
30th July 2025
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ ಅಭಿಮತ
ಹಿರಿಯ ಸಾಹಿತಿ ಶಿರಿಷ್ ಜೋಶಿ ಯವರ ಸಾಹಿತ್ಯ ಸೇವೆ ಬಹುಮುಖಿಯಾಗಿದ್ದು ರಂಗಭೂಮಿ ಚಲನಚಿತ್ರ, ಕ್ಷೇತ್ರ ದರ್ಶನ ಕಾದಂಬರಿಗಳು, ವ್ಯಕ್ತಿ ಚಿತ್ರಣಗಳು, ನಾಡು ನುಡಿ ಕುರಿತಾದ ಗ್ರಂಥಗಳು ವಿಶೇಷವಾಗಿ ಕರ್ನಾಟಕದ ಏಳು ಜನ ಸಂಗೀತ ಲೋಕದ ದಿಗ್ಗಜರ ಕುರಿತಾದ ಮಾಹಿತಿ ಪೂರ್ವಕ ಕೃತಿಗಳು ನಿಜಕ್ಕೂ ಅವರ ಅಧ್ಯಯನ ಶೀಲತೆ ಮತ್ತು ಸಾಹಿತ್ಯ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸೋಮವಾರ ದಿ. 28ರಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾದ 'ನುಡಿ ತೇರಿಗೆ ನೂರೊಂದು ನಮನ 'ಸರಣಿ ಕಾರ್ಯಕ್ರಮ ಮಾಲಿಕೆಯಲ್ಲಿ ಹಿರಿಯ ಸಾಹಿತಿಗಳಾದ 'ಶಿರಿಷ್ ಜೋಶಿ ಅವರ ಬದುಕು ಬರಹ' ಕುರಿತು ಹಿರಿಯ ಸಾಹಿತಿ ಡಾ ಗುರುದೇವಿ ಹುಲ್ಲೆಪ್ಪನವರಮಠ ರವರು ಮಾತನಾಡಿದರು. ಶಿರಿಷ್ ಜೋಶಿ ಅವರ ಪ್ರತಿ ಕೃತಿಗಳು ಆಳವಾಗಿ ಅಧ್ಯಯನ ಮಾಡಿ ಸಂಶೋಧನಾತ್ಮಕ ರೀತಿಯಲ್ಲಿ ಅವನ್ನು ಅರಿತು ರಚಿಸಿದಂತವುಗಳಾಗಿವೆ.ಅವರ ನಡೆ ನುಡಿ,ಆದರ್ಶ ಎಲ್ಲರ ಕುರಿತಾದ ಗೌರವ ನಿಜಕ್ಕೂ ಅನುಕರನಣೀಯ. ಅವರ ವಿಶೇಷ ಕಲೆ ನಿರ್ದೇಶನ. ಅವರ ನಿರ್ದೇಶನದಲ್ಲಿ ಮೂಡಿಬಂದ ಅನೇಕ ನಾಟಕಗಳು ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ. ಅವರು ಬರೆದ ಸಂಭಾಷಣೆಯಲ್ಲಿ ಮೂಡಿ ಬಂದ ಇಂಗಳೇಮಾರ್ಗ,ಸಾವಿತ್ರಿಬಾಯಿ ಪುಲೆ 1947 ಜುಲೈ 22 ಚಲನಚಿತ್ರಗಳು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿವೆ. ಅವರಿಂದ ಭಾಷಾಂತರವಾದ ಅನೇಕ ಕೃತಿಗಳು ಮೂಲ ಕೃತಿಯನ್ನೇ ಹೋಲುವಂತಹ ಉತ್ಕೃಷ್ಟತೆ ಹೊಂದಿವೆ. ಸೂಕ್ಷ್ಮ ಗುಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕುತೂಹಲ ಕೆರಳಿಸುವ ಅವರ ಕಾದಂಬರಿ ರಚನೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ ಅಂತಹ ಮಹಾನ್ ಕೃತಿಗಳ ಅಧ್ಯಯನ ಈಗಿನ ಯುವ ಜನತೆ ಮಾಡಿದ್ದೇ ಆದರೆ ಯುವ ಜನರು ಸಹ ಈ ಸಾಹಿತ್ಯ ಅಭಿರುಚಿ ಯನ್ನು ಬೆಳೆಸಿಕೊಳ್ಳಬಹುದು.