19th June 2025

ಚಡಚಣ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿಯಲ್ಲಿ ಮಂಗಳವಾರ ಅನೇಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಹಿಮೋಗ್ಲೋಬಿನ್(ರಕ್ತ) ತಪಾಸಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ (ಆರ್ಬಿಎಸ್ಕೆ) ವೈದ್ಯಾಧಿಕಾರಿ ಡಾ.ಆಯ್ ಎಂ ಬಿರಾದಾರ ಮಾತನಾಡಿ ಮಕ್ಕಳಿಗೆ ರಕ್ತಹೀನತೆಯ ಕುರಿತು ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದರು.
ಅನೇಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಹಾಗೂ ಯಾವುದೆ ಸರಕಾರಿ ಆರೋಗ್ಯ ಯೋಜನೆಗಳಾಗಲಿ ಸರಕಾರಿ ಶಾಲೆಯ ಮಕ್ಕಳಿಗೆ ಮಾತ್ರ ಸಿಮಿತಗೋಳಿಸದೆ ಖಾಸಗಿ ಹಾಗೂ ಸರಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕೆಂದು ಚಡಚಣದ ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ.
ಡಾ.ಸಂಗೀತಾ ಕಡಕೋಳ,ಶುಶ್ರೂಷಕಿ ಉಮಾಶ್ರೀ ಸುತಾರ ಹಾಗೂ ಶಾಲೆಯ ಮುಖ್ಯ ಗುರುಗಳು ಮಹಾಂತೇಶ ಉಮರಾಣಿ, ಶಿಕ್ಷಕ ಬಸವರಾಜ ಕರಜಗಿ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.

ಸಾಮಾಜಿಕ ನಾಟಕಗಳನ್ನು ನೋಡಿ ಹೆಚ್ಚು ಪ್ರೋತ್ಸಾಹಿಸಿ : ಉಪನ್ಯಾಸಕ ಸಿಎಂ ಚನ್ನಬಸಯ್ಯಸ್ವಾಮಿ ಅಭಿಪ್ರಾಯ

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