


26th November 2025
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಅಡಿವೆಪ್ಪಗೌಡ ಪಾಟೀಲ್ 78 ವರ್ಷ ಇವರು ಇಂದು ದಿನಾಂಕ 26-11-2025 ಬುಧುವಾರದಂದು ತುಮಕೂರು ಸಿದ್ಧಗಂಗಾ ಮೇಡಿಕಲ್ ಆಸ್ಪತ್ರೆಯಲ್ಲಿ ಮುಂಜಾನೆ 11-42 ಘಂಟೆಗೆ ಶಿವಾಧಿನರಾದರೆಂದು ಕುಟುಂಬದ ಮೂಲಗಳು ತಿಳಿಸಿರುತ್ತಾರೆ.
ಮೃತರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬಂದು ಸಾರ್ವಜನಿಕ ದರ್ಶನಕ್ಕಾಗಿ ಯಲಬುರ್ಗಾದ ಅವರ ನಿವಾಸದಲ್ಲಿ ಇಂದು ದಿನಾಂಕ 26/11/2025 ಸಂಜೆ 05 ಘಂಟೆಯಿಂದ ನಾಳೆ 27/11/2025 ಬೆಳಿಗ್ಗೆ 09 ಘಂಟೆಯ ವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಿಗ್ಗೆ 09 ಘಂಟೆಯ ನಂತರ ಸ್ವಗ್ರಾಮ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ಮದ್ಯಾಹ್ನ 02 ಘಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ. ನಂತರ ಹಿಂದೂ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೆರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿರುತ್ತಾರೆ.
ಮೃತರಾದ ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ಇವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಅವರ ಸಾವಿನ ನೋವನ್ನು ಮರೆಯುವ ಶಕ್ತಿ ಕೊಡಲಿ ಎಂದು ಅವರ ಆಪ್ತ ವಲಯದವರು ತಿಳಿಸಿದ್ದಾರೆ.

9th October 2025
ಕುಷ್ಟಗಿ : ಯುವ ಸಮ್ಮೇಳನ ಹಾಗೂ ಕೊಪ್ಪಳ ಜಿಲ್ಲಾ ಕಾರ್ಯಕಾರಣಿ ಸಭೆಯು, ಕುಷ್ಟಗಿ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಾಳೆ ದಿನಾಂಕ 10-10-2025 ಶುಕ್ರವಾರದಂದು ಮುಂಜಾನೆ 10 ಗಂಟೆಗೆ, ಮಾಜಿ ಸಚಿವರಾದ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ನಿವಾಸದಲ್ಲಿ ಏರ್ಪಡಿಸಲಾಗಿದೆ.
ಯುವ ಸಮ್ಮೇಳನ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳಾದ ಶ್ರೀ ನಿಗಮ್ ಭಂಡಾರಿ ಹಾಗೂ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಶ್ರೀ ಮಂಜುನಾಥಗೌಡ ಹೆಚ್.ಎಸ್. ಮತ್ತು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿಗಳಾದ ಶ್ರೀ ದೀಪಿಕಾ ರೆಡ್ಡಿ ಮತ್ತು ಶ್ರೀ ಇಲಾಹಿ ಸಿಕಂದರ್ ಇವರುಗಳು ಆಗಮಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತ ಮುಖಂಡರೆಲ್ಲರೂ ಆಗಮಿಸಬೇಕೆಂದು, ಬಸವರಾಜ್ ಮಲ್ಲಾಡದ್,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯುವ ಕಾಂಗ್ರೆಸ್ ಸಮಿತಿ ಕೊಪ್ಪಳ ಇವರು ತಿಳಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ : ಕಾಂಗ್ರೆಸ್ ಕಚೇರಿ, ಮಾಜಿ ಸಚಿವರಾದ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ನಿವಾಸ ಕುಷ್ಟಗಿ.
ವರದಿ :- ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

16th September 2025
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಇದೇ ದಿನಾಂಕ: 18-9-2025 ರಂದು ಅನಿರ್ಧಿಷ್ಟಾವಧಿ ಧರಣಿಯನ್ನು ಗ್ರಾಮ ಪಂಚಾಯತಿ ಮುಂದೆ ಮಾಡುವುದಾಗಿ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ,
ವಾರ್ಡ್ ಸಮಿತಿ ದೋಟಿಹಾಳ್ ಇದರ ತಾಲೂಕಾ ಅಧ್ಯಕ್ಷರಾದ ಹುಸೇನ್ ಸಾಬ್ ಕೊಳ್ಳಿ ತಿಳಿಸಿದ್ದಾರೆ. ನಂತರ ಮಾತನಾಡಿದ ಅವರು, ಕುಷ್ಟಗಿ ತಾಲೂಕಿನ ದೋಟಿಹಾಳ್ ಗ್ರಾಮ ಪಂಚಾಯತಿಗೆ, ಗ್ರಾಮದ ಮೂಲಭೂತ ಸೌಕರ್ಯಕ್ಕಾಗಿ ನಿರಂತರವಾಗಿ ಮೇಲಿಂದ ಮೇಲೆ ಮನವಿಗಳ ಮೂಲಕ ಸಮಸ್ಯೆಗಳ ಬಗ್ಗೆ ಹೇಳಿದ್ದರು ಕೂಡಾ ಯಾವುದೇ ಕ್ರಮವಾಗದ ಕಾರಣ ಇದೆ ದಿನಾಂಕ 18-9-2025 ಗುರುವಾರದಂದು ಗ್ರಾಮ ಪಂಚಾಯತಿ ಮುಂದೆ ಜಿಲ್ಲಾಧಿಕಾರಿಗಳು ಬರುವವರೆಗೂ ಅನಿರ್ಧಿಷ್ಟಾವಧಿ ಧರಣಿ ಮಾಡಲಾಗುತ್ತದೆ ಎಂದರು.
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಮೂಲಭೂತ ಸೌಕರ್ಯಗಳ ಬಗ್ಗೆ, ಹಲವು ಬಾರಿ ಮನವಿ ಹಾಗೂ ನೇರವಾಗಿ
PDO ರವರನ್ನು ಹಾಗೂ ಆಡಳಿತ ಮಂಡಳಿಯವರನ್ನು ಬೇಟಿಯಾದರು ಅವರು ಯಾವುದೇ ಕ್ರಮ ಕೈ ಗೊಂಡಿರುವದಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ CE0 ರವರಿಗೆ ಮನವಿ ನೀಡಿರುತ್ತೇವೆ. ದಪ್ಪ ಚರ್ಮದ ಅಧಿಕಾರಿಗಳು ಗ್ರಾಮದಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಯಾವುದೇ ಮಾಹಿತಿ ನೀಡದೆ ಇರುವುದು ದೊಡ್ಡ ದುರಂತವಾಗಿದೆ. ಇದಕ್ಕಾಗಿ ಇದರ ವಿರುದ್ಧ ಇದೆ ಗುರುವಾರ
ಸೋಶಿಯಲ್ ಡೆಮಾಕ್ರಟಿ ಪಾರ್ಟಿ ಆಫ್ ಇಂಡಿಯಾ ಗ್ರಾಮ ಸಮಿತಿ ದೋಟಿಹಾಳ್ ವತಿಯಿಂದ ಗ್ರಾಮ ಪಂಚಾಯತಿ ಮುಂದೆ ಜಿಲ್ಲಾಧಿಕಾರಿಗಳು ಬರುವವರೆಗೂ ಅನಿರ್ಧಿಷ್ಟಾವಧಿ ಧರಣಿ ಮಾಡಲು
ತಿರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಹುಸೇನ್ ಸಾಬ್ ಕೊಳ್ಳಿ, ಉಪಾಧ್ಯಕ್ಷರಾದ ಮಂಜಿಲ್ ಬಾಷಾ ಬಿಚಕತ್ತಿ - ಸಮಿತಿಯ ಸದಸ್ಯರಾದ ಸಲೀಮ್ ಕಲಾಲಬಂಡಿ, ಶ್ಯಾಮೀದ್ ತಾವರಗೇರೆ, ರಿಯಾಜ್ ತಾಸೇದ್, ನೆಹಲ್ ಮುದಗಲ್ ಉಪಸ್ಥಿತರಿದ್ದರು.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

8th September 2025
ಕುಷ್ಟಗಿ : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ, ಜಿಲ್ಲಾ ಕೊಪ್ಪಳ ಇದರ ಸನ್ 2024-25ನೇ ಸಾಲಿನ 59ನೇ ವಾರ್ಷಿಕ ಮಹಾಸಭೆಯು ನಾಳೆ ದಿನಾಂಕ : 09-09-2025 ಮಂಗಳವಾರ ಮುಂಜಾನೆ 11-30 ಘಂಟೆಗೆ, ಕೃಷ್ಣ ರುಕ್ಮಿಣಿ ಸಭಾ ಮಂಟಪ ಎನ್.ಹೆಚ್ 50 ಹೊಸಪೇಟೆ ರಸ್ತೆ ಕುಷ್ಟಗಿಯಲ್ಲಿ ನಡೆಯಲಿದೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ ಇದರ ಅಧ್ಯಕ್ಷರಾದ ಗೋಪಾಲರಾವ್ ರಾಮರಾವ್ ಕುಲಕರ್ಣಿ ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು ಕುಷ್ಟಗಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ ಬ್ಯಾಂಕಿನ ಎಲ್ಲ ಸರ್ವ ಸದಸ್ಯರಿಗೆ ತಿಳಿಸುವುದೇನೆಂದರೆ ಸನ್ 2024-25ನೇ ಸಾಲಿನ 59ನೇ ವಾರ್ಷಿಕ ಮಹಾಸಭೆಯನ್ನು ಜರುಗಿಸಲಾಗುತ್ತಿದ್ದು ಬ್ಯಾಂಕಿನ ಆಡಳಿತ ಮಂಡಳಿಯ ಪರವಾಗಿ ಸಭೆಗೆ ಹಾಜರಾಗಲು ಹೃದಯಪೂರ್ವಕವಾಗಿ ತಮಗೆಲ್ಲರಿಗೂ ಸ್ವಾಗತವನ್ನು ಕೋರುತ್ತೇನೆ ಎಂದು ಅಧ್ಯಕ್ಷರಾದ ಗೋಪಾಲರಾವ್ ರಾಮರಾವ್ ಕುಲಕರ್ಣಿ ಅವರು ತಿಳಿಸಿದ್ದಾರೆ.
--ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ.
ಅಧ್ಯಕ್ಷರು ಗೋಪಾಲರಾವ್ ರಾಮರಾವ್ ಕುಲಕರ್ಣಿ,
ಉಪಾಧ್ಯಕ್ಷರು ಬಾಲಪ್ಪ ಸಾಬಣ್ಣ ತಳವಾರ,
ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಶ್ಯಾಮರಾವ್ ರಾಘವೇಂದ್ರರಾವ್ ಕುಲಕರ್ಣಿ,
ಶೇಖರಗೌಡ ವಿರುಪಾಕ್ಷಗೌಡ ಮಾಲಿ ಪಾಟೀಲ್,
ಮಹಾಲಿಂಗಪ್ಪ ಮಲ್ಲಪ್ಪ ದೋಟಿಹಾಳ,
ಭರಮಗೌಡ ಹನಮನಗೌಡ ಮಾಲಿ ಪಾಟೀಲ್
ಮಹಾಂತೇಶ ಪರಪ್ಪ ಕರಡಿ,
ಬಸನಗೌಡ ಸಂಗನಗೌಡ ದಿಡ್ಡಿಮನಿ,
ಶಿವಯ್ಯ ಮಹಾದೇವಯ್ಯ ಗಡಾದರ,
ಅಮರೇಶ ಗುರಪ್ಪ ಕಲಕಬಂಡಿ,
ಮಹಾಂತೇಶ ಚನ್ನಪ್ಪ ವತ್ತಿ,
ಶ್ರೀಮತಿ ಸೋಮವ್ವ ಚಂದಪ್ಪ ರಾಠೋಡ,
ಶ್ರೀಮತಿ ಈರಮ್ಮ ಬಸಪ್ಪ ಚೌಡಿ,
ಶ್ರೀಮತಿ ಶಾಂತವ್ವ ಸೋಮಣ್ಣ ಮುಳ್ಳೂರ್,
ಬಸವರಾಜಗೌಡ ಪಾಟೀಲ್ ಜಿಲ್ಲಾ ವ್ಯವಸ್ಥಾಪಕರು
ಕಾಸ್ಕಾರ್ಡ್ ಬ್ಯಾಂಕ್ ಕೊಪ್ಪಳ.
ಚಂದ್ರಪ್ಪ ಪಿ. ಲಮಾಣಿ ವ್ಯವಸ್ಥಾಪಕರು
ಪಿ ಎಲ್ ಡಿ ಬ್ಯಾಂಕ್ ಕುಷ್ಟಗಿ.
