25th April 2025
ಚಡಚಣ: ವಿಜಯಪುರ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಹೊರ್ತಿ, ಧೂಳಖೇಡ ಮಹಾ ಮಾರ್ಗದ ಬದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಇಂಡಿ ವತಿಯಿಂದ ೨೦೨೫_೨೬ ನೇ ಸಾಲಿನ ಮುಂಗಾರು ಹಂಗಾಮಿನ ಸಸಿ ನೆಡುವಿಕೆಯನ್ನು ಚಡಚಣ ತಾಪಂ ಇಒ ಸಂಜಯ ಖಡಗೇಕರ ಅವರು ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ನೆಲಕ್ಕೆ ಬೀಳುವ ಪ್ರತಿ ಹನಿಯನ್ನೂ ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ತೀರ ಮುಂಚಿತವಾಗಿ ಈ ವರ್ಷ ಸಸಿ ನೆಡುವುದನ್ನು ನೀರುಣಿಸುವ ಮುಖಾಂತರ ಪ್ರಾರಂಭಿಸಲಾಗಿದೆ. ಮುಂಚಿತವಾಗಿ ನೆಟ್ಟ ಸಸಿಗಳು ಅಪರೂಪಕ್ಕೊಮ್ಮೆ ಬೀಳುವ ಪ್ರತಿ ಹನಿಯನ್ನೂ ಕುಡಿದು, ಆರೋಗ್ಯಯುತವಾಗಿ, ಶಕ್ತಿಯುತವಾಗಿ ಬೆಳೆದು ಬಹು ಬೇಗನೆ ಮರಗಳಾಗಿ ನಮ್ಮ ಸುತ್ತ-ಮುತ್ತಲಿನ ಪರಿಸರ ಹಸಿರು ಮತ್ತು ಉಸಿರನ್ನು ನೀಡುತ್ತದೆ. ಈ ಭೂಮಿಯ ಮೇಲೆ ಇರುವ ಪರಿಸರದ ರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ. ಈ ದೃಷ್ಟಿಯಿಂದ ಸಾಮಾಜಿಕ ಅರಣ್ಯ ಇಲಾಖೆಯ ಪರಿಸರ ಕಳಕಳಿ, ಸಂರಕ್ಷಣೆ ಕಾರ್ಯ ಪ್ರಶಂಸನೆಗೆ ಅರ್ಹವಾದುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀ ಮಂಜುನಾಥ ಧುಳೆ , ಗಸ್ತು ವನಪಾಲಕ ಶ್ರೀ ಡಿ ಎ ಮುಜಗೊಂಡ, ನಾಗೇಶ್ ಬಿರಾದಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂಜಯ ವಠಾರ ಸೇರಿದಂತೆ ಸಾರ್ವಜನಿಕರು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
22nd April 2025
ಚಡಚಣ : ಚಡಚಣ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಸದರಿ ಅರ್ಜಿಗಳನ್ನು ಪರಿಶೀಲಿಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಚಡಚಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಸಿಡಿಪಿಓ ಸಾಹೇಬಗೌಡ ಝುಂಜರವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾತ್ಕಾಲಿಕ ಆಯ್ಕೆ ಪಟ್ಟಿಗೆ ಯಾವುದಾದರೂ ಆಕ್ಷೇಪಣೆಗಳಿದ್ದರೆ ಏ.೨೧ ರಿಂದ ಮೇ.೨ ರೊಳಗಾಗಿ (ಕಛೇರಿವೇಳೆಯಲ್ಲಿ)ಸೂಕ್ತ ದಾಖಲಾತಿಗಳೊಂದಿಗೆ ಆಕ್ಷೇಪಣೆಗಳನ್ನು ಚಡಚಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸಿಡಿಪಿಓ ಸಾಹೇಬಗೌಡ ಝುಂಜರವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
12th April 2025
ಚಡಚಣ: ಇಂದಿನ ಮಹಿಳೆಯರು ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಗುರಿ ಸಾಧಿಸಿದ್ದಾರೆ ಮತ್ತು ಸಾಧಿಸುತ್ತಿದ್ದಾರೆ ಎಂದರೆ ಅಜ್ಞಾನದ ಅಂಧಕಾರವನ್ನು ತೊಲಗಿಸಿ ಮಹಿಳೆ ಮತ್ತು ಹೆಚ್ಚಾಗಿ ದಲಿತರಿಗೆ ಜ್ಞಾನದ ಬೆಳಕನ್ನು ನೀಡಿದ ಮಹಾ ಪುರುಷ ಜ್ಯೋತಿಬಾ ಫುಲೆ ಮಹಿಳೆ ಅಡುಗೆ ಮನೆಗೆ ಮಾತ್ರ ಸಿಮಿತವಲ್ಲ ಎಂದು ದೇವರನಿಂಬರಗಿ ಗ್ರಾಮ ಪಂಚಾಯತ ಅಧ್ಯಕ್ಷ ಭೀಮನಗೌಡ ಬೀರಾದಾರ ಹೇಳಿದರು.
ದೇವರನಿಂಬರಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಜ್ಯೋತಿಬಾ ಫುಲೆ ವೃತ್ತದಲ್ಲಿ ಜಯಂತಿಯನ್ನು ಆಚರಿಸಿ ಫೊಟೊ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾಜಿ ಗ್ರಾ.ಪಂ.ಅಧ್ಯಕ್ಷ ರಾಜು ಸಿಂಗೆ ಮಾತನಾಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟು ಇಂದು ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದಡಿ ಇಡುತ್ತಿರುವದಕ್ಕೆ ಕಾರಣವೆ ನಮ್ಮ ಜ್ಯೋತಿಬಾ ಫುಲೆ ಅವರ ದೂರದೃಷ್ಟಿಯೆ ಕಾರಣ ಎಂದರು.
ಈ ಕಾರ್ಯಕ್ರಮದಲ್ಲಿ ಮಾಳಿ ಸಮಾಜದ ಅಧ್ಯಕ್ಷ ಚಂದ್ರಕಾAತ ಮಾಳಿ,ಗ್ರಾ.ಪಂ.ಸದಸ್ಯ ಬೀರಪ್ಪ ಸಲಗರ,ಎಲ್ಲ ಯುವಕರು ಇದ್ದರು.
