

4th June 2026

ಬಳ್ಳಾರಿ: ಇಲ್ಲಿನ ಬಳ್ಳಾರಿ ಧರ್ಮಕ್ಷೇತ್ರದ ಹಿರಿಯ ಧರ್ಮಗುರುಗಳಾದ ಪೂಜ್ಯ ಫಾದರ್ ಆರ್ಚಿಬಾಲ್ಡ್ ಕೊರಿಯ (ಆರ್ಚಿ ಫಾದರ್) ಅವರ ನಿಧನರಾಗಿದ್ದಾರೆ. ೮೬ ವರ್ಷ ವಯಸ್ಸಿನ ಪೂಜ್ಯರು ವಯೋಸಹಜ ಅನಾರೋಗ್ಯದಿಂದ ೨೦೨೬ರ ಜೂನ್ ೩ರಂದು ಬುಧವಾರ ತಡರಾತ್ರಿ ಭಗವಂತನಲ್ಲಿ ಲೀನರಾಗಿದ್ದಾರೆ.
ತಮ್ಮ ಸರಳ ಜೀವನ, ನಿಸ್ವಾರ್ಥ ಸೇವಾಭಾವ, ಅಚಲ ನಂಬಿಕೆ ಹಾಗೂ ಆಧ್ಯಾತ್ಮಿಕ ನಾಯಕತ್ವದ ಮೂಲಕ ಅವರು ಸಾವಿರಾರು ಭಕ್ತರ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು. ಅವರ ಅಗಲಿಕೆ ಬಳ್ಳಾರಿ ಧರ್ಮಕ್ಷೇತ್ರಕ್ಕೆ ಹಾಗೂ ಸಮಸ್ತ ಕ್ರೈಸ್ತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಪೂಜ್ಯರ ಪಾರ್ಥಿವ ಶರೀರವನ್ನು ೨೦೨೬ರ ಜೂನ್ ೬ರಂದು ಶನಿವಾರ ಬೆಳಿಗ್ಗೆ ೬.೦೦ ಗಂಟೆಗೆ `ಬೆಥನಿ' ಗುರುಗಳ ವಿಶ್ರಾಂತ ನಿಲಯದಲ್ಲಿ ಹಾಗೂ ಬೆಳಿಗ್ಗೆ ೮.೦೦ ಗಂಟೆಯಿAದ ಸಂತ ಅಂತೋನಿಯವರ ಪ್ರಧಾನ ದೇವಾಲಯ, ಕೌಲ್ ಬಜಾರ್, ಬಳ್ಳಾರಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು.
ಅವರ ಅಂತಿಮ ಸಂಸ್ಕಾರ ಮತ್ತು ಶ್ರದ್ಧಾಂಜಲಿ ವಿಧಿಗಳು ಅದೇ ದಿನ ಬೆಳಿಗ್ಗೆ ೧೦.೦೦ ಗಂಟೆಗೆ ಸಂತ ಅಂತೋನಿಯವರ ಪ್ರಧಾನ ದೇವಾಲಯದಲ್ಲಿ ನಡೆಯಲಿದ್ದು, ಬಳಿಕ ಕೌಲ್ ಬಜಾರ್ ಕ್ರೈಸ್ತರ ಸಮಾಧಿಯಲ್ಲಿ ಭೂಸಮಾಧಿ ಮಾಡಲಾಗುವುದು.
ಧರ್ಮಗುರುಗಳು, ಧಾರ್ಮಿಕ ಸಂಸ್ಥೆಗಳ ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಮತ್ತು ಅಂತಿಮ ಸಂಸ್ಕಾರದ ವಿಧಿಗಳಲ್ಲಿ ಭಾಗವಹಿಸಿ ಪೂಜ್ಯರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುವಂತೆ ಬಳ್ಳಾರಿ ಧರ್ಮಕ್ಷೇತ್ರದ ಗುರುಶ್ರೇಷ್ಠರಾದ ಫಾದರ್ ಓ.ವಿನ್ಸೆಂಟ್ ಅವರು ವಿನಂತಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ

ಮನೆಕಳ್ಳತನ ಪ್ರಕರಣ ಭೇದಿಸಿದ ಕೌಲ್ಬಜಾರ್ ಪೊಲೀಸರು; ₹16.80 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ವಶ

ಹೊರನಾಡ ಕನ್ನಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲು ಒತ್ತಾಯ ಆಂಧ್ರ ದೇಶ ಕನ್ನಡ ಶಿಕ್ಷಕರ ಸಂಘದಿಂದ ಸರ್ಕಾರಕ್ಕೆ ಮನವಿ