
7th August 2025
ಡಂಬಳ: ಗ್ರಾಮದಲ್ಲಿ ವಾಲಮಾರ್ಟ್ ಹಾಗೂ ಐಸಾಪ್ ಫೌಂಡೇಶನ್, ಚಂದನವನ ರೈತ ಉತ್ಪಾದಕ ಕಂಪನಿಯ ಸಂಯೋಗದಲ್ಲಿ ಇಂದು ಡಂಬಳಗ್ರಾಮದ ಶ್ರೀ ತೋಂಟದಾರ್ಯ ದಾಸೋಹ ಭವನದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ ವೀ ಹಿರೇಮಠ ಗುರುಗಳು, ಆಡಳಿತ ಮಂಡಳಿ ಯ ವ್ಯವಸ್ತಾಪಕರು, ಡಂಬಳ ಇವರು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸುವ ಪ್ರಸ್ತಾವಿಕವಾಗಿ ಮಾತನಾಡಿದವರು ಆಹಾರ ಪದಾರ್ಥಗಳ ಉತ್ಪಾದನೆಯಂಬುದು ಅತ್ಯಂತ ಸೂಕ್ಷ್ಮ ಹಾಗೂ ಸುಚಿತ್ವದಿಂದ ಕೂಡಿರಬೇಕು ಆದರೆ ಸದ್ಯ ಕಳಪೆ ಆಹಾರ ಸೇವನೆಯಿಂದ, ವ್ಯೆವಸ್ಥಿತವಾದ ಶುದ್ಧ ಆಹಾರ ಉತ್ಪಾದನೆಯ ಕೊರತೆಯಿಂದಾಗಿ ಅನೇಕ ರೋಗಗಳಿಗೆ ತುತ್ತಗುತ್ತಿದ್ದೇವೆ ಅದನ್ನು ಸಾಧ್ಯವಾದಷ್ಟು ಬದಲಾಯಿಸಿಕೊಳ್ಳಬೇಕು ಎಂಬ ಮಾತನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ಬಸವರಾಜ್ ಬೇವಿನಮರದ, ಅಧ್ಯಕ್ಷರು ಚಂದನವನ ರೈತ ಉತ್ಪಾದಕ ಕಂಪನಿ, ಡಂಬಳ ವಹಿಸಿದರು.
ಸಂಪನ್ಮೂಲ ವ್ಯೆಕ್ತಿಗಳಾಗಿ ಆಗಮಿಸಿದ ಶ್ರೀಮತಿ ಯಶೋಧಾ ಮೇಡಂ, ಇಂದ್ರಪ್ರಸ್ತ ಅಕಾಡೆಮಿ ಫೌಂಡೇಶನ್ ದೆಹಲಿ, ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸ್ವ ಉದ್ಯೋಗವನ್ನು ಹೊಂದುವುದು ಉತ್ತಮ ವಿಚಾರ ಅದೇರೀತಿಯಾಗಿ ಆಹಾರ ಉತ್ಪಾದನ ಘಟಕಗಳನ್ನು ಹೊಂದುವವರು ಹಾಗೂ ಹೊಂದಿದವರು ಎಫ್ ಎಸ್ ಎಸ್ ಏ ಐ ತರಬೇತಿ ಹಾಗೂ ತರಬೇತಿಯ ಪ್ರಮಾಣ ಪತ್ರ ಪಡೆಯುವುದು ಪ್ರಮುಖವಾದುದ್ದು, ಅದನ್ನು ಯಾವರೀತಿ ಪಡೆಯುವುದು ಎಂಬುದನ್ನು ನೋಡುವುದಾದರೆ ಆಹಾರ ಉತ್ಪನ್ನಗಳನ್ನು ತಯಾತಿಸುವಾಗ ಗಮನಿಸಬೇಕಾದ ಅಂಶಗಳು, ಘಟಕಗಳು ಹೊಂದಿರಬೇಕಾದ ಮೂಲಭೂತ ಸೌಲಭ್ಯಗಳು, ಸ್ವಚ್ಛತೆ, ಸುಚಿತ್ವ, ರಾಸಾಯನಿಕ /ಹಾನಿಕಾರಕ ಪದಾರ್ಥಗಳ ಮೇಲೆ ಇರಬೇಕಾದಂತ ಗಮನ, ನೈಸರ್ಗಿಕ ರಾಸಾಯನಿಕ ಪದಾರ್ಥಗಳ ಅಪಾಯಗಳ ಕುರಿತು ಮೊನ್ನೆಚ್ಚರಿಕೆಯ ಕ್ರಮಗಳನ್ನು ವಹಿಸುವುದು, ಜೈವಿಕ ಹನಿಗಳ ತಡೆಯುವಿಕೆ, ಕುರಿತಂತೆ ಮಾಹಿತಿಯನ್ನು ವಿಡಿಯೋ ತೋರಿಸುವ ಮೂಲಕ ಹಾಗೂ ಮೌಕಿಕ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಬಸವರಾಜ್ ಬೇವಿನಮರದರವರು ಮಾತನಾಡಿ ಮಹಿಳೆಯರಿಗೆ ಈ ತರಬೇತಿಯು ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ನಮ್ಮ ಚಂದನವನ ರೈತ ಉತ್ಪಾದಕ ಕಂಪನಿಯ ಷೇರುದಾರರು ಅನೇಕ ಆಹಾರ ಉತ್ಪಾದನೆ ಘಟಕಗಳನ್ನು ಹೊಂದಿದ್ದಾರೆ ಅದಕ್ಕಾಗಿ ಈ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಯನ್ನು ಆಯೋಜಿಸಿದ ವಾಲಮಾರ್ಟ್ ಹಾಗೂ ಐಸಾಪ್ ಫೌಂಡೇಶನ ಸಂಸ್ಥೆಯವರಿಗೆ ಗ್ರಾಮದ ಮಹಿಳೆಯರಪರವಾಗಿ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂಬ ಮಾತನ್ನು ತಿಳಿಸಿದರು.
ಸುಮಿತ್ ಜಂಬಗಿ ಜಿಲ್ಲಾ ಸಂಯೋಜಕರು ಐಸಾಪ್ ಫೌಂಡೇಶನ್ ಇವರು ಮಾತನಾಡಿ ನಮ್ಮ ಸಂಸ್ಥೆಯ ಒಟ್ಟಾರೆ ಉದ್ದೇಶ ಗ್ರಾಮೀಣ ಭಾಗದ ಮಹಿಳೆಯರು ಸ್ವ ಉದ್ಯೋಗ ಅದರಲ್ಲಿಯೂ ಆಹಾರ ಉತ್ಪಾದನೆ ಘಟಕಗಳನ್ನು ಹೊಂದಿದ್ದು ಈ ತರಬೇತಿ ಅವರ ಆರ್ಥಿಕ ಅಭಿವೃದ್ಧಿಗೆ ಹಾಗೂ ಸುರಕ್ಷತ ಆಹಾರ ಪದಾರ್ಥಗಳ ಸಿದ್ದಪಡಿಸುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಮಾತನ್ನು ತಿಳಿಸಿದರು.
ಈ ತರಬೇತಿಯಲ್ಲಿ ಶ್ರೀ ಮತಿ ಅಕ್ಕಮ್ಮ ಆತ್ಮ ಯೋಜನೆ,ಕೃಷಿ ಇಲಾಖೆ ಡಂಬಳ. ಶ್ರೀ ಶಂಕರಗೌಡ ಪಾಟೀಲ, ತಿಮ್ಮಣ್ಣ ರಾಟಿ, ಬಸವರಾಜ್ ಹಮ್ಮಿಗಿ, ಬಸವರಾಜ್ ಪ್ಯಾಟಿ, ನಿರ್ದೇಶಕರು ಚಂದನವನ ಎಫ್ ಪಿ ಓ ಡಂಬಳ. ಶ್ರೀಮತಿ ಲಲಿತಾ ಜೊಂಡಿ ಎಮ್ ಬಿ ಕೆ, ಏನ್ ಆರ್ ಎಲ್ ಎಮ್ ಯೋಜನೆ ಮುಂಡರಗಿ. ಶ್ರೀಮತಿ ಲಕ್ಷ್ಮಿಭಾಯಿ ಮಹಿಳಾ ಸಾಮಖ್ಯ ಮುಂಡರಗಿ.