11th April 2025
ಚಡಚಣ: ಮಹಾವೀರರ ಮುಖ್ಯ ತತ್ವಗಳಲ್ಲಿ ಅಹಿಂಸೆಯೂ ಒಂದು.ಆತ್ಮವು ಪರಿಶುದ್ಧವಾಗಿದೆ ಮತ್ತು ಅನಂತವಾಗಿದೆ ಮತ್ತು ಸರಿಯಾದ ನಂಬಿಕೆ,ಜ್ಞಾನ ಮತ್ತು ನಡವಳಿಕೆಯ ಮೂಲಕ ಅದು ಮುಕ್ತಿಯನ್ನು ಪಡೆಯಬಹುದೆಂದು ಅವರು ನಂಬಿದ್ದರು ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಭಗವಾನ ಮಹಾವೀರ ಜಯಂತಿ ಉದ್ದೇಶಿಸಿ ಮಾತನಾಡಿದರು.ಮಹಾವೀರರು ಜೈನ ಧರ್ಮದ ಇಪ್ಪತ್ನಾಲ್ಕನೇ ಮತ್ತು ಕೊನೆಯ ತೀರ್ಥಂಕರರೆನ್ನುವ ಹೆಮ್ಮೆಗೆ ಪಾತ್ರರಾಗಿದ್ದಾರೆ ಎಂದರು.
ಶಿಕ್ಷಕ ಡಿ ಎಸ್ ಬಗಲಿ ಮಾತನಾಡಿ ಮಹಾವೀರರು ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಕುಂದಲ ಗ್ರಾಮದಲ್ಲಿ ಜನಿಸಿದರು.ಮಹಾವೀರರು ತಮ್ಮ ಜೀವನದ ಮೂಲಕ ಅಹಿಂಸೆ,ಸತ್ಯ,ಕರುಣೆ ಮತ್ತು ಸ್ವಯಂ ಕೃಷಿಯ ಅದ್ಭುತ ತತ್ವಗಳನ್ನು ಪ್ರಸ್ತುತಪಡಿಸಿದರು.ಅವರ ಭೋದನೆಗಳು ಇಂದಿಗೂ ಪ್ರತಿಯೊಬ್ಬ ವ್ಯಕ್ತಿಗೂ ಸ್ಪೂರ್ತಿಯಾಗಿದೆ ಎಂದರು.
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ ಅಹಿಂಸೆಯೇ ಧರ್ಮದ ಮಾರ್ಗವೆಂದವರಲ್ಲಿ ಮಹಾವೀರರೂ ಒಬ್ಬರು.ಅವರು ಅಹಿಂಸೆಯನ್ನೇ ಶ್ರೇಷ್ಠ ಧರ್ಮವೆಂದು ಬೋಧಿಸಿದ್ದಾರೆ.ಅಹಿಂಸೆಯೆAದರೆ ಕೇವಲ ದೈಹಿಕ ಹಿಂಸೆ ಅಥವಾ ನೋವಿಗೆ ಮಾತ್ರ ಸೀಮಿತವಾಗಿಲ್ಲ.ಅದು ವ್ಯಕ್ತಿಯ ಆಲೋಚನೆಗಳು,ಮಾತು ಮತ್ತು ಕಾರ್ಯಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಾಜಿ ಗಾಡಿವಡ್ಡರ,ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ಅಡುಗೆ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.
9th April 2025
ಚಡಚಣ : ಯುವಕರು ಮಾನಸಿಕ, ದೈಹಿಕವಾಗಿ ಸದೃಡರಾಗಲು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಸದೃಡರಾಗಲು ಸಾಧ್ಯ ಎಂದು ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಸುರೇಶಗೌಡ ಪಾಟೀಲ ಹೇಳಿದರು.
ಧೂಳಖೇಡ ಗ್ರಾಮದ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಶ್ರೀ ಶಂಕರಲಿAಗ ಜಾತ್ರಾ ನಿಮಿತ್ಯವಾಗಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಾಮೆಂಟ್ಗೆ ಚಾಲನೆ ನೀಡಿ ಮಾತನಾಡಿ, ಯುವಕರು ಶಿಕ್ಷಣ ಜೊತೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುವದರಿಂದ ದೈಹಿಕ ಪರೀಕ್ಷೆಯಂತ ಸರ್ಕಾರಿ ಹುದ್ದೆ ಪಡೆಯುವಲ್ಲಿ ಸಹಕಾರಿಯಾಗುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಯುವಕರು ಸರ್ಕಾರದ ಪೊಲೀಸ್, ರೈಲ್ವೆ, ಆರ್ಮಿಯಂತ ನಾನಾ ಹುದ್ದೆಯಲ್ಲಿ ದೈಹಿಕ ಪರೀಕ್ಷೆ ಪಾಸಾಗಿ ಇವತ್ತಿನ ದಿನ ಅನೇಕ ಇಲಾಖೆಯಲ್ಲಿ ಗ್ರಾಮದ ಯುವಕರು ಸೇವೆ ಸಲ್ಲುಸುತ್ತಿದ್ದಾರೆ. ಯುವಕರು ಕ್ರೀಡಾಮನೋಭಾದಿಂದ ದೈಹಿಕವಾಗಿ, ಮಾನಸಿಕವಾಗಿ, ಸದೃಡರಾಗಲು ಸಾಧ್ಯ ಕ್ರೀಡೆಗಾಗಿ ಯಾವತ್ತು ಪ್ರೋತ್ಸಾಹ ಇರುತ್ತದೆ. ಆದರೆ ಯುವಕರು ದುಶ್ಚಟಗಳಿಂದ ದೂರವಿರಿ ಎಂದರು.
ಧೂಳಖೇಡ ಪ್ರಿಮಿಯಂ ಲೀಗ್À ೫ ನೇ ಆವೃತಿಯ ಪ್ರಥಮ ಬಹುಮಾನ ೫೦೦೦೦ ರೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ. ರವಿಗೌಡ ವ್ಹಿ ಪಾಟೀಲ ಇವರ ಸ್ಮರಣಾರ್ಥವಾಗಿ ಮತ್ತು ಟ್ರೋಪಿ, ದ್ವಿತೀಯ ಬಹುಮಾನ ಯುವ ಮುಖಂಡ ದ್ಯಾಮಗೊಂಡ ಕಾಂಬಳೆ ೨೫೦೦೦ ರೂ, ತೃತೀಯ ಬಹುಮಾನ ಜಿಲ್ಲಾ ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ವಿಜಯದಾರ ೧೧೦೦೦ ರೂ, ನಗದು ಮತ್ತು ಟ್ರೋಪಿ ಬಹುಮಾನಗಳಾಗಿ ಆಯೋಜನೆಸಲಾಗಿದೆ.