ಆ ನಿಟ್ಟಿನಲ್ಲಿ ಈ ದಿನ ಇಟ್ಟಿರುವ ಅವರ ಬದುಕು ಗುರಿತಾದ ಮೆಲಕು ಹಾಕುವ ಕಾರ್ಯಕ್ರಮ ನಿಜಕ್ಕೂ ಅವರ ಸಾಹಿತ್ಯ ಸೇವೆಗೆ ನಾವು ಕೊಟ್ಟಿರುವ ಗೌರವ ಎನ್ನಬಹುದು ಎಂದು ಅವರ ಬದುಕು ಬರಹವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಪಿ. ಬಿ. ಸ್ವಾಮಿ ಜೋಶಿಯವರ ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್ ಇಂಚಲ್ ರವರು ಜೋಶಿಯವರ ಸಮಗ್ರ ಕೃತಿಗಳು ಅತ್ಯಂತ ಗುಣಮಟ್ಟ ಹೊಂದಿದವುಗಳಾಗಿವೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಬಸವರಾಜ ಜಗಜಂಪಿ,ಪಿ ಜಿ ಕೆಂಪಣ್ಣವರ, ಎ. ಎ. ಸನದಿ, ಸುಭಾಷ ಏಣಗಿ, ಅರವಿಂದ ಹುನಗುಂದ,ಜ್ಯೋತಿ ಬದಾಮಿ, ಎಲ್ಎಸ್ ಶಾಸ್ತ್ರಿ ಮಧುಕರ ಗುಂಡೇನಟ್ಟಿ, ಶಾರದಾ ಭೋಜ, ಅನಂತ ಪಪ್ಪು, ಶ್ವೇತಾ ನರಗುಂದ, ಶೈಲಜಾ ಬಿಂಗೆ, ಭಾಗ್ಯಶ್ರೀ ಕುಲಕರ್ಣಿ, ಡಾ ಜಯಂತ ಕಿತ್ತೂರ,ಎಸ್. ಬಿ. ದಳವಾಯಿ,ಶ್ರೀನಿವಾಸ ಪಂಡಿತ, ಎಸ್. ಆರ್, ಕ್ಷಿರಸಾಗರ, ಇಂದಿರಾ ಮೂಟೆಬೆನ್ನೂರು, ಎ. ಆರ್. ಕುಲಕರ್ಣಿ, ಶ್ರೀರಂಗ ಜೋಶಿ ಬಿ ಬಿ ಮಠಪತಿ, ಎಂ. ಬಿ. ಮರಲಕ್ಕನವರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ವೀರಭದ್ರ ಅಂಗಡಿ ಸ್ವಾಗತಿಸಿದರು ಜಿಲ್ಲಾ ಕಾರ್ಯದರ್ಶಿ ಎಂ.ವೈ ಮೆಣಸಿನಕಾಯಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಆರ್. ಬಿ. ಬನಶಂಕರಿ ಪರಿಚಯಿಸಿದರು. ಡಾ.ಹೇಮಾವತಿ ಸೋನೋಳ್ಳಿ ನಿರೂಪಿಸಿದರು ಕೊನೆಯಲ್ಲಿ ಶಿವಾನಂದ ತಲ್ಲೂರ ವಂದಿಸಿದರು
29th July 2025
ಹುಕ್ಕೇರಿ ತಾಲೂಕಿನ ಸಾಹಿತಿಗಳಿಗೆ ಕಿತ್ತೂರಿನ ಕಲ್ಮಠದಲ್ಲಿ ಬರಹವೇ ಶಕ್ತಿ ವೇದಿಕೆಯಿಂದ ಚೆನ್ನಮ್ಮ ಬರಹಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ ಪ್ರಶಸ್ತಿ ಪಡೆದ ತಾಲೂಕಿನ ಕವಿಯತ್ರಿಯರು
ಗೀತಾ ಅಶೋಕ ಶೇಠಿ ಹುಕ್ಕೇರಿ
ವೇಣು ತಾಯಿ ಸಾ ತಪ್ಪ ಚೌಗುಲಾ
ಅರುಂಧತಿ ಶಿರಿಗೆ
ಸುಧಾ ಬಾಗಲಕೋಟೆ
ಮಾಯ ನಂದಿ
ಪಾರ್ವತಿ ದೇವಿ ತುಪ್ಪದ್ ಬೆಳಗಾವಿ
ಶೈಲಾ ತುಕ್ಕನ್ನವರ್ ಕಿತ್ತೂರ್
ಇದೆ ವೇದಿಕೆಯಲ್ಲಿ ಈ ಸಾಹಿತಿಗಳಿಂದ ಪ್ರಾರ್ಥನಾ ಗೀತೆ ನಾಡಗೀತೆ ಚೆನ್ನಮ್ಮನ ಗೀತೆ ಹೇಳಲಾಯಿತು ಅದರ ಜೊತೆಗೆ ಬೆಳಗಾವಿ ಘಟಕ ಉದ್ಘಾಟನೆಯಾಯಿತು ಈ ಘಟಕದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಗೀತಾಅಶೋಕ ಶೇ ಠಿ ಪದಗ್ರಹಣ ಮಾಡಿದರು
ಈ ಸಂಘಟನೆಯ ಸಂಸ್ಥಾಪಕರು ಚಂದ್ರಕಾಂತ್ ಚೌಹನ್ ಈ ವೇದಿಕೆಯ ಸರ್ವಾಧ್ಯಕ್ಷರು ಡಾಕ್ಟರ್ ಎಸ್ ಬಿ ದಳವಾಯಿ