ಕುಮಾರ್ ಬೀರಪ್ಪ ಬಚನಳ್ಳಿ ಮುಖ್ಯ ಕಾರ್ಯನಿರ್ವಾಹಕ ಚಂದನವನ ಏಪ ಪಿ ಓ ಡಂಬಳ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

7th July 2025
ಗದಗ: ಜು.7:
ಮುಂದಿನ ಒಂದು ತಿಂಗಳೊಳಗಾಗಿ ಶಾಲಾ ಮಕ್ಕಳ ಫೇಸ್ ರಿಡಿಂಗ್ ಹಾಜರಾತಿ ಪ್ರಕ್ರಿಯೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.
ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಶಿಕ್ಷಕರ ಫೇಸ್ ರಿಡಿಂಗ್ ಆನ್ ಲೈನ್ ಹಾಜರಾತಿ "ಪ್ರತ್ಯಕ್ಷ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು.
ಸರ್ಕಾರಿ ಶಾಲಾ ಶಿಕ್ಷಕರ ಆನ್ ಲೈನ್ ಹಾಜರಾತಿ ಅಗತ್ಯವಿದ್ದು, ಇದೇ ಪ್ರಕ್ರಿಯೆಯನ್ನು ರಾಜ್ಯಾದ್ಯಂತ ಕೈಗೊಳ್ಳಲು ಹಿರಿಯ ಸಚಿವರಾದ ಎಚ್.ಕೆ. ಪಾಟೀಲ ಅವರ ಸಹಕಾರ ಅತ್ಯಗತ್ಯವಿದೆ. ಶಿಕ್ಷಕರ ಫೇಸ್ ರಿಡಿಂಗ್ ಹಾಜರಾತಿ ಪ್ರಕ್ರಿಯೆಯಂತೆ ರಾಜ್ಯದಲ್ಲಿರುವ 57 ಲಕ್ಷ ಶಾಲಾ ಮಕ್ಕಳ ಫೇಸ್ ರಿಡಿಂಗ್ ಹಾಜರಾತಿಗೆ ಇನ್ನೊಂದು ತಿಂಗಳ ಒಳಗಾಗಿ ಪ್ರಕ್ರಿಯೆಗೆ ಅಧೀಕೃತ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಸಚಿವರು ಹೇಳಿದರು.
ತಂತ್ರಜ್ಞಾನ ಬಳಕೆ ಮಾಡಿಕೊಂಡು ರಾಜ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗೋಣ ಎಂದು ಸಚಿವ ಎಸ್ ಮಧು ಬಂಗಾರಪ್ಪ ಅವರು ತಿಳಿಸಿದರು
ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಮಾತನಾಡಿ, ಆಯ್ಯವ್ಯಯ ಬಾಷಣದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿಕೆಯಂತೆ ರಾಜ್ಯದಲ್ಲಿ ಶಿಕ್ಷಕರು, ಇಲಾಖೆಯ ಸಿಬ್ಬಂದಿಳಿಗೆ ಆನ್ ಲೈನ್ ಹಾಜರಾತಿಗೆ ಇಂದು ಗದಗನಲ್ಲಿ ಚಾಲನೆ ನೀಡಲಾಗಿದೆ. ಕೊಟ್ಟಿ ಹಾಜರಾತಿಗೆ ಇನ್ಮುಂದೆ ಅವಕಾಶ ಇಲ್ಲ. ಇದು ರಾಜ್ಯದಲ್ಲೇ ಮೊದಲು ಗದಗನಲ್ಲಿ ಚಾಲನೆ ದೊರೆತಿದೆ ಎಂದು ನುಡಿದರು.
