

22nd January 2026

ಬಳ್ಳಾರಿ, : ಸ್ಪರ್ಧೆಗಳಲ್ಲಿ ಸೋಲು–ಗೆಲುವು ಸಹಜ. ಆದರೆ ಭಾಗವಹಿಸುವ ಮನೋಭಾವವೇ ಮುಖ್ಯ. ಸ್ಪರ್ಧಾಳುಗಳು ಗೆಲುವು–ಸೋಲನ್ನು ಸಮಾನ ಮನಸ್ಥಿತಿಯಲ್ಲಿ ಸ್ವೀಕರಿಸಬೇಕು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಕೆ ಫೌಂಡೇಶನ್ ಹಾಗೂ ಬಳ್ಳಾರಿ ಫಿಟ್ನೆಸ್ ಅಸೋಸಿಯೇಶನ್ ಆಶ್ರಯದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕ.ಕ.ವಿಭಾಗ ಮಟ್ಟದ ಪುರುಷರು ಹಾಗೂ ಮಹಿಳೆಯರ ದೇಹದಾಡ್ಯ ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸುವುದು ಸಾಮಾನ್ಯವಾದರೂ, ಜಿಕೆ ಫೌಂಡೇಶನ್ ಅಧ್ಯಕ್ಷ ಜಿ.ಕೆ.ಸ್ವಾಮಿ (ವಿಜಯ್) ಅವರು ಯುವಕರ ದೈಹಿಕ ಸಾಮರ್ಥ್ಯ ಬೆಳೆಸುವ ಉದ್ದೇಶದಿಂದ ಕ.ಕ.ವಿಭಾಗ ಮಟ್ಟದ ದೇಹದಾಡ್ಯ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಸಂತಸ ತಂದಿದೆ ಎಂದರು.
ಸಿಂಗಪುರದಲ್ಲಿ ಉದ್ಯೋಗದಲ್ಲಿದ್ದರೂ ಹುಟ್ಟಿದ ನಾಡಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಜಿ.ಕೆ.ಸ್ವಾಮಿ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರು, ಮಹಿಳೆಯರು ಹಾಗೂ ವೃದ್ಧರ ಸೇವೆಯ ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಜಿಕೆ ಫೌಂಡೇಶನ್ ನೀಡುತ್ತಿರುವ ಸೇವೆಗಳು ಮಾದರಿಯಾಗಿವೆ. ಇಂತಹ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರ ಮತ್ತು ಬೆಂಬಲ ಸದಾ ಇರುತ್ತದೆ ಎಂದು ಶಾಸಕ ಭರತ್ ರೆಡ್ಡಿ ಭರವಸೆ ನೀಡಿದರು.
ಜಿಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿ.ಕೆ.ಸ್ವಾಮಿ ಮಾತನಾಡಿ, ಯುವಕರಿಗೆ ಪ್ರೋತ್ಸಾಹ ನೀಡುವ ವೇದಿಕೆ ಕಲ್ಪಿಸುವುದೇ ನನ್ನ ಉದ್ದೇಶ. ನಮ್ಮ ಫೌಂಡೇಶನ್ ಈಗಾಗಲೇ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸೇವೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ದೇಹದಾಡ್ಯ ಸ್ಪರ್ಧೆಗಳನ್ನು ಆಯೋಜಿಸುವ ಕನಸು ಇದೆ. ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಇದಕ್ಕೂ ಮುನ್ನ ಕೊಪ್ಪಳ, ವಿಜಯನಗರ, ಕಲಬುರ್ಗಿ, ರಾಯಚೂರು, ಬೀದರ್ ಹಾಗೂ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳು ತೂಕ ಹಾಗೂ ಎತ್ತರ ಪರಿಶೀಲನೆ ಮಾಡಿಕೊಂಡು ಹೆಸರು ನೋಂದಾಯಿಸಿಕೊಂಡರು. ಈ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯಡು, ಮುಖಂಡರಾದ ಲೋಕೇಶ್, ಕರಾಟೆ ಕಟ್ಟೆಸ್ವಾಮಿ, ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಮಿಸ್ಟರ್ ಏಶಿಯಾ ಚಿನ್ನದ ಪದಕ ವಿಜೇತ ಬಿ. ಮಾರುತೇಶ, ಅನಿಲ್ ಬೆಳವಣಿಕೆ (ಗದಗ), ಸೂರಜ್ ಹಾಗೂ ಶಶಿಕುಮಾರ್ ಆಗಮಿಸಿದ್ದರು.
ವಿಜೇತರು:
ಮೊದಲ ಸುತ್ತು – ದೇಹದಾಡ್ಯ ಸ್ಪರ್ಧೆ:
ಶರಣಪ್ಪ – ಕೊಪ್ಪಳ
ಮಾಲತೇಶ್ – ಕೊಪ್ಪಳ
ಅಬ್ದುಲ್ ರೆಹಮಾನ್ – ಬಳ್ಳಾರಿ
ಎರಡನೇ ಸುತ್ತು – ದೇಹದಾಡ್ಯ ಸ್ಪರ್ಧೆ:
ಚಂದ್ ಭಾಷಾ – ಬಳ್ಳಾರಿ
ಮೋಹನ್ – ರಾಯಚೂರು
ಅರುಣ್ – ಹೊಸಪೇಟೆ

ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026. ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನೂತನ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ಭೀಮಣ್ಣ ಖಂಡ್ರೆಗೆ ಮೋಹನ ಪಾಟೀಲರಿಂದ ಗೌರವ

ಮರಡಿನಾಗಲಾಪೂರ ಪ್ರಾಥಮಿಕ ಶಾಲೆಯಲ್ಲಿ* *ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