

10th June 2026

ಬಳ್ಳಾರಿ, ಜೂ.10: ನಗರದ ರಾಯಲ್ ಪೋರ್ಟ್ ಹೋಟೆಲ್ನಲ್ಲಿ ಗೋದ್ರೆಜ್ ಲಾಕ್ಸ್ ಅಂಡ್ ಆರ್ಕಿಟೆಕ್ಚರಲ್ ಸೊಲ್ಯೂಷನ್ಸ್ ವತಿಯಿಂದ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಂಡ್ ಆರ್ಕಿಟೆಕ್ಟ್ಸ್ (ACCEA), ಬಳ್ಳಾರಿ ಸಹಯೋಗದಲ್ಲಿ ಆಯೋಜಿಸಿದ್ದ ಇಂಜಿನಿಯರ್ಗಳು ಮತ್ತು ವಾಸ್ತುಶಿಲ್ಪಿಗಳ ತಾಂತ್ರಿಕ ಸಮಾವೇಶ ಯಶಸ್ವಿಯಾಗಿ ನಡೆಯಿತು.
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸುರಕ್ಷತೆ, ಗುಣಮಟ್ಟ ಹಾಗೂ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮವನ್ನು ಗಣ್ಯರು ಸಾಂಪ್ರದಾಯಿಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಿವಿಲ್ ಇಂಜಿನಿಯರ್ಗಳು, ವಾಸ್ತುಶಿಲ್ಪಿಗಳು ಹಾಗೂ ನಿರ್ಮಾಣ ಕ್ಷೇತ್ರದ ವೃತ್ತಿಪರರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗೋದ್ರೆಜ್ ಲಾಕ್ಸ್ ಅಂಡ್ ಆರ್ಕಿಟೆಕ್ಚರಲ್ ಸೊಲ್ಯೂಷನ್ಸ್ ಸಂಸ್ಥೆಯ ತಜ್ಞರು ಆಧುನಿಕ ಲಾಕಿಂಗ್ ವ್ಯವಸ್ಥೆಗಳು, ಡಿಜಿಟಲ್ ಡೋರ್ ಲಾಕ್ಸ್, ಫೈರ್ ರೇಟೆಡ್ ಡೋರ್ಸ್, ಭದ್ರತಾ ಉಪಕರಣಗಳು ಹಾಗೂ ವಾಸ್ತುಶಿಲ್ಪಕ್ಕೆ ಪೂರಕವಾದ ನವೀನ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು. ಮನೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ಕೈಗಾರಿಕಾ ಸಂಕೀರ್ಣಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವ ಅಗತ್ಯವನ್ನು ಅವರು ಒತ್ತಿಹೇಳಿದರು.
ಇಂದಿನ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೇವಲ ವಿನ್ಯಾಸ ಮತ್ತು ಸೌಂದರ್ಯಕ್ಕಷ್ಟೇ ಸೀಮಿತವಾಗದೇ, ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಗುಣಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಗೋದ್ರೆಜ್ ಸಂಸ್ಥೆಯ ಉತ್ಪನ್ನಗಳು ವಿಶ್ವಾಸಾರ್ಹ ಹಾಗೂ ಆಧುನಿಕ ಪರಿಹಾರಗಳನ್ನು ಒದಗಿಸುತ್ತಿವೆ ಎಂದು ತಜ್ಞರು ತಿಳಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ಎಸಿಸಿಇಎ ಅಧ್ಯಕ್ಷ ಎರ್. ಎ.ಎಸ್. ಸತ್ಯನಾರಾಯಣ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಎರ್. ಶಶಿಧರ್ ಜಿ., ಕಾರ್ಯದರ್ಶಿ ಎರ್. ರಾಕೇಶ್ ಬಿ.ಟಿ., ಜಂಟಿ ಕಾರ್ಯದರ್ಶಿಗಳಾದ ಆರ್. ಸುಭಾಷ್ ಚಂದ್ರ ಹಾಗೂ ಎರ್. ಆರ್. ಸುನೀಲ್, ಖಜಾಂಚಿ ಎರ್. ನಿರಂಜನ್ ಪಿ.ಎಂ., ಜಂಟಿ ಖಜಾಂಚಿ ಎರ್. ಮೂರ್ತಿ ಬಿ. ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾವೇಶದ ಅಂಗವಾಗಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಂಜಿನಿಯರ್ಗಳು ಮತ್ತು ವಾಸ್ತುಶಿಲ್ಪಿಗಳು ವಿವಿಧ ತಾಂತ್ರಿಕ ವಿಷಯಗಳ ಕುರಿತು ತಮ್ಮ ಸಂದೇಹಗಳನ್ನು ವ್ಯಕ್ತಪಡಿಸಿದರು. ಗೋದ್ರೆಜ್ ಸಂಸ್ಥೆಯ ತಜ್ಞರು ಸಮಗ್ರ ಮಾಹಿತಿಯೊಂದಿಗೆ ಉತ್ತರಿಸಿ ವೃತ್ತಿಪರರಿಗೆ ಮಾರ್ಗದರ್ಶನ ನೀಡಿದರು.
ನವೀನ ತಂತ್ರಜ್ಞಾನ, ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಈ ತಾಂತ್ರಿಕ ಸಮಾವೇಶವು ನಿರ್ಮಾಣ ಕ್ಷೇತ್ರದ ವೃತ್ತಿಪರರಿಗೆ ಪರಿಣಾಮಕಾರಿ ವೇದಿಕೆಯಾಗಿದ್ದು, ಯಶಸ್ವಿಯಾಗಿ ನೆರವೇರಿತು.

ಗಾಲಿ ಲಕ್ಷ್ಮೀ ಅರುಣ ಜನ್ಮದಿನ: ಅನುಗ್ರಹ ಆಶ್ರಮದಲ್ಲಿ ಅನ್ನದಾನ, ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