

22nd May 2026

50ಕ್ಕೂ ಹೆಚ್ಚು ದಾನಿಗಳಿಂದ ರಕ್ತದಾನ; ರಕ್ತದಾನವೇ ಶ್ರೇಷ್ಠ ದಾನ ಎಂದು ಎಂ.ಶ್ರೀದೇವಿ
ಬಳ್ಳಾರಿ, ಮೇ.22: ಸೃಷ್ಟಿಸಲು ಅಸಾಧ್ಯವಾದ ರಕ್ತವನ್ನು ದಾನ ಮಾಡುವುದು ಎಲ್ಲ ದಾನಗಳಿಗಿಂತ ಶ್ರೇಷ್ಠವಾದದ್ದು ಎಂದು ಬಳ್ಳಾರಿ ಮೋಟರ್ಸ್ ಸೇಲ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ಎಂ.ಶ್ರೀದೇವಿ ಹೇಳಿದರು.
ನಗರದ ಅನಂತಪುರ ರಸ್ತೆಯ ಮಹೇಂದ್ರ ಕಾರ್ ಶೋರೂಮ್ನಲ್ಲಿ ಬಳ್ಳಾರಿ ಮೋಟರ್ಸ್ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಾದ ದಿವಂಗತ ಎಂ.ರಾಜಶೇಖರ ಅವರ ಪುಣ್ಯಸ್ಮರಣೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ” ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಉತ್ತಮ ಆರೋಗ್ಯ ಕಾಪಾಡಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿದ ಕೆಲವೇ ಗಂಟೆಗಳಲ್ಲಿ ದೇಹದಲ್ಲಿ ಮತ್ತೆ ರಕ್ತ ಉತ್ಪತ್ತಿಯಾಗುತ್ತದೆ.
ರಕ್ತದಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುವುದು ಕೇವಲ ತಪ್ಪು ಕಲ್ಪನೆ ಎಂದು ತಿಳಿಸಿದರು.
ಯುವಕರು ತಮ್ಮ ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿ ಅದನ್ನು ಸಾಧಿಸಲು ನಿರಂತರ ಪರಿಶ್ರಮ ಪಡಬೇಕು.
ಇತರರ ಸಾಧನೆಯನ್ನು ಟೀಕಿಸುವ ಬದಲು ಅದನ್ನು ಪ್ರೇರಣೆಯಾಗಿ ಸ್ವೀಕರಿಸಿ ತಮ್ಮದೇ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಪ್ರತಿಕ್ಷಣವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ 50ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ರಕ್ತದಾನ ಮಾಡಿದ ದಾನಿಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಒ ಪ್ರದೀಪ್ ಹಚ್ಚಿನಾಳ್, ವ್ಯವಸ್ಥಾಪಕರಾದ ರಘುನಾಥ್, ಸುರೇಶ್, ಸಮೀರ್, ಎಎಸ್ಎಂ ಪರಿಚಿತ್, ಸಂತೋಷ, ಸ್ವಾಮಿ ವಿವೇಕಾನಂದ ಅರ್ಥ ಬಂಡಾರದ ವ್ಯವಸ್ಥಾಪಕರಾದ ಮಂಜುನಾಥ್, ಜಿಲ್ಲಾ ಆರೋಗ್ಯ ಇಲಾಖೆಯ ರಕ್ತ ಬಂಡಾರದ ಗಿರೀಶ್, ಮನೋಹರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಂದ್ರಾಳ್ ಹಳ್ಳದಲ್ಲಿ ಮಹಿಳೆಯ ಶವ ಪತ್ತೆ: ಕೊಲೆ, ಆತ್ಮಹತ್ಯೆ ಅಥವಾ ಅಪಘಾತವೇ? ಹಲವು ಅನುಮಾನಗಳಿಗೆ ಕಾರಣವಾದ ಘಟನೆ

ಗಂಗಾವತಿ: ಕ್ಷುಲ್ಲಕ ಜಗಳಕ್ಕೆ ಹೆತ್ತ ತಂದೆ, ಅಕ್ಕನನ್ನು ಕತ್ತು ಸೀಳಿ ಕೊಂದ ಪಾಪಿ ತಮ್ಮ!- ಆನ್ ಲೈನ್ ಗೇಮ್ ಬೆಡವೆಂದು ಬುದ್ದಿವಾದಕ್ಕೆ ಸಿಟ್ಟು