


28th September 2025
ಬಳ್ಳಾರಿ : ಬಳ್ಳಾರಿ ಜಿಲ್ಲಾ ಜೆ ಡಿ ಎಸ್ ಪಕ್ಷದಲ್ಲಿ ಭರ್ಜರಿ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೀನಹಳ್ಳಿ ತಾಯಣ್ಣ ಅವರ ನೇತೃತ್ವದಲ್ಲಿ ಎ.ಎಸ್. ವಸಂತ್ ಕುಮಾರ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪಕ್ಷದ ಪರಿಷಿಷ್ಟ ಜಾತಿ ವಿಭಾಗದ ಜಿಲ್ಲಾ ಅಧ್ಯಕ್ಷರಾಗಿ ಎ.ಎಸ್. ವಸಂತ್ ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು.
ವಸಂತ್ ಕುಮಾರ್ ಅವರ ನೇತೃತ್ವದಲ್ಲಿ ಹಲವು ಮಂದಿ ಹೊಸದಾಗಿ ಜೆಡಿಎಸ್ ಪಕ್ಷಕ್ಕೆ ಸೇರಿದರು. ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ನೂರಾರು ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಜೆಡಿಎಸ್‌ಗೆ ಬಲ ತುಂಬಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ
ಮೀನಹಳ್ಳಿ ತಾಯಣ್ಣ ಮಾತನಾಡಿ “ಪಕ್ಷವನ್ನು ಬಲಪಡಿಸಲು ವಸಂತ್ ಕುಮಾರ್ ಅವರ ನೇತೃತ್ವ ಬಹಳ ಮುಖ್ಯ. ಪರಿಶಿಷ್ಟ ಜಾತಿ ಸಮುದಾಯದಲ್ಲಿ ಪಕ್ಷದ ಬಲವನ್ನು ಹೆಚ್ಚಿಸಲು ಅವರು ಶ್ರಮಿಸಲಿ” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಸ್ವಾಗತ ಕೋರಿದರು. ಈ ವೇಳೆ ಪಕ್ಷದ ನಗರ ಅಧ್ಯಕ್ಷ ಹೊನ್ನೂರ ಸ್ವಾಮಿ ಎಸ್ ಟಿ ಘಟಕದ ಅಧ್ಯಕ್ಷ ಹದ್ದಿಗೇರಿ ರಾಮಣ್ಣ, ಮೈನಾರಿಟಿ ಅಧ್ಯಕ್ಷ ಜಾವಿದ್,
ಮಹಿಳಾ ಘಟಕದ ಅಧ್ಯಕ್ಷ, ಪುಷ್ಪ, ಶಬನಾ, ಉಮ್ಮಿ ಸೌದ,ಜಮೀಲಾ, ಮುತ್ತು, ಹೊನ್ನೂರ್ ವಲಿ, ರಾಮು, ಹೊನ್ನಳ್ಳಿ ರಾಜ,ಸೇರಿದಂತೆ ಅನೇಕ
ಜನ ಉಪಸ್ಥಿತರಿದ್ದರು.

