

25th May 2026

ಬಳ್ಳಾರಿ. ಮೇ. 25: ತಾಲೂಕಿನ ಕೊಳಗಲ್ಲು ಗ್ರಾಮದ ಸಿದ್ದಮ್ಮನಹಳ್ಳಿ ಹುಲಿಯಪ್ಪ, ಅವರ ತಮ್ಮ ಸಿದ್ದಮ್ಮನಹಳ್ಳಿ ರೌಡಿಶೀಟರ್ ಪರುಶುರಾಮ್, ಸಿದ್ದಮ್ಮನಹಳ್ಳಿ ವೀರೇಶ್ ಮತ್ತು ಸಿದ್ದಮ್ಮನಹಳ್ಳಿ ನಾಗರಾಜ್ ಅವರುಗಳು ಗ್ರಾಮದ ಅಮಾಯಕರ ಮೇಲೆ ದೌರ್ಜನ್ಯ ಎಸಗುತ್ತಾ ತುಂಬಾ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಇವರ ಈ ರೀತಿಯ ದುರ್ವರ್ತನೆಯಿಂದ ಗ್ರಾಮದಲ್ಲಿ ಬದುಕಲು ಸಹ ನಮಗೆ ಕಷ್ಟವಾಗುತ್ತಿದೆ ಮೇಲ್ಕಂಡವರನ್ನು ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗ್ರಾಮದಿಂದ ಗಡಿಪಾರು ಮಾಡಿ ಎಂದು ಕೊಳಗಲ್ಲು ಗ್ರಾಮದ ವಾಲ್ಮೀಕಿ ಕುರುಬ ಉಪ್ಪಾರ ಜನಾಂಗ ಸೇರಿದಂತೆ ಇತರ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅವರು ಸೋಮವಾರ ಈ ವಿಷಯದ ಕುರಿತು ಜಿಲ್ಲಾ ಎಸ್ ಪಿ ಅವರಿಗೆ ದೂರನ್ನು ನೀಡಿ ಸದರಿ ಕೊಳಗಲ್ಲು ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳಿದ್ದು 20 ಸಾವಿರಕ್ಕೂ ಅಧಿಕ ಜನರು ಸಣ್ಣ ಪುಟ್ಟ ಗಲಾಟೆಗಳನ್ನು ಹೊರತುಪಡಿಸಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದರು.
ಆದರೆ, ಕಳೆದ ಹದೈನೈದು ಇಪ್ಪತ್ತು ವರ್ಷಗಳ ಹಿಂದೆ ಇದೇ ಗ್ರಾಮದ ವಾಲ್ಮೀಕಿ ಜನಾಂಗಕ್ಕೆ ಸೇರಿದ ಸಿದ್ದಮ್ಮನಹಳ್ಳಿ ಹುಲಿಯಪ್ಪ ಮತ್ತು ಇವರ ತಮ್ಮ ರೌಡಿಶೀಟರ್ ಪರುಶುರಾಮ್ ಸಿದ್ದಮ್ಮನಹಳ್ಳಿ ವೀರೆಶ್, ಸಿದ್ದಮ್ಮನಹಳ್ಳಿ ಇವರುಗಳು ಗ್ರಾಮದ ಅಸಹಾಯಕರ ಮೇಲೆ ದೌರ್ಜನ್ಯ ಎಸಗುತ್ತಾ, ಪಂಚಾಯಿತಿಗಳನ್ನು ಮಾಡುತ್ತಾ ಅಣ್ಣ ತಮ್ಮಂದಿರ ಮದ್ಯೆ ವ್ಯಾಜ್ಯಗಳಿದ್ದ ಜಮೀನುಗಳನ್ನು, ನಿವೇಶನಗಳನ್ನು ದೌರ್ಜನ್ಯದಿಂದ ಅವುಗಳನ್ನು ಅತಿ ಅಗ್ಗದ ಬೆಲೆಗೆ ನಮಗೆ ನೀಡಬೇಕು ಎಂದು ಅವರ ಮೇಲೆ ಮಾನಸಿಕ ಮತ್ತು ದೈಹಿಕ ಕಿರುಕುಳ ಮತ್ತು ಹಲ್ಲೆಗಳಿಂದ ಒತ್ತಡ ತಂದು ಅವುಗಳನ್ನು ವಶಪಡಿಸಿಕೊಳ್ಳುವುದು ಮಾಡುತ್ತಾ ಗ್ರಾಮದ ಎಲ್ಲಾ ಜಾತಿ ಜನಾಂಗಗಳ ಜನರಿಗೆ ಹೆದರಿಸಿ ಬೆದರಿಸಿ ಭಯಭೀತರನ್ನಾಗಿ ಮಾಡಿ “ಈ ಕೊಳಗಲ್ಲು ಗ್ರಾಮದಲ್ಲಿ ನಮ್ಮ ಅಣ್ಣ ತಮ್ಮಂದಿರದೇ ಯಜಮಾನ್ಯ ನಮ್ಮ ಮಾತೆ ನಡೆಯಬೇಕು ನಮ್ಮ ಮಾತನ್ನು ಕೇಳದವರಿಗೆ ತಕ್ಕ ಶಾಸ್ತಿಯನ್ನು ಮಾಡುತ್ತೇವೆ” ಎಂದು ಬೆದರಿಸುತ್ತಾ ಪದೇ ಪದೇ ಗ್ರಾಮದಲ್ಲಿ ಗುಂಪು ಘರ್ಷಣೆ ಜಾತಿ ಜಾತಿಗಳ ಮದ್ಯೆ ಕಲಹ ಸೇರಿದಂತೆ ವಿನಾಕಾರಣ ಗಲಾಟೆಗೆ ಕಾರಣರಾಗಿರುತ್ತಾರೆ.
ದಯವಿಟ್ಟು ತಾವುಗಳು ಮೇಲ್ಕಂಡವರ ಮೇಲೆ ಕಾನೂನು ಕ್ರಮ ಭಯ ಭೀತಿಯಲ್ಲಿ ಬದುಕುತ್ತಿರುವ ಕೊಳಗಲ್ಲು ಗ್ರಾಮಸ್ತರಿಗೆ ರಕ್ಷಣೆಯನ್ನು ನೀಡಬೇಕೆಂದು ದೂರಿನಲ್ಲಿ ಕೊರಿದ್ದಾರೆ.
ಈ ಸಂದರ್ಭದಲ್ಲಿ ಕೊಳಗಲ್ಲು ಗ್ರಾಮದ ನೂರಾರು ಜನ ಸಾರ್ವಜನಿಕರಿದ್ದರು.

ಬಳ್ಳಾರಿ: ರಾಷ್ಟೀಯ ಹೆದ್ದಾರಿ 150-ಎ ರಸ್ತೆಯ ಸೇತುವೆ ಮರು ನಿರ್ಮಾಣ; 60 ದಿನಗಳ ಕಾಲ ವಾಹನ ಸಂಚಾರ ಮಾರ್ಗ ಬದಲಾವಣೆ