15th July 2025
ಗದಗ: ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ 2019ನೇ ಬ್ಯಾಚ್,ನ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್ ನೇಮಿಸಿ ಸರ್ಕಾರ ಆದೇಶಿಸಿದೆ.
ಬೆಳಗಾವಿ ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಯಂಗ್ & ಎನರ್ಜಿಟಿಕ್ ಅಧಿಕಾರಿ ರೋಹನ್ ಜಗದೀಶ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಕಳೆದೆ ಎರಡೂವರೆ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಎಸ್ಪಿ ಬಿ.ಎಸ್ ನೇಮಗೌಡ ಅವರನ್ನು ಬೆಂಗಳೂರು ಸಿಟಿ ನಾರ್ಥ್ ಡಿವಿಜಿನ್ ಡಿಸಿಪಿಯಾಗಿ ನೇಮಕ ಮಾಡಿಲಾಗಿದೆ
9th July 2025
ಗದಗ್ ಬೆಟಗೇರಿ ನಗರಸಭೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕಾರಿಯಪ್ಪ ಸರ್ಕಲ್ ಹಾಗೂ ಬಸವೇಶ್ವರ ಸರ್ಕಲ್ ಹತ್ತಿರದ ಪ್ಲಾಸ್ಟಿಕ್ ಮಾರಾಟಗಾರರ ಕಿರಾಣಿ ಮತ್ತು ಬೇಕರಿ ಅಂಗಡಿಗಳಿಗೆ ತೆರಳಿ ಅಂದಾಜು 120 ಕೆಜಿ ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ನಗರಸಭೆಯು ವಶಪಡಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಗದಗ್ ಬೆಟಿಗೇರಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ರಾದ ಆನಂದ್ ಬದಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಅಭಿಯಂತರಾದ ವಿಕಾಸ್ ಹಾಗೂ ನಗರಸಭೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
25th June 2025
ಲಕ್ಷ್ಮೇಶ್ವರ: ಪಟ್ಟಣದ ತಾಲೂಕ ಆಡಳಿತ ಮತ್ತು ಪೊಲೀಸ್ ಠಾಣಾ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ ನಿಮಿತ್ಯ ಬೈಕ್ ರ್ಯಾಲಿ ಮೂಲಕ ಜನಜಾಗೃತಿ ಜಾಥಾ ನಡೆಸಿದರು.
ಇಂದಿನ ಯುವಕರು ತಮ್ಮ ಅತ್ಯಮೂಲ್ಯವಾದ ಜೀವನವನ್ನು ದುಶ್ಚಟಗಳಿದ್ದ ದೂರವಿದ್ದು ಉತ್ತಮ ಆರೋಗ್ಯ ಬದುಕಬೇಕಾಗಿದೆ. ದೈಹಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗದೆ ದುಷ್ಟ ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಹೊಂದಬೇಕು. ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಒಳಗಾಗಿ ಜೀವನವನ್ನು ಹಾಳು ಮಾಡಿಕೊಳ್ಳದೆ ತಮಷ್ಟಕ್ಕೆ ತಾವೇ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳಬೇಕು ಇಂತಹ ಕೆಟ್ಟ ಪರಿಣಾಮಗಳಿಂದ ದೂರವಿದ್ದು ಉತ್ತಮ ಆರೋಗ್ಯ ಹೊಂದಬೇಕು ಎಂದು ತಹಸೀಲ್ದಾರ್ ವಾಸುದೇವಸ್ವಾಮಿ ಹೇಳಿದರು.
ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಾಣಿಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಬಲಿಯಾಗದೆ. ಮನುಕುಲದ ಮೇಲೆ ಕೆಟ್ಟ ಪರಿಣಾಮ ಬೀರುವ ಮಾದಕ ವಸ್ತುಗಳ ಮೊಹಕ್ಕೆ ಸಿಲುಕಬಾರದು. ಇಂತಹ ಸಮಾಜಕ್ಕೆ ಮಾರಕವಾಗುವ ದುಷ್ಪರಿಣಾಮಗಳ ಕುರಿತು ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ 1987 ಡಿಸೆಂಬರ್ 7ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 26ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನುಬಾಹಿರ ಸಾಗಾಟ ವಿರೋಧಿ ದಿನ ವನ್ನಾಗಿ ಆಚರಿಸಲಾಗುತ್ತಿದೆ ಎಂದು ಸಿಪಿಐ ನಾಗರಾಜ್ ಮಾಡಳ್ಳಿ ಹೇಳಿದರು.