15th September 2025
ಬಳ್ಳಾರಿ : ಮಾಜಿ ಸಚಿವರು, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರರ ಜನ್ಮದಿನಾಚರಣೆ ಅಂಗವಾಗಿ ನಗರದ ಅಧಿದೇವತೆ ಶ್ರೀ ಶ್ರೀ ಶ್ರೀ ಶ್ರೀ ಬಳ್ಳಾರಿ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಮತ್ತು ಕುಂಕುಮಾರ್ಚನೆ ಮಾಡಿಸಿ ತದನಂತರ ದೇವಸ್ಥಾನ ಆವರಣದಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಬಿ ನಾಗೇಂದ್ರರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಹಾನಗರ ಪಾಲಿಕೆಯ ಸಭಾ ನಾಯಕರಾದ ಪಿ.ಗಾದೆಪ್ಪ, ಬೆಣಕಲ್ ಬಸವರಾಜ ಗೌಡ, ಕೆಪಿಸಿಸಿ ವಕ್ತಾರರಾದ ವೆಂಕಟೇಶ್ ಹೆಗಡೆ, ಪಕ್ಷದ ಮುಖಂಡರಾದ ಎರುಕುಲ ಸ್ವಾಮಿ, ರಾಮಣ್ಣ, ಸಂಗನಕಲ್ಲು ವಿಜಯ್ ಕುಮಾರ್, ಧನುಂಜಯ ಹಮಾಲ್, ಕೌಶಿಕ್, ರಾಜ, ಓಂಕಾರಿ, ಶಂಕರ್, ಲೋಕೇಶ್, ವೆಂಕಟೇಶ್, ಮಧನ್, ಚಕ್ರಿ, ಸಂಜಯ್, ರೋಹಿತ್, ಪದ್ಮ, ಕಿಟ್ಟಿ, ನಿತೀಶ್ ಹೆಗಡೆ, ಸುರೇಶ್, ನಿಕೀಲ್ ಸೇರಿದಂತೆ ಕಾರ್ಯಕರ್ತರು ಇದ್ದರು.

15th September 2025
ಬಳ್ಳಾರಿ : ಬಿಜೆಪಿಯವರ ಕುತಂತ್ರದಿಂದ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ವಿವಾದಕ್ಕೆ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡರು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನೆಹರೂ ಕಾಲೋನಿಯ ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಅವರ ನಿವಾಸದಲ್ಲಿ ನಾಗೇಂದ್ರರ ಜನ್ಮ ದಿನ ನಿಮಿತ್ಯ ಏರ್ಪಡಿಸಿದ್ದ ಗಣಪತಿ-ನವಗ್ರಹ ಹಾಗೂ ಸುದರ್ಶನ ಹೋಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಕೇಂದ್ರದ ಬಿಜೆಪಿಯ ನಾಯಕರು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಪಕ್ಷದ ಮುಖಂಡರು ಹಾಗೂ ಶಾಸಕರು ಸಚಿವರನ್ನು ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ, ಅದರ ಮುಂದುವರಿದ ಭಾಗವೇ ಈಗ ಸಿಬಿಐ ದಾಳಿ ನಡೆದಿದೆ, ನಾವು ಈ ತನಿಖೆಗಳಿಗೆ ಅಂಜುವವರಲ್ಲ ಎಂದರು.
ಮಾಜಿ ಸಚಿವ ನಾಗೇಂದ್ರ ಅವರ ಜನ್ಮ ದಿನದ ನಿಮಿತ್ಯ ಅವರ ಆಪ್ತರು ಬೆಂಬಲಿಗರು ಹೋಮ-ಪೂಜೆ ಏರ್ಪಡಿಸಿದ್ದು, ಇದರಲ್ಲಿ ಭಾಗಿಯಾದೆ ಎಂದು ತಿಳಿಸಿದರು.
ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಚಿದಾನಂದಪ್ಪ ಯಾದವ, ಮಾಜಿ ಜಿಪಂ ಸದಸ್ಯ ಎ.ಮಾನಯ್ಯ, ಎಲ್.ಮಾರೆಣ್ಣ, ಮಾಜಿ ಮೇಯರ್ ರಾಜೇಶ್ವರಿ, ತಿಮ್ಮನಗೌಡ, ಪಾಲಿಕೆಯ ಸದಸ್ಯರಾದ ಪೇರಂ ವಿವೇಕ, ವಿ.ಕುಬೇರ, ಕಾಂಗ್ರೆಸ್ ಮುಖಂಡರಾದ ಪಿ.ಜಗನ್, ಸುಬ್ಬರಾಯುಡು, ಹಗರಿ ಗೋವಿಂದ, ಹೊನ್ನಪ್ಪ, ಚಾನಾಳ್ ಶೇಖರ್, ಮಂಜುಳಾ, ಪರಶುರಾಮ್, ಅಣ್ಣಾ ನಾಗರಾಜ, ಗೋವರ್ಧನ ರೆಡ್ಡಿ, ಕುರುಬ ನಾಗರಾಜ ಸೇರಿದಂತೆ ಹಲವರು ಹಾಜರಿದ್ದರು.

13th September 2025
ಬಳ್ಳಾರಿ : ಸರ್ಕಾರದ ಇಂದಿನ ಪರಿಸ್ಥಿತಿಯನ್ನು ಗಮನಿಸಿದಲ್ಲಿ ಸಿದ್ದರಾಮಯ್ಯನವರು 17ನೇ ಬಜೆಟ್ ಮಂಡಿಸುವುದು ಅನುಮಾನವಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಅನುಮಾನವನ್ನು ವ್ಯಕ್ತಪಡಿಸಿದರು.
ಅವರು ಇಂದು ನಗರದ ಸಿರುಗುಪ್ಪ ರಸ್ತೆಯ ಹವಾಂ ಭಾವಿಯ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕವಾಗಿ ದಿವಾಳಿಯಾಗಿದೆ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಜಾತಿ ಜನಗಣತಿಯನ್ನು ನಡೆಸಿ ಸರ್ಕಾರಕ್ಕೆ ಹೊರೆಯಾಗಿರುವ 16 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವುದು ಮತ್ತು ಉಳ್ಳವರ ಕುಟುಂಬಗಳನ್ನು ಗ್ಯಾರಂಟಿ ಯೋಜನೆಗಳಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದರು.
ಸರ್ಕಾರ ಪದೇ ಪದೇ ಜಾತಿ ಜನಗಣತಿಗಾಗಿ ಹಣವನ್ನು ಪೋಲು ಮಾಡುತ್ತಿದೆ, ಸತತ 10 ವರ್ಷಗಳ ಕಾಂತರಾಜ್ ವರದಿಯನ್ನು ತಯಾರಿಸಲು 165 ಕೋಟಿ ರೂಪಾಯಿ ಖರ್ಚು ಮಾಡಿದೆ ಮತ್ತು ಸದಾಶಿವ ಆಯೋಗ ವರದಿಯಂತೆ ಜಾತಿ ಜನಗಣತಿಯನ್ನು ನಡೆಸಲು ಈಗ 420 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ತೆಗೆದಿರಿಸಲಾಗಿದೆ ಇದು ರಾಜ್ಯ ಹಣಕಾಸು ಇಲಾಖೆ ಬಾರಿ ಹೊರೆಯಾಗಲಿದೆ ಇದು ಕಾಂಗ್ರೆಸ್ ಸರ್ಕಾರದ ಹಣ ಲಪಟಾಯಿಸುವ ದುರುದ್ದೇಶವಾಗಿದೆ ಎಂದು ಸರ್ಕಾರದ ಕ್ರಮವನ್ನು ಟೀಕಿಸಿದರು. ಅಷ್ಟೇ ಅಲ್ಲದೆ 1.75 ಲಕ್ಷ ಜನ ಈ ಗಣತಿಯಲ್ಲಿ ಪಾಲ್ಗೊಳ್ಳಲಿದ್ದು ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತರು ತಮ್ಮ ಕೆಲಸದ ಹೊರೆ ಮಧ್ಯೆಯು ಈ ಸಮೀಕ್ಷೆಗೆ ಬಳಸಿಕೊಳ್ಳುತ್ತಿದ್ದಾರೆ ಇದಕ್ಕಾಗಿ 325 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ 120 ರಿಂದ 150 ಕೋಟಿ ರೂಪಾಯಿಗಳನ್ನು ಲಪಟಾಯಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಆರೋಪಿಸಿದರು. ಇದಕ್ಕೆ ಸಿದ್ದರಾಮಯ್ಯನವರು ತಮ್ಮ ಆಪ್ತರಾದ ಮಧುಸೂದನ್ ನಾಯಕ್ ಅವರನ್ನು ಸಮಿತಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಪತ್ರಿಕಾಗೋಷ್ಠಿಯಲ್ಲಿ, ಹೋಬಳೇಶ್, ಮಹಾನಗರ ಪಾಲಿಕೆ ಸದಸ್ಯರಾದ ಕೆ ಹನುಮಂತಪ್ಪ ಗುಡಿಗಂಟಿ ಹನುಮಂತಪ್ಪ ಮೋತ್ಕರ್ ಶ್ರೀನಿವಾಸ್, ಮುಖಂಡರಾದ ತಿಮ್ಮಪ್ಪ ವೆಂಕಟರಾಮರೆಡ್ಡಿ ಸೇರಿದಂತೆ ಇತರರಿದ್ದರು

