
23rd April 2025
ಬೆಂಗಳೂರು, ಏಪ್ರಿಲ್ ೨೨, (ಕರ್ನಾಟಕ ವಾರ್ತೆ) :-ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಿರುವ ಆನ್ಲೈನ್ ಹಣಕಾಸು ವಂಚನೆಗಳನ್ನು ತಡೆಯಲು ರಾಜ್ಯದಲ್ಲಿ ಸೈಬರ್ ಅಪರಾಧ ಸಹಾಯವಾಣಿ-೧೯೩೦ ಜೊತೆಗೆ ವೆಬ್ ಬಾಟ್ ಉನ್ನತೀಕರಣ ಮಾಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನೀರಿಕ್ಷಕರಾದ ಅಲೋಕ್ ಮೋಹನ್ ತಿಳಿಸಿದರು.
ಇಂದು ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಎಡಿಜಿಪಿ ಸಿಎಲ್&ಎಮ್ ಕಾರ್ನರ್ ಹೌಸ್ ಕಚೇರಿಯಲ್ಲಿ ಉನ್ನತೀಕರಿಸಲಾದ ಸೈಬರ್ ಅಪರಾಧ ಸಹಾಯವಾಣಿ-೧೯೩೦ ವೆಬ್ಬಾಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ೧೯೩೦ ಸಹಾಯವಾಣಿಯಲ್ಲಿ ಸ್ವೀಕರಿಸಿದ ಕರೆಗಳ ಸಂಖ್ಯೆ ೨೦೨೨ ರಲ್ಲಿ ೧.೩೦ ಲಕ್ಷ ಇದ್ದು, ನಂತರ ೨೦೨೪ ರಲ್ಲಿ ೮.೨೬ ಲಕ್ಷಕ್ಕೆ ಮತ್ತು ೨೦೨೫ ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ೪.೩೪ ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
ಪ್ರಸ್ತುತ ರಾಜ್ಯದಲ್ಲಿ ಸಾರ್ವಜನಿಕರು ಪ್ರತಿನಿತ್ಯ ಆನ್ಲೈನ್ ಹಣಕಾಸು ವಂಚನೆಗಳಿಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಕ್ಷಣ ಸಾರ್ವಜನಿಕರು ದೂರು ದಾಖಲಿಸಲು ಅನುವಾಗುವಂತೆ ಸೈಬರ್ ಅಪರಾಧ ಸಹಾಯವಾಣಿ-೧೯೩೦ ಹಾಗೂ ವೆಬ್ಬಾಟ್ನ್ನು ಉನ್ನತೀಕರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ತುರ್ತು ಸ್ಪಂದನಾ ವ್ಯವಸ್ಥೆಯ (ಇmeಡಿgeಟಿಛಿಥಿ ಖesಠಿoಟಿse Suಠಿಠಿoಡಿಣ Sಥಿsಣem) ಸಾರ್ವಜನಿಕ ಸುರಕ್ಷತಾ ಪ್ರತ್ಯುತ್ತರ ಕೇಂದ್ರವನ್ನು (Pubಟiಛಿ Sಚಿಜಿeಣಥಿ ಂಟಿsತಿeಡಿiಟಿg Poiಟಿಣ) ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಂಪರ್ಕ, ಸಾರಿಗೆ ಮತ್ತು ಆಧುನೀಕರಣರವರ ಕಛೇರಿ ಆವರಣದಲ್ಲಿ ಸ್ಥಾಪಿಸಲಾಗಿದ್ದು, ಸದರಿ ೧೯೩೦ ಸಹಾಯವಾಣಿ ಕೇಂದ್ರದಲ್ಲಿ ಆನ್ಲೈನ್ ಹಣಕಾಸು ವಂಚನೆ ಅಪರಾಧಗಳಿಗೆ ಸಂಬAಧಿಸಿದ ದೂರುಗಳನ್ನು ಓಚಿಣioಟಿಚಿಟ ಅಥಿbeಡಿ ಛಿಡಿime ಖeಠಿoಡಿಣiಟಿg Poಡಿಣಚಿಟ (ಓಅಖP) ಮೂಲಕ ದಾಖಲಿಸಲಾಗುತ್ತಿದೆ.