ಈ ವೇಳೆ ಗ್ರಾಪಂ ಪಿಡಿಓ ಲಾಲಾಸಾಹೇಬ ನದಾಫ್, ಗ್ರಾಪಂ ಅಧ್ಯಕ್ಷ ದಿಲೀಪ ಶಿವಶರಣ, ಸೋಮುಗೌಡ ಪಾಟೀಲ, ಪ್ರಭು ನಾಟೀಕರ, ಸಚೀನ ಬಿರಾದಾರ, ಅರುಣು ಪಾಟೀಲ, ಪರಮೇಶ್ವರ ತಳವಾರ, ಅನೀಲ ಕ್ಷತ್ರಿ, ಸುರಾಜ್ ಮುಲ್ಲಾ, ಚಂದ್ರಕಾAತ ಕೊಡತೆ, ಮಹೇಶ ಭೈರಗೊಂಡ, ರಾಜಕುಮಾರ ಕಾಳೆ, ಮಂಜು ಧೂಳಖೇಡಕರ, ಮತ್ತಿತರರು ಇದ್ದರು..
8th April 2025
ಚಡಚಣ: ಚಡಚಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಎಸ್ ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದವತಿಯಿಂದ ಸೋಮವಾರ ನಡೆದ ಉದ್ಯೋಗ ಮೇಳದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವದರ ಮೂಲಕ ಸಂಸದ ರಮೇಶ ಜಿಗಜಿಣಗಿ ಅವರು ಚಾಲನೆ ನೀಡಿದರು.
ಸಂಸದ ರಮೇಶ ಜಿಗಜಿಣಗಿ ಅವರು ಮಾತನಾಡಿ ಕೌಶಲ್ಯಾಭಿವೃದ್ಧಿ ನಮ್ಮ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ(ಕಾAತಾ) ನಾಯಕ ಅವರು ೨೦೨೫ ನೇ ಸಾಲೀನ ಪ್ರಥಮ ಉದ್ಯೋಗಮೇಳವನ್ನು ಚಡಚಣದಲ್ಲಿ ಆಯೋಜಿಸುವ ವಿಚಾರ ಹೇಳಿದಾಗ ನಾನು ಅದಕ್ಕೆ ಒಪ್ಪಿಗೆ ಸೂಚಿಸಿದ್ದೆ ಅದರಂತೆ ಗಡಿಭಾಗದವರು ಸೇರಿದಂತೆ ಚಡಚಣದ ಸುಮಾರು ಜನ ಉದ್ಯೋಗ ಪಡೆದುಕೊಳ್ಳುತ್ತಾರೆ ಎಂದರು.
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ(ಕಾAತಾ) ನಾಯಕ ಅವರು ಮಾತನಾಡಿ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕೆಎಸ್ಡಿಸಿ ಅಡಿಯಲ್ಲಿ ನನ್ನ ವೃತ್ತಿ ನನ್ನ ಆಯ್ಕೆ ಎಂಬುದು ಯುವಕರಿಗೆ ಅಷ್ಟೆಅಲ್ಲ ಮಹಿಳೆಯರಿಗು ಅನುಕೂಲವಾಗಲಿದೆ ಅಡಿಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರು ಸಾಧನೆ ಮಾಡುತ್ತಲಿದ್ದಾರೆ ಫ್ರಾನ್ಸ್ ನಲ್ಲಿ ಇತ್ತಿಚೆಗೆ ನಡೆದ ರ್ಲ್÷್ಡ ಸ್ಕಿಲ್ ಕಾಂಪಿಟೇಶನ್ ನಲ್ಲಿ ನಮ್ಮ ಭಾರತದ ೭ ಜನ ಆಯ್ಕೆಆಗಿದ್ದರು ಅದರಲ್ಲಿ ೪ ಜನ ಸ್ಕಿಲ್ ಅವರ್ಡ್ ಪಡೆದಿದ್ದಾರೆ ಎಂದರು.
ಮುAದಿನ ದಿನಮಾನಗಳಲ್ಲಿ ಕಲಿಕೆ ಜೊತೆ ಕೌಶಲ್ಯ ತರಬೇತಿಯನ್ನು ಅಕ್ಕಮಹಾದೇವಿ ವಿ ವಿ ಯಲ್ಲಿ ಅಳವಡಿಸಲಿದ್ದೆವೆ ಎಂದರು.ಮತ್ತು ಸ್ಕಿಲ್ ಟ್ರೇನಿಂಗ್ ಜೊತೆಗೆ ನೋಕರಿಯನ್ನು ಒದಗಿಸುವ ಜವಾಬ್ದಾರಿಯನ್ನು ಕಂಪನಿಗಳಿಗೆ ಜವಾಬ್ದಾರಿಯನ್ನು ಕೊಡಲಿದ್ದೆವೆ ಎಂದರು. ವಿದೇಶಗಳಲ್ಲಿಯು ನೋಕರಿ ಲಭ್ಯವಿದೆ ಸ್ಕಿಲ್ ಜೊತೆಗೆ ಪ್ರಯತ್ನಕೋಡಾ ಮಾಡಬೇಕಾಗುತ್ತದೆ ಅವಕಾಶವನ್ನು ನಾವು ಕಲ್ಪಿಸಿಕೊಡುತ್ತೆವೆ ಎಂದರು.
