
13th September 2025
ಬಳ್ಳಾರಿ : ಸರ್ಕಾರದ ಇಂದಿನ ಪರಿಸ್ಥಿತಿಯನ್ನು ಗಮನಿಸಿದಲ್ಲಿ ಸಿದ್ದರಾಮಯ್ಯನವರು 17ನೇ ಬಜೆಟ್ ಮಂಡಿಸುವುದು ಅನುಮಾನವಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಅನುಮಾನವನ್ನು ವ್ಯಕ್ತಪಡಿಸಿದರು.
ಅವರು ಇಂದು ನಗರದ ಸಿರುಗುಪ್ಪ ರಸ್ತೆಯ ಹವಾಂ ಭಾವಿಯ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕವಾಗಿ ದಿವಾಳಿಯಾಗಿದೆ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಜಾತಿ ಜನಗಣತಿಯನ್ನು ನಡೆಸಿ ಸರ್ಕಾರಕ್ಕೆ ಹೊರೆಯಾಗಿರುವ 16 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವುದು ಮತ್ತು ಉಳ್ಳವರ ಕುಟುಂಬಗಳನ್ನು ಗ್ಯಾರಂಟಿ ಯೋಜನೆಗಳಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದರು.
ಸರ್ಕಾರ ಪದೇ ಪದೇ ಜಾತಿ ಜನಗಣತಿಗಾಗಿ ಹಣವನ್ನು ಪೋಲು ಮಾಡುತ್ತಿದೆ, ಸತತ 10 ವರ್ಷಗಳ ಕಾಂತರಾಜ್ ವರದಿಯನ್ನು ತಯಾರಿಸಲು 165 ಕೋಟಿ ರೂಪಾಯಿ ಖರ್ಚು ಮಾಡಿದೆ ಮತ್ತು ಸದಾಶಿವ ಆಯೋಗ ವರದಿಯಂತೆ ಜಾತಿ ಜನಗಣತಿಯನ್ನು ನಡೆಸಲು ಈಗ 420 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ತೆಗೆದಿರಿಸಲಾಗಿದೆ ಇದು ರಾಜ್ಯ ಹಣಕಾಸು ಇಲಾಖೆ ಬಾರಿ ಹೊರೆಯಾಗಲಿದೆ ಇದು ಕಾಂಗ್ರೆಸ್ ಸರ್ಕಾರದ ಹಣ ಲಪಟಾಯಿಸುವ ದುರುದ್ದೇಶವಾಗಿದೆ ಎಂದು ಸರ್ಕಾರದ ಕ್ರಮವನ್ನು ಟೀಕಿಸಿದರು. ಅಷ್ಟೇ ಅಲ್ಲದೆ 1.75 ಲಕ್ಷ ಜನ ಈ ಗಣತಿಯಲ್ಲಿ ಪಾಲ್ಗೊಳ್ಳಲಿದ್ದು ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತರು ತಮ್ಮ ಕೆಲಸದ ಹೊರೆ ಮಧ್ಯೆಯು ಈ ಸಮೀಕ್ಷೆಗೆ ಬಳಸಿಕೊಳ್ಳುತ್ತಿದ್ದಾರೆ ಇದಕ್ಕಾಗಿ 325 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ 120 ರಿಂದ 150 ಕೋಟಿ ರೂಪಾಯಿಗಳನ್ನು ಲಪಟಾಯಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಆರೋಪಿಸಿದರು. ಇದಕ್ಕೆ ಸಿದ್ದರಾಮಯ್ಯನವರು ತಮ್ಮ ಆಪ್ತರಾದ ಮಧುಸೂದನ್ ನಾಯಕ್ ಅವರನ್ನು ಸಮಿತಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಪತ್ರಿಕಾಗೋಷ್ಠಿಯಲ್ಲಿ, ಹೋಬಳೇಶ್, ಮಹಾನಗರ ಪಾಲಿಕೆ ಸದಸ್ಯರಾದ ಕೆ ಹನುಮಂತಪ್ಪ ಗುಡಿಗಂಟಿ ಹನುಮಂತಪ್ಪ ಮೋತ್ಕರ್ ಶ್ರೀನಿವಾಸ್, ಮುಖಂಡರಾದ ತಿಮ್ಮಪ್ಪ ವೆಂಕಟರಾಮರೆಡ್ಡಿ ಸೇರಿದಂತೆ ಇತರರಿದ್ದರು
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ ಇದರ ವಾರ್ಷಿಕ ಸಭೆ
ಹಜರತ್ ಹೈದರ್ ಅಲಿ ಕಮೀಟಿ ತೆಗ್ಗಿನಓಣಿ ಹಾಗೂ ಸಂಜೀವಿನಿ ರಕ್ತ ನಿಧಿ ಕೇಂದ್ರ ಸಹಯೋಗಲ್ಲಿ 5ನೇ ವರ್ಷದ ರಕ್ತದಾನ ಶಿಬಿರ
ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣ: ಹೆಸರು ಬಹಿರಂಗ- ಉಮೇಶ ಸಿಂಗನಾಳ ಮತ್ತು ಮಹ್ಮದ್ ಜುಬೇರ್ ವಿರುದ್ಧ ದೂರು ದಾಖಲು