

19th May 2026

ಬಳ್ಳಾರಿ: ಮುಂಗಾರು ಮಳೆ ರಾಜ್ಯದಾದ್ಯಂತ ಅಬ್ಬರಿಸುತ್ತಿದ್ದು ಬಿಸಿಲ ನಗರಿ ಬಳ್ಳಾರಿಯಲ್ಲೂ ಭಾರೀ ಮಳೆ ಸುರಿದಿದ್ದರಿಂದ ನಗರದ ವಿವಿಧೆಡೆ ಗಿಡ, ಮರಗಳು ಧರೆಗೆ ಉರುಳಿ ಬಿದ್ದಿವೆ. ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯಲ್ಲಿ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದು ಕಾರು ಜಖಂಗೊAಡಿದೆ.
ವೀರನಗೌಡ ಕಾಲೋನಿಯ ಚಂದನವನದ ಉದ್ಯಾನವನದ ಬಳಿ ಮತ್ತೊಂದು ಮರ ಉರುಳಿ ಬಿದ್ದಿದೆ. ಇದರಿಂದ ವಿದ್ಯುತ್ ತಂತಿಗಳು ಧರಾಶಾಹಿಯಾಗಿದ್ದು, ಈ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ. ಜೊತೆಗೆ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಮಹಾನಗರ ಪಾಲಿಕೆಯ ೩೯ ವಾರ್ಡುಗಳಲ್ಲಿ ಮಳೆ ಸುರಿದಿದ್ದರಿಂದ ಚರಂಡಿ ನೀರಿನ ಜೊತೆಗೆ ರಸ್ತೆಯಲ್ಲೆಲ್ಲ ಮಳೆ ನೀರು ಹರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಮಧ್ಯಾಹ್ನ ೩ ಗಂಟೆಯಿAದ ೪-೩೦ರವರೆಗೆ ಅಲ್ಲಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ತೆಗ್ಗು ಪ್ರದೇಶಗಳಲ್ಲಿ ನೀರು ಮಲೆತು ನಾಗರಿಕರು ಕೆಲಹೊತ್ತು ಆತಂಕದ ಕ್ಷಣಗಳನ್ನು ಎದುರಿಸುವಂತಾಯಿತು.
ಕಳೆದ ಎರಡು ತಿಂಗಳುಗಳಿAದ ಬಿಸಿಲಿನ ಝಳಕ್ಕೆ ನಲುಗಿ ಹೋಗಿದ್ದ ಬಳ್ಳಾರಿಗರಿಗೆ ಮಂಗಳವಾರದAದು ಸುರಿದ ಮಳೆಯಿಂದ ಕೊಂಚ ಸುಧಾರಿಸಿಕೊಂಡಿದ್ದಾರೆ.
ಆದಾಗ್ಯೂ ಮಳೆಯ ಆರ್ಭಟಕ್ಕೆ ಕೌಲ್ ಬಾಜರ್ ಪ್ರದೇಶದಲ್ಲಿನ ಮರವೊಂದು ಕಾರಿನ ಮೇಲೆ ಬಿದ್ದಿದ್ದರಿಂದ ಲಕ್ಷಾಂತರ ಮೌಲ್ಯದ ಕಾರು ಜಖಂಗೊAಡಿದೆ. ಇದರಿಂದ ಕಾರಿನ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ಅನಂತಪುರ ರಸ್ತೆಯ ರಾಘವೇಂದ್ರ ಕಾಲೋನಿ, ವಿಶಾಲ ನಗರ ಸೇರಿದಂತೆ ನಗರದ ಈಶಾನ್ಯ ಭಾಗದಲ್ಲಿರುವ ನೆಹರು ಕಾಲೋನಿ, ಗಾಂಧಿನಗರ, ಗಣೇಶ ಕಾಲೋನಿ, ಶಂಕರ ಕಾಲೋನಿ, ಕೆ.ಹೆಚ್.ಬಿ.ಕಾಲೋನಿಯಲ್ಲೂ ಮಳೆಯ ನೀರು ಸಂಗ್ರಹಗೊAಡು ನಾಗರಿಕರು ಪರಿತಪಿಸಿದರು. ಇತ್ತ ಪಾರ್ವತಿನಗರ, ಶಾಸ್ತಿç ನಗರ, ರೇಣುಕಾ ನಗರ ಇನ್ನಿತರೆಡೆ ಮಳೆ ಸುರಿದದ್ದರಿಂದ ಅಲ್ಲಲ್ಲಿ ನೀರು ಮಲೆತು ನಿಂತು, ಜನಜೀವನ ಅಸ್ತವ್ಯಸ್ತಗೊಂಡಿತು.
ವಿದ್ಯುತ್ ಕಟ್:
ಗಾಳಿ ಮತ್ತು ಮಳೆಯಿಂದಾಗಿ ವಿದ್ಯುತ್ ಕೈ ಕೊಟ್ಟಿದ್ದರಿಂದ ಬಳ್ಳಾರಿಗರು ವಿದ್ಯುತ್ ಇಲ್ಲದೇ ಪರದಾಡುವಂತಾಯಿತು. ಜೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದ ಮರಗಳನ್ನು ಕತ್ತರಿಸಿ ತೆರವುಗೊಳಿಸುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ನಿರೀಕ್ಷೆಯೇ ಇರದಂತೆ ಬಳ್ಳಾರಿ ನೆಲಕ್ಕೆ ಕಾಲಿಟ್ಟ ವರುಣನಿಂದಾಗಿ ಬಳ್ಳಾರಿಗರು ತಂಪನೆಯ ವಾತಾವರಣಕ್ಕೆ ಒಗ್ಗಿಕೊಳ್ಳುವಂತಾದರೂ ಗಿಡ, ಮರಗಳುರುಳಿ, ವಾಹನಗಳು ಜಖಂಗೊAಡಿದ್ದರಿAದ ಆಘಾತಗೊಳ್ಳುವಂತಾಗಿದ್ದು ವಿಪರ್ಯಾಸ.
-

ಶ್ರೀರಾಮರಂಗಾಪುರ ದಲಿತ ಕುಟುಂಬಗಳಿಗೆ ವಸತಿ ನಿವೇಶನಕ್ಕೆ ಆಗ್ರಹ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ

ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮುಲು ವಾಗ್ದಾಳಿ “ಮೂರು ವರ್ಷದ ಸಾಧನೆ ಎಂದರೆ ನೂರು ಸುಳ್ಳಿನ ಸಮಾವೇಶ” ಆರೋಪ