

10th June 2026

ಬಳ್ಳಾರಿ, ಜೂ.10: ಗೋದ್ರೇಜ್ ಲಾಕ್ಸ್ ಮತ್ತು ಆರ್ಕಿಟೆಕ್ಚರಲ್ ಸೊಲ್ಯೂಷನ್ಸ್ ಆಶ್ರಯದಲ್ಲಿ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಗಳು ಮತ್ತು ವಾಸ್ತುಶಿಲ್ಪಿಗಳ (ACCEA) ಸಹಯೋಗದಲ್ಲಿ ಆಯೋಜಿಸಿದ್ದ ಎಂಜಿನಿಯರ್ಗಳು ಮತ್ತು ವಾಸ್ತುಶಿಲ್ಪಿಗಳ ಸಭೆ–2026 ಕಾರ್ಯಕ್ರಮವು ಬುಧವಾರ ಸಂಜೆ ನಗರದ ಹೋಟೆಲ್ ರಾಯಲ್ ಫೋರ್ಟ್ನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ನಿರ್ಮಾಣ ಕ್ಷೇತ್ರದಲ್ಲಿನ ನೂತನ ತಂತ್ರಜ್ಞಾನಗಳು, ಆಧುನಿಕ ಸುರಕ್ಷತಾ ಮಾನದಂಡಗಳು, ಸುಧಾರಿತ ಲಾಕಿಂಗ್ ವ್ಯವಸ್ಥೆಗಳು ಹಾಗೂ ವಾಸ್ತುಶಿಲ್ಪ ಕ್ಷೇತ್ರದ ಹೊಸ ಪರಿಹಾರಗಳ ಕುರಿತು ತಜ್ಞರು ಸಮಗ್ರ ಮಾಹಿತಿ ನೀಡಿದರು. ನಿರ್ಮಾಣ ವಲಯದಲ್ಲಿ ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ಕರೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಎಂಜಿನಿಯರ್ಗಳು, ವಾಸ್ತುಶಿಲ್ಪಿಗಳು ಹಾಗೂ ನಿರ್ಮಾಣ ಕ್ಷೇತ್ರದ ಪ್ರತಿನಿಧಿಗಳು ತಮ್ಮ ವೃತ್ತಿಪರ ಅನುಭವಗಳನ್ನು ಹಂಚಿಕೊಂಡು, ತಾಂತ್ರಿಕ ಜ್ಞಾನ ವಿನಿಮಯ ನಡೆಸಿದರು. ಕಾರ್ಯಕ್ರಮವು ಕ್ಷೇತ್ರದ ವೃತ್ತಿಪರರ ನಡುವೆ ಉತ್ತಮ ಸಂವಾದಕ್ಕೆ ವೇದಿಕೆಯಾಗಿದ್ದು, ಹೊಸ ತಂತ್ರಜ್ಞಾನಗಳ ಅಳವಡಿಕೆ ಕುರಿತು ಅರಿವು ಮೂಡಿಸಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂಜಿನಿಯರ್ ಎ.ಎಸ್. ಸತ್ಯನಾರಾಯಣ, ಉಪಾಧ್ಯಕ್ಷ ಎಂಜಿನಿಯರ್ ಶಶಿಧರ್ ಜಿ., ಕಾರ್ಯದರ್ಶಿ ಎಂಜಿನಿಯರ್ ರಾಕೇಶ್ ಬಿ.ಟಿ., ಜಂಟಿ ಕಾರ್ಯದರ್ಶಿಗಳಾದ ಆರ್. ಸುಭಾಷ್ ಚಂದ್ರ ಹಾಗೂ ಎಂಜಿನಿಯರ್ ಆರ್. ಸುನಿಲ್, ಖಜಾಂಚಿ ಎಂಜಿನಿಯರ್ ನಿರಂಜನ್ ಪಿ.ಎಂ., ಜಂಟಿ ಖಜಾಂಚಿ ಎಂಜಿನಿಯರ್ ಮೂರ್ತಿ ಬಿ. ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಗಾಲಿ ಲಕ್ಷ್ಮೀ ಅರುಣ ಜನ್ಮದಿನ: ಅನುಗ್ರಹ ಆಶ್ರಮದಲ್ಲಿ ಅನ್ನದಾನ, ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