ಮಾದಕ ವಸ್ತುಗಳ ಸಾಗಾಣಿಕೆ ಕಾನೂನುಬಾಹಿರ ಎಂದು ಗೊತ್ತಿದ್ದರೂ ಕೂಡ ಇಂತಹ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆಯಿಂದ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಯುವಕರ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಗುಟುಕಾ, ಸಿಗರೇಟ್, ಗಾಂಜಾ, ಅಪಿಮು ಮತ್ತು ಮಧ್ಯ ಸೇವನೆ ಮುಂತಾದ ದುಶ್ಚಟಗಳಿಂದ ದೂರವಿರಬೇಕು. ಇಂತಹ ಸಮಾಜ ಮಾರಕ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕು. ಕಾನೂನಿನ ಹೊರತಾಗಿ ಪ್ರತಿಯೊಬ್ಬ ನಾಗರಿಕನು ಈ ಕುರಿತಾಗಿ ಜಾಗೃತಿ ಹೊಂದಿರಬೇಕು. ಮಾದಕ ವಸ್ತುಗಳಿಂದ ಮುಕ್ತವಾಗಿ ಸಮಾಜದಲ್ಲಿ ಜವಾಬ್ದಾರಿಯುತ್ತಾ ವ್ಯಕ್ತಿಯಾಗಿ ಸಮಾಜ ಹಾಳು ಮಾಡುವ ದುಷ್ಪರಿಣಾಮಕಾರಿ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿರಬೇಕೆಂದು ಪಿಎಸ್ಐ ನಾಗರಾಜ್ ಗಡಾದ್ ಹೇಳಿದರು.
ಈ ಸಂದರ್ಭದಲ್ಲಿ ಬೈಕ್ ರ್ಯಾಲಿ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ ಸಂಚರಿಸುವ ಮೂಲಕ ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ ನಿಮಿತ್ಯ ಜನಜಾಗೃತಿ ಮೂಡಿಸಲಾಯಿತು. ತಾಲೂಕ್ ಪಂಚಾಯತಿ ಇಓ ಕೃಷ್ಣಪ್ಪ ಧರ್ಮಾರ, ಪುರಸಭೆ ಮುಖ್ಯ ಅಧಿಕಾರಿ ಮಹೇಶ್ ಹಡಪದ್, ಕ್ರೈಂ ಪಿಎಸ್ಐ ಟಿ ಕೆ ರಾತೋಡ್, ಎನ್ ಎ ಮೌಲ್ವಿ, ವೈ ಸಿ ದೊಡ್ಡಮನಿ, ಮಕನದಾರ್, ಮಾರುತಿ ಲಮಾಣಿ, ಬಳ್ಳಾರಿ, ನದಾಫ, ಕಲ್ಲನವರ್ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
25th June 2025
ಅಕ್ರಮ ಚಟುವಟಿಕೆಗಳ ನಿಯಂತ್ರಿಸುವಂತೆ ಮಾಜಿ ಶಾಸಕರ ಮನವಿ
ಕಣ್ಣಿದ್ದು ಕುರುಡಾದ ಪೊಲೀಸ ಇಲಾಖೆ; ಬಸವರಾಜ ದಢೇಸುಗೂರು
ಕಾರಟಗಿ : ತಾಲೂಕಿನಾದ್ಯಂತ ಅಕ್ರಮ ಚಟುವಟಿಕೆ ನಿಯಂತ್ರಿಸುವಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಕೂಡಲೇ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕೊಪ್ಪಳ ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಬಸವರಾಜ ದಡೇಸುಗೂರು ಅವರ ನೇತೃತ್ವದಲ್ಲಿ ಗಂಗಾವತಿಯ ಪೊಲೀಸ್ ಉಪ ವಿಭಾಗದ ಅಧಿಕಾರಿಗಳಿಗೆ ಕಾರಟಗಿ ಪೋಲಿಸ್ ಠಾಣೆಯಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ ದಢೇಸುಗೂರ ಮಾತನಾಡಿ, ಕಾರಟಗಿ ಮತ್ತು ಕನಕಗಿರಿ ಕ್ಷೇತ್ರ ವ್ಯಾಪ್ತಿಯು ಅಕ್ರಮ ಚಟುವಟಿಕೆಗಳ ಕಾರಣವಾಗಿದೆ. ಇಲ್ಲಿನ ಪೊಲೀಸ್ ಅಧಿಕಾರಿಗಳು ಕಣ್ಣಿಗೆ ಕಂಡರೂ ಕಾಣದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಇಲಾಖೆಗಳು ಚುನಾಯಿತ ಪ್ರತಿನಿಧಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ತಾಲೂಕಿನಲ್ಲಿ ಮರಳುದಂಧೆ, ಇಸ್ಪೀಟು, ಮಟ್ಕಾ, ಅಕ್ರಮ ಪಡಿತರ ಅಕ್ಕಿ ಸಾಗಾಟ, ಗಾಂಜಾ ಡ್ರಗ್ಸ್ ನಂತಹ ಅನಧಿಕೃತ ಚಟುವಟಿಕೆಗಳು ನಡೆಯುತ್ತಿವೆ. ಇನ್ನು ಮುಂದೆಯಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಆಗಬೇಕಿದೆ ಎಂದರು.
ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದನ್ನು ಕಳೆದ ಸುಮಾರು ತಿಂಗಳುಗಳಿಂದ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ಇದರ ವಿರುದ್ಧ ಸ್ಥಳೀಯ ಪೊಲೀಸ್ ಇಲಾಖೆ ಯಾವುದೇ ರೀತಿ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ. ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ಮಿತಿಮೀರಿವೆ ಪ್ರಮುಖವಾಗಿ ಅಕ್ರಮ ಪಡಿತರ ಅಕ್ಕಿ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಅಲ್ಲದೆ ಮರಳು ಮಾಫಿಯಾ ಮತ್ತು ಕಳ್ಳಭಟ್ಟಿ, ಕಳ್ಳತನ, ಇಸ್ಪೀಟು, ಮಟ್ಕಾ, ಗಾಂಜಾ, ಡ್ರಗ್ಸ್ ಕೂಡ ನಿರಂತರವಾಗಿ ನಡೆಯುತ್ತಿದೆ ಆದರೂ ಪೊಲೀಸ್ ಇಲಾಖೆ ಕಣ್ಣಿಗೆ ಕಂಡರೂ ಕಾಣದಂತೆ ಕುಳಿತಿದೆ.
ಪಟ್ಟಣವು ಬೃಹದಾಕಾರದಲ್ಲಿ ಬೆಳೆಯುತ್ತಿದ್ದು ಟ್ರಾಫಿಕ್ ಸಮಸ್ಯೆ ಉಲ್ಬಣಗೊಂಡಿದ್ದು ಸರ್ಕಾರಿ ರಸ್ತೆಗಳು ಹಾಗೂ ಸಿಎ ಸೈಟ್ ಒತ್ತುವರಿಯಾಗಿವೆ. ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ ಮತ್ತು ಮಹಿಳೆಯರ ಆಭರಣ ಕಳ್ಳತನವಾಗುತ್ತಿವೆ, ರಸ್ತೆಯಲ್ಲಿ ಬೈಕ್ ನಿಲ್ಲಿಸುವುದು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುವುದರ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ರಾಜಕೀಯ ದ್ವೇಷದಿಂದ ಪೊಲೀಸರು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡದೆ ಜಾತಿ ನಿಂದನೆ ಕೇಸ್ ಗಳನ್ನು ಹಾಕುವುದರ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದಾರೆ ಇದನ್ನು ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದೆ ಕೂಡಲೇ ಈ ಎಲ್ಲಾ ಚಟುವಟಿಕೆಗಳಿಗೆ ಪೊಲೀಸಲಾಗಿ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿ ಸಲ್ಲಿಸಿದರು.
