


29th December 2025
ಜಮಖಂಡಿ : ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ 50ಲಕ್ಷ ರೂ. ಅನುದಾನ ನೀಡಲಾಗುವದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಹೊರವಲಯದ ಕುಂಚನೂರ ಆರ್ಸಿಯಲ್ಲಿನ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದ ಆವರಣದಲ್ಲಿ ವೇಮ ವಿಕಾಸ ವೇದಿಕೆಯ ಆಶ್ರಯದಲ್ಲಿ ನಡೆದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಎಲ್ಲ ಸಮುದಾಯಗಳಿಗೂ ಅನುಕೂಲ ವಾಗುತ್ತಿದೆ ಅದರ ಹಾಗೆ ದೇವಸ್ಥಾನ ಎಲ್ಲ ಸಮುದಾಯಕ್ಕೂ ಅನುಕೂಲವಾಗಬೇಕು ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ವೈಯಕ್ತಿಕವಾಗಿ ರೂ.2 ಲಕ್ಷ ಹಾಗೂ ಶಾಸಕರ ನಿಧಿಯಿಂದ ರೂ.5 ಲಕ್ಷ ಅನುದಾನ ನೀಡುಲಾಗುವದು ಎಂದು ಹೇಳಿದರು. ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ನಡೆಯುವ ವಿವಾಹಗಳ ನೂತನ ದಂಪತಿಗೆ ನಮಸ್ಕರಿಸಲು ದೇವಾಲಯ ಅತ್ಯವಶ್ಯಕವಾಗಿತ್ತು. ಈಗ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನ ನಿರ್ಮಿಸುತ್ತಿರುವುದು ಒಳ್ಳೆಯ ಸಂಗತಿ ಎಂದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ರೆಡ್ಡಿ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬಂದಿದೆ. ಹೇಮರಡ್ಡಿ ಮಲ್ಲಮ್ಮನವರ ಆದರ್ಶಗಳು ಕೇವಲ ಸಮಾಜಕ್ಕಲ್ಲದೆ ಇಡೀ ವಿಶ್ವದ ಮಹಿಳೆಯರಿಗೆ ಸಿಕ್ಕ ಅನರ್ಘ್ಯ ರತ್ನ. ಅವರು ಸಾತ್ವಿಕ ಗುಣಗಳನ್ನು ಹೊಂದಿದ ಆದರ್ಶ ಮಹಿಳೆ. ಅವರ ಆದರ್ಶಗಳನ್ನು ಎಲ್ಲ ಮಹಿಳೆಯರು ಮೈಗೂಡಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸಮಾಜದಲ್ಲಿ ರೆಡ್ಡಿ ಸಮುದಾಯ ಚಿಕ್ಕದಿದ್ದರು ಶಕ್ತಿಯಲ್ಲಿ ಹೆಚ್ಚಾಗಿದೆ. ಸಮಾಜದ ಬಾಂದವರು ಬೇರೆ ಸಮಾಜದವರಿಗೆ ಸಹಕಾರ ನೀಡುವ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರೆಡ್ಡಿ ಜನಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಶೇಖರ ರೆಡ್ಡಿ ಮಾತನಾಡಿದರು.
ವೇದಿಕೆಯಲ್ಲಿ ರೆಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮಿ, ಚಿನಗುಂಡಿ ಲಕ್ಕಮ್ಮತಾಯಿ, ವಿಪ ಸದಸ್ಯ ಹನಮಂತ ನಿರಾಣಿ, ವಿಪ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಶಿವನಗೌಡ ಪಾಟೀಲ, ರಾಮನಗೌಡ ಚಿಕ್ಕನಗೌಡರ, ಡಾ.ಜಿ.ವಿ. ಉದಪುಡಿ, ಎಲ್.ಆರ್. ಉದಪುಡಿ, ಕೃಷ್ಣಾರೆಡ್ಡಿ, ಕುಮಾರ ಪಾಟೀಲ ಇತರರು ಇದ್ದರು.
ಸರಸ್ವತಿ ಸಬರದ ಪ್ರಾರ್ಥಿಸಿದರು, ವೇಮ ವಿಕಾಸ ವೇದಿಕೆಯ ತಾಲ್ಲೂಕಾ ಅಧ್ಯಕ್ಷ ಡಾ.ಆರ್.ಎನ್. ಸೋನವಾಲ್ಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಕಲ್ಲೂರ, ಅನಿತಾ ಪಾಟೀಲ ನಿರೂಪಿಸಿದರು.

26th December 2025
ಜಮಖಂಡಿ: ನಗರ ಮಾದರಿ ನಗರವನ್ನಾಗಿ ರೂಪಿಸಲು ಯೋಜನೆ ಹಾಕಿಕೊಂಡಿದ್ದೆವೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಸವೇಶ್ವರ ಸರ್ಕಲ್ನಿಂದ ವಿಜಯಪೂರ ರಸ್ತೆಯ ಸ್ವಾಗತ ಕಮಾನ ವರೆಗೆ, ಕುಂಬಾರಹಳ್ಳ ಪ್ಲಾಟ್ನಿಂದ ಆಲಗೂರ ಮರುಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಜಮಖಂಡಿ ಜಿಲ್ಲೆ ಆಗಲು ಮಾನದಂಡಗಳನ್ನು ಕ್ರೂಡಿಕರಣ ಮಾಡಲಾಗುತ್ತಿದೆ, ಅದಕ್ಕೆ ವಕೀಲರನ್ನು ನೇಮಿಸಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ನಮ್ಮ ಕ್ಷೇತ್ರದ ಅಭಿವೃದ್ದಿ ಯೋಜನೆಗಳಿಗೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ ಆದರೂ ನಾವು ತಂದು ಕಾರ್ಯ ಮಾಡುತಿದ್ದೆವೆ ಎಂದರು.
ಗ್ರಾಮೀಣ ಭಾಗದಲ್ಲಿ ರಸ್ತೆಗಳ ರಿಪೇರಿ ಕಾರ್ಯ ಮಾಡುತ್ತಿದ್ದೆವೆ ಎಂದರು.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲಿ ನಮ್ಮ ಭಾಗದ ಬಗ್ಗೆ ಚರ್ಚಿಸಲು ಸಮಯವನ್ನೆ ನೀಡಲಿಲ್ಲ, ಉತ್ತರ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಉಂಟಾಗುತ್ತಿದೆ ಎಂದರು.
ಕಾಂಗ್ರೆಸ್ ಶಾಸಕರೆ ಕಾಂಗ್ರೆಸ್ ಸರ್ಕಾರದ ವಿರುದ್ದ ತಮ್ಮ ಅಸಮಾಧಾನ ತೊಡಿಕೊಳ್ಳುತಿದ್ದಾರೆ, ಯುಕೆಪಿಯ ೭೦ ಸಾವಿರ ರೈತರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ರೈತರು ಮನಸ್ಸು ಮಾಡಬೇಕು ಎಂದರು.
ನಗರದಲ್ಲಿ ೨೫ ಕೋಟಿ ರೂ ವೆಚ್ಚದಲ್ಲಿ ಕಾರ್ಯಗಳು ನಡೆಯುತ್ತಿವೆ ಎಂದರು.
ನೂತನ ಜಮಖಂಡಿ ನಗರ ಬಹಳ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ೨ ಸಾವಿರ ಎಕರೆ ಭೂಮಿ ಅವಶ್ಯಕತೆ ಬಹಳ ಇದೆ ಅದರ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೆರಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಾ.ವಿಜಯಲಕ್ಷ್ಮೀ ತುಂಗಳ, ಅಜಯ ಕಡಪಟ್ಟಿ, ಸಿ.ಟಿ.ಉಪಾದ್ಯ, ಶ್ರೀಧರ ಕಂಬಿ, ರಾಜು ಕಡಕೊಳ ಇತರರು ಇದ್ದರು.

26th December 2025
ಜಮಖಂಡಿ: ವೀರ ಬಾಲ ದಿವಸ ಅಂಗವಾಗಿ ಸ್ಥಳೀಯ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪೃಥ್ವಿರಾಜ ಹಿರೇಮಠ ಅವರನ್ನು ಲಯನ್ಸ್ ಸಂಸ್ಥೆಯ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.
ಮೊಘಲ್ ಆಡಳಿತಗಾರರಿಂದ ಹತ್ಯೇಗೀಡಾದ ಸಿಖ್ ಸಮುದಾಯದ 10ನೇ ಧರ್ಮಗುರು ಗುರುಗೋವಿಂದ ಸಿಂಗ್ ಅವರ ಇಬ್ಬರು ಮಕ್ಕಳ ಸ್ಮರಣಾರ್ಥ ಪ್ರತಿ ವರ್ಷ ಡಿ.26 ರಂದು ವೀರ ಬಾಲ ದಿವಸ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಕರೆಯ ಮೇರೆಗೆ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಯನ್ನು ಸನ್ಮಾನಿಸಿದರು.
ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಪ್ರಾಥಮಿಕ ಶಾಲೆಗಳ 2025-26ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯ ಬಾಲಕರ ವಿಭಾಗದ 50 ಮೀ, 100ಮೀ ಮತ್ತು 200ಮೀ ಬಟರ್ಫ್ಲೆöÊ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯ 50 ಮೀ ಹಾಗೂ 100ಮೀ ಬಟರಫ್ಲೆöÊ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದುದಕ್ಕಾಗಿ ವಿದ್ಯಾರ್ಥಿ ಪೃಥ್ವಿರಾಜ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಸಂಸ್ಥೆಯ ಹಿರಿಯ ಸದಸ್ಯ ಡಾ.ಎಚ್.ಜಿ. ದಡ್ಡಿ, ಲಯನ್ಸ್ ಸಂಸ್ಥೆಯ ಜಮಖಂಡಿ ಶಾಖೆಯ ಅಧ್ಯಕ್ಷ ಡಾ.ಎಂ.ಪಿ. ತಾನಪ್ಪಗೊಳ, ಖಜಾಂಚಿ ರಮೇಶ ಕೋರಿ, ಸದಸ್ಯ ಪ್ರೊ.ಆರ್.ಕೆ. ಹೊಸಟ್ಟಿ, ಅಶೋಕ ಬಿಜ್ಜರಗಿ, ಬಸವಜ್ಯೋತಿ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ಕಾರ್ಯದರ್ಶಿ ಶಕುಂತಲಾ ಕಡ್ಡಿ, ಮುಖ್ಯ ಶಿಕ್ಷಕ ಪಿ.ಐ. ಹೊಸಮಠ ಸನ್ಮಾನ ನೆರವೇರಿಸಿದರು.

25th December 2025
ಜಮಖಂಡಿ : ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದೇ ಕಲಿಕಾ ಹಬ್ಬದ ಕಾರ್ಯಕ್ರಮ ಎಂದು ಎಸ್ಡಿಎಂಸಿ ಅಧ್ಯಕ್ಷ ರಾಜೇಸಾಬ ಮಸಳಿ ಹೇಳಿದರು.
ಚೌಡಯ್ಯ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ-5ರಲ್ಲಿ ಬುಧವಾರ ಜಮಖಂಡಿ ಕ್ಲಸ್ಟರ್ ಮಟ್ಟದ 2025-26 ನೇಸಾಲಿನ ಕಲಿಕಾ ಹಬ್ಬವನ್ನು ಕಾರ್ಯಕ್ರಮವನ್ನು ಉದ್ಘಾಟಣೆ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರಿಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಸೋಲು ಗೆಲುವು ಕಾಣಬೇಕು ಅದು ನಮ್ಮ ಜೀವನ ಅನುಕೂಲವಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಬಾಗೆನ್ನವರ, ಉರ್ದು ಇ.ಸಿ.ಓ ಸಮೀನಾ ಕೌಸರ್, ನಿಜಾಮ ಖುದಾವನ, ಶಬ್ಬಿರ ಜತ್ತಿ, ಮೌಲಾನಾ ಮೋಹಸಿನ ಹೊಸಕೋಟಿ, ಹಾಜಿಲಾಲ ಸಿಂದಗಿ, ಆರಿಫ್ ಅತ್ತಾರ್, ಮುಬಾರಕ್ ಅಪರಾದ, ಶಬ್ಬಿರ ಅತ್ತಾರ, ಎಸ್.ಆರ್ ಇನಾಮದಾರ, ಎಂ.ಎಂ ಪೆಂಡಾರಿ, ಎಂ.ಎ ಅತ್ತಾರ, ಎ.ಎಂ ಗೋರಿಖಾನ, ಆರ್.ಎಲ್ ಇನಾಮಾದಾರ, ಸಲೀಂ ನದಾಫ್, ಜೆ.ಎಚ್ ಡಾಲಯತ, ಕರೀಂ ಪೆಂಡಾರಿ, ಎಂ.ಎಂ.ಜಂಗಲಿ, ಮೋಶಿನ್ ಇಲ್ಕಲ್ ಇದ್ದರು

24th December 2025
ಬಾಗಲಕೋಟೆ : ಜಿಲ್ಲಾ ಪಂಚಾಯತ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಅನೀಲಕುಮಾರ ದಿಡ್ಡಿ ಅವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬುಧವಾರ ಜರುಗಿತು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಬೇಡಿಕೆಗಳಿಗೆ ಅನುಸಾರವಾಗಿ ಹೆಚ್ಚುವರಿ ಟ್ರಿಪ್ಗಳನ್ನು ಹೆಚ್ಚಿಸಲಾಗಿದೆ. ಕಳೆದ ಸಭೆಯಲ್ಲಿ ಸೂಚಿಸಿದಂತೆ ಈಗಾಗಲೇ 19 ಟ್ರಿಪ್ಗಳನ್ನು ಹೆಚ್ಚಿಗೆ ಮಾಡಲಾಗಿದ್ದು, ಇನ್ನು 8 ಟ್ರೀಪ್ಗಳನ್ನು ಮಾಡಲಾಗುತ್ತಿದೆ. ಇಳಕಲ್ಲಿನ ಗುರುಬಸವ ನಗರಕ್ಕೆ ಬಸ್ ನಿಲುಗಡೆ ಸೇರಿದಂತೆ ಬಾದಾಮಿಯಿಂದ ಬಾಗಲಕೋಟೆಗೆ ಸಂಜೆ 5 ರಿಂದ 7 ವರೆಗೆ ಹೆಚ್ಚುವರಿ ಟ್ರೀಪ್ಗಳನ್ನು ಮಾಡುವಂತೆ ತಾಲೂಕಾ ಮಟ್ಟದ ಸಮಿತಿಯ ಅಧ್ಯಕ್ಷರು ಸಭೆಗೆ ತಿಳಿಸಿದಾಗ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ಜಿಲ್ಲಾ ಸಂಚಾರಿ ನಿಯಂತ್ರಕರಿಗೆ ಸೂಚಿಸಿದರು.
ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಶೌಚಾಲಯಗಳು ಸುಸ್ಥಿತಿಯಲ್ಲಿ ಇರುವದರ ಜೊತೆಗೆ ಮೂಲಭೂತ ಸೌಲಭ್ಯಗಳ ಒತ್ತು ನೀಡಬೇಕು. ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಬಸ್ ಚಾಲಕ, ನಿರ್ವಾಹಕರು ಹಾಗೂ ಸಾರ್ವಜನಿಕರ ನಡುವೆ ಒಂದು ಕಾರ್ಯಾಗಾರ ನಡೆಸುವ ಅಗತ್ಯವಿದ್ದು, ಕಾರ್ಯಾಗಾರ ಆಯೋಜನೆಗೆ ಕ್ರಮವಹಿಸುವಂತೆ ಜಿಲ್ಲಾ ಸಂಚಾರಿ ನಿಯಂತ್ರಕರಿಗೆ ಅದ್ಯಕ್ಷರು ತಿಳಿಸಿದರು. ತಾಲೂಕಾ ಹಂತದಲ್ಲಿ ಬಸ್ಗಳ ಸಮಸ್ಯೆ ನಿವಾರಣೆಯಾಗದಿದ್ದಲ್ಲಿ ಜಿಲ್ಲಾ ಸಂಚಾರಿ ನಿಯಂತ್ರಕರ ಕರೆ ಮಾಡುವಂತೆ ಆಯಾ ತಾಲೂಕಾ ಅದ್ಯಕ್ಷರಿಗೆ ತಿಳಿಸಿದರು.
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲಾ ವ್ಯಾಪ್ತಿಯಲ್ಲಿ 437585 ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಗೃಹಬಳಕೆಯ ಸ್ಥಾವರಗಳಿದ್ದು, ಅದರಲ್ಲಿ 429605 ಗೃಹ ಬಳಕೆಯ ಸ್ಥಾವರಗಳು ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿದ್ದು, 7980 ಸ್ಥಾವರಗಳ ನೋಂದಣಿ ಹಂತ ಪ್ರಗತಿಯಲ್ಲಿದೆ. ಸರಕಾರಿ ಶಾಲೆಗಳಿಗೂ ಗೃಹಜ್ಯೋತಿ ಅಡಿಗೆ ಬರುತ್ತಿದ್ದು, ಶಾಲೆಯ ಯೂಡೈಸ್ ನಂಬರ ಎಂಟ್ರಿಮಾಡಿ ಆ ಶಾಲೆಯ ಮುಖ್ಯೋಪಾದ್ಯಾಯ ಮೊಬೈಲ್ಗೆ ಓಟಿಪಿ ಮೂಲಕ ಉಚಿತ ವಿದ್ಯುತ್ ಪಡೆಯಬಹುದಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾದ 424733 ಅರ್ಹ ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 15,25,803 ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಜೂನ್ ಮಾಹೆಯಿಂದ ಸೆಪ್ಟೆಂಬರ ವರೆಗೆ ಅಕ್ಕಿಯ ಜೊತೆಗೆ ಜೋಳವನ್ನು ಸಹ ವಿತರಣೆ ಮಾಡಲಾಗಿದೆ. ಕಳೆದ 2024-25ನೇ ಸಾಲಿನಲ್ಲಿ ಅನಧಿಕೃತ ಅಕ್ಕಿ ಸಾಗಾಣಿಕೆ ಹಾಗೂ ದಾಸ್ತಾನು ಮಾಡಿದವರ ಮೇಲೆ ಅವಶ್ಯಕ ವಸ್ತುಗಳ ಕಾಯ್ದೆಯಡಿ 16 ಪ್ರಕರಣಗಳನ್ನು ದಾಖಲಿಸಿ 1020.30 ಕ್ವಿಂಟಲ್ ಅಕ್ಕಿ ಹಾಗೂ 12 ವಾಹನಗಳನ್ನು ಜಪ್ತಿ ಮಾಡಿ 26 ಜನ ಆರೋಪಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಜಂಟಿ ಆಹಾರ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸಭೆಗೆ ತಿಳಿಸಿದರು. ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಇಂದಿರಾ ಕಿಟ್ ಕೊಡುವ ಚಿಂತನೆ ಸರಕಾರದ ಮಟ್ಟದಲ್ಲಿದೆ ಎಂದು ತಿಳಿಸಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 22038 ಜನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಸಭೆಯಲ್ಲಿ ಜಿ.ಪಂ ಸಿಇಓ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಜಿಲ್ಲಾ ಅನುಷ್ಠಾನ ಸಮಿತಿಯ ಉಪಾದ್ಯಕ್ಷರಾದ ಶಂಕರಪ್ಪ ನೇಗಲಿ, ಜಯಶ್ರೀ ತಿಮ್ಮಾಪೂರ, ಶಿವಪ್ಪ ಕೋನೇರಿ, ರಫೀಕ್ ಬೈರಕದಾರ, ರವೀಂದ್ರ ಯಡಹಳ್ಳಿ, ಸದಸ್ಯರಾದ ಮಾಗುಂಡಪ್ಪ ಬೂದಿಹಾಳ, ಯಮನಪ್ಪ ಹೆಬ್ಬಳ್ಳಿ, ನೂರಂದಗೌಡ ಕಲಗೋಡಿ, ಮಹಾಂತೇಶ ಹನಮನಾಳ, ಅನವೀರಯ್ಯಾ ಪ್ಯಾಟಿಮಠ, ಮಹಾಂತೇಶ ಮಾಚಕನೂರ, ಬಸವಂತಪ್ಪ ಪಾಟೀಲ, ನೇಮಣ್ಣ ಸಾವಂತನವರ, ಎಸ್.ಎನ್.ರಾಂಪೂರ, ಬಾಸ್ಕರ ಬಡಿಗೇರ, ಉಸ್ಮಾನಸಾಬ್, ವಾಸು ಕಡಪಟ್ಟಿ, ವಿಜಯಕುಮಾರ ಶಿರೂರ ಸೇರಿದಂತೆ ಯೋಜನೆ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

24th December 2025
ಜಮಖಂಡಿ: ಕಳೆದ 12 ವರ್ಷಗಳಿಂದ ಭಾರತ ಬದಲಾಗಿದೆ. ಹೆಜ್ಜೆ-ಹೆಜ್ಜೆಗೂ ಸಮಸ್ಯೆಗಳು ಎದುರಾಗಿವೆ, ದಲಿತ ಮುಸ್ಲಿಂರ ಸಮಸ್ಯೆಗಳು ಒಂದೇ ಆಗಿವೆ, ದಲಿತರು ಮುಸ್ಲಿಂಮರು ಒಗ್ಗಟ್ಟಿನಿಂದ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಲೋಕೊಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಅಬುಬಕರ ದರ್ಗಾ ಮೈದಾನದಲ್ಲಿ ಶಹೀದ ಹಜರತ ಟಿಪು ಸುಲ್ತಾನ ಜಯಂತ್ಯೋತ್ಸವ ಸಮೀತಿ ಹಮ್ಮಿಕೊಂಡಿದ್ದ ಕೌಮಿ ಏಕತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದಲಿತರು ಮುಸ್ಲಿಂರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತನೆಗಳು ನಡೆಯಬೇಕಿದೆ, ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನಿಂದ ಒಂದೇ ವೇದಿಕೆಗೆ ಬರಬೇಕಾಗಿದೆ ಎಂದ ಅವರು ದೆಹಲಿಗೆ ಹೋಗಲು ಯಾವ ಮಾರ್ಗ ಹಿಡಿಯಬೇಕು ಎಂಬುದರ ಬಗ್ಗೆ ಚಿಂತನೆಗಳು ನಡೆಯಬೇಕು ಅದಕ್ಕಾಗಿ ಒಗ್ಗಟ್ಟು ಬೇಕೆಂದು ಮಾರ್ಮಿಕವಾಗಿ ನುಡಿದರು.
ಕಾಲ ಬದಲಾಗಿದೆ, ಕಾಲಕ್ಕೆ ತಕ್ಕಂತೆ ಬದಲಾವಣೆ ತಂದುಕೊಳ್ಳಬೇಕು, ಶಿಕ್ಷಣ ಇಲ್ಲದೇ ಬದುಕು ಸಾಗಿಸುವ ಕಾಲ ಇಲ್ಲ ಶಿಕ್ಷಣಕ್ಕೆ ಬಹಳ ಮಹತ್ವವಿದೆ, ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು, ದಲಿತರು ಮುಸ್ಲಿಂರು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ತಿಳಿಸಿದರು.
ಟಿಪು ಸುಲ್ತಾನರ ಆಡಳಿತ, ಜಾರಿಗೆ ತಂದ ಕಾನೂನುಗಳ ಬಗ್ಗೆ ತಿಳುವಳಿಕೆ ನೀಡುವ ಕೆಲಸವಾಗಬೇಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ, ದೇಶಕ್ಕಾಗಿ ಮಕ್ಕಳನ್ನು ಬಲಿ ನೀಡಿದ ಅವರ ದೇಶಭಕ್ತಿಯ ಕುರಿತು ಎಲ್ಲರಿಗೂ ಮಾಹಿತಿ ನೀಡುವ ಕೆಲಸವಾಗಬೇಕು. ಡಾ.ಅಂಬೇಡ್ಕರ, ವಿಶ್ವಗುರು ಬಸವಣ್ಣ, ನಾರಾಯಣಗುರುಗಳು, ಶಾಹೂ ಮಹಾರಾಜ ಮುಂತಾದ ಮಹಾತ್ಮರ ವಿಚಾರಧಾರೆಗಳು, ದೇಶದ ಇತಿಹಾಸವನ್ನು ತಿಳಿದು ಕೊಳ್ಳಬೇಕು ಅದಕ್ಕಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಸರ್ಕಾರ ದಿಂದ ಮುಸ್ಲಿಂರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಸ್ವಾರ್ಥಕ್ಕಾಗಿ ದೇಶದ ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿದೆ. ದೇಶವನ್ನು ಗಟ್ಟಿಯಾಗಿ ಕಟ್ಟಲು ಶ್ರಮಿಸಿದ ಟಿಪು ಸುಲ್ತಾನರ ಇತಿಹಾಸವನ್ನು ತಿರುಚುವ ಕೆಲಸ ನಡೆದಿದೆ, ಟಿಪು ಸುಲ್ತಾನರು ದೇಶದ ಸ್ವಾತಂತ್ಯ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು ಆಗಿನ ಕಾಲದಲ್ಲೇ ರಾಕೇಟ್ಗಳನ್ನು ತಯಾರಿಸಿ, ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಅನೇಕ ಮಠ, ಮಂದಿಗರಳನ್ನು ನಿರ್ಮಿಸಿದ್ದರು, ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು ಅವರ ಇತಿಹಾಸದ ಕುರಿತು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಡಾ.ಅಂಬೇಡ್ಕರ ಅವರು ನೀಡಿರುವ ಮತದಾನದ ಹಕ್ಕನ್ನು ಸರಿಯಾರಿ ಬಳಸಿಕೊಂಡು ನಮಗೆ ಬೇಕಾದ ನಾಯಕರನ್ನು ಆರಿಸಿ ತರಬೇಕು, ಶೇ.75ರಷ್ಟಿರುವ ದಲಿತರು, ಮುಸ್ಲಿಂರು ಅಧಿಕಾರ ನಡೆಸುವಂತಾಬೇಕು, ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು, ಕೆಟ್ಟ ಪ್ರವೃತ್ತಿಯನ್ನು ಬಿಟ್ಟು ಒಗ್ಗಟ್ಟಿನಿಂದ ಬಸವತತ್ವಗಳ ಆಚರಣೆಗೆ ತರುವ ಮೂಲಕ ಎಲ್ಲರೂ ಸಮಾನರಾಗಿ ಬದುಕು ನಡೆಸಬೇಕು ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ನರೇಗಾ ಯೋಜನೆಯಲ್ಲಿದ್ದ ರಾಷ್ಟ್ರಪೀತ ಮಹತ್ಮಾಗಾಂಧಿಜಿ ಯವರ ಹೆಸರನ್ನು ತೆಗೆಯುವ ಕೆಲಸ ಮಾಡಿದ್ದಾರೆ ಆದರೆ ದೇಶದ ಜನರ ಮನಸ್ಸಿನಲ್ಲಿರುವ ಅವರ ಚಿಂತನೆಗಳನ್ನು ತೆಗೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ದೇಶವನ್ನು