ವರದಿಗಾರರು: ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

6th September 2025
ಕುಷ್ಟಗಿ ನಗರದಲ್ಲಿ ಹಜರತ್ ಹೈದರ್ ಅಲಿ ಕಮೀಟಿ ತೆಗ್ಗಿನಓಣಿ ಹಾಗೂ ಸಂಜೀವಿನಿ ರಕ್ತ ನಿಧಿ ಕೇಂದ್ರ ಇವರ ಸಹಯೋಗದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ ರವರ ಜನ್ಮ ದಿನದ ಪ್ರಯುಕ್ತ 5ನೇ ವರ್ಷದ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕುಷ್ಟಗಿಯ ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಡಾ ಅಧ್ಯಕ್ಷರಾದ ಹಸನ್ ಸಾಬ್ ದೋಟಿಹಾಳ್ ವಹಿಸಿದ್ದರು.
ಉದ್ಘಾಟನೆಯನ್ನು ಕುಷ್ಟಗಿ ಕ್ಷೇತ್ರದ ಶಾಸಕರಾದ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಹೆಚ್. ಪಾಟೀಲ್ ಅವರು ಸಸಿಗೆ ನೀರು ಹಾಕುವುದರ ಮೂಲಕ ನೆರವೇರಿಸಿದರು. ಹಮ್ಮದ್ ಹುಸೇನ್ ಆಫೀಸಾಬ್ ಪ್ರಾರ್ಥನೆ ಮಾಡಿದರು. ಆರ್.ಟಿ ಸುಬಾನಿ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ನಿರೂಪಣೆ ಹಾಗೂ ಸ್ವಾಗತವನ್ನು ಬಸವರಾಜ್ ಗಾಣಗೇರ್ ಮಾಡಿದರು.
ಪೈಗಂಬರ್ ಅವರ ಜೀವನ ಸಾಧನೆ ಕುರಿತು ಡಾಕ್ಟರ್ ಜೀವನಸಾಬ್ ಬಿನ್ನಾಳ್ ಮಾತನಾಡಿದರು.
ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಹಾಗೂ ಶ್ರೀಕರಿಬಸವ ಶಿವಾಚಾರ್ಯರು ಕಾರ್ಯಕ್ರಮ ಕುರಿತು ಮಾತನಾಡಿದರು.
ತೆಗ್ಗಿನಓಣಿಯಲ್ಲಿರುವ - ಶವ ಸಂಸ್ಕಾರ ಕಾರ್ಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಕಳೆದ 30 ವರ್ಷದಿಂದ ಯಾವುದೇ ಪಲಾಪೇಕ್ಷೆ ಹಾಗೂ ಹಣ ಪಡೆಯದೆ ಸೇವೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, 10 ಜನ ಸಾಧಕರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಮಹಾಂತೇಶ್ ಕಲಭಾವಿ, ಪುರಸಭೆ ಸದಸ್ಯರಾದ ಮೈನುದ್ದೀನ್ ಮುಲ್ಲಾ, ಜಿಕೆ ಹಿರೇಮಠ್, ಮಹಿಬೂಬ್ ಕಮ್ಮಾರ್, ಉಮೇಶ್ ಮಂಗಳೂರು, ಖಾಜಾಸಾಬ್ ಅತ್ತಾರ್, ಅಯೂಬ್ ಮುಲ್ಲಾ, ಅಹಮ್ಮದ್ ಹುಸೇನ್ ಆಧೋನಿ, ನಜೀರ್ ಸಾಬ್ ಮೂಲಿಮನಿ, ಕೊಪ್ಪಳ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಅಧ್ಯಕ್ಷರಾದ ಸೈಯದ್ ಅಮೀನುದ್ದಿನ್ ಮುಲ್ಲಾ ಹಾಗೂ ಹಾಗೂ ಊರಿನ ಗುರುಹಿರಿಯರು ಉಪಸ್ಥಿತರಿದ್ದರು.
