

23rd September 2025

ಹೊಳಲ್ಕೆರೆ : ಪುರಸಭೆ ವತಿಯಿಂದ ಮಂಗಳವಾರ ಬೆಳಿಗ್ಗೆ ಶಿವಮೊಗ್ಗ ರಸ್ತೆಯಲ್ಲಿರುವ ಶಾದಿಮಹಲ್ನಲ್ಲಿ “ಪೌರ ಕಾರ್ಮಿಕ ದಿನಾಚರಣೆ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷರಾದ ವಿಜಯಸಿಂಹ ಖಾಟ್ರೋತ್ .ಎಲ್ ರವರು ಅಧ್ಯಕ್ಷತೆವಹಿಸಿದ್ದರು. ಈ ಕಾರ್ಯಕ್ರಮ ಉದ್ಘಾಟನೆಯನ್ನು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ನಾಮ ನಿರ್ದೇಶನ ಸದಸ್ಯರುಗಳು ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ನೇರವೇರಿಸಿದರು. ಸದರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಜಯಸಿಂಹ ಖಾಟ್ರೋತ್ .ಎಲ್ ರವರು ಪೌರ ಕಾರ್ಮಿಕರನ್ನು ಸ್ವಚ್ಛತಾ ದೇವರುಗಳು ಎಂದು ಹೇಳಿ ಪೌರ ಕಾರ್ಮಿಕರು ಪಟ್ಟಣದಲ್ಲಿ ಎಲ್ಲೇ ಕಾರ್ಯಕ್ರಮಗಳು ನಡೆದರು ಪೌರಕಾರ್ಮಿರು ಉಪಸ್ಥಿತಿಯಿಂದ ಸ್ವಚ್ಛತೆ ಮಾಡಿದ ಮೇಲೆಯೇ ಎಲ್ಲಾ ಕಾರ್ಯಕ್ರಮಗಳು ಪ್ರಾರಂಭವಾಗುವುದು ಮತ್ತು ಮುಕ್ತಾಯವಾಗುವುದು ಎಂದು ಹೇಳಿದರು ಹಾಗೂ ಉಪಾಧ್ಯಕ್ಷರಾದ ನಾಗರತ್ನ ಹೆಚ್ ಆರ್.ವೇದಮೂರ್ತಿಯವರು ಪೌರ ಕಾರ್ಮಿಕರಿಗೆ ಶುಭಾಷಯವನ್ನು ತಿಳಿಸಿದರು, ಹಾಗೂ ಸದಸ್ಯರಾದ ಪಿ ಹೆಚ್ ಮುರುಗೇಶ್ರವರು, ಕೆ.ಸಿ. ರಮೇಶ್ರವರು, ಪಿ ಆರ್ ಮಲ್ಲಿಕಾರ್ಜುನ್ರವರು ಪೌರ ಕಾರ್ಮಿಕರ ಜೀವನ, ವಿದ್ಯಾಭ್ಯಾಸದ ಹಾಗೂ ಇನ್ನಿತರೆ ವಿಷಯದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಸೈಯದ್ ಸಜೀಲ್, ಸೈಯದ್ ಮನ್ಸೂರ್, ಸವಿತ ನರಸಿಂಹ ಖಾಟ್ರೋತ್, ಮಮತ ಜಯಸಿಂಹ ಖಾಟ್ರೋತ್, ವಸಂತ ರಾಜಪ್ಪ, ನಾಮ ನಿರ್ದೇಶನ ಸದಸ್ಯರಾದ ಮಂಜುನಾಥ್ ಆರ್, ಬಸವರಾಜ್, ಕರಿಯಪ್ಪ , ಪವನ್ ಹಾಗೂ ಮುಖ್ಯಾಧಿಕಾರಿಗಳಾದ ಫಿರೋಜ್ ಖಾನ್ ಹಾಗೂ ಪುರಸಭೆ ಕಛೇರಿಯ ಸಿಬ್ಬಂದಿವರ್ಗದವರು, ಹಾಗೂ ಪೌರಕಾರ್ಮಿಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