ಸರ್ವಜನಾಂಗದ ಶಾಂತಿಯ ತೊಟ ಮಾಡಲು ಶ್ರಮಿಸುತ್ತಿದೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಮುಖ್ಯವಾಗಹಿನಿಗೆ ಬರಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಹಾವೇರಿಯ ಅಲ್ಲಮಪ್ರಭು ಅಹಿಂದ ಪೀಠದ ಮಹೇಶ್ವರಾನಂದ ಸ್ವಾಮಿಜಿ ಮಾತನಾಡಿ, ದಲಿತರು, ಓಬಿಸಿಗಳು, ಮುಸ್ಲಿಂಮರು ಸೇರಿ ಶೇ.97 ಜನರಿದ್ದರೂ ಅಧಿಕಾರ ನಮ್ಮಬಳಿ ಇಲ್ಲವಾಗಿದೆ. ಅತ್ಯಂತ ಕಡಿಮೆ ಜನ ಸಂಖ್ಯೆಯ ಜನರು ನಮ್ಮನ್ನು ಆಳುತ್ತಿದ್ದಾರೆ. ಎಲ್ಲ ಹಿಂದುಳಿದ ಸಮಾಜಗಳು ಒಗ್ಗಟ್ಟಾಗಬೇಕು, ದೇಶವನ್ನು ಹಾಳು ಮಾಡಲು ಹೊರಟಿರುವ ಅಧಿಕಾರದಲ್ಲಿರುವರ ವಿರುದ್ಧ ಒಗ್ಗಟ್ಟಾಗ ಬೇಕು, ಅವರನ್ನು ಯಹೂದಿಗಳು ಎಂದು ಸಂಭೋಧಿಸುತ್ತೇನೆ ಎಂದು ಹೇಳಿದರು. ರಾಜ್ಯದಲ್ಲಿ ಕೋಟಿ ಜನರಿರುವ ಮುಸ್ಲಿಂರ 30 ಶಾಸಕರಿರಬೇಕು, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪು ಸುಲ್ತಾನರ ಹೆಸರಿಡಬೇಕು ಎಂದು ಹೇಳಿದರು. ನಟ ಶಾರೂಖ ಖಾನ ಟಿಪು ಸುಲ್ತಾನರ ಸಿನೆಮಾ ಮಾಡಬೇಕೆಂದು ಸಲಹೆ ನೀಡಿದರು.
ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಲತೀಫ ಖಾನ ಪಠಾಣ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ ವಿಶ್ವ ವಿದ್ಯಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಬಿಹಾರದ ಮೌಲಾನಾ ಅಬ್ದುಲ್ಲಾಸಾಲೀಂಕಮರ ಚತುರ್ವೇದಿ, ಉತ್ತರಪ್ರದೇಶದ ಹಜರತ ಪೀರ ಸೈಯದ ಕಾಸಿಂ ಅಶ್ರಫ, ಬಾಗಲಕೊಟೆಯ ಹಜರತ ಮೌಲಾನಾ ಮೊಹಸೀನಅಹಮದ್,ಕಾರಿ ಸಮಿಉಲ್ಲಾ ಖಾದ್ರಿ ಆಶಿರ್ವಚನ ನೀಡಿದರು.
ಓಲೆ ಮಠದ ಆನಂದ ದೇವರು, ರುದ್ರಾವಧೂತ ಮಠದ ಸಹಜಾನಂದ ಶ್ರೀಗಳು ಸಾನ್ನಿಧ್ಯವಹಿಸಿದ್ದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ, ಸುಶೀಲಕುಮಾರ ಬೆಳಗಲಿ, ರಾಜು ಗಸ್ತಿ, ರಿಯಾಜ ಅವಟಿ, ರಫಿಕ್ ಬಾರಿಗಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮೋಮಿನ, ಈಶ್ವರ ವಾಳೆಣ್ಣವರ, ರವಿ ಯಡಹಳ್ಳಿ, ವರ್ದಮಾನ ನ್ಯಾಮಗೌಡ, ದಾನೇಶ ಘಾಟಗೆ, ಸಮೀರ ಕಂಗನೊಳ್ಳಿ, ಅಲ್ತಾಫ ಸಗರ, ಅಬ್ದುಲ್ಸಾಬ ಜಮಾದಾರ, ಯಾಸೀನ ಲೋದಿ, ಅಬುಬಕರ ಕುಡಚಿ, ಸೇರಿದಂತೆ ಸಮಿತಿ ಹಾಗೂ ಸಲಹಾ ಸಮಿತಿಯ ಸದಸ್ಯರು ವೇದಿಕೆಯಲ್ಲಿದ್ದರು.
ಸಮಿತಿಯ ಅಧ್ಯಕ್ಷ ನಜೀರ ಕಂಗನೊಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಡಾ. ತೌಫಿಕ್ ಪಾರ್ಥನಳ್ಳಿ ಮಾನಾಡಿದರು. ಶ್ರೀನಿವಾಸ ಕಟ್ಟಿಮನಿ, ಮಲ್ಲಿಕಾರ್ಜುನ ಮಠ ನಿರೂಪಿಸಿದರು.

23rd December 2025
ಬಾಗಲಕೋಟೆ: : ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ವಿನೂತನದ ತಂತ್ರಜ್ಞಾನ ಹೊಸ ಹೊಸ ತಳಿಗಳತ್ತ ಅಣಿಯಾದಾಗಿ ಉತ್ಪಾದನೆಯತ್ತ ಗಮನಹರಿಸಿದಾಗ ಮಾತ್ರ ಬೇರೆ ದೇಶಗಳ ಜೊತೆ ಪೈಪೋಟಿ ಮಾಡಲಿಕ್ಕೆ ಸಾದ್ಯವಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳೆ ಹೇಳಿದರು.
ತೋಟಗಾರಿಕೆ ವಿವಿಯಲ್ಲಿ ರಾಷ್ಟ್ರೀಯ ದಿನಾಚರಣೆ, ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರಧಾನ ಹಾಗೂ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರಲ್ಲೂ ಸ್ಪರ್ಧೆ ಮಾಡಬೇಕಿದೆ. ಅದು ಮಾರುಕಟ್ಟೆ ಇರಬಹುದು, ಹೊಸ ತಳಿ, ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆಯುವಾಗ ನಮ್ಮ ಮುಂದಿರುವ ಸವಾಲುಗಳನ್ನು ನಾವು ಸ್ವೀಕರಿಸಬೇಕಾಗಿದೆ. ಅದಕ್ಕೆ ನಾವು ಕೂಡಾ ತಯಾರಾಗಬೇಕಾಗಿದೆ. ಇದರಿಂದ ಬೇರೆ ದೇಶಗಳ ಜೊತೆ ಸ್ಪರ್ಧೆಗೆ ಇಳಿಯಲು ಸಾಧ್ಯವಾಗುತ್ತದೆ ಎಂದರು.
