

20th May 2026

ಬೆಂಗಳೂರು : ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ, ಹರಿದಾಸರ ಮಿಲನ ದಾಸೋಪಾಸನ ಹಾಗೂ ಹರಿದಾಸರ ನಮನ – ಬೆಂಗಳೂರು, ಹುಬ್ಬಳ್ಳಿ ಇವರ ವತಿಯಿಂದ ಮನೋಧರ್ಮ - 2026 ಕಾರ್ಯಕ್ರಮದಲ್ಲಿ, ಬೆಂಗಳೂರಿನ ಕತ್ರಿಗುಪ್ಪೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ದಿನಾಂಕ 24-5-2026 ಭಾನುವಾರದಂದು ಹರಿದಾಸರ ಹಬ್ಬದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ವರ್ಷದ ಶ್ರೇಷ್ಠ ವ್ಯಕ್ತಿಗಳನ್ನು ಆಯ್ಕೆ ಮಾಡಿ ವಿಶ್ವಮಾನ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.,
ಪ್ರಶಸ್ತಿ ಪುರಸ್ಕೃತರಾಗಿ ಆಯ್ಕೆಯಾದವರು :
ಶ್ರೀಮತಿ ಅಂಜಲಿ ಕುಲಕರ್ಣಿ – ಶೇಕಡಾ 42.63
ಶ್ರೀಮತಿ ಮೇಘನಾ ಜಹಗೀರದಾರ್ – ಶೇಕಡಾ 41.62
ಶ್ರೀ ಸುಮೇಧ ವಿಠಲ ದಾಸರು – ಶೇಕಡಾ 33.33
ಶ್ರೀ ಕೃಷ್ಣಮೂರ್ತಿ – ಶೇಕಡಾ 32.79
ಇವರು ಮನೋಧರ್ಮ - 2026 ಕಾರ್ಯಕ್ರಮದ ಅಡಿಯಲ್ಲಿ ದಾಸ ಸಾಹಿತ್ಯದಲ್ಲಿ ಅನುಪಮ ಸೇವೆಗೈದ ವರ್ಷದ ಶ್ರೇಷ್ಠ ವ್ಯಕ್ತಿಗಳಾಗಿ ವಿಶ್ವಮಾನ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.
ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ, ಹರಿದಾಸರ ಮಿಲನ ದಾಸೋಪಾಸನ ಹಾಗೂ ಹರಿದಾಸರ ನಮನ – ಬೆಂಗಳೂರು, ಹುಬ್ಬಳ್ಳಿ ತಂಡದ ಹೆಮ್ಮೆಯ ವಿಶ್ವಮಾನ್ಯ ಪ್ರಶಸ್ತಿ ವಿಜೇತರಾದ ಎಲ್ಲರಿಗೂ ಸಂಸ್ಥಾಪಕರಾದ ಡಾ. ಆರ್.ಪಿ. ಕುಲಕರ್ಣಿ ಅವರು ಹಾಗೂ ನಿರ್ವಾಹಕರಾದ ಶ್ರೀಮತಿ ಡಾ. ರಾಧಿಕಾ ಜೋಶಿ, ಸುರೇಶ್ ಕಲ್ಲೂರು ಹಾಗೂ ಶ್ರೀಮತಿ ವಿಭಾ ಕುಲಕರ್ಣಿ ಇವರು ಶುಭಾಶಯಗಳನ್ನು ತಿಳಿಸಿದ್ದಾರೆ.
ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಸ್ ಕುಷ್ಟಗಿ.
ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ, ಹರಿದಾಸರ ಮಿಲನ ದಾಸೋಪಾಸನ ಹಾಗೂ ಹರಿದಾಸರ ನಮನ – ಬೆಂಗಳೂರು, ಹುಬ್ಬಳ್ಳಿ ಇವರ ವತಿಯಿಂದ ಮನೋಧರ್ಮ - 2026 ಕಾರ್ಯಕ್ರಮದಲ್ಲಿ, ಬೆಂಗಳೂರಿನ ಕತ್ರಿಗುಪ್ಪೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ದಿನಾಂಕ 24-5-2026 ಭಾನುವಾರದಂದು ಹರಿದಾಸರ ಹಬ್ಬದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ವರ್ಷದ ಶ್ರೇಷ್ಠ ವ್ಯಕ್ತಿಗಳನ್ನು ಆಯ್ಕೆ ಮಾಡಿ ವಿಶ್ವಮಾನ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.,

ಮಹಾನ್ ಮಾನವತಾವಾದಿ ಜ್ಯೋತಿರಾವ್ ಪುಲೆ ಅವರ ಜೀವನ ವ್ಯಕ್ತಿತ್ವ ಮಕ್ಕಳು ಬೆಳಿಸಿಕೊಳ್ಳಲು ಕರೆ