

10th June 2026

ಬಳ್ಳಾರಿ, ಜೂ.10: ಬಳ್ಳಾರಿಯ ಉಕ್ಕಿನ ಮಹಿಳೆ ಎಂದು ಗುರುತಿಸಿಕೊಂಡಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಧರ್ಮಪತ್ನಿ ಶ್ರೀಮತಿ ಗಾಲಿ ಲಕ್ಷ್ಮಿ ಅರುಣ ಅವರ ಜನ್ಮದಿನದ ಅಂಗವಾಗಿ, ಜಿಜೆಆರ್ ಅಭಿಮಾನಿ ಹಾಗೂ ಯುವ ಮುಖಂಡ ಹುಂಡೇಕರ್ ರಾಜೇಶ್ ಅವರ ನೇತೃತ್ವದಲ್ಲಿ ನಗರದ ಅನುಗ್ರಹ ಬುದ್ಧಿಮಾಂದ್ಯ ಮಕ್ಕಳ ಆಶ್ರಮದಲ್ಲಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ಆಶ್ರಮದ ಮಕ್ಕಳಿಗೆ ಅನ್ನದಾನ ಏರ್ಪಡಿಸಿ, ಸಿಹಿ, ಬ್ರೆಡ್ ಹಾಗೂ ಹಣ್ಣುಗಳನ್ನು ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಲ್ಲದೆ, ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಅವರ ಸಂತಸದಲ್ಲಿ ಭಾಗಿಯಾಗಿ, ಶ್ರೀಮತಿ ಗಾಲಿ ಲಕ್ಷ್ಮಿ ಅರುಣ ಅವರಿಗೆ ಶುಭಾಶಯಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹುಂಡೇಕರ್ ರಾಜೇಶ್, ಸಮಾಜದ ದುರ್ಬಲ ವರ್ಗಗಳ ಸೇವೆಯೇ ನಿಜವಾದ ಜನ್ಮದಿನದ ಆಚರಣೆಯಾಗಿದ್ದು, ಗಾಲಿ ಕುಟುಂಬದ ಸೇವಾ ಮನೋಭಾವದಿಂದ ಪ್ರೇರಿತರಾಗಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವುದಾಗಿ ಹೇಳಿದರು.
ಈ ಸೇವಾ ಕಾರ್ಯಕ್ರಮದಲ್ಲಿ ಮುಖಂಡರಾದ ಹುಂಡೇಕರ್ ರಾಕೇಶ್, ಸ್ವಾಮಿ ನಾಯಕ್, ಗಡಿಲಿಂಗ, ದಸ್ತಗಿರಿ, ರಾಮಾಂಜನಿ (ಕೌಲ್ ಬಜಾರ್), ನಾಗರಾಜ್ ವಿ., ಪವನ್ ಗೂಗುರಟಿ, ರಾಮಲಿ ನಾಯಕ್, ರಾಮಸ್ವಾಮಿ ನಾಯಕ್, ಮಿಥುನ್ ಕುಮಾರ್, ಮಾಭಾಶಾ, ಫೇಝನ್ ಸೇರಿದಂತೆ ಹಲವು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು.