
10th September 2025
ಬಳ್ಳಾರಿ: ಬೆತೆಸ್ಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಬೆತೆಸ್ಥ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬೆತೆಸ್ಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕಿ ಎಂವಿಎಸ್ ಸುಶೀಲಾಬಾಯಿ ಅವರ ಹೆಸರಿನಲ್ಲಿ ಗುರುಗೌರವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡು ಬಳ್ಳಾರಿ ಪೂರ್ವ ವಲಯದ ಎಸ್ಆರ್ಪಿ ಕ್ಲಸ್ಟರ್ನಲ್ಲಿ ಬರುವ ೨೨ ಶಾಲೆಗಳಿಂದ ಸಾಧನೆ ಮಾಡಿರುವ ವಿವಿಧ ಶಿಕ್ಷಕ ಶಿಕ್ಷಕಿಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್ಆರ್ಪಿ ಕ್ಲಸ್ಟರ್ನ ಸಿಆರ್ಪಿ ಮಹಮ್ಮದ್ ಅವರು ಮಾತನಾಡುತ್ತಾ, ಶಿಕ್ಷಕ ವೃತ್ತಿ ಎಂದರೆ ಸುಲಭವಾಗಿರುವ ಕೆಲಸ ಎಂಬುದಾಗಿ ಕೆಲವರು ಮಾತನಾಡಿಕೊಳ್ಳುತ್ತಾರೆ. ಆದರೆ ದೇವರ ಸಮನಾದ ವೃತ್ತಿ ಶಿಕ್ಷಣ ವೃತ್ತಿಯಾಗಿದೆ. ಇಂದಿನ ಒತ್ತಡದ ಜೀವನದ ನಡುವೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಕಾರ್ಯ ಮಾಡುತ್ತಿರುವ ಎಲ್ಲ ಶಿಕ್ಷಕರ ಸೇವೆ ಅನನ್ಯ. ಶಿಕ್ಷಕರಲ್ಲಿ ಸರ್ಕಾರಿ, ಖಾಸಗಿ ಎಂಬ ಬೇಧಭಾವಗಳಿರುವುದಿಲ್ಲ. ಶಿಕ್ಷಕ ಎಂದರೆ ಶಿಕ್ಷಕರಷ್ಟೇ. ನಾವು ಯಾವಾಗದ ಗುರುಗಳ ಗುಲಾಮರಾಗುತ್ತೇವೋ ಅಂದು ನಾವು ಪರಿಪೂರ್ಣ ವಿದ್ಯಾರ್ಥಿಗಳಾಗುತ್ತೇವೆ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್ಆರ್ ಕಾಲೋನಿ ಸರ್ಕಾರಿ ಶಾಲೆಯ ಸಹಶಿಕ್ಷಕಿ ಡಾ.ಕಲ್ಯಾಣಿ ಅವರು ಮಾತನಾಡುತ್ತಾ, ೧೨ನೇ ಶತಮಾನದಲ್ಲಿ ಅಲ್ಲಮಪ್ರಭು ಹೇಳಿದಂತೆ ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ದಿಯ ಹೇಳಿದೊಡೆ ಆಗಲಿ ಮಹಾಪ್ರಸಾದ ವೆಂದೆನೆಯ್ಯ ಎಂಬ ಮಾತು ಇಂದಿಗೆ ಪ್ರಸ್ತುತವಾಗಿದೆ. ಹಿಂದಿನ ದಿನದಲ್ಲಿ ಶಿಕ್ಷಕರು ಒಂದು ಮಾತು ಹೇಳಿದರೆ ಅದನ್ನು ನೆರವೇರಿಸುವ ವಿದ್ಯಾರ್ಥಿಳಿದ್ದರು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಬದಲಾಗಿದ್ದು, ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ನಾವು ಬೇಡಿಕೊಳ್ಳಬೇಕಿದೆ. ದಯವಿಟ್ಟು ಓದಿರಿ, ದಯವಿಟ್ಟು ಬರೆಯಿರಿ, ದಯವಿಟ್ಟು ಶಾಲೆಗೆ ಬನ್ನಿ ಎಂದು ಬೇಡುವ ಪರಿಸ್ಥಿತಿ ಇದೆ. ಇಂದು ಗುರು ಶಿಷ್ಯರ ಸಂಬAಧ ಕೇವಲ ಶಾಲೆಯ ಕೋಣೆಗಳಿಗೆ ಸೀಮಿತವಾಗಿದೆ ಎಂದು ವಿಷಾಧ ವ್ಯಕ್ತ ಪಡಿಸಿದರು. ಇನ್ಫ್ಯಾಂಟ್ ಜೀಸಸ್ ಶಾಲೆಯ ಮೆಹಮೂಬ್ ಭಾಷಾ, ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಭೂಪ್ರಕಾಶ್ ಅವರು ಮಾತನಾಡಿದರು. ಕ್ಲಸ್ಟರ್ನ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಂದ ಆಗಮಿಸಿದ್ದ ವಿ.ಶ್ರವಂತಿ, ಎನ್.ಶಾರದ, ಡಾ.ಕಲ್ಯಾಣಿ ವೈ, ಫಾತೀಮಾ ಮೇರಿ, ಎಸ್.ಶಶಿರೇಖಾ, ಕೆ.ಸಿ.ಲಕ್ಷಿö್ಮÃದೇವಿ, ಕೆ.ಎಲ್.ಸೋಮಶೇಖರ್, ಚಂದ್ರಿಕಾ ಎನ್, ಹೊನ್ನೂರಪ್ಪ, ಶಾಯಿದಾ ಶಬೀನ, ವಿಜಯಕುಮಾರಿ, ನೀಲ, ಜಿ.ವೇಣುಬಾಯಿ, ಮೆಹಬೂಬ್ ಭಾಷಾ, ಎಸ್.ಎ.ಹಸೀನಾ ಬಾನು, ವಿ ಕಾವೇರಿ ಮಿತ್ತಲ್ ಹಾಗೂ ಸಿಆರ್ಪಿ ಮಹಮ್ಮದ್ ಅವರಿಗೆ ಎಂವಿಎಸ್ ಸುಶೀಲಾಬಾಯು ಗುರುಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆ ಮೇಲೆ ಬೆತೆಸ್ಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಎಂ.ವಿ.ಎಸ್.ಸುಶೀಲಾಬಾಯಿ, ಪ್ರಧಾನ ಕಾರ್ಯದರ್ಶಿ ರಾಕೇಶ್.ವಿ., ಖಜಾಂಚಿ ಸುನೀಲ್ ಕುಮಾರ್, ಲಿಟಲ್ ಏಂಜೆಲ್ ಶಾಲೆಯ ಆಡಳಿತಾಧಿಕಾರಿ ಮಹಮ್ಮದ್ ಮುಸ್ತಾಫ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಇಂದಿರಾ ಹಾಗೂ ಭಾರತಿ ಅವರು ನಿರೂಪಿಸಿದರೆ, ಲಕ್ಷಿö್ಮÃ ಅವರು ಅತಿಥಿಗಳನ್ನು ಸ್ವಾಗತಿಸಿದರು. ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