

21st March 2026

ಹೊಳಲ್ಕೆರೆ: ತಾಲೂಕು ವ್ಯಾಪ್ತಿಯ ತಾಳ್ಯ ಗ್ರಾಮ ಪಂಚಾಯತಿಯ ಒಳಪಡುವ ಕುಮ್ಮಿನಕಟ್ಟ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ವಿಷಯ ಪ್ರಾದೇಶಿಕ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆ ತಾಲೂಕು ಆಡಳಿತ ತಕ್ಷಣ ಕ್ರಮಕ್ಕೆ ಮುಂದಾಗಿದೆ.
ಈ ಸಂಬಂಧ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಉಪಾಧಿಕಾರಿಗಳಾದ ಶಿವಪ್ರಕಾಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ನೀರಿನ ಲಭ್ಯತೆ, ಪೂರೈಕೆ ವ್ಯವಸ್ಥೆ ಮತ್ತು ಜನರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಮಾಹಿತಿ ಪಡೆದು, ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಯೋಜನಾಧಿಕಾರಿಗಳಾದ ಸುರೇಶ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಶುಭ ತಳಕ್ ಹಾಗೂ ಪಂಚಾಯತ್ ಸಿಬ್ಬಂದಿಗಳಾದ ವಿನಯ್ ಕುಮಾರ್, ಕೊಡಿಕರಿಯಪ್ಪ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜೊತೆಗೆ ಗ್ರಾಮಸ್ಥರೂ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ವಿವರಿಸಿದರು.
ತಾಲೂಕು ಆಡಳಿತದ ಈ ತ್ವರಿತ ಕ್ರಮದಿಂದ ಗ್ರಾಮಸ್ಥರಲ್ಲಿ ಸ್ವಲ್ಪ ನೆಮ್ಮದಿ ಮೂಡಿದ್ದು, ಶೀಘ್ರದಲ್ಲೇ ನೀರಿನ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಗಂಗಾವತಿ ಫ್ಯಾನ್ಸಿ ಸ್ಟೋರ್ ನಲ್ಲಿ ನಶೆ ಬರುವ ಟ್ಯಾಬ್ಲೆಟ್ ಮಾರಾಟ: ಪ್ರಕರಣ ದಾಖಲು- ಯುವಕರಿಗೂ ಲಿಂಕ್: ವ್ಯಕ್ತಿಯೋರ್ವನ ಹೇಳಿಕೆ

ಗಂಗಾವತಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್- ನಾಲ್ಕು ನ್ಯಾಯಾಲಯಗಳಲ್ಲಿ 617 ಪ್ರಕರಣ ಇತ್ಯರ್ಥ: ರೂ. 8.48 ಕೋಟಿ ಸರಕಾರಕ್ಕೆ ಜಮೆ- ಮನಸ್ಥಾಪ ಬಿಟ್ಟು ಒಂದಾದ ಮೂವ್ವರು ದಂಪತಿಗಳು