ಬಾಕ್ಸ್...............
ಅಕ್ರಮ ಚಟುವಟಿಕೆಗಳನ್ನು ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ರಾಜಕೀಯ ದ್ವೇಷದಿಂದ ರೌಡಿಶೀಟರ್ ಜಾತಿ ನಿಂದನೆ ಸೇರಿದಂತೆ ಅನೇಕ ಕೇಸುಗಳು ದಾಖಲಿಸಿ ಯುವಕರನ್ನು ಕುಗ್ಗುವಂತೆ ಮಾಡಿದ್ದಾರೆಂದು ಈ ಸಂದರ್ಭದಲ್ಲಿ ಕಾರ್ಯಕರ್ತರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ನಾಗರಾಜ ಬಿಲ್ಗಾರ್, ಜಿ ತಿಮ್ಮನಗೌಡ, ಶಿವಪುತ್ರ, ಯರಿಸ್ವಾಮಿ, ಸುರೇಶ್ ಬೆನ್ನೂರು, ಚಂದ್ರಶೇಖರ್ ಮುಸಾಲಿ, ದೇವರಾಜ ನಾಯಕ, ಬಸವನಗೌಡ ಮಾಲಿಪಾಟೀಲ್, ಗೋವಿಂದಪ್ಪ, ರವಿಸಿಂಗ್, ವಿಕ್ರಂ ಮೇಟಿ, ದುರ್ಗೇಶ್ ಹೊಸಕೇರಾ, ಪ್ರಿಯಾಂಕ ಪವರ್, ಹುಲಿಗೆಮ್ಮ ನಾಯಕ, ಶರಣಪ್ಪ ಸೋಮನಾಳ, ಬಸವರಾಜ ಶೆಟ್ಟರ್, ಮಂಜುನಾಥ ಮಸ್ಕಿ, ಲಿಂಗಪ್ಪ ಕೊಟ್ನೆಕಲ್, ಮಲ್ಲಿಕಾರ್ಜುನ ಯರಡೋಣಾ, ಹನುಮಂತಪ್ಪ ಕಬ್ಬೇರ್, ಆನಂದ ಎಂ, ಬಸವರಾಜ ಕೆ, ಸೋಮಶೇಖರ, ಪಂಪನಗೌಡ, ನಾಗಪ್ಪ ಕೆಂಗೇರಿ, ರಾಘವೇಂದ್ರ, ಲಕ್ಷ್ಮಣ ಸೇರಿದಂತೆ ಅನೇಕರು ಇದ್ದರು.
25th June 2025
"ಅನ್ನದಾತರ ಸಂಸ್ಕೃತಿಗೆ ನಮನ. ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು"
ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯನ್ನು ಜ್ಯೇಷ್ಠ ಅಮಾವಾಸ್ಯೆ ಅಥವಾ ಮಣ್ಣೆತ್ತಿನ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ.
"ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನ ಅಣ್ಣಯ್ಯ
ಮಣ್ಣೇ ಲೋಕದಲಿ ಬೆಲೆಯಾದ್ದು."
ಈ ದಿನದಂದು ರೈತರು ಉಳುವ ಭೂಮಿಯಿಂದ ಮಣ್ಣನ್ನು ತಂದು ಅದೆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಅದನ್ನು ಪೂಜಿಸುವ ಮೂಲಕ ತನ್ನ ಬೆಳೆಗೆ ಸಹಾಯ ಮಾಡಿದ ಎತ್ತುಗಳಿಗೆ ಧನ್ಯವಾದವನ್ನು ಸಲ್ಲಿಸುತ್ತಾರೆ. ಪವಿತ್ರ ದಿನದಂದು ಸಮಸ್ತ ನಾಡಿನ ರೈತರಿಗೆ ಮಣ್ಣೆತ್ತಿನ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ.
