

21st June 2026

ಬಳ್ಳಾರಿ, ಜೂ.21: ಯೋಗವು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಸಮತೋಲನದಲ್ಲಿಡುವ ಪ್ರಾಚೀನ ಭಾರತೀಯ ಜೀವನ ಪದ್ಧತಿಯಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಯೋಗಾಭ್ಯಾಸ ಮಾಡುವುದು ಅಗತ್ಯ ಎಂದು ಜಿಲ್ಲಾ ಪತಂಜಲಿ ಸೋಷಿಯಲ್ ಮೀಡಿಯಾ ಪ್ರಭಾರಿ ಗೂಳೆಪ್ಪ ಬೆಳ್ಳೇಕಟ್ಟೆ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಸಂಗನಕಲ್ಲು ಗುಡ್ಡದಲ್ಲಿರುವ ದೇವನಾಮಪ್ರಿಯ ಬಯಲು ಬೌದ್ಧ ವಿಹಾರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗವು ಕೇವಲ ವ್ಯಾಯಾಮವಲ್ಲ.
ಉಸಿರಾಟ, ಧ್ಯಾನ ಹಾಗೂ ವಿವಿಧ ಆಸನಗಳ ಮೂಲಕ ದೇಹ ಮತ್ತು ಮನಸ್ಸನ್ನು ಒಗ್ಗೂಡಿಸುವ ಶಕ್ತಿಯುತ ಸಾಧನವಾಗಿದೆ.
ಇಂದಿನ ಒತ್ತಡದ ಜೀವನಶೈಲಿಯಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಪರಿಣಾಮಕಾರಿ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ಪ್ರೋಟೋಕಾಲ್ ಅನುಸಾರ ಯೋಗಾಭ್ಯಾಸ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಸಂಗನಕಲ್ಲು ವಿಜಯಕುಮಾರ್, ದೇವನಾಮಪ್ರಿಯ ಬಯಲು ಬೌದ್ಧ ವಿಹಾರ ಟ್ರಸ್ಟ್ನ ಸಂಚಾಲಕ ಕಪ್ಪಗಲ್ಲ ಓಂಕಾರಪ್ಪ, ನಾಗರಾಜ್, ದೀಕ್ಷಾ ಗ್ರಾಫಿಕ್ಸ್ ಶಂಕರ್, ಯೋಗ ಶಿಕ್ಷಕರಾದ ಬಿ. ಧನಂಜಯ್, ಬೈಲೂರು ಲಿಂಗಪ್ಪ, ಕೊಳಗಲ್ಲು ಹನುಮಂತ, ಕಪ್ಪಗಲ್ಲ ಹೊನ್ನೂರಪ್ಪ, ಲಿಂಗದೇವನಹಳ್ಳಿ ಚಂದ್ರ, ಸಂಗನಕಲ್ಲು ಚಂದ್ರ, ಗೋಟೂರು ಚಂದ್ರ, ಕಪ್ಪಗಲ್ ಮಹೇಂದ್ರ, ಮೊಕ ನಾಗೇಂದ್ರ, ಬಳ್ಳಾರಿ ರುದ್ರೇಶ್, ಸೂರಿ ಹಾಗೂ ಶಿಕ್ಷಕ ಕೊಲಗುಂದಿ ತಿಪ್ಪೇಸ್ವಾಮಿ ಸೇರಿದಂತೆ ಸುಮಾರು 40 ಮಂದಿ ಭಾಗವಹಿಸಿ ಯೋಗಾಭ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಯೋಗದ ಮಹತ್ವ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಅರಿವು ಮೂಡಿಸಲಾಯಿತು.

ಶ್ರೀ ಕ್ಷೇತ್ರ ಹುಲಿಗೇಮ್ಮ ದೇವಸ್ಥಾನ ಹುಂಡಿ ಎಣಿಕೆ 20 ದಿನದಲ್ಲಿ ರೂ.1.3 ಕೋಟಿ ಹಣ ಸಂಗ್ರಹ- 70 ಗ್ರಾಂ ಕಚ್ಚಾ ಬಂಗಾರ 3 ಕೆಜಿ ಬೆಳ್ಳಿ ದೇಣಿಗೆ