ಈ ಮೇಳದಲ್ಲಿ ಉದ್ಯೋಗ ಸಿಗದಿದ್ದರು ನಿರಾಳತೆ, ಹತಾಶರಾಗುವದು ಬೇಡಾ ೩೦೦೦ ಉದ್ಯೋಗ ಖಾಲಿ ಇವೆ ಎಂದು ಕಂಪನಿಯವರು ಹೇಳಿದ್ದಾರೆ ಆದರೆ ಕೌಶಲ್ಯ ಕೊರತೆಯಿಂದ ನೋಕರಿ ಸಿಗದೆಇರಬಹುದು ದಿ.೧೬ ರಂದು ಕಲಬುರ್ಗಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ ಇದ್ದು ಅಲ್ಲಿ ಇಂಜಿನೀಯರ್,ಮೆಡಿಕಲ್ ದವರಿಗು ಉದ್ಯೋಗ ಸಿಗಲಿದೆ ಎಂದರು.ಉದ್ಯೋಗ ಸಿಕ್ಕರು ಅರ್ಧಕ್ಕೆ ಕೆಲವಬ್ಬರು ಬಿಟ್ಟುಬರುತ್ತಾರೆ ಕಷ್ಟಪಟ್ಟರೆ ಸುಖಸಿಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆನ್ನೂರ ಮಾತನಾಡಿ ೬೦% ಯುವಕರ ನಾಡು ನಮ್ಮ ಭಾರತ ದೇಶಾಭಿವೃದ್ಧಿ,ಸಮಾಜಾಭಿವೃದ್ಧಿ ಯುವಕರು ಉದ್ಯೋಗ ಮಾಡುತ್ತಿದ್ದರೆ ಮಾತ್ರ ಸಮೃದ್ಧ ದೇಶವಾಗಲಿಕ್ಕೆ ಸಾಧ್ಯ ಉದ್ಯೋಗದಲ್ಲಿಯು ಸ್ಪರ್ಧೆಯಿದ್ದು ನಮ್ಮ ವಿಜಯಪುರದ ಯುವಕರು ಕಷ್ಟಾಳುಗಳಿದ್ದು ಕರ್ನಾಟಕದ ಯಾವ ಮೂಲೆಗೆ ಹೋದರು ಸುಮಾರು ನಾಲ್ಕು ಜನರು ಸಿಗುತ್ತಾರೆ.ಅದಲ್ಲದೆ ೨.೬% ಕೌಶಲ್ಯ ಪಡೆದವರು ಸಿಗುತ್ತಾರೆ ಅದನ್ನು ಜಪಾನ್,ಚಿನಾ ದೇಶಕ್ಕೆ ಹೋಲಿಸಿದರೆ ಅಲ್ಲಿ ೬೦% ಕೌಶಲ್ಯ ಹೊಂದಿದವರು ಸಿಗುತ್ತಾರೆ ಮುಂದಿನ ದಿನಮಾನಗಳಲ್ಲಿ ಭಾರತದಲ್ಲಿಯು ಕೌಶಲ್ಯಪಡೆದವರು ೧೦೦% ಸಿಗಲಿದ್ದಾರೆ ಎಂದರು.ಅದರAತೆ ಮಾತೃಭಾಷೆಯ ಜೊತೆಗೆ ಹಿಂದಿ,ಇAಗ್ಲೀಷ ಕಲಿತರೆ ದೇಶ ವಿದೇಶಗಳಲ್ಲಿಯು ನೋಕರಿ ಸಿಗಲಿದೆ ಎಂದರು.
ಉದ್ಯೋಗ ಸಿಗುತ್ತಿಲ್ಲ ಎಂದು ಕಲಿತವರು ಹೇಳುತ್ತಿದ್ದಾರೆ ಆದರೆ ಹೊಲದಲ್ಲಿ ಕೆಲಸ ಮಾಡಲು ಕೂಲಿಕಾರ್ಮಿಕರು ಸಿಗುತ್ತಿಲ್ಲ ಎಂಬ ನೋವು ರೈತರದ್ದಾಗಿದೆ.ಭಾರತದ ೧೪೦ ಕೋಟಿ ಮ್ಯಾನ್ ಪಾವರ್ ಇದೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ,ವಿದೇಶದಲ್ಲಿ ಅಹಂ ಭಾವ(ಟ್ರಂಪ್) ಹೊದಿರುವವರ ಕೈಯಲ್ಲಿ ನೋಕರಿ ಮಾಡುವದಕ್ಕಿಂತ ನಮ್ಮ ದೇಶದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಬೇಕೆಂದು ನಿವೃತ್ ಪ್ರಾಚಾರ್ಯ ಎಸ್ ಎಸ್ ಚೊರಗಿ ಯುವಕರಿಗೆ ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷರಾದ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಮಾತನಾಡಿ ಜನಸೇವೆಯೆ ಜನಾರ್ಧನಸೇವೆ ಎಂದು ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವದು ಒಂದು ಜನಸೇವೆ ಎಂದು ಭಾವಿಸಿ ಭಾರತ ಒಕ್ಕಲುತನವೆ ಮೂಲ ಉದ್ಯೋU ಆದರೆ ವರ್ಷಕ್ಕೊಮ್ಮೆ ಸಂಬಳ ಸಿಗುತ್ತದೆ.ಶಿಕ್ಷಣದಲ್ಲಿ ಕೌಶಲ್ಯ ಕಲಿತರೆ ಅದರಲ್ಲಿ ಪ್ರಾಯೋಗಿಕ ಸ್ಕಿಲ್ ಬಹಳ ಪ್ರಾಮುಖ್ಯ ಪಡೆದಿದೆ ಉದ್ಯೋಗಕ್ಕಾಗಿ ಕಲಿಯಿರಿ ಆದರೆ ಮಾರ್ಕ್ಸಗೋಸ್ಕರ ಬೇಡಾ ಅರ್ದಂಬರ್ದ ಕಲಿತರೆ ಅಗಸನ ನಾಯಿ ಇತ್ತ ಮನೆಯು ಕಾಯಲಿಲ್ಲ ಅತ್ತ ಹೊಲ(ಜಮೀನು) ಕಾಯಲಿಲ್ಲ ಎಂಬAತಾಗುತ್ತದೆ ಕೌಶಲ್ಯ ತರಬೇತಿ ಪಡೆಯಲೆ ಬೇಕು ಅರ್ಹತೆಯ ಕೊರತೆಯಿಂದ ಕೆಲಸ ಸಿಗದೆಇರಬಹುದು ಶಿಕ್ಷಣದ ಜೊತೆಗೆ ಅತ್ಯುತ್ತಮ ತರಬೇತಿ ಪಡೆದರೆ ಉದ್ಯೋಗ ಖಚಿತ ಎಂದರು.ಕೆಪಿಎಸ್ಸಿ ಶಾಲೆಗಳನ್ನು ತೆರೆಯಲಿದ್ದು ಅಲ್ಲಿ ಕನ್ನಡ,ಇಂಗ್ಲೀಷ ಭಾಷೆಯಲ್ಲಿ ಪಿಯುಸಿ ಯವರೆಗೆ ಕೌಶಲ್ಯಾಧಾರಿತ ಉಚಿತ ಶಿಕ್ಷಣ ಸಿಗಲಿದೆ ಮಾದರಿ ಶಾಲೆ ಮಾಡುವ ಉದ್ದೇಶವಿದೆ ಎಂದರು.
ಉದ್ಯೋಗ ಸಿಗದಿದ್ದರು ಪರವಾಗಿಲ್ಲ ಜೀವನದಲ್ಲಿ ನಿರಾಶೆಯಾಗಬೇಡರಿ ಸರಕಾರದ ಸಬ್ಸಿಡಿ ಹಣದೊಂದಿಗೆ ಸ್ವಉದ್ಯೋಗ ಮಾಡಬಹುದು ಎಂದರು.ನೀವು ನಿರಾಶೆಯಾದರೆ ದೇಶವೆ ನಿರಾಶೆಯಾದಂತೆ ಎಂದರು.
ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ ಬಿ ಕುಂಬಾರ ಅವರು ಪತ್ರಿಕಾ ಹೇಳಿಕೆ ೪೩ ಕಂಪನಿಗಳ ಪೈಕಿ ೨೫ ಕಂಪನಿಗಳು ಹಾಜರಿದ್ದರು, ನೊಂದಾಯಿತರು ೨೫೪೨ ರಲ್ಲಿ ಹಾಜರಾದವರು ೧೪೫೮ ಉದ್ಯೋಗಾಕಾಂಕ್ಷಿಗಳಲ್ಲಿ ೨೪೩ಸೆಲೆಕ್ಟ ಆಗಿದ್ದು ೨೧೪ ಶರ್ಟ ಲಿಸ್ಟನಲ್ಲಿ ಇದ್ದಾರೆ.
ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ ಬಿ ಕುಂಬಾರ, ಬಿ ಎಸ್ ರಾಠೋಡ,ಸಂಜಯ ಖಡಗೇಕರ,ಚಡಚಣ ತಾಲೂಕ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ.ಹಕ್ಕೆ,ಪಪಂ ಪ.ಪಂ ಅಧ್ಯಕ್ಷ ಮಲ್ಲಿಕಾರ್ಜುನ ಧೊತ್ರೆ,ಪಪಂ ಉಪಾಧ್ಯಕ್ಷ ಇಲಾಯಿ ನಧಾಫ,ಬಾಬುಗೌಡ ಪಾಟೀಲ್, ವ್ಹಿ ಎಸ್ ಗಿಡವೀರ, ಎಸ್ ಎಸ್ ಚೋರಗಿ, ನಾಗಮ್ಮ ಅಂಕದ, ವಿದ್ಯಾರಾಣಿ ತುಂಗಳ,,ಬಿ.ಎಸ್.ರಾಠೋಡ್, ರವಿ ಜಾಧವ,ಖಾಸಗಿ ಹಾಗೂ ಗೌರಮೆಂಟ್ ಐಟಿಐ ಸಿಬ್ಬಂಧಿಯವರು ಸೇರಿದಂತೆ ಎಲ್ಲ ಪ.ಪಂ.ಸದಸ್ಯರು,ಕೆಎಸ್ಡಿಸಿ ವಿಜಯಪುರ ಸಿಬ್ಬಂಧಿ ಇದ್ದರು.
4th April 2025
ಚಡಚಣ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದವತಿಯಿಂದ ಆಯೋಜಿಸಲಾಗುತ್ತಿರುವ ಉದ್ಯೋಗ ಮೇಳದ ಭಿತ್ತಿ ಪತ್ರಗಳನ್ನು ನಾಗಠಾಣ ಶಾಸಕ ವಿಠ್ಠಲ ಕಟಕಧೊಂಡ ಅವರು ಬಿಡುಗಡೆಗೋಳಿಸಿದರು.
ಚಡಚಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಪತ್ರಿಕಾ ಪ್ರಕಟಣೆಯನ್ನುದ್ದೆಶೀಸಿ ಮಾತನಾಡಿದ ಶಾಸಕರು ಇಂದಿನ ಸಮಾಜದ ಬೇಡಿಕೆಗಳಾದ ರೋಟಿ,ಕಪಡಾ ಔರ ಮಕಾನ ಬೇಕೆಂದರೆ ಯುವಪೀಳಿಗೆಗೆ ಉದ್ಯೋಗದ ಅವಶ್ಯಕತೆ ಇದ್ದು ನಮ್ಮ ನಾಗಠಾಣ ಮತಕ್ಷೇತ್ರ ೧೬೨ ಕಿ.ಮಿ. ವಿಸ್ತಿರ್ಣ ಹೊಂದಿರುವ ದೊಡ್ಡ ಮತಕ್ಷೇತ್ರ ಅದಲ್ಲದೆ ಮಹಾರಾಷ್ಟç ಗಡಿ ಹೊಂದಿದೆ,ಮಹಾರಾಷ್ಟç ಗಡಿ ಪ್ರದೇಶದಲ್ಲಿಯು ಕನ್ನಡ ಕಲಿತ ಪ್ರತಿಭಾನ್ವಿತರು ಇದ್ದು ಅವರಿಗು ಅನುಕೂಲ ವಾಗುವ ಉದ್ದೇಶದಿಂದ ಚಡಚಣ ಪಟ್ಟಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಎಸ್ ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿ.೦೭ ಸೋಮವಾರ ಬೆಳಿಗ್ಗೆ ೯.೦೦ರಿಂದ ಸಂಜೆ ೪.೦೦ರವರೆಗೆ ಕೆ.ಎಸ್.ಡಿ.ಸಿ,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಸುಮಾರು ೪೦ ಕಂಪನಿಗಳಿAದ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು ಈಗಾಗಲೆ ೧೫೦೦ ಕ್ಕಿಂತೆ ಹೆಚ್ಚಿನ ಉದ್ಯೋಗಾಕಾಂಷ್ಕಿಗಳು ನೊಂದಣಿ ಮಾಡಿದ್ದಾರೆ ಹಾಗೂ ಮಾಡುತ್ತಲಿದ್ದಾರೆ ಎಂದರು.
ಕೆಎಸ್ಡಿಸಿ ಅಧಿಕಾರಿ ಸಿ.ಬಿ.ಕುಂಬಾರ ಮಾತನಾಡಿ ವಿಜಯಪುರ,ಹುಬ್ಬಳ್ಳಿ,ಬೆಳಗಾಂವ,ಬೆAಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿರುವ ಸುಮಾರು ೪೦ ಪ್ರತಿಷ್ಠಿತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ,ಉಚಿತ ಪ್ರವೇಶವಿದ್ದು ನೇರ ಸಂದರ್ಶನದಲ್ಲಿ ಆಯ್ಕೆಯಾದವರಿಗೆ ಆರ್ಡರ್ ಕಾಪಿ ಹಾಗು ಜೊಯ್ನಿಂಗ ಪತ್ರ ನೀಡಲಾಗುವದು ಎಂದರು. ೨೦೨೫ರ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ನೋಂದಣಿ ಲಿಂಕ್ https://tinyurl.com/Jobfair2025-Candidate-Reg-Link ಇದ್ದು ಇಲ್ಲಿ ನೊಂದಣಿ ಮಾಡಬಹುದಾಗಿದೆ.ಕ್ಯೂ.ಆರ್.ಸ್ಕಾö್ಯನರ್ ಮುಖಾಂತರ ಕೂಡಾ ನೊಂದಣಿ ಮಾಡಬಹುದು ಅದಲ್ಲದೆ ಮೋ.ನಂ-೯೯೧೬೮೮೨೧೫೯,೯೭೪೧೭೫೩೪೬೫,ಪೋ.ನo-೦೮೩೫೨ ೨೯೭೦೧೯.ಸಂಪರ್ಕಿಸಿರಿ. ದಿ.೦೭ಸೋಮವಾರ ನೊಂದಣಿ ಕೌಂಟರಗಳು ಲಭ್ಯ ಇರಲಿವೆ ಎಂದರು.
