

14th January 2026

ಬಳ್ಳಾರಿ : ನಗರದ ಬಾಪೂಜಿ ನಗರ ಸರ್ಕಲ್ನಿಂದ ಆಂದ್ರಾಳ್ ಬ್ರಿಡ್ಜ್ ವರೆಗೆ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಕೆ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ದಿನಾಂಕ 24-02-2022 ರಂದು ಆರಂಭವಾದ ಈ ಕಾಮಗಾರಿಕೆ, ಹಲವು ವರ್ಷಗಳಾದರೂ ಇನ್ನೂ ಪೂರ್ಣಗೊಳ್ಳದೆ ಅರ್ಧದಲ್ಲೇ ನಿಂತಿದ್ದು, ತೆರೆದ ಚರಂಡಿ ಕೆಲಸವೂ ಅಪೂರ್ಣವಾಗಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಎಡ ಮತ್ತು ಬಲ ಭಾಗಗಳಲ್ಲಿ ಮಣ್ಣು ಹಾಗೂ ಕಲ್ಲು ಬಿಂಚುಗಳನ್ನು ಹಾಕಿ ಕಾಮಗಾರಿಯನ್ನು ನಿಧಾನಗತಿಯಲ್ಲೇ ನಡೆಸಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಪಾದಚಾರಿಗಳು ದಿನನಿತ್ಯ ಅಪಾಯವನ್ನು ಎದುರಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಈ ರಸ್ತೆ ಕಾಮಗಾರಿಕೆ ಗುತ್ತಿಗೆದಾರ ಕೆ.ಎಂ. ಪ್ರವೀಣ್ ಕುಮಾರ್ ಅವರ ಮೂಲಕ, ಪಿಡಬ್ಲ್ಯೂಡಿ ಎಡಬ್ಲ್ಯೂ ಬಸವ ರೆಡ್ಡಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಕಾಮಗಾರಿಕೆಯ ಗುಣಮಟ್ಟ ತೀರಾ ಕಳಪೆಯಾಗಿದೆ ಎಂಬ ಆರೋಪಗಳು ವ್ಯಕ್ತವಾಗಿವೆ. ಈ ಕುರಿತು ಸ್ಥಳೀಯರು ಬಾಪೂಜಿ ನಗರ ಏಳನೇ ವಾರ್ಡಿನ ಕಾರ್ಪೊರೇಟರ್ ಉಮಾದೇವಿ ಶಿವರಾಜ್ ಅವರ ಗಮನಕ್ಕೆ ತಂದರೂ, ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಗಲಿಲ್ಲವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ಪ್ರದೇಶದ ಮಾಜಿ ಕಾರ್ಪೊರೇಟರ್ ನಾರಾಯಣಮ್ಮನ ಅವರ ಮಗ ಕಾಂಗ್ರೆಸ್ ಮುಖಂಡರಾದ ಬಾಪಜಿ ನಗರ್ ವೆಂಕಟೇಶ್ ಅವರು ಈ ಕುರಿತು ಪಿಡಬ್ಲ್ಯೂಡಿ ಇಲಾಖೆಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ತಿಳಿಸಿದ್ದಾರೆ. ಇದರಿಂದ ಬೇಸತ್ತಿರುವ ಅವರು, ಸಾರ್ವಜನಿಕರ ಪರವಾಗಿ ಸಂಬಂಧಪಟ್ಟ ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಳಪೆ ಕಾಮಗಾರಿಯಿಂದ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂಬ ಒತ್ತಾಯ ಸ್ಥಳೀಯರಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ವೀರಶೈವ ಲಿಂಗಾಯತ ಸಮಾಜದ ಶ್ರೀಮತಿ ಗಿರಿಜಮ್ಮ ಅಕ್ಕಿ (50) ರಸ್ತೆ ಅಪಘಾತದಲ್ಲಿ ನಿಧನ
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