ಮಳೆಯಿಂದ ಬಿತ್ತಿದ ಫಸಲು ಚೆನ್ನಾಗಿ ಬರಲಿ, ತಮ್ಮ ಎತ್ತುಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದುಕೊಂಡು ಭಕ್ತಿಯಿಂದ ಸ್ಮರಿಸುತ್ತಾ ಸಮಸ್ತ ನಾಡಿನ ರೈತರಿಗೆ ಮಣ್ಣೆತ್ತಿನ ಅಮಾವಾಸ್ಯೆಯ ಶುಭಾಶಯಗಳನ್ನು ಕೋರುತ್ತೇನೆ.
-ಬಸವರಾಜ ಎಸ್ ಹೊರಟ್ಟಿ..
24th June 2025
ಪ್ರತಿ ವರ್ಷದ ಉತ್ತರಾಯಣ-ದಕ್ಷಿಣಾಯನಗಳ ಹೊಸ್ತಿಲಲ್ಲಿ ಬರುವ ಜ್ಯೇಷ್ಠಮಾಸವು ನಮ್ಮ ಸಂಸ್ಕೃತಿಯಲ್ಲಿ ಬಹುಮುಖ್ಯ ಮಾಸವಾಗಿದೆ. ಫಾಲ್ಗುಣ ಮಾಸವು ಶುಕ್ಲವರ್ಣದ ‘ದ್ಯು’ ಎಂಬ ಆಕಾಶತತ್ತ್ವದ ಶುರುವಾದರೆ-ಜ್ಯೇಷ್ಠಮಾಸವು ಕೃಷ್ಣವರ್ಣದ ‘ಭೂ’ ಎಂಬ ಭೂತತ್ತ್ವದ ಶುರುವಾತನ್ನು ತರುತ್ತದೆ. ಈ ಮಾಸವು ನಿರ್ಜಲ ಏಕಾದಶಿ, ಸೌರ ನರಸಿಂಹ ಜಯಂತಿ, ಭೂಮಿ ಪೂರ್ಣಿಮೆ, ಶುಕ್ಲಾದೇವಿ-ಗಂಗಾವತರಣ ಅಷ್ಟಮಿ ಮೊದಲಾದ ಪವಿತ್ರ ಆಚರಣೆಗಳಿಂದ ಕೂಡಿ ಕೊನೆಗೆ ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಮುಗಿಯುವುದು. ಜ್ಯೇಷ್ಠ-ಆಷಾಢಗಳು ದುರ್ಗಾಮಾಸವೆಂದೇ ಸಂಪ್ರದಾಯ ಖ್ಯಾತವಾಗಿದೆ. ಆಷಾಢದ ಗಾಳಿ-ಮಳೆಗೆ ಮುನ್ನ ಭೂಮಿ ಮಣ್ಣನ್ನು ಚಂದ್ರಕಲೆಗಳು ಬೆರೆತು ಫಲವತ್ತಾಗಿಸುತ್ತದೆ. ಅದರ ಸೌಲಭ್ಯವನ್ನು ಉತ್ತಿ ಬಿತ್ತಿ ಬೆಳೆ ತೆಗೆಯುವುದು ಮನುಷ್ಯರ ಕೆಲಸ ಮತ್ತು ಅದರಿಂದಲೇ ಸಮಸ್ತರಿಗೂ ಅನ್ನೋತ್ಪತ್ತಿ. ಈ ತೆರನಾದ ಕೊಂಡಿ-ತಂತು ಪ್ರಕೃತಿಗೂ-ಕಾಲಕೂ-ಭೂಮಿಗೂ ಇದೆ ಎಂಬ ವಿಸ್ಮಯ ವಿಚಾರವನ್ನು ಸಹಸ್ರಾರು ವರ್ಷದ ಹಿಂದೆಯೇ ನಮ್ಮ ದೇಶಿಗರು ಕಂಡುಕೊಂಡಿದ್ದರು. ಆ ಸಮಯದಲ್ಲಿ ತತ್‌ಸಂಬಂಧಿ ಪೂಜಾದಿಗಳನ್ನು, ವ್ರತಗಳನ್ನು ನಿರೂಪಿಸಿ ಸಮಸ್ತ ಜನರಿಗೆ ಆಯಾ ಕಾಲದ ಕರ್ತವ್ಯದ ಬಗ್ಗೆ ತಿಳಿವು ಮೂಡುವಂತೆ ಮಾಡಿದ್ದರು. ಈ ತಿಳಿವಿನ ಮೂಲ-ಜಾಲವೇ ನಮ್ಮ ಹಬ್ಬ-ಹರಿದಿನಗಳೆಂಬ ಭಾರತೀಯತೆಯಾಗಿದೆ.
