🌹 *ಸ್ವಾತಂತ್ರ್ಯ@ 80*🌹
**ಎದ್ದೇಳಿ ಝೆನ್ ಜಿ*
*ಏಳಿ ಭಾರತವನ್ನು* *ಭಾರತವಾಗಿಯೇ* *ಉಳಿಸುವ ಸಲುವಾಗಿ* *ಒಗ್ಗಟ್ಟಾಗಿ...*
*ಸ್ವಾತಂತ್ರ್ಯ**
**ಸ್ವೇಚ್ಛೆಯಾಗುತ್ತಿದೆಯೇ?*
*ಎತ್ತ ಸಾಗುತ್ತಿದೆ ಭಾರತ??*
*ಏನಾಗುತ್ತಿದೆ ಭಾರತ??*
ಹೌದು, ಮತ್ತೇ ಬಂದಿದೆ ಸ್ವಾತಂತ್ರ್ಯ ದಿನಾಚರಣೆ....
ದಾಸ್ಯದ ಸಂಕೋಲೆಯನ್ನು ಬಿಡಿಸಿ ಸ್ವಾತಂತ್ರ್ಯದ ಖುಷಿಯನ್ನು ಭಾರತೀಯರಿಗೆ ನೀಡಿದ ಸುದಿನ.
ಆದರೆ ???????????????
ಈ ಸ್ವಾತಂತ್ರ್ಯ ದಿನವು ಬರೀ ಆಚರಣೆಗೆ ಸೀಮಿತವಾಗದೆ ಪ್ರತಿ ಭಾರತೀಯನ ಜವಾಬ್ದಾರಿಯಾಗುವ ತುರ್ತು
ಪ್ರಸ್ತುತ ಆಧ್ಯತೆಯಾಗಿದೆ.
ನಾವು ಪರಕೀಯರ ದಾಳಿಯಿಂದ ಬಿಡುಗಡೆ ಹೊಂದಿ ಭರ್ತಿ 80 ವರುಷ...
ಎಷ್ಟು ಬೇಗ ಸರಿದು ಹೋದವು ದಿನಗಳು!!!!
ಈ 80 ವರುಷಗಳಲ್ಲಿ ಭಾರತ ಯಾವ ರೀತಿ ಪ್ರಗತಿ ಹೊಂದಿದೆ ಹಾಗೂ ಹೊಂದುತ್ತಿದೆ ಎಂಬುದನ್ನು ವಿಶ್ಲೇಷಿಸಿದಾಗ ಒಂದು ಕಡೆ ಸಂತೋಷ ಮತ್ತೊಂದು ಮಗ್ಗುಲು ಕರಾಳತೆ ಕಣ್ಣಿಗೆ ರಾಚುತ್ತದೆ.
ತಂತ್ರಜ್ಞಾನ,ಬೃಹತ್ ಉದ್ದಿಮೆಗಳು,ನಗರ ನಿರ್ಮಾಣ,ಸೌಲಭ್ಯ ಗಳ ಭರಾಟೆ,ಶಿಕ್ಷಣ ಕ್ರಾಂತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆ ...ಹೀಗೆ
ಭೌತಿಕ ಅಭಿವೃದ್ದಿಯತ್ತ ಸಾಗುತ್ತಿರುವ ಭಾರತ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ದಿವಾಳಿಯೆಡೆಗೆ ಸಾಗುತ್ತಿದೆ ಎಂದರೆ ತಪ್ಪಾಗಲಾರದು.
ಪ್ರತಿದಿನ ಅತ್ಯಾಚಾರ,ದರೋಡೆ,ಜಾತಿ ಕಲಹ,ದ್ವೇಷ,ಅತಿಯಾದ ಪ್ರಾದೇಶಿಕತೆ,ದಿಕ್ಕು ತಪ್ಪಿದ ರಾಜಕೀಯ,
ಮೌಲ್ಯಗಳನ್ನೇ ಮರೆತ ಮಾನವ .....ಇದು ಯಾವ ತರದ ಅಭಿವೃದ್ಧಿ ??
ನೈತಿಕತೆ ಹೇಳುವ ಹೆಣ್ಣು ಮಗಳು,ದಾರಿ ತೋರಿಸುವ ಗುರು,ಬುದ್ದಿ ಹೇಳುವ ಹಿರಿಯರು ದಾರಿ ತಪ್ಪುತ್ತಿದ್ದಾರೆ.ಸ್ವಾತಂತ್ರ್ಯ ಸ್ವೇಚ್ಛೆಯಾಗುತ್ತಿದೆಯೇ ?
ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ರಾಜಕಾರಣಿಗಳು ತಮಗೆ ತೋಚಿದಂತೆ ಹೇಳಿಕೆ ನೀಡುತ್ತಾ ಯುವ ಜನತೆಯಲ್ಲಿ ವಿಘಟನೆಯ ವಿಷ ಬೀಜ ಬಿತ್ತುತ್ತಾ ದೇಶವನ್ನು ಜಾತಿ,ಧರ್ಮದ ಹೆಸರಿನಲ್ಲಿ ಒಡೆಯುವ ಹುನ್ನಾರ ಮಾಡುತ್ತಿರುವುದನ್ನು
ಕಂಡು ಮನಸ್ಸು ರೋಷಿ ಹೋಗಿದೆ.
ರೌಡಿಗಳು,
ಅಪರಾಧಿ ಹಿನ್ನಲೆ ಇರುವವರು ಸಮೂಹ ಮಾಧ್ಯಮಗಳಲ್ಲಿ ರಾರಾಜಿಸುತ್ತಿದ್ದಾರೆ.