ತಹಶೀಲ್ದಾರ ಸಂಜಯ ಇಂಗಳೆ ಮಾತನಾಡಿ ಈಗಾಗಲೆ ನಾವು ಎಲ್ಲ ಶಾಲಾ ಕಾಲೇಜಿನಲ್ಲಿ ಉದ್ಯೋಗ ಮೇಳದ ಬಗ್ಗೆ ತಿಳಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗಡಿಭಾಗದವರು ಸೇರಿದಂತೆ ಸುಮಾರು ೩೦೦೦ ಉದ್ಯೋಗಾಂಕ್ಷಿಗಳು ಬಾಗವಹಿಸುವ ನಿರೀಕ್ಷೆ ಇದೆ ಎಂದರು.ಉದ್ಯೋಗA ಪುರುಷ ಲಕ್ಷಣ ಇದು ಹಿಂದಿನ ಮಾತು, ಈಗ ಪುರುಷ ಮಹಿಳೆ ಎಂಬ ಬೇಧಭಾವವಿಲ್ಲ ಹಾಗಾಗಿ ಈ ಉದ್ಯೋಗ ಮೇಳದಲ್ಲಿ ಪುರುಷ ಮಹಿಳೆ ಎಲ್ಲರು ಭಾಗಿಯಾಗಲಿ ಆದರೆ ಅವರ ವಯಸ್ಸು ಮಾತ್ರ ೧೮ ರಿಂದ ೩೫ ವರ್ಷ ವಯೊಮಿತಿ ಒಳಗಡೆ ಇರಬೇಕೆಂದರು.
ತಾಪA ಎಇಒ, ಸಂಜಯ ಖಡಗೇಕರ ಮಾತನಾಡಿ ನಮ್ಮ ಗಡಿಭಾಗದ ಯುವಕ ಯುವತಿಯರಿಗೆ ಇದೊಂದು ಒಳ್ಳೆಯ ಉದ್ಯೋಗಾವಕಾಶ ಲಭಿಸಲಿದ್ದು ಎಸ್ಎಸ್ಎಲ್ಸಿ,ಐಟಿಆಯ್,ಪಿಯುಸಿ,ಡಿಪ್ಲೊಮಾ,ಪದವಿಧರರು,ಸ್ನಾತಕೋತ್ತರ ಪದವಿ,ವೃತ್ತಿಪರ ಪದವಿ ಹಾಗೂ ಅರ್ಹರಿಗೆ ತಕ್ಕ ಉದ್ಯೋಗ ಮತ್ತು ಆಶ್ರಯ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಚಡಚಣ ತಾಲೂಕ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ.ಹಕ್ಕೆ,ಪಪಂ ಮುಖ್ಯಾಧಿಕಾರಿ ಎಸ್ ಎಸ್ ಪೂಜಾರಿ,ಪಪಂ ಅಧ್ಯಕ್ಷ ಮಲ್ಲಿಕಾರ್ಜುನ ಧೊತ್ರೆ,ಪಪಂ ಉಪಾಧ್ಯಕ್ಷ ಇಲಾಯಿ ನಧಾಫ ಸೇರಿದಂತೆ ಎಲ್ಲ ಪ.ಪಂ.ಸದಸ್ಯರು,ಕೆಎಸ್ಡಿಸಿ ವಿಜಯಪುರ ಸಿಬ್ಬಂಧಿ ಇದ್ದರು.
27th March 2025
ವರದಿ : ರಾಜಶೇಖರ ಡೋಣಜ(ಮಠ)
ಚಡಚಣ: ಚಡಚಣ ಪಟ್ಟಣ ಪಂಚಾಯತದಲ್ಲಿ ಪೂರೈಸಲಾಗುವ ಗಣಕಿಕೃತ ಉತಾರಿಗಳಲ್ಲಿ ಸುಮಾರು ಎಲ್ಲ ಉತಾರಿಗಳು ಒಂದಿಲ್ಲೊAದು ದೋಷದಿಂದ ಕೂಡಿವೆ.ಚಡಚಣದ ಬಹುತೇಕ ೯೦% ‘ಬಿ” ಖಾತಾ ಉತಾರಿಗಳೆ ಅಂದರೆ ಅನಧಿಕೃತ ಉತಾರಿಗಳನ್ನೆ ನೀಡುತ್ತಿದ್ದಾರೆ.
ಮೋದಲು ಕಂಪ್ಯೂಟರ್ ಉತಾರಿ ಸಿಗಬೇಕೆಂದರೆ ಆರು ತಿಂಗಳಿAದ ಒಂದು ವರುಷ ಕಾಯಬೇಕಾಗಿತ್ತು ಅದಲ್ಲದೆ ತಹಶೀಲ್ದಾರ ಹಾಗೂ ಭೂ ಮಾಪನ ಇಲಾಖೆ, ಸಬ್ ರೆಜಿಸ್ಟರ್ ನಲ್ಲಿ ಸಿಗದ ಅನೇಕ ದಾಖಲಾತಿಗಳನ್ನು ಕೇಳುತ್ತಿರುವದರಿಂದ ಗಣಕಿಕೃತ ಉತಾರಿಗಳು ಸಿಗಬೇಕೆಂದರೆ ಕನಸಿನ ಮಾತಾಗಿತ್ತು.
ಈಗ ರಾಜ್ಯ ಸರಕಾರ ಸರಳಿಕರಣಗೋಳಿಸಿ ಖಾತಾ “ಎ” ಅಧಿಕೃತ ಎಲ್ಲ ದಾಖಾಲಾತಿ ಹೊಂದಿವೆ ಎಂದು ಖಾತಾ “ಬಿ” ಅನಧಿಕೃತ ಎಂದು ವಿಂಗಡಿಸಿ ಕಂಪ್ಯೂಟರ್ ಉತಾರಿಗಳನ್ನು ಕೊಡುತ್ತಿದ್ದಾರೆ. ಖಾತಾ “ಎ”ದ ಎಲ್ಲ ದಾಖಾಲಾತಿಗಳು ಇದ್ದರು ಸಹ ಬಿ ಖಾತಾ ಉತಾರಿ ಕೊಡುತ್ತಿರುವದರಿಂದ ಅನೇಕ ತೊಂದರೆಯನ್ನು ಸಾರ್ವಜನಿಕರು ಅನುಭಸುತ್ತಿದ್ದಾರೆ.
ಎ ಖಾತೆಗೆ ಸಂಬAಧಿಸಿದ ದಾಖಲಾತಿಗಳಲ್ಲಿ ಡಿಸಿ ಅಥವಾ ತಹಶೀಲ್ದಾರ್ ಅವರ ಎನ್ಎ ಆದೇಶ ಪ್ರತಿ ಇಲ್ಲದಿದಿದ್ದರು ಪಹಣಿ ಉತಾರಿಯಲ್ಲಿ ಬಿನ್ ಶೇತ್ಕಿ ಪ್ಲಾಟ್ ಎಂದು ನಮುದಿಸಿದ್ದರು ಮತ್ತು ಸಬ್ ರೆಜಿಸ್ಟರ್ ಆಫೀಸಿನಿಂದ ಧೃಡಿಕರಣ ಪ್ರತಿಗಳಿದ್ದರು ಕಟ್ಟಡ ಪರ್ಮಿಷನ್ ಮತ್ತು ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರದ ಕುಂಟು ನೆಪವಡ್ಡಿ ಪ.ಪಂ.ಅಧಿಕಾರಿಗಳ ನಿರ್ಲಕ್ಷದಿಂದ ಬಿ ಖಾತಾ ಅನಧೀಕೃತ ಎಂದು ಉತಾರಿಗಳನ್ನು ಕೊಡುತ್ತಿದ್ದಾರೆ ಇದರಿಂದ ಸಾರ್ವಜನಿಕರೊಂದಿಗೆ ಚಲ್ಲಾಟವಾಡುತ್ತಿದ್ದಾರೆ.
ಇದಕ್ಕೆ ಸಂಬAಧಿಸಿದAತೆ ಗ್ರಾ.ಪಂ.ಇದ್ದಾಗಿನಿAದ ಇಲ್ಲಿಯವರೆಗೆ ಅಂದರೆ ಪ.ಪಂ. ಅವರು (ಮನೆಕರ)ಟ್ಯಾಕ್ಸ ಕಟ್ಟಿಕೊಳ್ಳುವಾಗ ಹೇಗೆ ಮನೆ ಕರ ಅಥವಾ ಕಟ್ಟಡ ಕರ ಪಾವತಿ ಕಟ್ಟಡ ನಿರ್ಮಾಣದ ಸಂಕೆತವಲ್ಲವೆ ಈ ಪಾವತಿ ಕೆಲಸಕ್ಕೆ ಬಾರದೇ? ಇದಕ್ಕೆ ವಿಜಯಪುರ ಜಿಲ್ಲಾಧಿಕಾರಿಗಳು ಈ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂಬ ನಂಬಿಕೆಯಲ್ಲಿ ಚಡಚಣ ಪಟ್ಟಣದ ಸಾರ್ವಜನಿಕರು ಕಾದುಕುಳಿತಿದ್ದಾರೆ.
ಮೂಲ ದಾಖಲಾತಿಯ ಜಾಗದ ಅಳತೆ ಹಾಗೂ ಚಕಬಂದಿ ಸರಿಯಾಗಿ ಕಂಪ್ಯೂಟರ್ ಆಪರೇಟರಗಳು ನಮೂದಿಸದೆ ಉತಾರಿಗಳನ್ನು ಕೊಟ್ಟಿರುವದರಿಂದ ಮತ್ತು ಇ ಖಾತಾ ನೊಂದಣಿಯಲ್ಲಿ ಅಸ್ಪಷ್ಟತೆ ಮೂಡಿಸುವದು ಅಥವಾ ತಪ್ಪಾಗಿ ನೋಂದಾಯಿಸುವ ಪ.ಪಂ.ಅಧಿಕಾರಿ ವಿರುದ್ಧ ಕೆಸಿಎಸ್ಆರ್ ನಿಯಮಗಳಡಿ ಶಿಸ್ತು ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದರು ಕೂಡಾ ತಪ್ಪು ನೊಂದಣಿ ಮಾಡಿಕೊಡುತ್ತಿರುವದು ಅಧಿಕಾರಿಗಳು ಮಧ್ಯಸ್ತಿಕೆ ವಹಿಸಿ ತಪ್ಪಾಗದಂತೆ ನೋಡಿಕೊಳ್ಳಬೇಕಾಗಿದೆ.
ಕೋಟ : ಎಲ್ಲ ದಾಖಾಲಾತಿಗಳು ಇದ್ದರು ನಗರ ಮತ್ತು ಗ್ರಾಮಾಂತರ ಅಭಿವೃದ್ಧಿ ಇಲಾಖೆಯಿಂದ ಪ್ಲಾನ್ ಮಾಡಿಸದೆ ಇದ್ದರೂಕೂಡಾ ಬಿ ಖಾತಾ ಕೋಡುತ್ತೆವೆ ಆದರೆ ಇದು ಫೈನಲ್ ಉತಾರಿ ಅಲ್ಲ ಇದರಿಂದ ಮಾರಾಟ ಮಾಡಲಿಕ್ಕೆ ಅಥವಾ ಬ್ಯಾಂಕಗಳಿAದ ಸಾಲ ಸೌಲಭ್ಯ ಪಡೆಯಲಿಕ್ಕೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸಾರ್ವಜನಿಕರು ಒಂದು ವೇಳೆ ಎಲ್ಲ ದಾಖಾಲಾತಿಗಳ ಜೊತೆ ಟೌನ್ ಪ್ಲಾನ್ ಒದಗಿಸಿದರೆ ಮತ್ತೆ ನಾವು ಅದನ್ನು ತಿದ್ದಿ ಎ ಖಾತಾ ಉತಾರಿ ಕೊಡುತ್ತೆವೆ ಎಂದು ಚಡಚಣ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಸ್.ಎಸ್.ಪೂಜಾರಿಅವರು ತಿಳಿಸಿದ್ದಾರೆ.