23rd April 2025
ಬೀದರ. ಏ. 22 -: ಬೆಂಗಳೂರಿನ ಭಾಷಾಂತರ ನಿರ್ದೇಶನಾಲಯದ ಉಪ ನಿರ್ದೇಶಕರಾಗಿರುವ ಜಿಲ್ಲೆಯ ಭಕ್ತರಾಜ ಪಾಟೀಲ ಅವರಿಗೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಸೇವೆಗಾಗಿ ಕೊಡಲಾಗುವ 2023ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ದೊರೆತಿದೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿಯು ರೂ. 50 ಸಾವಿರ ನಗದು, ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಭಕ್ತರಾಜ ಪಾಟೀಲ ಅವರು ಜಿಲ್ಲೆಯ ಔರಾದ್ ತಾಲ್ಲೂಕಿನ ಬಾಚೆಪಳ್ಳಿ ಗ್ರಾಮದವರಾಗಿದ್ದಾರೆ.
1999 ರಲ್ಲಿ ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆಯ ಅಧೀನದ ಭಾಷಾಂತರ ನಿರ್ದೇಶನಾಲಯದಲ್ಲಿ ಭಾಷಾಂತರಕಾರರಾಗಿ ನೇಮಕಗೊಂಡ ಅವರು, ವಿಧಾನಸಭೆ ಸಚಿವಾಲಯದಲ್ಲಿ ಶಾಖಾಧಿಕಾರಿ, ಅಧೀನ ಕಾರ್ಯದರ್ಶಿ, ರಾಜ್ಯ ಭಾಷೆ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಭಾಷಾಂತರ ಇಲಾಖೆಯ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
23rd April 2025
ವಡಗೇರಾ : ಸಮಾಜಮುಖಿ ಹಾಗೂ ಪರೋಪಕಾರಿ ಕೆಲಸಗಳಿಂದ ಮಾತ್ರ ಮನುಷ್ಯನ ಜನ್ಮ ಸಾರ್ಥಕ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ ಹೇಳಿದರು. ತಾಲೂಕಿನ ತುಮಕೂರು ಗ್ರಾಮದಲ್ಲಿ ಇಕ್ಷು ಫಾರ್ಮ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮುಖ್ಯಸ್ಥರಾದ ಚೇತನ್ ಕಂಪನಿ ವ್ಯವಸ್ಥಾಪಕರಾದ ರಾಜಶೇಖರ್ ಮತ್ತು ಕರವೇ ಜಿಲ್ಲಾ ಉಪಾಧ್ಯಕ್ಷರಾದ ಚೌಡಯ್ಯ ಬಾವೂರ ಸಹಕಾರದೊಂದಿಗೆ ಸ್ಥಾಪಿಸಿರುವ ನೀರಿನ ಅರವಟಿಗೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅತಿ ಹೆಚ್ಚು ಬಿಸಿಲಿನ ತಾಪವಿದ್ದು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಚೌಡಯ್ಯ ಬಾವೂರ ಮಾತನಾಡಿ ಎಲ್ಲಾ ದಾನಕ್ಕಿಂತಲೂ ಕುಡಿಯುವ ನೀರಿನ ದಾನ ಅತ್ಯಂತ ಮಹತ್ವದ್ದಾಗಿದೆ ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರಿಗೆ ನೀರಿನ ದಾಹ ತಣಿಸಲು ನಮ್ಮ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಎಲ್ಲರ ಸಹಕಾರದೊಂದಿಗೆ ಕಲ್ಪಿಸಿದ್ದೇವೆ ಎಂದು ಅವರು ತಿಳಿಸಿದರು.
