15th January 2026
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ
ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ
ಕೋಲಾರ:- ಜನತೆ ಸಂಕ್ರಾ0ತಿ ಸಂಭ್ರಮದಲ್ಲಿ ಮುಳುಗಿರುವಾಗಲೇ ಆರೋಪಿ ಯುವಕನೋರ್ವ ಮದುವೆಯಾಗಲು ಗೋಗರೆದಿದ್ದ ತನ್ನ ಪ್ರಿಯತಮೆ ನಂತರ ಮದುವೆಗೆ ಒಪ್ಪದ ಕಾರಣ ಹಾಡುಹಗಲೇ ನಡು ರಸ್ತೆಯಲ್ಲಿ ಬರ್ಬರವಾಗಿ ಕ್ಷಣಾರ್ಧದಲ್ಲಿ ಹತ್ಯೆ ಮಾಡಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೋಲಾರದಲ್ಲಿ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ನಡೆದಿದೆ.
ನಗರದ ಹೊರವಲಯದ ಬಂಗಾರಪೇಟೆ ವೃತ್ತದದ ರಾಷ್ಟಿçಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಹತ್ತುವ ಜಾಗದಲ್ಲೇ ಆರೋಪಿ ಚಿರಂಜೀವಿ(30) ತನ್ನ ಪ್ರಿಯತಮೆ ಸುಜಾತ(27) ಎಂಬಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯೊAದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸುಜಾತ ಗುರುವಾರ ಕೆಲಸಕ್ಕೆ ಹೋಗಲು ತಮ್ಮೂರು ಬಂಗಾರಪೇಟೆ ತಾಲ್ಲೂಕು ಕತ್ತಹಳ್ಳಿಯಿಂದ ಕೋಲಾರಕ್ಕೆ ಬಂದಿದ್ದಳು. ಈ ವೇಳೆ ತನ್ನ ಜೊತೆಯಲ್ಲೇ ಬಂದಿದ್ದ ಬಂಗಾರಪೇಟೆ ತಾಲ್ಲೂಕು ಯಳಬುರ್ಗಿ ಗ್ರಾಮದ ಚಿರಂಜೀವಿ ಎಂಬಾತನೊ0ದಿಗೆ ಬಸ್ನಲ್ಲಿ ಜಗಳವಾಡಿಕೊಂಡು ಬಂದಿದ್ದು, ಇಬ್ಬರೂ ಕೋಲಾರದ ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿ ಇಳಿಯುತ್ತಿದ್ದಂತೆ ಚಿರಂಜೀವಿ ಏಕಾಏಕಿ ತನ್ನ ಕೀ ಚೈನಿನಲ್ಲಿದ್ದ ಚಾಕುವೊಂದನ್ನು ಬಳಸಿ ಸುಜಾತಳ ಕತ್ತು ಕುಯ್ದಿದ್ದ. ಕತ್ತು ಸೀಳುತ್ತಿದ್ದಂತೆ ಸುಜಾತ ಕ್ಷಣಾರ್ಧದಲ್ಲೇ ಕೊನೆಯುಸಿರೆಳೆದಳು.
ಈ ಎಲ್ಲಾ ದೃಶ್ಯಗಳನ್ನು ನೋಡುತ್ತಿದ್ದ ಸ್ಥಳದಲ್ಲಿದ್ದ ಸ್ಥಳೀಯರು ಕೊಲೆ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಹೋದ ಚಿರಂಜೀವಿಯನ್ನು ಹಿಡಿದು ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಆತನ ಬಟ್ಟೆ ಬಿಚ್ಚಿ ಜನರು ಅಯ್ಯೋ ಅನ್ಯಾಯವಾಗಿ ಒಂದು ಜೀವ ತೆಗೆದುಬಿಟ್ಯಲ್ಲೋ ಎಂದು ಕೋಪದಿಂದ ಧರ್ಮದೇಟು ನೀಡಿದ ನಂತರ ಕೊಲಾರ ನಗರ ಠಾಣಾ ಪೊಲೀಸರು ಪೋನ್ ಕರೆ ಮಾಡಿ ತಿಳಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು.
ಸ್ಥಳಕ್ಕೆ ಬಂದಿದ್ದ ಕೋಲಾರ ನಗರ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು. ಸ್ಥಳಕ್ಕೆ ಬಂದಿದ್ದ ಎಸ್ಪಿ ಕನ್ನಿಕಾಸುಕ್ರಿವಾಲ್ ಹಾಗೂ ಸೋಕೋ ಟೀಂ ಪರಿಶೀಲನೆ ನಡೆಸಿ ಪ್ರಕರಣ ಸಂಬ0ಧ ತನಿಖೆ ಕೈಗೊಂಡಿದೆ.