22nd February 2025
ಚಡಚಣ: ಚಡಚಣ ಪಟ್ಟಣದ ಮರಡಿ (ಬೋರಿ ಹಳ್ಳದ) ಹಾವಿನಾಳ ರಸ್ತೆಗೆ ಹೊಂದಿಕೊAಡಿರುವ ಸೋಲಾರ್ ಸ್ಥಾವರದ ಕೆಲಸ ಇರುವದರಿಂದ ಚಡಚಣ ದಿಂದ ಹೋಗುವ ೧೧೦/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜು ಆಗುವ ಚಡಚಣ ಪಟ್ಟಣದ ಎಪ್-೫ ಪೀಡರ್ (ಮರಡಿ ಮೇಲೆ), ದೇವರನಿಂಬರಗಿ ಕ್ರಾಸ್, ಹತ್ತಳ್ಳಿ ರಸ್ತೆ, ಗೋಡಿಹಾಳ ರಸ್ತೆ ಮತ್ತು ಇಂದಿರಾ ನಗರ ಈ ಎಲ್ಲಾ ಏರಿಯಾದಲ್ಲಿ ಬರುವ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಮತ್ತು ಹಾಲಹಳ್ಳಿ ಐ.ಪಿ. ಎಪ್-೬ ಪೀಡರ್ ದಿನಾಂಕ ೨೨.೦೨.೨೦೨೫ ಶನಿವಾರ ಮತ್ತು ದಿನಾಂಕ ೨೩.೦೨.೨೦೨೫ ಭಾನುವಾರ ಮುಂಜಾನೆ ೧೦.೦೦ ಘಂಟೆಯಿAದ ಸಂಜೆ ೦೬.೦೦ ಘಂಟೆಯವರೆಗೆ ವಿದ್ಯುತ್ ಅಡಚಣೆ ಉಂಟಾಗುವುದು. ಆದ್ದರಿಂದ ಈ ಪೀಡರಗಳ ಮೇಲೆ ಬರುವ ಗ್ರಾಹಕರು ಸಹಕರಿಸಬೇಕಾಗಿ ಕೋರಲಾಗಿದೆ.
ಚಡಚಣ ಉಪವಿಭಾಗದಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ವಿಜಯಕುಮಾರ ಹವಾಲ್ದಾರ್ ಹೆಸ್ಕಾಂ ಚಡಚಣ ರವರು ತಿಳಿಸಿರುತ್ತಾರೆ.
6th February 2025
ಚಡಚಣ: ಚಡಚಣ ಪಟ್ಟಣ ಸಮಗ್ರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿದ್ದು ಮಾದರಿ ಮತಕ್ಷೇತ್ರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ಪಟ್ಟಣದಲ್ಲಿ ಸುಮಾರು ೯ ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಚಡಚಣ ಭಾಗದ ಜನರ ಬಹು ದಿನದ ಬೇಡಿಕೆಯಾದ ಚಡಚಣದಿಂದ ಮಹರಾಷ್ಟçದ ಉಮದಿ (ಬಾರ್ಡರ್)ಸರಹದ್ದ ವರೆಗಿನ ರಸ್ತೆ ದುರಸ್ತಿ ಕಾರ್ಯವನ್ನು ಸುಮಾರು ರೂ ೫ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು ಮಾರ್ಚ್ ಅಂತ್ಯದವರೆಗೆ ಕಾಮಗಾರಿ ಪೂರ್ಣವಾಗುತ್ತದೆ ಎಂದರು.
ಹಾಗೂ ಸುಮಾರು ರೂ ೪ ಕೋಟಿ ವೆಚ್ಚದಲ್ಲಿ ಚಡಚಣ-ಶಿರಾಡೋಣ ರಸ್ತೆ ಸುಧಾರಣಾ ಕಾಮಗಾರಿ ಕೈಕೊಳ್ಳಲಾಗುತ್ತಿದೆ. ಪಟ್ಟಣದಲ್ಲಿ ೧೬ ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದ ಅವರು, ಸುಮಾರು ೧೦ ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಬಸ್ ಡಿಪೋ ಕಾಮಗಾರಿಯನ್ನು ಆರಂಭಿಸಲು ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.
ರೈತರ ಕನಸಾದ ಚಡಚಣ ಏತ ನೀರಾವರಿ ಯೋಜನೆ ಆರಂಭವಾಗಿದ್ದು ಕೆಲವು ರೈತರ ಹೊಲಗಳಿಗೆ ನೀರು ಹರಿಯುತ್ತಿದೆ. ಇದು ಪ್ರಾಯೋಗಿಕ ಹಂತವಾಗಿದ್ದು ಮುಂಬರುವ ದಿನಗಳಲ್ಲಿ ವ್ಯವಸ್ಥಿತವಾಗಿ ಎಲ್ಲ ರೈತರ ಹೊಲಗಳಿಗೆ ನೀರು ಹರಿಯುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪಂಢರಪುರ-ಗಾಣಗಾಪುರ ರಾಷ್ಟ್ರೀಯ ಹೆದ್ದಾರಿ ಯೋಜನೆ ನೀತಿ ಆಯೋಗದಲ್ಲಿ ಪೆಂಡಿAಗ್ ಇದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ಚಡಚಣ ಮಂಡಲ ಅಧ್ಯಕ್ಷ ಆರ್.ಡಿ.ಹಕ್ಕೆ,ಗ್ಯಾರಂಟಿಅಧ್ಯಕ್ಷ ರವಿದಾಸ ಜಾಧವ, ಪರಮಾನಂದ ಕೋಳಿ,ದೇವಪ್ಪಗೌಡ ಪಾಟೀಲ, ಸಂಗಪ್ಪ ಭಂಡರಕವಟೆ, ಸೈದು ಕೊಡಹೊನ್ನ,ಡಾ.ವಿ.ಎಸ್.ಪತ್ತಾರ, ಲೋಕೊಪಯೋಗಿ ಎಇಇ ದಯಾನಂದ ಮಠ, ಎಸ್.ಎಂ. ಪಾಟೀಲ, ಪಪಂ ಮುಖ್ಯಾಧಿಕಾರಿ ಪೂಜಾರಿ, ಸತೀಶ ಉಟಗಿ ರಫೀಕ ಮಕಾನದಾರ, ಜೆ.ಇ.ಪಾಟೀಲ, ಮಹಾದೇವ ಬನಸೋಡೆ, ದಶರಥ ಬನಸೋಡೆ ,ಸದಸ್ಯ ಪ್ರಕಾಶಗೌಡ ಪಾಟೀಲ,ಪಟ್ಟಣ ಪಂಚಾಯ್ತಿ ಸದಸ್ಯರು, ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರ,ನೂರಾರು ಕಾರ್ಯಕರ್ತರು ಹಾಜರಿದ್ದರು.