

20th May 2026

ಬಳ್ಳಾರಿ, ಮೇ.20: ಮಂಗಳವಾರ ನಗರದಾದ್ಯಂತ ಸುರಿದ ಮಳೆಯಿಂದ ಹಾನಿಗೀಡಾಗಿದ್ದ ಪ್ರದೇಶಗಳಿಗೆ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಬುಧವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳ್ಳಾರಿಯ ಗಾಂಧಿನಗರ ಮಾರ್ಕೆಟ್, ಪಾರ್ವತಿ ನಗರ, ವಾಲ್ಮೀಕಿ ವೃತ್ತ ಸಮೀಪದ ಪ್ರದೇಶ, ಬಂಡೀಮೋಟ್, 9ನೇ ವಾರ್ಡಿನ ಉರ್ದು ಶಾಲೆ ಬಳಿಯ ಕಾಲುವೆ, 9, 16, 17ನೇ ವಾರ್ಡುಗಳನ್ನು ಸಂಧಿಸುವ ಮುಖ್ಯ ಕಾಲುವೆಯನ್ನು ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭ ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ಜಬ್ಬಾರ್, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ರಸೂಲ್, ರಾಮು, ಪ್ರದೀಪ್, ಅಧಿಕಾರಿಗಳಾದ ಮಲ್ಲನಗೌಡ, ಗೋವರ್ಧನ್, ಮಹೇಶ್, ಶ್ರೀನಿವಾಸ್, ವೀರೇಶ್, ಶ್ರೀನಾಥ್, ಮುನಾಫ್ ಪಟೇಲ್, ಕಿರಣ್ ಮತ್ತಿತರರು ಹಾಜರಿದ್ದರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