ಬAಗಾರಪೇಟೆ ತಾಲ್ಲೂಕಿನ ಕತ್ತಹಳ್ಳಿಯ ಕೃಷ್ಣಮೂರ್ತಿ ಮಗಳು ಸುಜಾತ, ಈಕೆಗೆ ಮದುವೆಯಾಗಿ ಒಂದು ಗಂಡು ಮಗುವಿದೆ, ಆದರೆ ಕೆಲವು ವರ್ಷಗಳ ಹಿಂದೆ ಗಂಡನಿ0ದ ಈಕೆ ವಿಚ್ಚೇದನ ಪಡೆದಿದ್ದಳು, ನಂತರ ಈಕೆ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದಳು, ಇತ್ತೀಚೆಗೆ ಅಂದರೆ ಕಳೆದ ಮೂರು ತಿಂಗಳ ಹಿಂದಷ್ಟೇ ಕೋಲಾರ ತಾಲ್ಲೂಕು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಬೆಲ್ರೈಸ್ ಅನ್ನೋ ಕಂಪನಿಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು.
ಈಕೆಗೆ ಇಂಡಾಸ್ ಬ್ಯಾಂಕ್ನಲ್ಲಿ ಕ್ರೆಡಿಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಬಂಗಾರಪೇಟೆ ತಾಲ್ಲೂಕು ಯಳಬುರ್ಗಿ ಚಿರಂಜೀವಿರೊAದಿಗೆ ಪರಿಚಯವಾಗಿತ್ತು. ಮಹಿಳಾ ಸ್ತಿçÃಶಕ್ತಿ ಸಂಘಗಳಿಗೆ ಸಾಲ ನೀಡುವ ವಿಚಾರವಾಗಿ ಗ್ರಾಮಕ್ಕೆ ಬಂದು ಹೋಗಿ ಮಾಡುತ್ತಿದ್ದ ಚಿರಂಜೀವಿ ಪರಿಚಯವಾಗಿ ನಂತರ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.
ಚಿರಂಜೀವಿ ಕೂಡಾ ಆಕೆಗೆ ಬೇಕಾದ ಹಣ ಕೊಡೋದು ತೊಗೊಳೋದು ಮಾಡುತ್ತಿದ್ದ, ಹೀಗಿರುವಾಗಲೇ ಒಂದು ದಿನ ಚಿರಂಜೀವಿಗೆ ಮದುವೆಯಾಗಿದೆ ಅನ್ನೋ ವಿಚಾರ ತಿಳಿಯುತ್ತದೆ, ಚಿರಂಜೀವಿಗೆ ಮದುವೆಯಾಗಿ ಮಕ್ಕಳಿದ್ದಾರೆ ಅನ್ನೋ ವಿಷಯ ತಿಳಿದ ನಂತರ ಸುಜಾತ ಚಿರಂಜೀವಿಯ ಜೊತೆಗೆ ಮಾತು ಕಡಿಮೆ ಮಾಡಿದ್ದಳು ಇದು ಚಿರಂಜೀವಿಗೆ ಕಷ್ಟವಾಗಿತ್ತು.
ಆಗ ತಾನು ಕೊಟ್ಟಿದ್ದ ಹಣ ವಾಪಸ್ ಕೊಡು ಇಲ್ಲ ನನ್ನನ್ನು ಮದುವೆಯಾಗು ಎಂದು ಹಠಕ್ಕೆ ಬಿದಿದ್ದ ಆಕೆಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ಈ ಸಂಬ0ಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳೆದ ಡಿ.20ರಂದು ಒಂದು ಪ್ರಕರಣ ಕೂಡಾ ದಾಖಲಾಗಿತ್ತು.
ಇದೆಲ್ಲದರ ನಡುವೆ ಸುಜಾತ ಚಿರಂಜೀವಿಯನ್ನು ಮಾತಾಡದೆ ಆತನನ್ನು ಆವೈಡ್ ಮಾಡಲು ಮುಂದಾಗಿದ್ದು ಚಿರಂಜೀವಿಗೆ ನುಂಗಲಾರದ ತುತ್ತಾಗಿತ್ತು. ಇಂದು ಕೂಡಾ ಸುಜಾತ ಕೆಲಸಕ್ಕೆಂದು ಹೊರಟಾಗ ಆಕೆಯೊಂದಿಗೆ ಬಸ್ನಲ್ಲಿ ಜಗಳ ಮಾಡಿಕೊಂಡೇ ಬಂದಿದ್ದ ಚಿರಂಜೀವಿ ಕೋಲಾರ ಹೊರವಲಯದಲ್ಲಿ ಬಸ್ ಇಳಿದು ಕಂಪನಿ ಬಸ್ಗಾಗಿ ಕಾಯುತ್ತಿದ್ದ ಸುಜಾತಳನ್ನು ಕೊಲೆಗೈದು ಜೈಲು ಪಾಲಾಗಿದ್ದಾನೆ.
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಾಲ್ಯ ವಿವಾಹ ಪ್ರಕರಣ: ಮೂವ್ವರಿಗೆ ಜೈಲು ಶಿಕ್ಷೆ- ಗಂಗಾವತಿ ನ್ಯಾಯಾಲಯದಲ್ಲಿ ತೀರ್ಪು ಪ್ರಕಟ