ಮಂತ್ರಿಗಳು,ಶಾಸಕರು ಆಗುತ್ತಿದ್ದಾರೆ.ಇಂತವರೆ ಇಂದಿನ ಮಕ್ಕಳ ಅದರ್ಶವಾಗಿದ್ದಾರೆ.
ಮಕ್ಕಳಿಗೆ ಸುತ್ತಲೂ ಇಂತಹುದೇ ಕಾಣುತ್ತಿದೆ.
*ಒಳ್ಳೆಯದು* *ಎಂದರೇನು?* ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಮ್ಮಮನೆ,ಮಕ್ಕಳಾದಿಯಾಗಿ ತ್ಯಾಗ ಮಾಡಿ ಬ್ರಿಟಿಷರನ್ನು ಭಾರತದಿಂದ ಓಡಿಸಿ ಸ್ವಾತಂತ್ರ್ಯ ಗಳಿಸಿ ಕೊಟ್ಟ ಧೀರ,ಧೀಮಂತ ಹೋರಾಟಗಾರರ ತ್ಯಾಗಕ್ಕೆ ಈಗ ಬೆಲೆ ಇಲ್ಲದಂತಾಗಿದ್ದು ದುರ್ದೈವವೇ ಸರಿ.
80 ವರುಷಗಳ ಹಿಂದೆ ಪರಕೀಯರ ವಿರುದ್ಧ ಹೋರಾಡಿದ ಭಾರತೀಯರು ಈಗ ದ್ವೇಷ ಬಿತ್ತಿ ದೇಶ ಒಡೆಯುವ ಕುತಂತ್ರಿಗಳು,ಸ್ವದೇಶಿಗಳ ವಿರುದ್ಧವೇ ಹೋರಾಡುವ ಪ್ರಮೇಯ ಬಂದಿದ್ದು ಮಾತ್ರ ವಿಪರ್ಯಾಸ.
ನಾವೇ ಪ್ರಭುಗಳು,ನಾವೇ ಪ್ರಜೆಗಳು,ನಮ್ಮದೇ ಆಡಳಿತ ಆದರೂ ಕ್ರೌರ್ಯತೆ ಮಿತಿ ಮೀರುತ್ತಿದೆ.
ಒಳ್ಳೆಯದನ್ನು ಮಾಡಲು ಒಳ್ಳೆಯವರು ಹೆದರಿ ಹಿಂಜರಿಯುವ ಸನ್ನಿವೇಶ ಈಗ ನಿರ್ಮಾಣವಾಗಿದೆ.
ಧರ್ಮದ ಕಾರ್ಮೋಡ ದೇಶವನ್ನು ನುಂಗುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿಂದೆಂದಿಗಿಂತಲೂ ಈಗ ರಾಷ್ಟ್ರ ಜಾಗೃತಿ ಪ್ರಜ್ಞೆಯ ಅವಶ್ಯಕತೆ ಹೆಚ್ಚಾಗಿಯೇ ಇದೆ.
ಭಾರತ ಕೇವಲ ಭಾರತಿಯರದು,ಅದು ಯಾವಾಗಲೂ ಸನಾತನ,ಸಾಂಸ್ಕೃತಿಕ ಹಾಗೂ ಸನ್ನಡತೆಯ ರೂವಾರಿ.
ಸಂವಿಧಾನದ ಆಶಯಗಳನ್ನು ತಮಗೆ ತಿಳಿದಂತೆ ಅರ್ಥೈಸಿಕೊಂಡು ಬೊಗಳುವ ಮೂರ್ಖರಿಗೆ ಧರ್ಮದ ಹೆಸರಿನಲ್ಲಿ ದೇಶವನ್ನು ಅಭದ್ರಗೊಳಿಸುವ ದಗಾ ಕೊರರಿಗೆ ಅವರ ಆಶಯ ಈಡೇರದಂತೆ ಮಾಡಿ ದೇಶವನ್ನು ಸರ್ವ ರೀತಿಯಿಂದಲೂ ರಕ್ಷಿಸುವ ಗುರುತರ ಜವಾಬ್ದಾರಿ ಇಂದಿನ zen ಜಿ ಗಳ ಮೇಲಿದೆ.
ಜಾತಿ,ಧರ್ಮಗಳ ಅಟ್ಟಹಾಸ ಮಿತಿಮಿರುತ್ತಿರುವ ಇಂದಿನ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ಮಹತ್ವ ಪಡೆಯಬೇಕಾಗಿದೆ.
ಈ ಭಾರತ ಕೇವಲ ನಮ್ಮದು.ನಮ್ಮದಾಗಿಯೇ ಇರಬೇಕು. ಅದಕ್ಕೆ ಯಾವ ತ್ಯಾಗಕ್ಕೂ ಯುವ ಜನಾಂಗ ಸಿದ್ಧರಾಗಬೇಕಾಗಿರುವುದು ಹಾಗೂ ಒಗ್ಗಟ್ಟಾಗಬೇಕಾಗಿರುವುದು ಇಂದಿನ ತುರ್ತಾಗಿದೆ.
ಮುಂಬರುವ ಸ್ವಾತಂತ್ರ್ಯ ದಿನಾಚರಣೆಗಳು ಇಂತಹ ನೀಚ ಕುನ್ನಿಗಳನ್ನು ನಿಗ್ರಹಿಸಿ ಶ್ರೇಷ್ಠ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆಚರಿಸುವಂತಾಗಲಿ ಎಂದು ಹಾರೈಸುವೆ.
ಜೈ ಹಿಂದ್
ಲೇಖಕಿ
ಶ್ರೀಮತಿ ಮೀನಾಕ್ಷಿ ಸೂಡಿ
ದೇವಗಾಂವ,ಕಿತ್ತೂರು
ಬೆಳಗಾವಿ ಜಿಲ್ಲೆ
ಫೋನ್ 8073946046