ಬಾಗಲಕೋಟೆಯಲ್ಲಿ ತೋಟಗಾರಿಕೆ ಸ್ಥಾಪನೆ ಆದಮೇಲೆ ಬಹಳಷ್ಟು ಹೊಸ ಹೊಸ ತಳಿಗಳನ್ನು ಹೊರತಂದಿದ್ದು, ಆ ತಳಿಗಳ ಪರಿಚಯ ಮಾಡುವಂತಹ ಪ್ರಯತ್ನ ಮಾಡಿದೆ. ನಾವೆಲ್ಲ ಈಗಾಗಲೇ ಬಹಳಷ್ಟು ರೈತರು ಅಳವಡಿಸಿಕೊಂಡಿದ್ದೇವೆ. ನಾವುಈ ಭಾಗದಲ್ಲಿ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದೇವೆ. ಇದರ ಜೊತೆಗೆ ಪರ್ಯಾಯ ಬೆಳೆಗಳ ಅವಶ್ಯಕತೆ ಬಹಳಷ್ಟಿದೆ. ಸಾಧನೆ ಮಾಡಿದಂತ ರೈತರು ನಮಗೆಲ್ಲ ಪ್ರೇರಣೆಯಾಗಿದ್ದಾರೆ. 8 ಜಿಲ್ಲೆಯ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಮುಂದಿನ ಬಾರಿ ತಾವುಗಳ ಪ್ರಶಸ್ತಿ ಪಡೆಯುವಂತ ಸಾಧನೆ ಮಾಡುವತ್ತ ಹೆಜ್ಜೆ ಹಾಕಬೇಕು ಎಂದು ತಿಳಿಸಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ತೋಟಗಾರಿಕೆ ಮೇಳವನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಆಕರ್ಷಣೆಯಾಗಲಿ, ಇಂತಹ ಮೇಳದಿಂದ ಸಾಕಷ್ಟು ತೋಟಗಾರಿಕೆಯಲ್ಲಿ ಬದಲಾವಣೆ ಬರಲಿ. ಕಾರ್ಯಕ್ರಮವನ್ನು ತೋವಿವಿಯ ಕುಲಪತಿಗಳು ಮೂರು ದಿನಗಳ ಕಾಲ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಿದ್ದಾರೆ. ಮುಂದಿನ ಸಲ ಇನ್ನಷ್ಟು ವಿಶೇಷತೆಯಿಂದ ಕೂಡಿರಲಿ ಎಂದು ತಿಳಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ರೈತರಿಗೆ ಅವರ ಶ್ರಮಕ್ಕೆ ತಕ್ಕಂತೆ ಉತ್ಪಾದನೆ ಬಂದು ಅವರ ಆದಾಯ ಮಟ್ಟ ಹೆಚ್ಚಾಗಬೇಕಿದೆ. ವಿಶ್ವವಿದ್ಯಾಲಯ ಹೊರತಂದ ವಿನೂತನ ತಂತ್ರಜ್ಞಾನದ ಮೂಲಕ ಹೊಸ ಮಾದರಿಯ ತಳಿಗಳ ಮಾಹಿತಿಯನ್ನು ಪಡೆದುಕೊಂದು ಕೃಷಿ ಮತ್ತು ತೋಟಗಾರಿಕೆಯಲ್ಲಿ ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು. ಮುಖ್ಯವಾಗಿ ಯುವಕರು ಕೃಷಿಯತ್ತ ಹೆಚ್ಚಿನ ಗಮನಹರಿಸುವ ಕೆಲಸವಾಗಬೇಕು. ಕೇವಲ ಕಬ್ಬನ್ನು ಬೆಳೆಯುವದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಉತ್ತಮ ಬೆಳೆ ತೆಗೆಯುವದರ ಜೊತೆಗೆ ಮಣ್ಣಿ ಫಲವತ್ತತೆ ಕಾಪಾಡಿಕೊಳ್ಳುವತ್ತ ಗಮನಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ಗದಗ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಶ್ರೀಗಳು ವಹಿಸಿದ್ದರು. ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಡಾ.ಆರ್.ಸಿ.ಜಗದೀಶ, ಬಾಗಲಕೋಟೆ ನಬಾರ್ಡನ ಜಿಲ್ಲಾ ವ್ಯವಸ್ಥಾಪಕ ಡಾ.ಮಂಜುನಾಥ ರೆಡ್ಡಿ, ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಸೇರಿದಂತೆ ತೋವಿವಿಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

22nd December 2025
ಬಾಗಲಕೋಟೆ :: ರೈತರಿಗೆ ತಾವು ಬೆಳೆದ ಬೆಳೆಗಳ ರಫ್ತು ಕುರಿತಂತೆ ಸೂಕ್ತ ಮಾಹಿತಿ ಒದಗಿಸಲು ಕೃಷಿ ಮಾರಾಟ ಇಲಾಖೆ ಪ್ರಾಂಗಣದಲ್ಲಿ ರಫ್ತು ಮಾಹಿತಿ ಕೇಂದ್ರ ತೆರೆಯುವಂತೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸಲಹೆ ನೀಡಿದರು.
ನವನಗರದ ಕೃಷಿ ಉತ್ಪನ್ನ ಮಾರಾಟ ಇಲಾಖೆಯ ಪ್ರಾಂಗಣದಲ್ಲಿ ಆರಂಭಿಸಲಾದ ತೊಗರಿ ಖರೀದಿ ಹಾಗೂ ನೊಂದಣ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಯಾವ ಯಾವ ರಾಜ್ಯ ಮತ್ತು ದೇಶಗಳಲ್ಲಿ ಎಷ್ಟರ ಮಟ್ಟಿಗೆ ಬೇಡಿಕೆ ಇದೆ, ಅಲ್ಲಿನ ದರ, ಬೇಡಿಕೆ ಮತ್ತು ಪೂರೈಕೆ ಕುರಿತಂತೆ ಮಾಹಿತಿ ನೀಡಲು ರಫ್ತು ಮಾಹಿತಿ ಕೇಂದ್ರ ಅವಶ್ಯಕತೆ ಇದೆ. ಇದರಿಂದ ರೈತರಿಗೆ ತಮ್ಮ ಬೆಳೆಗಳನ್ನು ಎಲ್ಲಿ, ಹೇಗೆ ಮತ್ತು ಯಾವಾಗ ಮಾರಾಟ ಮಾಡಬೇಕೆಂಬುದರ ಕುರಿತು ಸರಿಯಾದ ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದರು.
ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 24 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ಗೆ 8 ಸಾವಿರ ರೂ.ಗಳಂತೆ ಖರೀದಿ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 53262 ಹೆಕ್ಟೆರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, 66578 ಮೆಟ್ರಿಕ್ ಟನ್ ಉತ್ಪಾದನೆ ನೀರಿಕ್ಷಿಸಲಾಗಿದೆ. ಪ್ರತಿ ಎಕರೆಗೆ 4 ಕ್ವಿಂಟಲ್ನಂತೆ ಖರೀದಿಸಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಬಾಗಲಕೋಟೆ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ. ಹುನಗುಂದಲ್ಲಿ ಈಗಾಗಲೇ 30 ಜನ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಖರೀದಿ ಕೇಂದ್ರಕ್ಕೆ ಬರಲು ಆಗದ ವೃದ್ದ ರೈತರ ಮನೆಗೆ ತೆರಳಿ ಬಯೋಮ್ಯಾಟ್ರಿಕ್ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಮೆಕ್ಕೆಜೋಳಗ ಖರೀದಿ ಪ್ರಕ್ರಿಯೆ ನಡೆದಿದೆ. ಜಿಲ್ಲೆಯಲ್ಲಿ 47450 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಿ ತಿಳಿಸಿದರು. ಖರೀದಿ ಕೇಂದ್ರದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಸರಕಾರ ಮಾಡುತ್ತಿದೆ. ಬೆಳೆ ಹಾನಿ ಪರಿಹಾರವಾಗಿ 139 ಕೋಟಿ ನೀಡಲಾಗಿದ್ದು, ಹೆಚ್ಚುವರಿಯಾಗಿ 55 ಕೋಟಿ ರೂ. ಪರಿಹಾರ ಸಹ ಜಮೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅಶೋಕ್ ತೇಲಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತಹಶೀಲ್ದಾರ ವಾಸುದೇವಸ್ಥಾಮಿ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ವಿ.ಡಿ.ಪಾಟೀಲ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕಿ ಸುಪ್ರೀಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

22nd December 2025
ಜಮಖಂಡಿ : ಹಜರತ್ ಟಿಪ್ಪು ಸುಲ್ತಾನ ಜಯಂತ್ಯೋತ್ಸವ ಹಿನ್ನಲೆಯಲ್ಲಿ ಡಿ.23 ರಂದು ಸಾಯಂಕಾಲ 5 ಗಂಟೆಗೆ ಕೌಮಿ ಏಕತಾ ಸಮ್ಮೇಳನ (ಸರ್ವಧರ್ಮ ಸಮ್ಮೇಳನ) ಹಮ್ಮಿಕೊಳ್ಳಲಾಗಿದೆ ಎಂದು ಶಹೀದ ಹಜರತ ಟಿಪ್ಪು ಸುಲ್ತಾನ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಜವಳಿ ನಿಗಮದ ಮಾಜಿ ಉಪಾಧ್ಯಕ್ಷ ನಜೀರ ಕಂಗನೊಳ್ಳಿ ತಿಳಿಸಿದರು.
ನಗರದ ಅಬುಬಕರ ದರ್ಗಾದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ಐತಿಹಾಸಿಕ ಸರ್ವಧರ್ಮಗಳ ಶೃದ್ದಾಕೇಂದ್ರ ಅಬುಬಕರ ದರ್ಗಾ ದರ್ಗಾದಲ್ಲಿ ನಡೆಯುವ ಸರ್ವಧರ್ಮಗಳ ಸಮ್ಮೇಳನದಲ್ಲಿ ಬಿಹಾರದ ಮೌಲಾನಾ ಅಬ್ದುಲ್ಲಾಸಾಲೀಂ ಕಮರ ಚತುರ್ವೇದಿ, ಉತ್ತರ ಪ್ರದೇಶದ ಮೌಲಾನಾ ಹಜರತ್ಪೀರ ಸೈಯದ ಕಾಶಿಮ್ ಆಶ್ರಫ,ಹಾವೇರಿಯ ಉತ್ತರ ಕರ್ನಾಟಕ ಅಹಿಂದ ಗುರುಪೀಠ ಪೀಠಾಧ್ಯಕ್ಷರು ಮಹೇಶ್ವರಾನಂದ ಸ್ವಾಮೀಜಿ, ರುದ್ರಾವಧೂತ ಮಠದ ಸಹಜಾನಂದ ಅವಧೂತರು, ಒಲೆಮಠದ ಆನಂದ ದೇವರು, ಬಾಗಲಕೋಟೆ ಸುನ್ನತವಲ್ಲ ಜಮಾತ ಜಿಲ್ಲಾ ಅಧ್ಯಕ್ಷ ಕಾರಿ ಸಮಿವುಲ್ಲಾ ಖಾದ್ರಿ, ರೆವರೆಂಡ್ ಫಾದರ ಲಕ್ಷ್ಮಣ ಬಿ, ಹಜರತಮೌಲಾನಾ ಮೋಹಸೀನಾಹ್ಮದ ಇನಾಮಿ ಸಾನ್ನಿದ್ಯವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಬೃಹತ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಇಂಡಿಯನ್ ಟ್ರೇಡ್ ಯೂನಿಯನ್ ನ್ಯಾಶನಲ್ ಕಾಂಗ್ರೆಸ್ರಾ ಜ್ಯಾಧ್ಯಕ್ಷರ ಟಿ.ವೈ.ಕುಮಾರ, ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಲಥೀಪಖಾನ್ ಪಠಾಣ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಶಾಸಕ ಸಿದ್ದು ಸವದಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಬಿ.ಬಿ.ಚಿಮ್ಮನಕಟ್ಟಿ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ ಇತರರು ಪಾಲ್ಗೋಳ್ಳುವರು ಎಂದರು.
ಜಮಖಂಡಿ ನಗರದಲ್ಲಿ ಹಮ್ಮಿಕೊಂಡಿರುವ ಕೌಮಿ ಏಕತಾ ಸಮ್ಮೇಳನಕ್ಕೆ ಅಂದಾಜು 5 ಸಾವಿರಕ್ಕೂ ಅಧಿಕ ಜನರು ಸೇರುವ ನೀರಿಕ್ಷೆ ಇದೆ, ಆ ನಿಟ್ಟಿನಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ನಮ್ಮ ರಾಷ್ಟ್ರ- ದೇಶ ಅಭಿವೃದ್ಧಿ ಹೊಂದಬೇಕಾದರೆ ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದ ಕೆಲಸ ಮಾಡಬೇಕು. ಜಾತೀಯತೆ ಕೇವಲ ದ್ವೇಷವನ್ನು ಬಿತ್ತುತ್ತದೆ, ಒಗ್ಗಟ್ಟು ದೇಶವನ್ನು ಕಟ್ಟುತ್ತದೆ. ಬಡವ-ಬಲ್ಲಿದ ಎಂಬ ವ್ಯತ್ಯಾಸ ಹೋಗಲಾಡಿಸಲು ನಮಗೆ ಜಾತೀಯತೆ ಮೀರಿದ ಮಾನವೀಯತೆ ಮೈಗೂಡಿಸಿಕೊಳ್ಳಬೇಕು.