ಆಧುನಿಕತೆಯ ಯಂತ್ರ ನಾಗಾಲೋಟದಲ್ಲಿ ಇದೆಲ್ಲ ಹೀಗಿದೆ ಎಂದು ಸಹ ತಿಳಿಯದೇ ಪರಕೀಯ ವಿಚಾರದಲ್ಲಿ ಜನಜೀವನ ನಡೆದಿದೆ.ಸೂರ್ಯನಿಂದ ಸಮಸ್ತ ಜಗ, ಶಾಖ, ಬೆಳಕು. ಚಂದ್ರನಿಂದ ನೀರು-ತಂಪು ಭೂಮಿಗೆ. ಇಂಥ ಭೂಮಣ್ಣನ್ನು ಜ್ಯೇಷ್ಠದ ಅಮಾವಾಸ್ಯೆಯಂದು ಪೂಜಿಸಿ, ಆ ಮಣ್ಣಿನಿಂದ ಉಳುವ ನೇಗಿಲು-ಎತ್ತುಗಳಿಗೆ ಲೇಪ ಮಾಡಿ-ಗೋಧೂಳಿ ಸಮಯದಲ್ಲಿ ಫಲಪುಷ್ಪ-ಆರತಿಗಳಿಂದಲೂ-ಬಲಿಹಿರಣದಿಂದಲೂ, ಹಣತೆಯಿಂದಲೂ ಪೂಜಿಸುವ ದಿನವಿದು. ಹೀಗೆ ಸೂರ್ಯ-ಚಂದ್ರ-ಭೂಮಿ-ಉಳುಮೆಗಳು ಪರಸ್ಪರ ಕೂಡಿಕೊಂಡಿದೆ. ಆ ಕೂಡಿಕೆಯಿಂದಲೇ ಅನ್ನ-ನೀರು ದೊರೆಯುವುದಲ್ಲವೇ?! ಹಾಗೆಂದೇ ಭೂದೇವಿಯನ್ನು ಪೂಜಿಸಬೇಕು. ಎತ್ತುಗಳು ಪರಮೇಶ್ವರನ ಸ್ವರೂಪ, ನೇಗಿಲು ಈಶ್ವರನ ಆಯುಧಗಳ ಸ್ವರೂಪ. ಹೀಗೆ ಜ್ಯೇಷ್ಠದ ಅಮಾವಾಸ್ಯೆಯ ಪೂಜಾದಿಗಳ ಹಿಂದಿನ ಅನು ಸಂಧಾನವಿದೆ. ಇನ್ನು ಈ ಪರ್ವ ಕಾಲವನ್ನು ಆಚರಣೆಯನ್ನು ಅಮಾವಾಸ್ಯೆಯೇ ಏಕೆ ಎಂದರೆ, ಅದು ಭೂಮಿಯ ಸಂಬಂಧಿ ದಿನ ಹುಣ್ಣಿಮೆ ಚಂದ್ರನ ಸಂಬಂಧಿ ದಿನ. ಆಯಾ ದಿನಗಳಿಗೆ ಅದರದೇ ಆದ ಮಹತ್ವವಿದೆ ಎಂದೂ ಈ ಪರ್ವ ದಿನಗಳ ಆಚರಣೆ ನಡೆದು ಬಂದಿದೆ.