

14th June 2026

ಬಳ್ಳಾರಿ,ಜೂ.14: ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ 23 ಮಂದಿ ಸಾಧಕರಿಗೆ ಸೂರ್ಯ ನ್ಯೂಸ್ ಕನ್ನಡ ಡಿಜಿಟಲ್ ಮಾಧ್ಯಮದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ನಗರದ ಬಾಲ ಹೋಟೆಲ್ನಲ್ಲಿ ಭಾನುವಾರ ನಡೆದ ಸಮಾರಂಭವು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾ ವಿರಕ್ತ ಮಠ, ಸೋಮಸಮುದ್ರ ಗ್ರಾಮದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಶ್ರೀಧರಗಡ್ಡೆ ಗ್ರಾಮದ ಮರಿಕೊಟ್ಟೂರು ದೇವರು ಅವರ ಸಾನ್ನಿಧ್ಯದಲ್ಲಿ ನಡೆಯಿತು. ಜಿಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜೆ.ಕೆ. ಸ್ವಾಮಿ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ. ಗಾದೆಪ್ಪ ಮತ್ತು ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಅವರಿಂದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಭಾರಿಕರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್. ಈರನ ಗೌಡ, ಜಿಲ್ಲಾ ಗ್ಯಾರೆಂಟಿಗಳ ಉಪಾಧ್ಯಕ್ಷ ಸಂಗನಕಲ್ಲು ವಿಜಯ್ ಕುಮಾರ್, ಕೆಎಸ್ಜೆ ಯೂನಿಯನ್ ಜಿಲ್ಲಾಧ್ಯಕ್ಷ ಎರಗುಡಿ ರಮೇಶ್, ಸಾಮಾಜಿಕ ಹೋರಾಟಗಾರ ಸಿದ್ದೇಶ್ ಊಳೂರು ಹಾಗೂ ಚಲನಚಿತ್ರ ನಿರ್ದೇಶಕ ಕೃಷ್ಣ ಮೋಹನ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಪ್ರಶಸ್ತಿ ಪುರಸ್ಕೃತರು: ಶ್ರೀಮತಿ ಎಸ್. ರತ್ನಮ್ಮ (ಕರುಣಾಮಯಿ ರತ್ನ ಪ್ರಶಸ್ತಿ), ಹೆಚ್. ತಿಮ್ಮನ ಗೌಡ (ಕೃಷಿ ರತ್ನ ಪ್ರಶಸ್ತಿ), ಗೋನಾಳ್ ನಾಗಭೂಷಣ ಗೌಡ (ಗ್ರಾಮಾಭಿವೃದ್ಧಿ ರತ್ನ ಪ್ರಶಸ್ತಿ), ವಿ. ದೊಡ್ಡ ಕೇಶವ (ರೈತ ಸೇವಾ ರತ್ನ ಪ್ರಶಸ್ತಿ), ಕಟ್ಟೇ ಸ್ವಾಮಿ (ಕರಾಟೆ ಕಿಂಗ್ ಪ್ರಶಸ್ತಿ), ಡಾ. ಸಿ. ಮುನಿಸ್ವಾಮಿ ಕಪ್ಪಗಲ್ಲು (ಮಾನವತಾ ಗೌರವ ಪ್ರಶಸ್ತಿ), ಎಂ. ರಾಮಾಂಜನೇಯ (ಜನಸೇವಾ ರತ್ನ ಪ್ರಶಸ್ತಿ), ಎಂ.ಜಿ. ಕನಕ (ಮಾನವತಾ ರತ್ನ ಪ್ರಶಸ್ತಿ), ನಾಗಲಕೆರೆ ಗೋವಿಂದ (ಅಭಿವೃದ್ಧಿ ನಾಯಕ ಪ್ರಶಸ್ತಿ), ವಿಎನ್. ಶ್ರೀನಾಥ್ (ಸಮಾಜ ಸೇವಾ ಗೌರವ ಪ್ರಶಸ್ತಿ), ಜಿ.ಎಸ್. ಈರನ ಗೌಡ (ಜನಸೇವಾ ಗೌರವ ಪ್ರಶಸ್ತಿ), ಗೋವರ್ಧನ (ದಲಿತ ಸೇವಾ ರತ್ನ ಪ್ರಶಸ್ತಿ), ಚಾನಾಳ ಅಮರೇಶಪ್ಪ (ಆಧ್ಯಾತ್ಮಿಕ ಸೇವಾ ರತ್ನ ಪ್ರಶಸ್ತಿ), ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ (ಜಾನಪದ ಕಲಾ ರತ್ನ ಪ್ರಶಸ್ತಿ), ಡಿ. ಜ್ಯೋತಿ (ನಾರಿ ಶಕ್ತಿ ರತ್ನ ಪ್ರಶಸ್ತಿ), ಹೆಚ್. ಮರಿಸ್ವಾಮಿ (ಮಾಧ್ಯಮ ಸೇವಾ ರತ್ನ ಪ್ರಶಸ್ತಿ), ವಿಜಯಲಕ್ಷ್ಮಿ (ಆರೋಗ್ಯ ಜಾಗೃತಿ ಪ್ರಶಸ್ತಿ), ಮಹಮ್ಮದ್ ಇಷಾಕ್ (ಜನಸೇವಾ ರತ್ನ ಪ್ರಶಸ್ತಿ), ಅಸ್ಲಾಂ ಭಾಷ (ಮಾಧ್ಯಮ ಸೇವಾ ರತ್ನ ಪ್ರಶಸ್ತಿ), ಎನ್. ಕೃಷ್ಣ ಮೋಹನ್ ಶೆಟ್ಟಿ (ರೈತ ಚೇತನ ರತ್ನ ಪ್ರಶಸ್ತಿ), ಕೆ.ಟಿ. ಹೊನ್ನೂರ್ ಸ್ವಾಮಿ (ನಿರ್ಭೀತ ವರದಿಗಾರ ಪ್ರಶಸ್ತಿ), ಡಿ. ಪರಶುರಾಮ (ಮಾನವತಾ ಸೇವಾ ಪ್ರಶಸ್ತಿ) ಹಾಗೂ ನಾಗರತ್ನ ದೊಡ್ಡಮನಿ (ಜೀವ ರಕ್ಷಕ ಸೇವಾ ರತ್ನ ಪ್ರಶಸ್ತಿ) ಪ್ರದಾನ ಮಾಡಲಾಯಿತು.
ಸೂರ್ಯ ನ್ಯೂಸ್ ಕನ್ನಡ ಡಿಜಿಟಲ್ ಮಾಧ್ಯಮದ ಸಂಪಾದಕ ಹಾಗೂ ವರದಿಗಾರ ಹೇಮಂತ್ ರಾಜ್ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜಸೇವಕರು, ಪತ್ರಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಸೂರ್ಯ ನ್ಯೂಸ್ ಕನ್ನಡ ವಾರ್ಷಿಕೋತ್ಸವದಲ್ಲಿ ಹೊನ್ನುರಸ್ವಾಮಿ ಕೆ.ಟಿ. ಅವರಿಗೆ “ನಿರ್ಭೀತ ವರದಿಗಾರ ರತ್ನ” ಪ್ರಶಸ್ತಿ ಪ್ರದಾನ