ಸಂಘದ ಅಧ್ಯಕ್ಷ ಬಲರಾಮ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ಅವರು ಸಭೆಯ ನಡಾವಳಿಯನ್ನು ಓದಿದರು. ಸಮಿತಿ ಮಂಡಿಸಿದ ವಾರ್ಷಿಕ ವರದಿಯನ್ನು ಸಭೆಯಲ್ಲಿ ಪರಿಗಣಿಸಿ, 2025–26ನೇ ಸಾಲಿನ ವಾರ್ಷಿಕ ವರದಿಗೆ ಅನುಮೋದನೆ ನೀಡಲಾಯಿತು. ಸಂಘದ ಕಾರ್ಯನಿರ್ವಹಣೆಯಲ್ಲಿನ ನ್ಯೂನತೆಗಳ ಕುರಿತು ಸದಸ್ಯರು ಚರ್ಚೆ ನಡೆಸಿದರು.
ಸಂಘದ ಸದಸ್ಯರಿಗೆ ಸಂಬಂಧಿಸಿದ ವಿವಿಧ ವಿಚಾರಗಳು, ಸಂಘದ ಅಭಿವೃದ್ಧಿ ಹಾಗೂ ಮುಂದಿನ ಸಾಲಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ 2025–26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಭೆಯಲ್ಲಿ ಸಂಘದ ನಿರ್ದೇಶಕರಾದ ಡಿ. ಕೃಷ್ಣಮೂರ್ತಿ, ಬೋರಲಿಂಗೇಗೌಡ (ಕುಮಾರ್), ರಂಗಸ್ವಾಮಿ, ಕುಮಾರ್, ಆರ್.ಬಿ. ಗೋಪಾಲ್, ಎಂ. ಮಲ್ಲಪ್ಪ, ಎಂ. ಜಯಮ್ಮ, ಗಾಯತ್ರಿಸ್ವಾಮಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಘದ ಹಲವು ಸದಸ್ಯರು ಉಪಸ್ಥಿತರಿ
ದ್ದರು.