ಆನ್ ಲೈನ್ ಹಾಜರಾತಿಯು ಶಿಕ್ಷಕರು ಶಾಲಾ ಆವರಣದ ತಲುಪಿದ ನಂತರ ಶಿಕ್ಷಕರು ಮೊಬೈಲ್ ಆಪ್ ಮೂಲಕ ಹಾಕಬೇಕಾಗುತ್ತದೆ. ಮನೆಯಲ್ಲಿ ಕುಳಿತು ಹಾಜರಿ ಹಾಕುವ ಅವಕಾಶ ಇಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಶಾಲೆಯಲ್ಲಿ ಶಿಕ್ಷಕರು ಇರುವಂತೆ ಪ್ರಕ್ರಿಯೆ ಆಗುತ್ತಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗೆ ಕಾಲಾವಕಾಶ ಸಿಕ್ಕಂತಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲೆಯ ಒಟ್ಟು ಶಿಕ್ಷಕರು, ಸಿಬ್ಬಂದಿಗಳು ಸೇರಿ 4789 ಜನರು ಆನ್ ಲೈನ್ ಹಾಜರಾತಿ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ 715 ಶಾಲೆಗಳು, 14 ಕಚೇರಿಗಳು, 253 ಸಿಬ್ಬಂದಿಗಳು ಮತ್ತು ಶಿಕ್ಷಕರು ಸೇರಿ ಈಗಾಗಲೇ ನೋಂದಣಿ ಪ್ರಕ್ರಿಯೆ ಯಶಸ್ವಿ ಆಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಸಚಿವರು ತಿಳಿದರು.
ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರು, ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರ್ ಸಾಬ್ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಪಂ ಸಿಇಒ ಭರತ ಎಸ್, ಶಿಕ್ಷಣ ಇಲಾಖೆ ಅಪರ ಆಯುಕ್ತೆ ಶ್ರೀಮತಿ ಸಿಂತ್ರಿ, ಡಿಡಿಪಿಐ ಆರ್. ಎಸ್. ಬುರಡಿ ಸೇರಿದಂತೆ ಇತರ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

2nd July 2025
ಗದಗ: ಮಠ ಮಂದಿರಗಳಲ್ಲಿ ಸೇವೆ ಮಾಡಲು ಇಷ್ಟು ದಿನ ಖಾಸಗಿ ಸಂಸ್ಥೆಗಳು,ರಾಜಕೀಯ ಮುಖಂಡರು, ಸಮಾಜ ಸೇವಕರು ತಮಗೆ ಇಷ್ಟವಾದ ದಿನದಂದು ಹೊಸ ರೀತಿಯಲ್ಲಿ ಮಠ ಮಂದಿರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು ಆದರೆ ರಾಜ್ಯದಲ್ಲಿ ಮೊದಲ ಬಾರಿಗೆ ಮಂಗಳವಾರ ವಿಭಿನ್ನವಾಗಿ ಗದಗ ಜಿಲ್ಲಾ ಕಂದಾಯ ಅಧಿಕಾರಿಗಳು ಎಲ್ಲರೂ ಕೂಡಿಕೊಂಡು ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದಿಂದ ಇದೆ ಮೊದಲು ಬಾರಿ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಅಧ್ಯಯನ ನಡೆಸುತ್ತಿರುವ ಅಂಧ ಹಾಗೂ ವಿಶೇಷ ಚೇತನ ಮಕ್ಕಳಿಗೆ ಬಟ್ಟೆ ವಿತರಣೆ ಮಾಡಿ ಅನ್ನ ಸಂತರ್ಪಣೆ ಹಮ್ಮಿಕೊಳ್ಳುವ ಮೂಲಕ ಸರ್ಕಾರಿ ಕೆಲಸದ ಜೊತೆಗೆ ಅಂದ ಮಕ್ಕಳಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ.
