
11th September 2025
ಬಳ್ಳಾರಿ : ಬಳ್ಳಾರಿಯ ಇನ್'ಫ್ಯಾಂಟ್ರಿ ರಸ್ತೆಯ ದಯಾ ಕೇಂದ್ರದ ಬಳಿಯಿರುವ ಶ್ರೀ ಕರಿಮಾರೆಮ್ಮ ದೇವಸ್ಥಾನಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು 60 ಸಾವಿರ ರೂ.ಗಳನ್ನು ವೈಯಕ್ತಿಕವಾಗಿ ದೇಣಿಗೆ ನೀಡಿದ್ದಾರೆ.
ಸದರಿ ಮೊತ್ತವನ್ನು ಮಂಗಳವಾರ ಮಧ್ಯಾಹ್ನ ದೇವಸ್ಥಾನದ ಅರ್ಚಕರಿಗೆ ನೀಡಲಾಯಿತು. ಶಾಸಕ ನಾರಾ ಭರತ್ ರೆಡ್ಡಿಯವರ ಆಪ್ತರು, ಕಾಂಗ್ರೆಸ್ ಮುಖಂಡರು ಈ ಮೊತ್ತವನ್ನು ಶಾಸಕರ ಪರವಾಗಿ ಹಸ್ತಾಂತರಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ನಾಗಲಕೆರೆ ಗೋವಿಂದ, ಬೆಣಕಲ್ ರಘು, ಪಿ.ರವಿ ಸೇರಿದಂತೆ ಹಲವರು ಹಾಜರಿದ್ದರು.
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