

26th September 2025

ಬಳ್ಳಾರಿ : ಮಹಾನಗರ ಪಾಲಿಕೆಯಲ್ಲಿ ನಮೂನೆ-2ಎ (ನಿಯಮ-20) ವಲಯ 1ರ ಕಡತಗಳನ್ನು ವಲಯ 2ರಲ್ಲಿ ಪಿಐಡಿ (ಸ್ವತ್ತಿನ) ಕಾನೂನು ಉಲ್ಲಂಘನೆ ಮಾಡಿ ಅನುಮೋದನೆ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಮಾಜಿಕ ಹೋರಾಟಗಾರ ಸಿದ್ದೇಶ್ ಹೂಳೂರು, ಹಿರಿಯ ಮುಖಂಡರಾದ ಮಲ್ಲಪ್ಪ.ಪಿ. ಗಾದಿಲಿಂಗಪ್ಪ, ಗಿರೀಶ್, ತಿರುಮಲ ಹಾವಿನಾಳರವರು ಒತ್ತಾಯಿಸಿದ್ದಾರೆ.
ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ನಮೂನೆ-2ಎ (ನಿಯಮ 20) ರನ್ವಯ ಅಂದರೆ PID (Property Identification Number ) ಸ್ವತ್ತಿನ ಸಂಖ್ಯೆ 1 ರಿಂದ 8ರವರೆಗೆ
ಸ್ವತ್ತಿನ ಸಂಖ್ಯೆ ವಲಯ 1ರ ಕಡತಗಳನ್ನು ವಲಯ 2ರಲ್ಲಿ ನಮೂನೆ-2ಎ (ನಿಯಮ 20) ಈ ಸ್ವತ್ತಿನ ಕಡತಗಳ ದಾಖಲಾತಿಗಳನ್ನು ಅನುಮೋದನೆ ನೀಡಿದ್ದಾರೆ. ಈ ಎಲ್ಲಾ ಸ್ವತ್ತಿನ ಕಡತಗಳನ್ನು ಪರಿಶೀಲನೆ ಮಾಡಲು ಅವರು ವಿನಂತಿಸಿದ್ದಾರಲ್ಲದೇ, ವಲಯ 1ರ ಕಡತಗಳನ್ನು ವಲಯ 2ರಲ್ಲಿ ಅನುಮೋದನೆ ನೀಡಲು ಸರ್ಕಾರದ ಸುತ್ತೋಲೆಗಳು ಆದೇಶಗಳು ಇದ್ದಾವೆಯೇ ಹಾಗೂ ? ಎಂದು ಅನುಮಾನಕ್ಕೆ ಈಡಾಗಿದೆ. ಸರ್ಕಾರದ ಸುತ್ತೋಲೆ ಮತ್ತು ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಹಾಗೂ ಅಧಿಕಾರದ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಇಂತಹ ಈ ಒಂದು ಸ್ವತ್ತಿನ ಕಡತಗಳನ್ನು ಅನುಮೋದನೆ ನೀಡುವುದು ಕಾನೂನು ಬಾಹಿರವಾಗಿರುತ್ತದೆ.
ಆದ್ದುದರಿಂದ ಸ್ವತ್ತಿನ ಕಡತಗಳ ದಾಖಲಾತಿಗಳನ್ನು ಅನುಮೋದನೆ ನೀಡಿರುವ ಸಂಬಂಧಪಟ್ಟ ಅಧಿಕಾರಿಗಳು ವಿರುದ್ಧ ನಿಯಮಾನುಸಾರ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