ಸುಂದರ ಸಮಾಜಕ್ಕೆ ಶಾಂತಿ ಅಡಿಪಾಯ, ಆ ಶಾಂತಿಗೆ ಒಗ್ಗಟ್ಟೇ ಮದ್ದಾಗಿದೆ, ಅದಕ್ಕೆ ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಕ್ರಾಂತಿಕಾರಿ ಬಸವಣ್ಣನವರು, ಮತ್ತು ಕನಕದಾಸರಂತಹ ಮಹಾನ್ ವ್ಯಕ್ತಿಗಳು ಅಂದೇ ಹೇಳಿದ್ದಾರೆ.
ಇಂಡಿಯನ್ ಟ್ರೇಡ್ ಯೂನಿಯನ್ ನ್ಯಾಶನಲ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಮೀತಿ ಉಪಾಧ್ಯಕ್ಷ ಡಾ.ತೌಫಿಕ ಪಾರ್ಥನಳ್ಳಿ ಮಾತನಾಡಿ, ಟಿಪ್ಪು ಸುಲ್ತಾನರು ತಮ್ಮ ಅಧಿನದಲ್ಲಿ ಯಾವ ಜಾತಿಗೂ ವ್ಯತ್ಯಾಸ ಮಾಡದೆ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದರು ಅವರ ದೇಶ ಪ್ರೇಮ ಯುವಕರಿಗೆ ಪ್ರೇರಣೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಲ್ತಾಪ ಸಗರ, ಸಮೀರ ಕಂಗನೊಳ್ಳಿ, ರಿಯಾಜ ಅವಟಿ, ಅಬ್ದುಲ ಜಮಾದಾರ, ಇಸಾ ಇನಾಮದಾರ, ಅಬುಬಕರ ಕುಡಚಿ, ಮಹಿಬೂಬ ಪೆಂಡಾರಿ, ಸಾಧಿಕ ಬಂಟನೂರ, ರೇಹಮಾನ ಜಮಖಂಡಿ, ಯಾಸೀನ ಲೋದಿ, ಮುಸ್ತಾಪ ಕರಜಗಿ, ಮುಸ್ತಾಕ ಝಂಡೆ ಇತರರು ಇದ್ದರು.

12th February 2025
ಜಮಖಂಡಿ: ಕ್ಷೇತ್ರದ ಗ್ರಾಮೀಣ ರಸ್ತೆಗಳ ಸುಧಾರಣೆ, ನಗರ ಪ್ರದೇಶದಲ್ಲಿನ ಒಳಚರಂಡಿ, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಾಗಿ ಸಂಬಂದಪಟ್ಟ ಇಲಾಖೆಯ ಸಚಿವರೊಂದಿ ಚರ್ಚಿಸಿ ಅಂದಾಜು 25ಕೋಟಿಗೂ ಅಧಿಕ ವೆಚ್ಚದ ಅನುದಾನ ವಿವಿಧ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಸಜ್ಜಿ ಹನುಮಾನ ದೇವಸ್ಥಾನದ ಹತ್ತಿರ ಲೋಕೋಪಯೋಗಿ ಇಲಾಖೆಯ 2024-25ನೇ ಸಾಲಿನ ಎಸ್.ಎಚ್.ಡಿ.ಪಿ5ರ ಒಂದನೇ ಹಂತದ ಕಾಮಗಾರಿ ನಗರದ ಎಸ್.ಆರ್.ಎ ಕ್ಲಬ್ ದಿಂದ ಚನ್ನಮ್ಮ ವೃತ್ತದವರೆಗೆ ಅಂದಾಜು 824ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುಮುಖ್ಯ ಅಭಿವೃದ್ಧಿ ಕಾಮಗಾರಿಗಳನ್ನು ಮುತವರ್ಜಿವಹಿಸಿ ಸರಕಾರದ ಮಟ್ಟದಲ್ಲಿ ಮಾತನಾಡಿ ಹಲವು ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ. ಮುಂಬರುವ ದಿನಗಳಲ್ಲಿ ಹಲವಾರು ಕಾಮಗಾರಿಗಳ ಯೋಜನೆ ರೂಪಿಸಲಾಗಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವದು ಎಂದರು.
ಅಭಿವೃದ್ಧಿ ಕಾಮಗಾರಿಗಳು ಪುರ್ಣಗೊಳ್ಳಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಮುಲ್ಯವಾಗಿದೆ. ಈ ರಸ್ತೆ ಕಾಮಗಾರಿಯು ತ್ವರಿತ ಗತಿಯಲ್ಲಿ ನಡೆಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವದು ಎಂದರು.
ಕಡಿಮೆ ಅವಧಿಯಲ್ಲಿ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಬೇಕು ಎಮದು ಗುತ್ತಿಗೆದಾರ ಎಮ್.ಎಲ್. ಲಮಾಣಿ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಬೆ ಅಧ್ಯಕ್ಷ ಪರಮಾನಂದ ಗವರೋಜಿ, ಪಿಡಬ್ಲೂಡಿ ಎಇಇ ಎಸ್.ಆರ್. ಬಂಡಿವಡ್ಡರ, ನಗರಸಭೆ ಪೌರಾಯುಕ್ತ ಜ್ಯೋತಿಗಿರೀಶ, ಹೆಸ್ಕಾಂ ಎಇಇ ವಿಶಾಲ ಧರೆಪ್ಪಗೋಳ, ಜಿಎಲ್ಬಿಸಿ ಎಇಇ ನಾಯ್ಕ, ನಾಗಪ್ಪ ಸನದಿ, ಮಲ್ಲು ದಾನಗೌಡ, ಎಂ.ಬಿ. ನ್ಯಾಮಗೌಡ, ಈಶ್ವರ ಆದೆಪ್ಪನವರ, ಶಂಕರ ಕಾಳೆ, ಸುರೇಶಗೌಡ ಪಾಟೀಲ, ರಾಜುಗೌಡ ಪಾಟೀಲ, ಧರೆಪ್ಪ ಗುಗ್ಗರಿ, ಅರವಿಂದಗೌಡ ಪಾಟೀಲ, ಸಂಗು ದಳವಾಯಿ, ವಿಠ್ಠಲ ಹಾಲಗೊಂಡ, ರಮೇಶ ಆಲಬಾಳ, ಶ್ರೀಧರ ಕಂಬಿ ಇತರರು ಇದ್ದರು.