ಪ್ರಧಾನ ಕಾರ್ಯದರ್ಶಿ ಜೇನು ಜ್ಯೋತಿ ನಾಯಕ್
ರಾಜ್ಯಾಧ್ಯಕ್ಷರು ಎಚ್ಎಸ್ ಗೌಡರ್
ರಾಜ್ಯ ಕಾರ್ಯದರ್ಶಿ ಮಂಜುಳಾ ಶೆಟ್ಟರ್ ಮಠದ ಪೀಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಆಶೀರ್ವಚನ ನೀಡಿದರು ಚೆನ್ನಮ್ಮ ನಾಟಕದ ನಿರ್ದೇಶಕರಾದ ಪರ್ವೀನ್ ನಾಯಕರು ಕೂಡ ಉಪಸ್ಥಿತರಿದ್ದರು ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು
ಇದೇ ವೇದಿಕೆಯಲ್ಲಿ ಕವಿಗೋಷ್ಠಿ ಪದಗ್ರಹಣ ವಚನಧಾರೆ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಜರುಗಿದವು ಸ್ಥಳೀಯ ಸಂಘಟನೆಯಿಂದ ಚಂದ್ರಶೇಖರ್ ಚೆನ್ನಂಗಿ ಇನ್ನಿತರರು ತನುಮನದಿಂದ ಸಹಾಯ ಮಾಡಿದರು ರಂದು ನಡೆದ ಜಾನ್ ಕರ್ನಾಟಕ ರಾಜ್ಯ ಜಾನಪದ ಜಾಣರ ವೇದಿಕೆ ಹರಪನಹಳ್ಳಿ ಪದಗ್ರಹಣ ಕಾರ್ಯಕ್ರಮ ಹಾಗೂ ಜನಪದ ಸಿರಿ ಪ್ರಶಸ್ತಿಗೂ ಕೂಡ ಭಾಜನರಾಗಿದ್ದಾರೆ ಗೀತಾ ಅಶೋಕ ಶೇಠಿ ನಿರ್ದೇಶಕರಾಗಿ ಪದಗ್ರಹಣ ಮಾಡಿದ್ದಾರೆ
28th July 2025
ಶೀರ್ಷಿಕೆ: *ಭಕ್ತಿಯ ಪರಾಕಾಷ್ಟೆ ಶ್ರಾವಣ ಮಾಸ*
ಶ್ರಾವಣ ಮಾಸ ಧಾರ್ಮಿಕ ದಿವಸವು
ಶುಭದಿನದ ಪೂಜೆಕಂಕೈರ್ಯವು
ಆಧ್ಯಾತ್ಮಿಕ ಕೀರ್ತನೆ ಪುರಾಣವು
ದೇವ ಸ್ಮರಣೆ, ಭಕ್ತಿ ಮಾರ್ಗವು
ಭಕ್ತರಿಗೆ ಶಾಂತಿ ನೆಮ್ಮದಿಯು
ನಿಗೂಢ ಅಗೋಚರ ಶಕ್ತಿಯು
ಹರಕೆಯು ಫಲಿಸಲು, ನಂಬಿಕೆಯು
ಭಗವಂತನಲ್ಲಿ ಶ್ರದ್ಧೆ ವಿಶ್ವಾಸವು
ನಾಗರ ಪಂಚಮಿ ಹಬ್ಬದಲ್ಲಿ
ಹೆಣ್ಣು ಮಕ್ಕಳು ಹಾಲೆರೆಯಲು
ನಾಗರ ದೇವರ ನೈವೇದ್ಯ ಅರ್ಪಿಸಲು
ಮಕ್ಕಳ ಭಾಗ್ಯ, ಕನಕ ವೃಷ್ಟಿಯ ಬೇಡಲು
ಶ್ರೀ ವರಮಹಾಲಕ್ಷ್ಮಿ ದೇವಿ ಹಬ್ಬವು
ಮನೆ ಮಂದಿಗೆ ಸಡಗರ ಸಂಭ್ರಮವು
ಶ್ರೀ ಲಕ್ಷ್ಮಿ ಕಟಾಕ್ಷ ಅಪೇಕ್ಷೆಯ ಮನವು
ಮುತ್ತೈದೆಯರಿಗೆ ಉಡಲಕ್ಕಿ ತುಂಬಿ ಸತ್ಕಾರವು
ಮನೆ ದೇವರ ಜಾತ್ರೆಗಳಲ್ಲಿ
ವೈಭವ ಭಕ್ತರ ಭಕ್ತಿಯು ಮನದಲ್ಲಿ
ಹೂ ಹಾರ ಪ್ರಸಾದ ಅರ್ಪಣೆ ಗುಡಿಯಲ್ಲಿ
ರಥೋತ್ಸವದ ವೀಕ್ಷಣೆ ಸಂಭ್ರಮದಲ್ಲಿ
✍️✍️
*ಶ್ರೀಮತಿ ಪಾರ್ವತಿದೇವಿ ಎಂ ತುಪ್ಪದ ಬೆಳಗಾವಿ*
27th July 2025
* ಸಾಹಿತ್ಯ ಪ್ರಕಾರ: ಕವನ
* ಶೀರ್ಷಿಕೆ: ನೀ ಸುಮ... ನಾ ಘಮ.
*ಹೇ ನೀನು ಸಮವೇ
ಸುಮಧುರ ಸುಮವನ್ನು ಮೆಚ್ಚಿ
ಘಮ ಎನ್ನುವ ಸುವಾಸನೆಯಲ್ಲಿ
ಬೆರೆತು ಹೋದೆ.... ಹೇಗೆ?
* ಹೇ ನೀನು ಸುಮ
ಸುಮಧುರ ಸುಮವನ್ನು ಆಕರ್ಷಿಸಿ
ಸುಮದ ನೆಲೆಯಲ್ಲಿ ಒಂದು ಒಂದಾಗಿ
ಪರಿಮಳಕ್ಕೆ ಸೋತಿರುವೆ ಹೇಗೆ?
