

7th June 2026

ಬಳ್ಳಾರಿ, ಜೂ. 7: ಸುಸ್ಥಿರ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಬಳಕೆ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆಗೆ ಇಂಜಿನಿಯರ್ಗಳು ಮತ್ತು ತಂತ್ರಜ್ಞರು ಹೆಚ್ಚಿನ ಆದ್ಯತೆ ನೀಡಬೇಕೆಂದು ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎ.ಎಸ್. ಸತ್ಯನಾರಾಯಣ ಕರೆ ನೀಡಿದರು.
ನಗರದ ಮೋಕಾ ರಸ್ತೆಯ ಸಂಗನಕಲ್ಲು ಸಮೀಪದ ಪ್ರಕೃತಿ ಲೇಔಟ್ನಲ್ಲಿರುವ ಎಸಿಸಿಇಎ ನಿವೇಶನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಜಿನಿಯರ್ಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಹಾಗೂ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಬೇಕು. ಜೊತೆಗೆ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಇಂಜಿನಿಯರ್ ಈಶ್ವರಗೌಡ ಮಾತನಾಡಿ, ಹಳೆಯ ಪತ್ರಿಕೆಗಳನ್ನು ಮರುಬಳಕೆ ಮಾಡಿ ಪೆನ್ಸಿಲ್ ತಯಾರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳನ್ನು ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಜೋನಲ್ ಕಮಿಷನರ್ ಗುರುರಾಜ್ ಸೌದಿ, ಎಇಇ ವಿರೇಶ್, ಹಿರಿಯ ಇಂಜಿನಿಯರ್ಗಳಾದ ಜೆ.ಎಲ್. ಶ್ರೀನಿವಾಸ್ ಹಾಗೂ ಸಿ.ಬಿ. ಶ್ರೀನಿವಾಸ ರೆಡ್ಡಿ ಸೇರಿದಂತೆ ಹಲವು ಗಣ್ಯರನ್ನು ಸಸಿಗಳನ್ನು ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಶಶಿಧರ ಗಜೇಂದ್ರಗಡ, ಕಾರ್ಯದರ್ಶಿ ರಾಕೇಶ್ ಬಿ.ಟಿ., ಜಂಟಿ ಕಾರ್ಯದರ್ಶಿಗಳಾದ ಸುಭಾಷ್ ಚಂದ್ರ ಹಾಗೂ ಆರ್. ಸುನೀಲ್, ಖಜಾಂಚಿ ನಿರಂಜನ್ ಪಿ.ಎಂ., ಸಹ ಖಜಾಂಚಿ ಬಿ. ಮೂರ್ತಿ ಸೇರಿದಂತೆ ಅಸೋಸಿಯೇಷನ್ ಸದಸ್ಯರು, ಇಂಜಿನಿಯರ್ಗಳು, ವಾಸ್ತುಶಿಲ್ಪಿಗಳು ಹಾಗೂ ಉದ್ಯಮಿಗಳು ಭಾಗವಹಿಸಿದ್ದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ, ಹಸಿರು ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸಲಾಯಿತು.

ಅಂದ್ರಾಳ್ ಹಳ್ಳದಲ್ಲಿ ಮಹಿಳೆಯ ಶವ ಪತ್ತೆ: ಕೊಲೆ, ಆತ್ಮಹತ್ಯೆ ಅಥವಾ ಅಪಘಾತವೇ? ಹಲವು ಅನುಮಾನಗಳಿಗೆ ಕಾರಣವಾದ ಘಟನೆ

ಗಂಗಾವತಿ: ಕ್ಷುಲ್ಲಕ ಜಗಳಕ್ಕೆ ಹೆತ್ತ ತಂದೆ, ಅಕ್ಕನನ್ನು ಕತ್ತು ಸೀಳಿ ಕೊಂದ ಪಾಪಿ ತಮ್ಮ!- ಆನ್ ಲೈನ್ ಗೇಮ್ ಬೆಡವೆಂದು ಬುದ್ದಿವಾದಕ್ಕೆ ಸಿಟ್ಟು

ಕೋಟ್ಯಂತರ ರೂ. ಮೌಲ್ಯದ ಆಸ್ತಿ ಸರ್ಕಾರದ ಸುಪರ್ದಿಗೆ ಮೆಸೋನಿಕ್ ಹಾಲ್ ಜಮೀನು ಜಿಲ್ಲಾಡಳಿತ ವಶಕ್ಕೆ

ಅಹಿಂದ ಕೇವಲ ರಾಜಕೀಯ ಘೋಷಣೆಯಾಗಬಾರದು; ಅದು ಸಮಾಜ ಪರಿವರ್ತನೆಯ ಮಹಾ ಚಳವಳಿಯಾಗಬೇಕು – ಹೊನ್ನುರಸ್ವಾಮಿ ಕೆ.ಟಿ