

27th October 2025

ಬಳ್ಳಾರಿ : ತಾಲೂಕಿನ ಕಕ್ಕ ಬೇವಿನಹಳ್ಳಿ ಗ್ರಾಮದಲ್ಲಿ ವಾಸಿಸುವ ಮುತ್ತುರಾಜ್ ಗೆಳೆಯರ ಬಳಗದ ತಿಪ್ಪೇಶ್ ಎಂಬ ಯುವಕ ಡಾ.ಪುನೀತ್ ರಾಜಕುಮಾರ್ ಅವರನ್ನು ಕೇವಲ ಚಲನಚಿತ್ರ ನಟರಷ್ಟೇ ಅಲ್ಲ,ಆರಾಧ್ಯ ದೈವವೆಂದೇ ಭಾವಿಸಿ ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ತಮ್ಮ ಮನೆಯ ದೇವರ ಕೋಣೆಯಲ್ಲೇ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಗೌರವದಿಂದ ಪ್ರತಿಷ್ಠಾಪಿಸಿಕೊಂಡಿರುವ ಅವರು ಪ್ರತಿದಿನ ಬೆಳಿಗ್ಗೆ ಧೂಪ,ಹೂವು,ನೈವೇದ್ಯದೊಂದಿಗೆ ಪೂಜೆ ಸಲ್ಲಿಸುತ್ತಾರೆ.ವಿಶೇಷ ಹಬ್ಬಗಳು,ಪುನೀತ್ ರಾಜಕುಮಾರ ಅವರ ಹುಟ್ಟುಹಬ್ಬ ಅಥವಾ ಅವರ ಸ್ಮರಣಾರ್ಥ ದಿನಗಳಲ್ಲಿ ತಿಪ್ಪೇಶ್ ಅವರು ತಮ್ಮ ಕುಟುಂಬದವರೊಂದಿಗೆ ವಿಶೇಷ ಆರತಿಯನ್ನು ನಡೆಸುತ್ತಾರೆ.
“ಪುನೀತ್ ಸರ್ ದೇವರಂತ ಒಳ್ಳೆಯವರು. ಅವರು ಹೇಳಿದ ದಾರಿಯಲ್ಲಿ ನಡೆದರೆ ಎಲ್ಲರ ಜೀವನವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ.ಅವರ ಮಾತುಗಳು, ನಡೆ-ನುಡಿಗಳು,ಮಾನವೀಯತೆ ನನಗೆ ನಿತ್ಯ ಪ್ರೇರಣೆ,” ಎಂದು ತಿಪ್ಪೇಶ್ ಭಾವೋದ್ರಿಕ್ತವಾಗಿ ಹೇಳಿದ್ದಾರೆ.
ತಿಪ್ಪೇಶ್ ಅವರ ಪ್ರಕಾರ,ಪುನೀತ್ ಸರ್ ಜನಸೇವೆ, ಬಡವರಿಗಿದ್ದ ಕಾಳಜಿ ಹಾಗೂ ಸರಳ ಜೀವನ ಶೈಲಿ ಎಲ್ಲರಿಗೂ ಮಾದರಿ.
ಅವರು ತಮ್ಮ ಜೀವನದಲ್ಲಿ ಯಾವುದೇ ಕಷ್ಟ ಬಂದರೂ “ಅಪ್ಪು ಸರ್ ಮುಖ ನೆನಪಾದರೆ ಧೈರ್ಯ ಬರುತ್ತದೆ” ಎಂದು ಹೇಳುತ್ತಾರೆ.
ಗ್ರಾಮದವರು ಕೂಡ ತಿಪ್ಪೇಶ್ ಅವರ ಈ ನಿಸ್ವಾರ್ಥ ಅಭಿಮಾನವನ್ನು ಗೌರವದಿಂದ ನೋಡುತ್ತಾರೆ. ಕೆಲವರು ಹೇಳುವಂತೆ, “ಅವರ ಭಕ್ತಿ ನಿಜವಾದ ನಂಬಿಕೆ. ಪುನೀತ್ ಸರ್ಗಳಂತಹ ಒಳ್ಳೆಯ ವ್ಯಕ್ತಿಯನ್ನ ದೈವವಾಗಿ ಕಾಣುವುದು ಅಚ್ಚರಿಯಲ್ಲ” ಎಂದು ಗ್ರಾಮಸ್ಥರು ಹೇಳಿದ್ದಾರೆ.
ತಿಪ್ಪೇಶ್ ಅವರ ಈ ವಿಶಿಷ್ಟ ಭಕ್ತಿ ಗೆ ಹಲವಾರು ಅಭಿಮಾನಿಗಳು ಮತ್ತು ನೆಟ್ಟಿಗರು ಅವರ ನಿಷ್ಠೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರಿಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಬೆಳಗಾವಿ ಸಾಹಿತ್ಯೋತ್ಸವ -2025