16th June 2025

ಚಡಚಣ;ಧಾರವಾಡ-ನಾಟ್ಯ ಸ್ಫೂರ್ತಿ ಆರ್ಟ್ & ಕಲ್ಬರಲ್ ಅಕಾಡೆಮಿ ಧಾರವಾಡ ಇದರ ೧೫ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ, ನಾಡು-ನುಡಿ, ಜಲ, ಸಾಹಿತ್ಯ,ಸಾಂಸ್ಕೃತಿಕ, ಕೃಷಿ, ಶಿಕ್ಷಣ ಚಿಂತನೆ, ನಾಟಕ ಪ್ರದರ್ಶನಈ ಎಲ್ಲ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದವರಿಗೆ ದಿ.೧೫ ರವಿವಾರ ಸನ್ಮಾನಿಸಿದರು.
ಕಾರ್ಯಕ್ರಮವು ಆಲೂರ ವೆಂಕಟರಾವ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಾಟ್ಯಸ್ಫೂರ್ತಿ ಆರ್ಟ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷ ಸದಾನಂದ ಎಸ್ ಬಂಗೆಣ್ಣನವರ ಅಧ್ಯಕ್ಷತೆಯಲ್ಲಿ,ಮನಸೂರ ಶ್ರೀ ರೇವಣಸಿದ್ದೇಶ್ವರ ಮಠದ ಡಾ. ಶ್ರೀ ಶ್ರೀ ಶ್ರೀ ಬಸವರಾಜ ದೇವರು ದಿವ್ಯ ಸಾನಿಧ್ಯದಲ್ಲಿ, ನವಲಗುಂದ ಶಾಸಕರಾದ ಎನ್ ಎಚ್ ಕೋನರಡ್ಡಿ ಉದ್ಘಾಟಿಸಿದರು.
ಚಡಚಣ ತಾಲೂಕಿನ ರೇವತಗಾಂವ ಗ್ರಾಮದ ಪ್ರಗತಿಪರ ರೈತರಾದ ರಮೇಶ ಸಿದ್ದಪ್ಪ ನಡಗೇರಿ ಅವರಿಗೆ ದ್ರಾಕ್ಷಿ ಬೆಳೆಯಲ್ಲಿ ವಿಶೇಷವಾದ ಪರಿಣಿತಿಯನ್ನು ಪರಿಗಣಿಸಿ ರಾಜ್ಯ ಮಟ್ಟದ ಬಸವಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸದರು.
ಸನ್ಮಾನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಂದ ಕನ್ನಡ ನಾಡಗೀತೆ ಚಲನಚಿತ್ರ ಗೀತೆಗೆ ನೃತ್ಯ, ಇಮಾಮಸಾಬ ವಲ್ಲೆಪ್ಪನವರ ಅವರಿಂದ ತತ್ವಪದ, ಚಿನ್ನು ವಸ್ತ್ರದ ಅವರ ಸ್ವರ್ಣ ಮಯೂರಿ ನೃತ್ಯಸಂಸ್ಥೆ ಹುಬ್ಬಳ್ಳಿಯವರಿಂದ ವಚನರೂಪಕ ನೃತ್ಯ, ಸುಮಾ ಹಡಪದ ಅವರಿಂದ ಕವಿಗೋಷ್ಟಿ, ಮೊಬೈಲ್ ಮಲ್ಲ ಅವರಿಂದ ಹಾಸ್ಯ ಕಾರ್ಯಕ್ರಮಗಳು ಜರುಗಿದವು ಎಂದು ತಿಳಿಸಿದ್ದಾರೆ.
. ಈ ಸಾಧನೆಗೆ ರೇವತಗಾಂವ ಹಾಗೂ ಚಡಚಣದ ಗ್ರಾಮಸ್ಥರು ಹಾಗೂ ಗೆಳಯರ ಬಳಗ ಅಭಿನಂದಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ "ಗಿಳಿವಿಂಡು "ಸಮಗ್ರ ಅಭಿವೃದ್ದಿಗಾಗಿ ಕೇರಳ - ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