23rd April 2025
ಬಳ್ಳಾರಿ,ಏ.22-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಏ.24 ರಂದು ಸಂಜೆ 05.30 ಗಂಟೆಗೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ಡಾ.ರಾಜ್ ಕುಮಾರ್ ಅವರ ಕುರಿತ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳು, ಕನ್ನಡ ಕಲಾಪ್ರೇಮಿಗಳು, ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿ-ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
23rd April 2025
ಕಲಬುರಗಿ,ಏ.೨೨.(ಕರ್ನಾಟಕ ವಾರ್ತೆ)-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಹಾಗೂ ಅರೇ ಅಲೆಮಾರಿ ಜನರ ಕಲ್ಯಾಣಕ್ಕೆ ಸರ್ಕಾರ ಹತ್ತಾರು ಯೋಜನೆ ರೂಪಿಸಿದ್ದು, ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ಮತುವರ್ಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರು ಹೇಳಿದರು.
ಬುಧವಾರ ಇಲ್ಲಿನ ಡಿ.ಸಿ ಕಚೇರಿ ಸಭಾಂಗಣದಲ್ಲಿ ಅಲೆಮಾರಿ-ಅರೇ ಅಲೆಮಾರಿ ಸಮುದಾಯದ ಜನರಿಗೆ ನಿಗಮದಿಂದ ನೀಡಲಾಗುವ ವಿವಿಧ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅಲೆಮಾರಿ ಸಮುದಾಯ ಯೋಜನೆಗಳ ಅನುಷ್ಠಾನ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಅನುಷ್ಠಾನ ಸಮಿತಿಗೆ ಹೊಸದಾಗಿ ಸದಸ್ಯರನ್ನು ಕೂಡಲೆ ನೇಮಿಸಬೇಕು ಎಂದರು.
ನಿಗಮದಿAದ ವಸತಿ ರಹಿತರಿಗೆ ಸಾಲ ನೀಡಲಾಗುತ್ತದೆ. ಆದರೆ ಜಿಲ್ಲೆಯಿಂದ ಇದುವರೆಗೆ ಕೇವಲ ೮ ಪ್ರಸ್ತಾವನೆ ಬಂದಿವೆ. ಹೆಚ್ಚಿನ ಪ್ರಸ್ತಾವನೆಗಳು ಕಳುಹಿಸಿದಲ್ಲಿ ನಿಗಮದಿಂದ ಅನುಮೋದನೆ ನೀಡಲಾಗುವುದು. ಇನ್ನು ಬ್ಯಾಂಕ್ ಲಿಂಕೇಜ್ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಿಗೆ ಬ್ಯಾಂಕ್ಗಳು ಅನಗತ್ಯ ಕಿರಿಕಿರಿ ಮಾಡಬಾರದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷಕುಮಾರ ಅವರಿಗೆ ಸೂಚಿಸಿದರು.
ಅಲೆಮಾರಿ ಸಮುದಾಯ ದಿನನಿತ್ಯ ಸಂಚಾರ ಮಾಡುತ್ತಾ ಊರಿಂದ ಊರಿಗೆ ಅಲೆಯುತ್ತಾರೆ. ಹೀಗಾಗಿ ಇಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಸರ್ವೇ ಸಾಮಾನ್ಯ. ಹೀಗಾಗಿ ಇಂತಹ ಮಕ್ಕಳನ್ನು ಶಿಕ್ಷಕರು, ಶಿಕ್ಷಣ ಇಲಾಖೆ ಗುರುತಿಸಿ ಅವರಿಗೆ ಪ್ರಾಥಮಿಕ ಶಿಕ್ಷಣ ಕೊಡಿಸಬೇಕು. ಇನ್ನು ೬ನೇ ತರಗತಿ ಪ್ರವೇಶಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧೀನದ ಕ್ರೈಸ್ ವಸತಿ ಶಾಲೆಯಲ್ಲಿ ಪ್ರವೇಶ ಪರೀಕ್ಷೆ ಇಲ್ಲದೆ ಅಲೆಮಾರಿ ಸಮುದಾಯದ ಮಕ್ಕಳಿಗೆ ಪ್ರವೇಶಾತಿ ಕಲ್ಪಿಸಲು ಸರ್ಕಾರದ ಆದೇಶವಿದ್ದು, ಈ ಬಗ್ಗೆ ಸಮುದಾಯದ ಜನರಿಗೆ ಅರಿವು ಮೂಡಿಸಬೇಕು ಎಂದರು.