ಇವರ ಈ ಸೇವೆಗೆ ವೀರೇಶ್ವರ ಪುಣ್ಯಾಶ್ರಮದ ಪೀಠಾದಿತಿ ಕಲಯ್ಯಜ್ಜನವರು ಕಂದಾಯ ಇಲಾಖೆ ನೌಕರರ ಸೇವೆ ಹೀಗೆ ಮುಂದುವರೆಯಲಿ ಎಂದು ಆಶೀರ್ವಾದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀಧರ ಎನ್,ತಹಶೀಲ್ದಾರ,ಕುಲಕರ್ಣಿ, ವಾಸುದೇವ,ನಾಗರಾಜ ಕೆ ಸೇರಿದಂತೆ ಹಿರಿಯ ಅಧಿಕಾರಿಗಳು ಕಂದಾಯ ನೌಕರರ ಸಂಘದ ಗೌರವಾಧ್ಯಕ್ಷ ಎಸ್ ಎಂ ಹಿರೇಮಠ, ಅಧ್ಯಕ್ಷರಾದ ಡಿ ಟಿ ವಾಲ್ಮೀಕಿ, ಉಪಾಧ್ಯಕ್ಷರಾದಜಿ ಎಸ್ ಕನ್ನೂರ,ಎಂ ಎ ನಧಾಪ್,ಎಫ್ ಎಸ್ ಗೌಡರ,ಓಲೇಕಾರ,ಮಹೇಶ ಕೆಂಚರೆಡ್ಡಿ,
ಸೇರಿದಂತೆ ಜಿಲ್ಲೆಯ ಕಂದಾಯ ಇಲಾಖೆ ಸಿಬ್ಬಂದಿ ಗ್ರಾಮಆಡಳಿತ ಅಧಿಕಾರಿಗಳ ಜಿಲ್ಲಾ ಅಧ್ಯಕ್ಷ ಅರುಣಗೌಡ ಬ ಮಂಟೂರ ಸೇರಿದಂತೆ ಹಲವರು ಹಾಜರಿದ್ದರು.

24th June 2025
ಅಕ್ರಮ ಚಟುವಟಿಕೆ ತಡೆಯುದರಲ್ಲಿ ಕಾರಟಗಿ ಪೋಲಿಸ್ ಇಲಾಖೆ ವಿಫಲ ಕಾರಟಗಿ ವರದಿ :-
ಅಕ್ರಮ ಚಟುವಟಿಕೆ ಅಕ್ರಮ ಪಡಿತರ ಅಕ್ಕಿ ಹಾಗೂ ಸೋಮನಾಳ ಗ್ರಾಮದಲ್ಲಿ ನಿರಂತರವಾಗಿ ಉಸುಗು ಗಾಂಜಾ ಕಳ್ಳತನ ಟ್ರಾಫಿಕ್ ಹಾಗೂ ಇಸ್ಪೀಟ್ ಓಸಿ ನಡೆಯುತ್ತಿದ್ದು ಇದರ ವಿರುದ್ಧ ಸನ್ಮಾನ್ಯ ಶ್ರೀ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಬಸವರಾಜ್ ಧಡೇಸೂಗೂರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಕಾರಟಗಿ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಮಂಜುನಾಥ್ ಮಸ್ಕಿ, ಮುಖಂಡರಾದ ನಾಗರಾಜ ಬಿಲ್ಗರ್, ಜಿ ತಿಮ್ಮನಗೌಡ್ರು, ಬಸವರಾಜ ಬಿಲ್ಗರ್, ಚಂದ್ರಶೇಖರ ಮುಸಾಲಿ, ರವಿ ಸಿಂಗ್ ವಕೀಲರು, ಇನ್ನೂ ಕಾರಟಗಿ ಮಂಡಲದ ಬಿಜೆಪಿ ಎಲ್ಲಾ ಮೋರ್ಚಾ ಪದಾಧಿಕಾರಿಗಳು ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಕಾರಟಗಿ ತಾಲೂಕಿನ ಮುಖಂಡರು ಕಾರ್ಯಕರ್ತರು ಯುವಕರು ಮಹಿಳೆಯರು ಉಪಸ್ಥಿತರಿದ್ದರು