* ಹೇ ನೀನು ಸುಮವೆ
ಅರಳುವ ಕಾತುರತೆಯನ್ನು ಹೊಂದಿ
ಎಲ್ಲರ ಹೃದಯದ ಮನ ಮನದಿ
ಖುಷಿಯಾ ನೀಡುವೆ ಹೇಗೆ?
* ಹೇ ನೀನು ಸುಮವೆ
ಸುಂದರತೆಯ ಜೊತೆ ಜೊತೆಯಲ್ಲಿ
ಮೆಲ್ಲ ಮೆಲ್ಲನೆಯ ನೀರವತೆಯಲ್ಲಿ
ನಾಚಿ ಬಳುಕುವೇ ಹೇಗೆ?
ಇಂತಿ
ಹೀನಾ ಅ.ಕುದರಿ
ಕನ್ನಡ ಭಾಷಾ
ಬೋಧಕಿ
26th July 2025
ಬೆಳಗಾವಿ : ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಯಂತ್ರಗಳಾಗುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಕೇವಲ ಅಂಕಗಳಿಕೆಗೆ ಸೀಮಿತಗೊಳಿಸದೇ, ಸಾಹಿತ್ಯಾಸಕ್ತರನ್ನಾಗಿ ಬೆಳೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಶನಿವಾರ ನಡೆದ ಬೆಳಗಾವಿ ಜಿಲ್ಲಾ ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ-2025ರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ಸಮ್ಮೇಳನ ಮಕ್ಕಳಲ್ಲಿ ಮತ್ತು ಮಕ್ಕಳ ಸಾಹಿತಿಗಳಲ್ಲಿ ಹೊಸ ಉತ್ಸಾಹ, ಚೈತನ್ಯ ತುಂಬಲಿ ಎಂದು ಹಾರೈಸಿದರು.
ಮಕ್ಕಳ ಅಭಿವೃದ್ಧಿಗಾಗಿ ನನ್ನ ಇಲಾಖೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಮುಂದಿನ ಸಮ್ಮೇಳನಕ್ಕೆ ನನ್ನ ಇಲಾಖೆಯಿಂದ ಸಂಪೂರ್ಣ ಬೆಂಬಲ ನೀಡುತ್ತೇನೆ. ಇದು ಕೇವಲ ಮಕ್ಕಳ ಸಾಹಿತಿ, ಹಿರಿಯ ಸಾಹಿತಿಗಳಿಗೆ ಸೀಮಿತವಾಗದೇ, ಬೆಳಗಾವಿ ಜಿಲ್ಲೆಯ ಪ್ರತಿಯೊಬ್ಬ ಶಾಲಾ ಮಕ್ಕಳಿಗೂ ತಲುಪುವಂತಾಗಬೇಕು ಎಂದರು.
ಮಕ್ಕಳಲ್ಲಿಯೇ ನಮ್ಮ ಅಚಾರ, ವಿಚಾರಗಳು ಹೆಚ್ಚಾಗಬೇಕು, ಜೊತೆಗೆ ಮತ್ತೊಬ್ಬರಿಗೆ ಮುಟ್ಟಬೇಕು. ನಾಡಿನಲ್ಲಿ ಮಕ್ಕಳ ಪ್ರತಿಭೆಗೆ ಕೊರತೆಯಿಲ್ಲ. ಮಕ್ಕಳು ಸಾಹಿತ್ಯಾಭಿರುಚಿ ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ನಾಡಿನ ಹೆಮ್ಮೆಯ ಸಾಹಿತಿಗಳಾಗುವುದರಲ್ಲಿ ಎರಡು ಮಾತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟರು.
ಪಕ್ಕದ ಮನೆಯ ಮಕ್ಕಳಿಗೆ ಹೋಲಿಸಿ ಅಂಕಗಳಿಕೆಗೆ ಸೀಮಿತಗೊಳಿಸದೆ, ಸಾಹಿತ್ಯ ಓದಲು ಪ್ರೇರೇಪಿಸಬೇಕು. ಮಕ್ಕಳಿಗೆ ಸಾಹಿತ್ಯದ ಅಭಿರುಚಿ ತೋರಿಸಲು ಆಯೋಜಿಸಿರುವ ಇಂಥ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಸಚಿವರು ಹೇಳಿದರು.
ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದು ಉತ್ತಮ ಅಚಾರ ವಿಚಾರಗಳನ್ನು ಬೆಳೆಸಿಕೊಂಡರೆ ಮಕ್ಕಳು ನಾಡಿನ ಉತ್ತಮ ಪ್ರಜೆಗಳಾಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ್ ಶಿವಾಚಾರ್ಯರು, ಕಾರಂಜಿಮಠದ ಪರಮಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳು, ಚ.ನಂ.ಅಶೋಕ, ಎಂ.ವಾಯ್.ಮೆನಸಿನಕಾಯಿ, ಅಮೂಲ್ಯ ಪಾಟೀಲ, ಬಸವರಾಜ ಗಾರ್ಗಿ, ಲಕ್ಷ್ಮೀ ಪಾಟೀಲ, ಎಂ.ಎಂ.ಸಂಗಣ್ಣವರ, ಸಿದ್ರಾಮ ನಿಲಜಗಿ, ಪ್ರಕಾಶ ಹೊಸಮನಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.****
17th July 2025
ಪ್ರತಿಷ್ಠಿತ ಎಮರ್ಜಿಂಗ್ ವಿವಿ ಪ್ರಶಸ್ತಿ ಸ್ವೀಕರಿಸಿದ ರಾಚವಿ ಕುಲಪತಿ ಪ್ರೊ. ತ್ಯಾಗರಾಜ
ಬೆಳಗಾವಿ : ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದಿಂದ ಎಮರ್ಜಿಂಗ್ ಯುನಿವರ್ಸಿಟಿ ಪ್ರಶಸ್ತಿಯನ್ನು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಮುಂಬೈನ ಐಐಟಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ಸಮಾಜದ ಅಂಚಿನಲ್ಲಿರುವ ಕಟ್ಟಕಡೆಯ ವಿದ್ಯಾರ್ಥಿಯನ್ನು ಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಅವರ ಭವಿಷ್ಯವನ್ನು ರೂಪಿಸುವುದಕ್ಕಾಗಿ ಶ್ರಮಿಸುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ನಮ್ಮ ಸಿಬ್ಬಂದಿಗಳು ಸದಾ ಕಾರ್ಯಪ್ರವೃತ್ತರಾಗುತ್ತಿದ್ದಾರೆ. ರಾಚವಿ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿ ಶ್ಲಾಘಿಸಿದರು. ಅವರ ಕಾರ್ಯತತ್ಪರತೆ ಮತ್ತು ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರ ಅವಿರತ ಪ್ರಯತ್ನದಿಂದ ಇಂಥ ಒಂದು ಪ್ರತಿಷ್ಠಿತ ಪ್ರಶಸ್ತಿಗೆ ಇಂದು ಭಾಜನರಾದೇವು ಎಂದರು.
ಇದೇ ಸಂದರ್ಭದಲ್ಲಿ ಸಂಶೋಧನೆ , ಸಮಾಜ ಸೇವೆ, ಆಡಳಿತ, ಶಿಕ್ಷಣ, ಪರಿಸರ ಸಂರಕ್ಷಣೆ ಮುಂತಾದ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಎಲ್ಲಾ ಪ್ರಶಸ್ತಿಗಳನ್ನು ಇಸ್ರೋ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಡಾ. ಕಿರಣ ಕುಮಾರ ಅವರು ಪ್ರದಾನ ಮಾಡಿದರು.
ಕರ್ನಾಟಕದಲ್ಲಿ ಇಲ್ಲಿಯವರೆಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿರುವುದು ಕೇವಲ ಎರಡು ಸಂಸ್ಥೆಗಳು ಮಾತ್ರ. ಒಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಎರಡನೆಯದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ. ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿಯಾದ, ವೀರವನಿತೆ ರಾಣಿ ಚನ್ನಮ್ಮನ ನಾಮಧೇಯ ಹೊಂದಿದ ಉತ್ತರ ಕರ್ನಾಟಕದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾದ ರಾಣಿ ವಿಶ್ವವಿದ್ಯಾಲಯಕ್ಕೆ ಬಂದಿರುವುದು ಅತ್ಯಂತ ಸಂತಸ ತಂದಿದೆ. ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ವಿವಿಯ ಸಂಯೋಜಿತ ಕಾಲೇಜಿನ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಚವಿ ಭೂಗೋಳಶಾಸ್ತ್ರ ವಿಭಾಗದ ಪ್ರೊ. ಬಸವರಾಜ ಬಗಾಡೆ ಅವರು "ನ್ಯಾಷನಲ್ ಜಿಯೋಸ್ಪೆಷಿಯಲ್ ಎಮರ್ಜಿಂಗ್ ಫ್ಯಾಕಲ್ಟಿ ಫೆಲೋ ಅವಾರ್ಡ್" ಗೆ ಭಾಜನರಾದರು.
ಈ ರಾಷ್ಟ್ರ ಮಟ್ಟದ ಗೌರವದೊಂದಿಗೆ ಫೋಸ್ಸೀ ಜಿಐಎಸ್ (ಎನ್ಎಂಇಐಸಿಟಿ) ಯೋಜನೆಯ ಹಲವಾರು ಪ್ರಯೋಜನಗಳನ್ನು ಇನ್ನೂ ಮುಂದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಸಂಬಂಧಿತ ಕಾಲೇಜುಗಳು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ಗಳಿಗೆ ಮುಕ್ತವಾಗಲಿವೆ.
ಈ ಪ್ರಶಸ್ತಿ ಕಾರ್ಯಕ್ರಮವನ್ನು ಐಐಟಿ ಬಾಂಬೆಯ ಫೋಸ್ಸೀ (ಜಿಐಎಸ್) ಯೋಜನೆ ಹಾಗೂ ICT ಮೂಲಕ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಿಷನ್ (NMEICT), ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಮುಂಬೈನ ಐಐಟಿಯಲ್ಲಿ ನಡೆದ ಸಮಾರಂಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ ಎಂ ತ್ಯಾಗರಾಜ ಅವರಿಗೆ ಪ್ರತಿಷ್ಠಿತ ಎಮರ್ಜಿಂಗ್ ಯುನಿವರ್ಸಿಟಿ ಅವಾರ್ಡ್ ನ್ನು ಪ್ರದಾನ ಮಾಡಲಾಯಿತು.