ಒಟ್ಟು 222 ಜನ ರಕ್ತದಾನ ಮಾಡುವ ಮುಖಾಂತರ ಕೊಪ್ಪಳ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದ, ಹೈದರ್ ಅಲಿ ಕಮಿಟಿ ಕುಷ್ಟಗಿ ಹಾಗೂ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಹಜರತ್ ಹೈದರ್ ಅಲಿ ಕಮಿಟಿಯವರ ಕಡೆಯಿಂದ ಬಹು ದೊಡ್ಡದಾದ ಧನ್ಯವಾದಗಳನ್ನು ಆರ್.ಟಿ. ಸುಬಾನಿ ತಿಳಿಸಿದ್ದಾರೆ.
ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

5th September 2025
ಕುಷ್ಟಗಿ: ಮಹಮ್ಮದ್ ಪೈಗಂಬರ್ ಅವರ ಜನುಮ ದಿನದ ಪ್ರಯುಕ್ತ ನಡೆದ ಇಂದು ಶುಕ್ರವಾರ ಕುಷ್ಟಗಿ ನಗರದಲ್ಲಿ ನಡೆದ ಮೆರವಣಿಗೆ ಕಾರ್ಯಕ್ರಮದಲ್ಲಿ
ಪೂಜ್ಯರಾದ ಕುಷ್ಟಗಿ ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯರು ಹಾಗೂ
ತಾಲೂಕಾ ಅಂಜುಮಾನ್ ಪಂಚ್ ಕಮಿಟಿ ಅಧ್ಯಕ್ಷರಾದ ಹಾಗೂ ಕಾಡಾ ಅಧ್ಯಕ್ಷರಾದ ಹಸನ್ ಸಾಬ್ ದೋಟಿಹಾಳ್, ಶಾಸಕರಾದ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ
ದೊಡ್ದನಗೌಡ ಎಚ್ ಪಾಟೀಲ್, ಮಾಜಿ ಸಚಿವರಾದ ಅಮರೆಗೌಡ ಪಾಟೀಲ್ ಬಯ್ಯಾಪುರ,
ಪುರಸಭೆ ಅಧ್ಯಕ್ಷರಾದ ಮಹಾಂತೇಶ ಕಲಭಾವಿ, ಹಾಗೂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಕಲ್ಲೇಶ್ ತಾಳದ್, ಸಮಾಜದ ಮುಖಂಡರಾದ
ಅಹಮ್ಮದ್ ಹುಸೇನ್ ಆಧೋನಿ, ಖಾಜಾಸಾಬ್ ಅತ್ತಾರ್, ಮೈನುದ್ದೀನ್ ಮುಲ್ಲಾ, ಅಬ್ದುಲ್ ನಹಿಮ್ , ಮೂರ್ತಜಾ ಅತ್ತಾರ್, ಸುಲೆಮಾನ್ ಚಡಚಣ, ಶೌಕತ್ ಕಾಯಿಗಡ್ಡಿ, ಸುಬಾನಿ ಆರ್ ಟಿ, ಮಹಿಬೂಬ್ ಸರಪಂಚ್, ಆಲಮ್ ಮೋದಿ, ರಫೀಕ್ ರಾಗ್ಜಿನ್, ಅಯೂಬ್ ಮುಲ್ಲಾ, ನಿಜಾಂ ಸಾಬ ವಾಠಾರ್, ಸಯ್ಯದ್ ಸಾಬ ಅತ್ತಾರ್, ಮಹಿಬೂಬ್ ಕಮ್ಮಾರ್, ಎಚ್ ಆರ್ ಶೇಖ್. ಸೇರಿದಂತೆ ಇತರರಿದ್ದರು.
