

21st April 2026

ಹೊಳಲ್ಕೆರೆ: ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಮಹಿಳಾ ನೌಕರರ ದಿನಾಚರಣೆ ಹಾಗೂ ರಾಜ್ಯ ಸಹಕಾರಿ ನೌಕರರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ತಿಪ್ಪೇಶಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ನೌಕರರ ಪಾತ್ರವು ಸರ್ಕಾರಿ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಸಹಕಾರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ನೌಕರರ ಸೇವೆಯು ಪ್ರಮುಖವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷರಾದ ಚಂದ್ರಶೇಖರ್, ಶಿವಮೂರ್ತಿ ಹಾಗೂ ಕಾ.ಸ.ಪ್ಪ ಅಧ್ಯಕ್ಷ ಸಿದ್ದರಾಮಪ್ಪ ಎಚ್.ಎನ್ ಅವರು ಉಪಸ್ಥಿತರಿದ್ದರು. ರಾಜ್ಯಸಭಾ ಸದಸ್ಯೆ ಅನುಯ ಅಮ್ಮ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ನಿಜಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಗಿರೀಶ್, ಖಜಾಂಚಿ ಪ್ರದೀಪ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕಾದರ್ ಬಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ವೇಳೆ ಮಹಿಳಾ ನೌಕರರ ಸಾಧನೆಗಳನ್ನು ಸ್ಮರಿಸಿ, ಅವರ ಸೇವೆಯನ್ನು ಕೊಂಡಾಡಲಾಯಿತು.
ವರದಿ: ನಾಗರಾಜ್ ಕೆ

ಗಂಗಾವತಿಗೆ ತಹಶೀಲ್ದಾರರಾಗಿ ಯು.ವಸಂತಕುಮಾರಿ ವರ್ಗ ರಾಜ್ಯ ಸರಕಾರದ ಆದೇಶ: ಏ.15ರಂದು ಕರ್ತವ್ಯಕ್ಕೆ