11th September 2025
ಬಳ್ಳಾರಿ : ಬಳ್ಳಾರಿ ನಗರದ ಮುಂಡ್ರಿಗಿ ಬಳಿಯ ಬಹು ನಿರೀಕ್ಷಿತ ರಾಜೀವ್ ಗಾಂಧಿ ಟೌನ್'ಶಿಪ್ ಯೋಜನೆ ಅಡಿ ಈಗಾಗಲೇ ಪೂರ್ಣಗೊಳ್ಳಲಿರುವ 1000 ಮನೆಗಳನ್ನು ಫಲಾನುಭವಿಗಳಿಗೆ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ಶಾಸಕ ನಾರಾ ಭರತ್ ತಿಳಿಸಿದ್ದಾರೆ.
ಗುರುವಾರ ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ಬಳ್ಳಾರಿ ಹೊರ ವಲಯದ ಮುಂಡ್ರಿಗಿ ಗ್ರಾಮದ ಬಳಿಯ ವಸತಿ ಸಮುಚ್ಛಯಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತದನಂತರ ಪೂರ್ಣಗೊಂಡಿರುವ ಮನೆಗಳ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ಸಂದರ್ಭ ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದು ಮನೆಗಳ ನಿರ್ಮಾಣ, ಹಂಚಿಕೆ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.
ಮನೆ ಪಡೆಯಲು ಈಗಾಗಲೇ ಹಲವು ಫಲಾನುಭವಿಗಳು ಸರ್ಕಾರ ನಿಗದಿ ಮಾಡಿರುವ ಹಣವನ್ನು ಸಂದಾಯ ಮಾಡಿದ್ದಾರೆ, ಆದರೆ ಮನೆಗಳನ್ನು ಉಚಿತವಾಗಿ ನೀಡಲು ಈಗಾಗಲೇ ವಸತಿ ಸಚಿವ ಜಮೀರ್ ಅಹ್ಮದ್ ಅವರೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರವೇ ಫಲಾನುಭವಿಗಳ ಹಣವನ್ನು ಕಟ್ಟಿ, ಶೇ.100ರಷ್ಟು ಉಚಿತವಾಗಿ ಮನೆ ಹಂಚುವ ಉದ್ಧೇಶ ಇದೆ ಎಂದರು.
ಅಪೂರ್ಣ ಇರುವ ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಪ್ರಾಥಮಿಕ ಹಂತದಲ್ಲಿ 1000 ಮನೆಗಳನ್ನು ಏಕ ಕಾಲಕ್ಕೆ ಹಂಚಿಕೆ ಮಾಡುವ ಯೋಚನೆ ಇದೆ ಎಂದು ತಿಳಿಸಿದ ಶಾಸಕ ನಾರಾ ಭರತ್ ರೆಡ್ಡಿ, ಸಿಎಂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ ಅವರ ಸಾರಥ್ಯದಲ್ಲಿ ಮನೆ ವಿತರಣೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಲಾಗುವುದು ಎಂದರು.
ಈ ಸಂದರ್ಭ ಮುಖಂಡ ಚಾನಾಳ್ ಶೇಖರ್ ಮತ್ತಿತರರು ಹಾಜರಿದ್ದರು.