೋಕ ಶಿಗ್ಗಾಂವಿ ತಹಶೀಲ್ದಾರರು, ಕುಷ್ಟಗಿ,.
ಕುಮಾರಿ ಬ್ರಹ್ಮಕುಮಾರಿ ಸಹೋದರಿ,. ಶ್ರೀಮತಿ ಗಿರಿಜಾ ಮಾಲಿಪಾಟೀಲ್ ಅಧ್ಯಕ್ಷರು, ಇನ್ನರ್ ವೀಲ್ ಕ್ಲಬ್, ಕುಷ್ಟಗಿ,. ವಹಿಸಲಿದ್ದಾರೆ.
ಜನಾಬ ಲಾಲಹುಸೇನ್ ಕಂದಗಲ್ ಇವರು ಪ್ರವಚನ ಮಾಡಲಿದ್ದಾರೆ.
ಭೀಮಸೇನರಾವ್ ಕುಲಕರ್ಣಿ, ಜಿಎಂ ಕುಷ್ಟಗಿ.

13th August 2025
ಇಳಕಲ್ ನಗರದ ಎಸ್.ವಿ.ಎಂ. ಕಾಲೇಜ್ ಪ್ರಾಚಾರ್ಯರಾಗಿ ಡಾ. ಎಸ್.ಬಿ. ಬಿರಾದಾರ್ ನೇಮಕ.
ಹೌದು ನಮ್ಮ ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ
ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀ ವಿಜಯ ಮಹಾಂತೇಶ
ವಿದ್ಯಾವರ್ಧಕ ಸಂಘದ, ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾ
ವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಡಾಕ್ಟರ್
ಎಸ್.ಬಿ. ಬಿರಾದಾರ್ ಅವರು ಶುಕ್ರವಾರದಂದು
ಅಧಿಕಾರ ಸ್ವೀಕರಿಸಿಕೊಂಡರು.
ಡಾಕ್ಟರ್ ಎಸ್.ಎಸ್. ಅವಟಿ ಅವರು ನಿವೃತ್ತಿ ಹೊಂದಿದ್ದರಿಂದ ಅವರ ಜಾಗೆಯಲ್ಲಿ ಇಂಗ್ಲೀಷ್
ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಡಾಕ್ಟರ್
ಎಸ್. ಬಿ. ಬಿರಾದಾರ್ ಅವರು ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾ
ವಿದ್ಯಾಲಯದ ಪ್ರಾಚಾರ್ಯರಾಗಿ ಆಡಳಿತ ಸ್ವೀಕರಿಸಿದ್ದಾರೆ.
ಇದೇ ವೇಳೆ ಡಾಕ್ಟರ್ ಎಸ್.ಎಸ್. ಅವಟಿ ನಿವೃತ್ತ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಜ್ ಕುಷ್ಟಗಿ.

6th July 2025
ಕುಷ್ಟಗಿ : ಬ್ರಾಹ್ಮಣ ಸಮಾಜದ ಹಿರಿಯರು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಅಧ್ಯಕ್ಷರು, ಆಕಾಶವಾಣಿ ಕಲಾವಿದರು, ಜೀವನ ಪರ್ಯಂತ ರಾಯರ ಭಜನೆಯ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡಿದ ಸಾಧಕರಾಗಿದ್ದ ಪ್ರಲ್ಲಾದಾಚಾರ್ಯ ಸೌದಿ (72 ವರ್ಷ) ಅವರು ನಿನ್ನೆ ದಿನಾಂಕ 05-07-2025 ಶನಿವಾರದಂದು ರಾತ್ರಿ 10 ಗಂಟೆಗೆ ವೈಕುಂಠವಾಸಿಗಳಾಗಿರುತ್ತಾರೆ.
ಮೃತರ ಅಂತ್ಯಕ್ರಿಯೆಯು ಇಂದು 06-07-2025 ಭಾನುವಾರ ಬೆಳಗ್ಗೆ 10-30 ಗಂಟೆಗೆ ಕುಷ್ಟಗಿಯ ಬ್ರಾಹ್ಮಣ ಸಮಾಜದ ರುದ್ರಭೂಮಿಯಲ್ಲಿ ವಿಧಿ ವಿಧಾನಗಳೊಂದಿಗೆ ನಡೆಯಿತು. ಮೃತ ಪ್ರಲ್ಲಾದಾಚಾರ್ಯ ಸೌದಿ ಇವರು ಅನೇಕ
ವರ್ಷಗಳಿಂದ ಕುಷ್ಟಗಿ ನಗರದ ಸಿಂಡಿಕೆಟ್ ಬ್ಯಾಂಕ್ ದಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾಗಿದ್ದರು. ಮೃತರಿಗೆ ಪತ್ನಿ ಹಾಗೂ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದು ಇಬ್ಬರು ಸಹೋದರರು ಹಾಗೂ ನಾಲ್ಕು ಜನ ತಂಗಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕುಷ್ಟಗಿ ಜನತೆಯಿಂದ ಅಶ್ರುತರ್ಪಣ.

11th May 2025
ಕುಷ್ಟಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಆಜೀವ ಸದಸ್ಯರು, ಸಾಹಿತಿಗಳು,ರಾಜ್ಯ ಹಿರಿಯ ನಾಗರಿಕ ಪ್ರಶಸ್ತಿ ಪುರಸ್ಕೃತರು, ಹೋರಾಟಗಾರರು ಆದ ತಾಜುದ್ದಿನ್ ದಳಪತಿ ಅವರ ನಿಧನ ತುಂಬಾ ದುಃಖದ ಸಂಗತಿ.. ಅವರ ಸ್ಮರಣಾರ್ಥವಾಗಿ ನಾಳೆ ದಿನಾಂಕ: ೧೨/೦೫/೨೦೨೫ ಸೋಮವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರ ಆತ್ಮಕ್ಕೆ ಶಾಂತಿ ಕೋರಿ ಕುಷ್ಟಗಿ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಮುಂಜಾನೆ ೧೦:೩೦ ಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.
ಕುಷ್ಟಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು, ಕ.ಸಾ.ಪ ಆಜೀವ ಸದಸ್ಯರು, ಪತ್ರಿಕಾ ಮಾಧ್ಯಮದವರು ಉಪಸ್ಥಿತರಿರಬೇಕೆಂದು ಕೋರಲಾಗಿದೆ ಎಂದು ಗೌರವ ಕಾರ್ಯದರ್ಶಿ ಶರಣಪ್ಪ ಲೈನದ್ ಕೊರಿದ್ದಾರೆ