17th July 2025
ಗಜಲ್
ಸೂತ್ರಧಾರಿ ಸೂತ್ರವನ್ನು ನಿಗೂಢವಾಗಿಯೇ ಇಟ್ಟಿದ್ದಾನೆ
ಪಾತ್ರಧಾರಿ ಪಾತ್ರವನ್ನು ನಿಗೂಢವಾಗಿಯೇ ಇಟ್ಟಿದ್ದಾನೆ
ಪರದೆಗಳಿರದೆ ಹೋದರೆ ನಾಟಕದ ಪಾತ್ರಗಳು ರಂಜಿಸುವುದಿಲ್ಲ
ಆ ವ್ಯಾಪಾರಿ ಲೆಕ್ಕವನ್ನು ನಿಗೂಢವಾಗಿಯೇ ಇಟ್ಟಿದ್ದಾನೆ
ಬಣ್ಣ ಬಳೆದು ನಟಿಸಿದರೆ ತಾನೇ ಹೊರಲೋಕ ಮೆಚ್ಚುವುದು
ಕಲಾಕಾರಿ ಕಾರಣವನ್ನು ನಿಗೂಢವಾಗಿಯೇ ಇಟ್ಟಿದ್ದಾನೆ
ರಾಮಕೃಷ್ಣ ಹರಿ ಪಾತ್ರಧಾರಿಸುವವ ಬೇಸತ್ತು ಹೋಗಿದ್ದಾನೆ
ಅಬ್ಯಾಪಾರಿ ದುಶ್ಚಟವನ್ನು ನಿಗೂಢವಾಗಿಯೇ ಇಟ್ಟಿದ್ದಾನೆ
ರಂಗು ರಂಗಾಗಿ ರಂಗಮಂಟಪ ಸಜ್ಜಾಗಿ ನಿಂತಿದೆ ಜ್ಯೋತಿ
ಕಾರಭಾರಿ ವೇತನವನ್ನು ನಿಗೂಢವಾಗಿಯೇ ಇಟ್ಟಿದ್ದಾನೆ
ಜ್ಯೋತಿ ಮಾಳಿ ಬೆಳಗಾವಿ
13th July 2025
*ಡಾ. ವಾಣಿಶ್ರೀ ಕಾಸರಗೋಡು*
*ಗಡಿನಾಡ ಕನ್ನಡತಿ*
ಹೀಗೊಂದು ಚೆಲುವೆ
ಮನದಲ್ಲಿ ಮನೆ ಮಾಡಿರುವೆ ನೀ ಜೊತೆಗೂಡಿ
ಕನಸಲ್ಲೂ ಕಾಡುತ್ತಿರುವೆ ಮಾಡಿರುವೆ ನೀ ಮೋಡಿ
ಹೊಗಳಲೆ ನಾನೀಗ ನಿನ್ನ ಒಂದು ಪದವ ಹಾಡಿ
ಪ್ರೀತಿಯಿಂದ ನೀ ಕರೆದರೆ ನಾ ಬರುವೆ ಓಡೋಡಿ
ಹೊಂಗಿರಣದೊಂದಿಗೆ ಜೊತೆಯಾಗಿ ಹೊಳೆಯುವ ಬಾಲೆ
ಜಗದ ಸೊಬಗೆಲ್ಲ ತುಂಬಿಕೊಂಡಿರುವೆ ಏನು ನಿನ್ನ ಲೀಲೆ
ಆನಂದ ಪರವಶಳಾಗಿ ಸಂತೃಪ್ತಿಯಿಂದಿರುವೆ ಕೋಮಲೆ
ದೇವಕನ್ಯೆಯರ ನಾಚಿಸುವ ಸೊಬಗು ತುಂಬಿರುವುದು ನಿನ್ನಲೆ
ನಿನ್ನ ಜೊತೆಯಲಿ ಅನುದಿನ ನಗುವಿನ ಸಹಗಮನ
ಪದಗಳ ಪರಿತಪಿಸಿ ಹುಟ್ಟು ಹಾಕಿವೆ ಪ್ರೀತಿಯ ಕವನ
ನಿನ್ನಯ ರೂಪದಲ್ಲಿ ಇರುವುದು ಏನೊ ಒಂದು ಗಹನ
ನಿನ್ನ ಸೃಷ್ಟಿಸಿದ ಸೃಷ್ಟಿಕರ್ತಬ್ರಹ್ಮ ದೇವನಿಗೊಂದು ನಮನ
12th July 2025
