

11th January 2026

ಬಳ್ಳಾರಿ : ಬೃಂದಾ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ಬೃಂದಾ ನ್ಯಾಷನಲ್ ಕಾಲೇಜ್ ವತಿಯಿಂದ ‘ಟ್ಯಾಲೆಂಟ್ ಹಂಟ್–2026’ ಪ್ರತಿಭಾ ಶೋಧನಾ ಪರೀಕ್ಷೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಈ ಪರೀಕ್ಷೆಯ ಮುಖ್ಯ ಉದ್ದೇಶ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸುವುದು ಆಗಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಐದು ಟಾಪ್ ರ್ಯಾಂಕ್ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಬೃಂದಾ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಫೌಂಡರ್ ಹಾಗೂ ಸಿಇಒ ಡಾ. ಭವ್ಯಶೇಖರ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೃಂದಾ ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜ್ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗುವಂತೆ ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಕೊನೆಯ ಸಾಲಿನ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಧ್ಯೇಯದೊಂದಿಗೆ ನಿರಂತರ ಸೇವೆ ಸಲ್ಲಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳಿದರು. ಅತ್ಯಾಧುನಿಕ ಸೌಲಭ್ಯಗಳು, ಶಿಸ್ತುಬದ್ಧ ಶೈಕ್ಷಣಿಕ ವಾತಾವರಣ, ಅನುಭವೀ ಹಾಗೂ ಆಲ್ ಇಂಡಿಯಾ ಮಟ್ಟದ ಉಪನ್ಯಾಸಕರ ಮಾರ್ಗದರ್ಶನದೊಂದಿಗೆ TET, NEET, JEE, CA ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರ ಹಾಗೂ ಪರಿಣಾಮಕಾರಿ ತರಬೇತಿ ನೀಡುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಬದ್ಧತೆಯನ್ನು ಸ್ಪಷ್ಟಪಡಿಸುತ್ತದೆ ಎಂದರು. ಕಡಿಮೆ ಶುಲ್ಕದಲ್ಲಿ ಉನ್ನತ ಮಟ್ಟದ ಶಿಕ್ಷಣ ಒದಗಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸುತ್ತಿರುವ ಬೃಂದಾ ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜ್ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದೆ ಎಂಬುದು ಎಲ್ಲ ವಲಯಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.
ಈ ಪ್ರತಿಭಾ ಶೋಧನಾ ಪರೀಕ್ಷೆಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದು ಸಂಸ್ಥೆಗೆ ಸಂತಸದ ವಿಷಯವಾಗಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳ ಪೋಷಕರು ಹಾಗೂ ವಿವಿಧ ಶಾಲೆಗಳ ಪ್ರಾಂಶುಪಾಲರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಡೈರೆಕ್ಟರ್ ಭುವನ್ ಎಂ.ಎಸ್., ಪಿಯು ಕಾಲೇಜ್ ಪ್ರಿನ್ಸಿಪಾಲ್ ಜಯವರ್ಧನ್ ಎಂ.ಎಲ್., ನರ್ಸಿಂಗ್ ಕಾಲೇಜ್ ಪ್ರಿನ್ಸಿಪಾಲ್ ಅಮರೇಶ್ ಎಚ್., ಹಾಗೂ ರಾಜಶೇಖರ್ ತಲಕಲ್ ಅವರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದರು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸಿದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಫೌಂಡರ್ ಹಾಗೂ ಸಿಇಒ ಡಾ. ಭವ್ಯಶೇಖರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತ ಸಮಾಜದ ಶ್ರೀಮತಿ ಗಿರಿಜಮ್ಮ ಅಕ್ಕಿ (50) ರಸ್ತೆ ಅಪಘಾತದಲ್ಲಿ ನಿಧನ
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಳ್ಳಾರಿಯಲ್ಲಿ ಕಳಪೆ ರಸ್ತೆ ಕಾಮಗಾರಿಕೆ ಆರೋಪ : ಬಾಪೂಜಿ ನಗರ–ಆಂದ್ರಾಳ್ ಬ್ರಿಡ್ಜ್ ರಸ್ತೆಗೆ ಸಾರ್ವಜನಿಕರ ತೀವ್ರ ವಿರೋಧ