ಜಾಮಿಯಾ ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆಯು ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಮಾರುತಿ ವೃತ್ತ ಹಾಗೂ ಮಲ್ಲಯ್ಯ ವೃತ್ತದ ವರೆಗೆ ಹೋಗಿ, ಅಲ್ಲಿಂದ ಕನಕದಾಸ ವೃತ್ತದಿಂದ ಹಿಡಿದು
ಮಕ್ಬಲ್ಲಿಯ ಮಸೀದಿಯವರೆಗೆ ಸಾಗಿತು.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

5th July 2025
ಕುಷ್ಟಗಿ ಜು.05: ಪಂಚ ಸೇನಾ ತಾಲೂಕು ಘಟಕದ ಅಧ್ಯಕ್ಷರಾಗಿ ಟೆಂಗುಂಟಿ ಗ್ರಾಮದ ಪ್ರಭುಗೌಡ ಪೊಲೀಸ್ ಪಾಟೀಲ್ ಅವರನ್ನು ಪಂಚಮಸಾಲಿ ಸಮಾಜದ ಗುರುಗಳಾದ ಬಸವಜಯ ಮೃಂತುಜಯ ಮಹಾಸ್ವಾಮಿಗಳು ಹಾಗೂ ರಾಜ್ಯಾಧ್ಯಕ್ಷರಾದ ರುದ್ರಗೌಡರು ಸೊಲಭಗೌಡ್ರು, ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ, ಜಿಲ್ಲಾಧ್ಯಕ್ಷ ಶಿವಶರಣಪ್ಪ ಶಿವಪೂಜೆ, ಉಪಾಧ್ಯಕ್ಷ ಬಸವರಾಜ ಅರಳಹಳ್ಳಿ, ಕಾರ್ಯದರ್ಶಿ ಮಂಜುನಾಥ ಬಸಾಪುರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ಪಂಚ ಸೇನಾ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಟೆಂಗುಂಟಿ ಗ್ರಾಮದ ಪ್ರಭುಗೌಡ ಪೊಲೀಸ್ ಪಾಟೀಲ್ ಅವರು ನೇಮಕಾತಿ ಹೊಂದಿದ ಪ್ರಯುಕ್ತ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಸಮಾಜದ ಹಿರಿಯ ಮುಖಂಡರಾದ ಕೆ.ಮಹೇಶ, ಉಮೇಶ ಮಂಗಳೂರು, ಚಂದ್ರಶೇಖರ ನಾಲತವಾಡ, ಸಂಗಪ್ಪ ವಂಕಲಕುಂಟಿ, ಮಹಾಂತೇಶ ಅಗಸಿಮುಂದಿನ, ದೊಡ್ಡಪ್ಪ ವಿ. ಕೌದಿ, ಶರಣಪ್ಪ ಹೊಸಮನಿ, ಶರಣಪ್ಪ ಮಾಲೀಪಾಟೀಲ್, ಗೌಡಪ್ಪಗೌಡ ಪೊಲೀಸ್ ಪಾಟೀಲ್, ಶರಣಪ್ಪ ಮಾಳಿ, ಮಲ್ಲಿಕಾರ್ಜುನ ಅಂಗಡಿ, ಹನುಮಂತಪ್ಪ ಅಂಗಡಿ, ದೊಡ್ಡಪ್ಪ ಎಸ್ ಕೌದಿ, ಬಸವರಾಜ ಮಾಲೀಪಾಟೀಲ್, ಶರಣಪ್ಪ ನವಲಹಳ್ಳಿ, ಬಸವರಾಜ ಹುಲಿಹೈದರ್, ಮುತ್ತಪ್ಪ ಹೊಸೂರ, ಸುರೇಶ ಕೌದಿ ಹಾಗೂ ತಾಲೂಕು ಪಂಚಮಸಾಲಿ ಸಮಾಜದ ಗುರು ಹಿರಿಯರು, ಯುವಕರು ಅಭಿನಂದನೆ ಸಲ್ಲಿಸಿದ್ದಾರೆ.

26th June 2025
ನಮ್ಮನ್ಯೂಜ್ ಜಿಎಂ ನ್ಯೂಜ್ ಕುಷ್ಟಗಿ. 26 :
ಸರಕಾರ ಸರಕಾರಿ ಶಾಲೆಗಳ ಉಳಿವಿಕೆಗಾಗಿ ಸಾಕಷ್ಟು ಹಣವನ್ನು ಯೋಜನೆಗಳ ರೂಪದಲ್ಲಿ ಶಿಕ್ಷಣ ಇಲಾಖೆಗೆ ಖರ್ಚು ಮಾಡುತ್ತಿದೆ ಆದರೆ ಸರಕಾರವು ಶಾಲೆಗಳಿಗೆ ಹಣ ಖರ್ಚು ಮಾಡಿದರೆ ಸಾಲದು ಶಾಲಾ ಎಸ್.ಡಿ.ಎಂ.ಸಿಯ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದಾಗ ಮಾತ್ರ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ ಎಂದು ಬಿ.ಆರ್.ಸಿ ಹಾಗೂ ಎಸ್.ಡಿ.ಎಂ.ಸಿ ಸಮಿತಿ ಸದಸ್ಯ ಡಾ. ಜೀವನ್ ಸಾಬ ಬಿನ್ನಾಳ ಇಂದು ಗುರುವಾರ ಹೇಳಿದರು.