ಸೂರ್ಯ ಏಳುವ ಶುಭ ಸೂಚನೆ ಪ್ರಾಣಿ-ಪಕ್ಷಿಗಳಿಗೆ ತಿಳಿಯುತ್ತದೆ ಅಂತಹ ಸಂದರ್ಭದಲ್ಲಿ ಕೋಳಿ ಕೂಗುವುದು ಗಮನಹರ ಆದರ ಜೊತೆ ಮುಂಜಾನೆ ಆಕಾಶವಾಣಿಯ ರೇಡಿಯೋ ಮೂಲಕ ಬಿತ್ತರವಾಗುತ್ತಿದ್ದ ಸುಬ್ಬಲಕ್ಷ್ಮಿ ಅವರ ಕೌಶಲ್ಯ ಸುಪ್ರಜಾ ರಾಮ ಎಂಬ ಸುಪ್ರಭಾತದ ಇಂಪಾದ ಧ್ವನಿ ಕರ್ಣಗಳಿಗೆ ತಲುಪಿದಾಗ ಅದರಿಂದ ಬೆಳಗಾಗಿದೆಯಂದು ಉಲ್ಲಾಸದಿಂದ ನಾವೆಲ್ಲ ಏಳುತ್ತಿದ್ದೆವು ಮಂಜು, ಮುಸುಕಿದ ಬೆಳಕನು ನೋಡಿ ಸವಿಯುವುದೇ ಆನಂದ ಎಲೆಗಳ ಮೇಲೆ ಮುತ್ತಿನಂತ ಇಬ್ಬನಿಯ ಕುಳಿತಿರಲು ಹಕ್ಕಿಗಳ ಝೇಂಕಾರ ಈ ಸುಪ್ರಭಾತಕ್ಕೆ ಇನ್ನಷ್ಟು ಮೆರುಗು ನೀಡುತ್ತಿತ್ತು ಹಚ್ಚ ಹಸಿರಿನ ಪರಿಸರ ಬಣ್ಣ ಬಣ್ಣದ ಪರಿಮಳದ ಹೂಗಳ ನಮ್ಮನ್ನು ಮನ ಸೆಳೆಯುತ್ತಿತ್ತು. ಬಾನಲ್ಲ ಕೆಂಪೇರಿ ಉದಯಿಸಿದ ಭಾಸ್ಕರ ಜಗವೆಲ್ಲ ನೀಡುವ ಬೆಳಕು ಆ ಎಳೆಯ ಕಿರಣಗಳ ರಶ್ಮಿ ನೋಡಲು ಹಿತಕರ. ಒಡಿಸ್ಸಾದಲ್ಲಿ ಸೂರ್ಯನ ದೇವಾಲಯ ಸಮೀಪ ಇರುವ ಸಮುದ್ರದ ಮಧ್ಯದಲ್ಲಿ ಮೊದಲು ಉದಯಿಸುವ ಸೂರ್ಯನ ಹೊಂಗಿರಣಗಳನ್ನು ನಾವು ವೀಕ್ಷಿಸಬಹುದು ಸೂರ್ಯನ ಬೆಳಕು ಹೆಚ್ಚಾದಂತೆ ಪ್ರಕೃತಿಯ ಸೊಬಗು ಆನಂದಿಸುತ್ತ ಅಂಗಳದಲ್ಲಿ ಹಸುರಾದ ಗರಿಕೆಯ ಮೇಲೆ ನಡೆದಾಗ ಸಿಗುವ ಅಹ್ಲಾದಕರ ಶಕ್ತಿಯು ನಮ್ಮನ್ನು ಬಲಗೊಳಿಸುತ್ತಿತ್ತು.
ಋಷಿಮುನಿಗಳು ಜನಿಸಿರುವ ಈ ದೇಶ ಸಂಸ್ಕೃತಿ ಪರಂಪರೆಯ ನಮ್ಮದು ಬ್ರಹ್ಮಿ ಮುಹೂರ್ತದಲ್ಲಿ ಎದ್ದು ದಿನವನ್ನು ಆರಂಭಿಸಿದಾಗ ಪ್ರತಿಯೊಂದು ಕೆಲಸವು ಉತ್ಸಾಹದಿಂದ ಕೂಡಿರುತ್ತದೆ ದಿನ ಪೂರ್ತಿ ಚೈತನ್ಯವಾಗಿ ಇರಲು ಕಾರಣವಾಗುತ್ತದೆ ಮುಂಜಾನೆಯ ಸೂರ್ಯನ ಕಿರಣಗಳು ನಮಗೆ ಸ್ಪರ್ಶಿಸಿದಾಗ ವಿಟಮಿನ್ ಡಿ ಅಂತಹ ಶಕ್ತಿಯನ್ನು ನಮಗೆ ನೇರವಾಗಿ ಸಿಗುತ್ತದೆ. ಸೂರ್ಯನಿಂದ ಸಕಲ ಜೀವರಾಶಿಗಳಿಗೂ ಜಡತ್ವವನ್ನು ಕಳೆದು ದಿನನಿತ್ಯದ ಕೆಲಸಕ್ಕೆ ಹುರುಪು ಸಿಗುವುದು ಆಗ ಮಾಡಿದ ವಿದ್ಯಾಭ್ಯಾಸವು ಸಹ ಎಲ್ಲರ ತಲೆಯಲ್ಲೂ ಹಾಗೆಯೇ ಉಳಿಯುವುದು. ಮುಂಜಾನೆ ಎದ್ದು ನೇಗಿಲ ಹಿಡಿದು ಹೊರಟ ರೈತನ ಮೊಗವು ಅರಳಿರುವುದು.