

15th September 2025

ಬಳ್ಳಾರಿ : ದಲಿತ ಸಂಘರ್ಷ ಸಮಿತಿ. ದಾದಾ ಸಾಹೇಬ್ ಡಾ: ಎನ್. ಮೂರ್ತಿ ಸ್ಥಾಪಿತ. ಬಳ್ಳಾರಿ ನಗರ ವತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ 23ನೇ ವಾರ್ಡ್ ಮಹಾನಂದಿ ಕೊಟ್ಟಂ ,
ಅಂಬೇಡ್ಕರ್ , ಕನ್ನಡ ನಗರ , ವ್ಯಾಪ್ತಿಯ ಮಧ್ಯಭಾಗದ ಸರ್ಕಾರಿ ಜಾಗದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಅಂಗನವಾಡಿ ಮಕ್ಕಳಿಗೆ ಆಟ ಪಾಠ ಕಲಿಯಲು ವಿಶಾಲವಾಗಿ ನಿರ್ಮಿಸಬೇಕು ಎಂದು ಬಳ್ಳಾರಿ ನಗರಾಧ್ಯಕ್ಷ ಷಣ್ಮುಖ ಒತ್ತಾಯ ಮಾಡಿದರು, ಆದರೆ ಈ ಸರ್ಕಾರಿ ಸ್ಥಳವನ್ನು ಸ್ಥಳೀಯರು ಒತ್ತುವರಿ ಮಾಡಲಾಗಿರುತ್ತದೆ ಅದಕ್ಕಾಗಿ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಾದ ಹೇಮಂತ್ ರಾಜ್ ರವರು ಹಾಗೂ ಕಾರ್ಯನಿರ್ವಾಹಕ ಅಭಿಯಂತರರಾದ ಬಸಿ ರೆಡ್ಡಿ, ಜೆ.ಇ .ಸುರೇಶ್ ರವರನ್ನು ಅಭಿವೃದ್ಧಿ ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದು ಸ್ಥಳವನ್ನು ಸಾರ್ವಜನಿಕರ ಹಾಗೂ ಶಾಲೆ ಮಕ್ಕಳ ಹಿತದೃಷ್ಟಿಯಿಂದ ಪರಿಶಿಲಿಸಿ ಒತ್ತುವರಿಯಾದ ಸ್ಥಳವನ್ನು ಹದ್ದುಬಸ್ತು ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ. ದಾದಾಸಾಹೇಬ್ ಡಾ. ಎನ್ ಮೂರ್ತಿ ಸ್ಥಾಪಿತ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾದ ಮೋಹನ್ ರಾಮ್ , ಜಿಲ್ಲಾ ಖಜಾಂಚಿ ಧನರಾಜ್, ಪ್ರಧಾನ ಕಾರ್ಯದರ್ಶಿಯಾದ ಲಕ್ಷ್ಮಣ್ ಎಸ್ ಭಂಡಾರಿ , ಕಾರ್ಯಾಧ್ಯಕ್ಷರಾದ ಹೆಚ್.ಹುಲಿರಾಜ್ , ಕಾರ್ಯದರ್ಶಿ ಉಪೇಂದ್ರ , ಹಾಗೂ ವಾರ್ಡ್ ನ ಸ್ಥಳೀಯ ಯುವ ಮುಖಂಡರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