ಕುಷ್ಟಗಿ ನಗರದ ಗುರುಭವನದಲ್ಲಿ ಕಲಿಕಾ ಟಾಟಾ ಟ್ರಸ್ಟ್ ಹಾಗೂ ಶಿಕ್ಷಣ ಇಲಾಖೆ ಇವರ ಸಹ ಯೋಗದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಒಂದು ದಿನದ ಕಾರ್ಯಾಗಾರ ತರಬೇತಿ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ದೇವಾಲಯದ ಗಂಟೆಗಿಂತ ಶಾಲೆಯ ಗಂಟೆ ಬಹಳ ಮುಖ್ಯ ಎಷ್ಟೋ ಕಡೆ ಹಳ್ಳಿಯ ಜನತೆ ತಮ್ಮ ಸ್ವಂತ ಖರ್ಚಿನಿಂದ ಶಾಲೆಗಳನ್ನು ಅಭಿವೃದ್ಧಿಗೊಳುಸುತ್ತಿದ್ದಾರೆ ಆದರೆ ಕಲಿಕಾ ಟಾಟಾ ಟ್ರಸ್ಟ್ ಸಂಸ್ಥೆ ಸರಕಾರದ ಸಹ ಭಾಗಿತ್ವದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಇವತ್ತು ಉಚಿತ ಶಿಕ್ಷಣವನ್ನು ನೀಡುತ್ತಿದೆ ಟಾಟಾ ಟ್ರಸ್ಟ್ ಸಂಸ್ಥೆ ಮಾಡುತ್ತಿರುವ ಕಾರ್ಯವನ್ನು ನಿಜಕ್ಕೂ ಮೆಚ್ಚಲೆಬೇಕು ಎಂದು ಹೇಳಿದರು.
ನಂತರ ಬಿ.ಆರ್.ಪಿ ಸಂತೋಷ ಬೆಟಗೇರಿ ಹಾಗೂ ಸರಕಾರಿ ಬಾಲಕಿಯರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಎಸ್. ಡಿ.ಎಂ.ಸಿ. ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಕಾರ್ಯಕ್ರಮ ಕುರಿತು ಮಾತನಾಡಿದರು.
ನಂತರ ತಾಲೂಕಿನ ವಿವಿಧ ಶಾಲೆಗಳಿಂದ ಬಂದ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಿಗೆ ಸದಸ್ಯರಿಗೆ ಕಲಿಕಾ ಟಾಟಾ ಟ್ರಷ್ಟ್ ನಿಂದ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಲಿಕಾ ಟಾಟಾ ಟ್ರಸ್ಟ್ ಸಮಿತಿ ತಾಲೂಕು ಮುಖ್ಯಸ್ಥರಾದ ವೀರೇಶ ಹಂಚಿನಾಳ, ಸಂಯೋಜಕರಾದ ಬಸವರಾಜ ನಾಗಣ್ಣವರ, ಭಾಷುಸಾಬ, ಕಲ್ಲಪ್ಪ, ಆನಂದ, ಬಸವರಾಜ ಹಾದಿಮನಿ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಿಂದ ಬಂದ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

25th June 2025
ಕುಷ್ಟಗಿ : ಆಲಮಟ್ಟಿ ಜಲಾಶಯದಲ್ಲಿ 76.475 ಟಿಎಂಸಿ ನೀರು ಶೇಖರಣೆಯಾಗಿದ್ದು ಒಳಹರಿವು 1 ಲಕ್ಷ ಕ್ಯೂಸೆಕ್ಸ್ ತಲುಪಿದ್ದು ಪ್ರತಿದಿನ 70 ಕ್ಯೂಸೆಕ್ಸ್ ನೀರನ್ನು ನದಿಗಳಿಗೆ ಹರಿಸಲಾಗುತ್ತಿದ್ದು ಕೊಪ್ಪಳ ಏತ ನೀರಾವರಿ ಯೋಜನೆ ಅಡಿಯಲ್ಲಿ ಈಗಾಗಲೇ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಯಲ್ಲಿದ್ದು ಈಗ ವ್ಯರ್ಥವಾಗಿ ನದಿಗಳಿಗೆ ಹರಿದು ಹೋಗುವ ನೀರನ್ನು ಶೀಘ್ರವೇ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಸಮಿತಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಜೀರ್ ಸಾಬ್ ಮೂಲಿಮನಿ ಅವರು ಇಂದು ಮಂಗಳವಾರದಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಕೃಷ್ಣಭಾಗ್ಯ ಜಲ ನಿಗಮ ಉಪ ವಿಭಾಗ ಕುಷ್ಟಗಿ ಇವರಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ತಾಲೂಕಿನ ಎಲ್ಲ ಕೆರೆಗಳಿಗೆ ಪೈಪ್ ಲೈನ್ ಮಾಡುವ ಪ್ರಕ್ರಿಯೆಯಲ್ಲಿದ್ದು ಉಳಿದ ಆ ಕೆರೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳಲ್ಲಿ ಕಡಿಮೆ ಮಳೆಯಿಂದಾಗಿ ಕೆರೆಗಳು ತುಂಬಿರುವುದಿಲ್ಲ. ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆ ಜಿಲ್ಲೆಯ ರೈತರಿಗೆ ವರದಾನವಾಗಿದ್ದು ವಿಳಂಬ ಮಾಡದೆ ಜುಲೈ ತಿಂಗಳ ಒಂದನೆ ತಾರೀಖಿನೊಳಗಾಗಿ ಕೆರೆಗಳಿಗೆ ನೀರನ್ನು ತುಂಬಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಸಮಿತಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಜೀರ್ ಸಾಬ್ ಮೂಲಿಮನಿ, ಗೌರವಾಧ್ಯಕ್ಷರಾದ ಶಂಕರ್ ಬೀಳಗಿ, ಕಾರ್ಯದರ್ಶಿ ದೊಡ್ಡಪ್ಪ ಸಜ್ಜಲಗುಡ್ಡ ಮತ್ತು ಕಾಡಪ್ಪ ಗದ್ದಿ, ಬಸಪ್ಪ ಗದ್ದಿ, ಪರಶುರಾಮ ಬಲಕುಂದಿ, ಸಂಗಮೇಶ ಗುಡಗದ್ದಿ, ಯಮನೂರ ಮುದುಗಲ್, ಪರಸಪ್ಪ ಮಾಲಗಿತ್ತಿ, ಹನುಮಂತ ಹಂಚನಾಳ, ಕುಮಾರ್ ಕೊರಡಕೇರಾ ಹಾಗೂ ಇತರರಿದ್ದರು. ವರದಿ : ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಜ್ ಕುಷ್ಟಗಿ.

20th May 2025
ಬಿಜೆಪಿ ರಾಜ್ಯಾಧ್ಯಕ್ಷರಾದ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿಜಯೇಂದ್ರ ಅವರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಯಿ ಅವರಿಗೆ, ಸಣ್ಣ ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಹಾಗೂ ಬಿಜೆಪಿ ಮುಖಂಡರಾದ ಪ್ರಭಾಕರ ಚಿಣಿ ಅವರು ಇಂದು ಮಂಗಳವಾರ ಬೆಂಗಳೂರಿನಲ್ಲಿ ತಮ್ಮ ಪುತ್ರನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಮದುವೆಗೆ ಬಂದು ಮದುಮಕ್ಕಳನ್ನು ಆಶೀರ್ವದಿಸಬೇಕೆಂದು ಅಹ್ವಾನಿಸಿದರು.
ಇದೇ ವೇಳೆ ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್, ಬಿಜೆಪಿ ಮುಖಂಡರಾದ ಬಸವರಾಜ ಹಳ್ಳೂರು, ಶರಣು ತಳ್ಳಿಕೇರಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಮಹಾಂತೇಶ್ ಬಾದಾಮಿ, ವಿಜಯಕುಮಾರ್ ಹಿರೇಮಠ, ಅಶೋಕ ಬಳ್ಳೂಟಗಿ, ಕೆ. ಮಹೇಶ್, ವೀರಭದ್ರಪ್ಪ, ಮಲ್ಲಣ್ಣ ಪಲ್ಲೆದ್, ಪರಶುರಾಮ ನಾಗರಾಳ, ಲಾಡಸಾಬ್ ಕೊಳ್ಳಿ ಸೇರಿದಂತೆ ಕುಷ್ಟಗಿ ನಗರದ ಬಿಜೆಪಿ ಮುಖಂಡರು ಉಪಸ್ಥಿತದ್ದರು.
GM News Kushtagi.