

19th September 2025

ಬಳ್ಳಾರಿ : ನಗರದ ಕುವೆಂಪು ಪ್ರದೇಶದಲ್ಲಿ ವಿಷ್ಣು ಸೇನಾ ಸಮಿತಿ ಹಾಗೂ ವೀರಕಪುತ್ರ ಶ್ರೀನಿವಾಸ ರಾಜ್ಯ ಅಧ್ಯಕ್ಷರ ಆದೇಶದ ಮೇರೆಗೆ ಡಾ||ವಿಷ್ಣುವರ್ಧನ್ ಉದ್ಯಾನವನದ ಡಾ. ವಿಷ್ಣುವರ್ಧನ್ ಪುತ್ತಳಿಗೆ ಮಾಲಾರ್ಪಣೆ ಹಾಗೂ ಕೇಕ್ ಕಟ್ ಮಾಡುವ ಮೂಲಕ 75 ನೇ ಕರ್ನಾಟಕ ರತ್ನ ಡಾ||ವಿಷ್ಣುವರ್ಧನ್ ಅಮೃತ ಮಹೋತ್ಸವ ಆರಂಭ ಮಾಡಿ ನಂತರದಲ್ಲಿ ಗ್ರಾಮಾಂತರ ಶಾಸಕರು ಬಿ.ನಾಗೇಂದ್ರ ಕಚೇರಿಯಲ್ಲಿ ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಹಾಗೂ ಸಿಹಿ ಹಂಚಿಕೆ ಮಾಡಲಾಯಿತು.
ತದನಂತರ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಹತ್ತಿರ ಅನ್ನದಾನ ಕಾರ್ಯಕ್ರಮ ಜರುಗಿಸಲಾಯಿತು.
ಸಂಜೆ 4 ಗಂಟೆಗೆ ಸಂಗನಕಲ್ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿ ಹತ್ತಿರ 75 ನೇಯ ಕರ್ನಾಟಕ ರತ್ನ ಡಾ||ವಿಷ್ಣುವರ್ಧನ್ ಅವರ ಬೃಹತ್ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಕೆಕ್ ಕಟ್ ಮಾಡುವ ಮೂಲಕ ಅನ್ನದಾನ ಕಾರ್ಯಕ್ರಮ ಮಾಡಲಾಯಿತು.
75 ನೇ ಅಮೃತ ಮಹೋತ್ಸವದ ಕರ್ನಾಟಕ ರತ್ನ ಡಾ||ವಿಷ್ಣುವರ್ಧನ್ ಅವರ ಹಾಗೂ ಕನ್ನಡದ ಮನಸ್ಸುಗಳ ಹೃದಯವಂತರು ಬಂದು ಡಾ||ವಿಷ್ಣುವರ್ಧನ್ ಅವರ ಕಾರ್ಯಕ್ರಮಗಳಿಗೆ ಜೊತೆಗೂಡಿ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಆಪ್ತಮಿತ್ರ ಭಾಷ, ಖಾದರ್ ಬಾಷ, ಶಶಿ ಮಂಜು, ಹೊನ್ನೂರು ಸಾಬ್, ಹೈದರ್ ವಾಲಿ, ನಾಗರಾಜ,ಉದಯ ಕುಮಾರ್, ನವೀನ್ ಶಂಕರ್, ಸಿರುಗುಪ್ಪ ಅಂಜಿ, ವಿಶ್ವನಾಥ ರೆಡ್ಡಿ, ಗಿರೀಶ್, ಗೋಪಾಲ್ ರೆಡ್ಡಿ, ಮುಘಲ್ ಬಸವ, ಕರ್ಚೇಡ್ ಅಂಜಿ ಇನ್ನೂ ಇತರರು ಉಪಸ್ಥಿತರಿದ್ದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