ನಾವು ಮುಂಜಾನೆಯದ್ದು ಸೂರ್ಯನನ್ನು ಸ್ವಾಗತಿಸುವ ಹಿತವೇ ಬೇರೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಇದೆಲ್ಲ ಮರೆಯಾಗುತ್ತಿದೆ ಜೀವನದ ಶೈಲಿಯೇ ಬದಲಾಗಿದೆ ಮಲಗುವ ಹೇಳುವ ಸಮಯವೂ ಸರಿಯಾಗಿಲ್ಲದೆ ಎಲ್ಲ ಕೆಲಸಗಳು ಕಾರ್ಯಗಳು ಸಹ ಬದಲಾಗುತ್ತಿದೆ ಬಹು ಎತ್ತರದಲ್ಲಿ ನಿರ್ಮಾಣಗೊಂಡ ಭವನಗಳು ಸೂರ್ಯನ ಶಾಖವು ಮತ್ತು ಸೂರ್ಯನ ಕಿರಣಗಳನ್ನು ಹೊಸ್ತಿಲನ್ನು ದಾಟಲು ಬಿಡುವುದಿಲ್ಲ ಮತ್ತು ಮನೆಯ ಬಾಗಿಲನ್ನು ತಲುಪಲು ವಿಳಂಬವಾಗುತ್ತದೆ ಹಾಗೆ ನೈಸರ್ಗಿಕ ಬೆಳಕು ಸಿಗದೇ ಎಲ್ಲರೂ ವಂಚಿತರಾಗುತ್ತಿದ್ದಾರೆ ಈಗಿನ ಮುಂಜಾವು ಮಕ್ಕಳು ಟಿವಿ ಮೊಬೈಲಲ್ಲೇ ನೋಡಿ ಆನಂದಿಸುತ್ತಿದ್ದಾರೆ ಎಷ್ಟು ಮಕ್ಕಳಿಗೆ ವಿಟಮಿನ್ ಡಿ ಕೊರತೆಯಿಂದಾಗಿ ಸರಿಯಾದ ಬೆಳವಣಿಗೆಯನ್ನು ಹೊಂದದೆ ಅಂಗಾಗಗಳು ಬಲಹೀನವಾಗುತ್ತಿವೆ ಇಂದು ನಾವು ಸಾಫ್ಟ್ವೇರ್ ಉದ್ಯಮಿಗಳಾಗಿ ಕೂತಲ್ಲಿಯೇ ಕೆಲಸ ಮಾಡುವುದರಿಂದ ಸೂರ್ಯನ ಶಾಖದಿಂದ ವಂಚಿತರಾಗಿದ್ದಾರೆ. ಸೂರ್ಯನ ಕಿರಣಗಳೇ ಹಲವು ರೋಗಗಳಿಗೆ ಔಷಧಿಯಾಗಿದೆ.
✍️ ಶ್ರೀಮತಿ ರಮಾ ಕೆ
ಕಲಘಟಗಿ
📞9449159855
11th July 2025
*ಹೊನ್ನುಡಿ*.
ಸ್ವಾನುಭವದಿಂದ ಅರಿತು
ಜೀವನ ಮೌಲ್ಯಗಳ ಕಲಿತು
ಮುಕ್ತ ಮನದಿ ಸಮಾಜದಿ ಬೆರೆತು
ಜಗದೆಲ್ಲರು ಮೆಚ್ಚುವಂತೆ ಬಾಳಿದರೆ
ಇದಕ್ಕಿಂತ ಇನ್ನೇನು ಬೇಕು
ಅರ್ಥ ಪೂರ್ಣ ಬದುಕಿಗೆ.
*ಹೊನ್ನುಡಿ*.
ಜಾತಿ ಧರ್ಮಗಳ ಪ್ರೀತಿ ಮನದೊಳಗಿರಲಿ
ದೇವರ ಪೂಜೆ ಮನೆಯೊಳಗಿರಲಿ
ನನ್ನ ದೇಶ, ನನ್ನ ಜನ ಎನ್ನುವ ಕೂಗು
ಎಲ್ಲರ ಹೃದಯದಲ್ಲಿ ಸದಾ ಮಿಡಿಯುತ್ತಿರಲಿ.
*ಹೊನ್ನುಡಿ.*
ಬಡತನವು ಸೋಮಾರಿ ಗೆ ಶಾಪ ,
ಛಲಗಾರ ನಿಂಗೆ ವರದಾನ.
ಬಡತನವು ಸಾಧನೆಗೆ ಸ್ಪೂರ್ತಿ ಛಲಗಾರನಿಗೆ.
ಸೋಮಾರಿ ಗಳಿಗೆ ಬಡತನವೊಂದು ನೆಪ.
*ಹೊನ್ನುಡಿ*.
ಜ್ಞಾನವು ನಮ್ಮೊಳಗೆ, ಅಜ್ಞಾನವೂ ನಮ್ಮೊಳಗೆ
ದೇವರು ನಮ್ಮೊಳಗೆ , ದೆವ್ವವೂ ನಮ್ಮೊಳಗೆ
ಅರಿತರೆ ನೀ ಮಾನವ , ಅರಿಯದಿರೆ ದಾನವ.
ಅರಿತು ಮಾನವನಾಗು, ಮಾನವೀಯತೆ ಸಾರು.
✍️ಡಾ. ಮಹೇಂದ್ರ ಕುರ್ಡಿ