ಅಲೆಮಾರಿ ಸಮುದಾಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಿದ್ದು, ಇದರ ನಿವಾರಣೆಗೆ ಜಾಗೃತಿ ಕೆಲಸ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಾಡಬೇಕು ಎಂದು ಪಲ್ಲವಿ ಜಿ. ಅಭಿಪ್ರಾಯಪಟ್ಟರು. ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಮಿಷನ್ ಸುರಕ್ಷಾ ಯೋಜನೆಯಡಿ ೪೫೦ ತರಬೇತಿದಾರರನ್ನು ಬಳಸಿಕೊಂಡು ಕಲಬುರಗಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ, ಸೇಫ್ ಟಚ್, ಅನಸೇಫ್ ಕುರಿತು ವ್ಯಾಪಕ ಪ್ರಚಾರ ಮಾಡಲಾಗಿದೆ. ಅಲೆಮಾರಿ ಸಮುದಾಯದ ಜನರು ಹೆಚ್ಚಿರುವ ಸ್ಥಳಗಳಲ್ಲಿ ಈ ಬಗ್ಗೆ ಇನ್ನು ಹೆಚ್ಚು ಪ್ರಚಾರ ಕೈಗೊಳ್ಳಿ ಎಂದರು.
ದೌರ್ಜನ್ಯ ಪ್ರಕರಣದಲ್ಲಿ ಪರಿಹಾರ ಕೂಡಲೆ ನೀಡಿ ಸಂತ್ರಸ್ತ ಕುಟುಂಬ ಸದಸ್ಯರಿಗೆ ನೌಕರಿ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕು. ದೌರ್ಜನ್ಯ ಸಮಿತಿಗೆ ಅಲೆಮಾರಿ ಸಮುದಾಯ ಮುಖಂಡರನ್ನು ವಿಶೇಷ ಆಹ್ವಾನಿತರಾಗಿ ಕರೆಯಬೇಕು ಎಂದ ಅಧ್ಯಕ್ಷೆ ಪಲ್ಲವಿ ಜಿ. ಅವರು ಸೇಡಂ ತಾಲೂಕಿನ ಮುಧೋಳದ ಸರ್ವೆ ನಂ.೩೭ರಲ್ಲಿ ೬೦ ಬುಡ್ಗ ಜಂಗಮ ಕುಟುಂಬಗಳು ವಾಸಿಸುತ್ತಿದ್ದು, ಇವರಿಗೆ ಅಗತ್ಯ ಮೂಲಸೌಕರ್ಯ ಇಲ್ಲ. ಮೂಲಸೌಕರ್ಯ ಇಲ್ಲದೆ ಬದುಕು ಸಾಗಿಸೋದು ಹೇಗೆ ಎಂದು ಪ್ರಶ್ನಿಸಿ, ಕೂಡಲೆ ಅಗತ್ಯ ಸೌಲಭ್ಯ ಒದಗಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ ಮಾತನಾಡಿ ೨೦೧೧ ಜನಗಣತಿ ಪ್ರಕಾರ ೧೨,೯೩೮ ಎಸ್.ಸಿ, ೧೭,೨೫೦ ಎಸ್.ಟಿ ಹಾಗೂ ೮೩೦ ಆದಿವಾಸಿ ಅಲೆಮಾರಿ ಜನ ಜಿಲ್ಲೆಯಲ್ಲಿದ್ದಾರೆ. ಇದರಲ್ಲಿ ೫೦೧ ವಸತಿ ರಹಿತರು ಹಾಗೂ ೫೭೦ ನಿವೇಶನ ರಹಿತರಿದ್ದು, ಇವರಿಗೆ ಸೂರು ಕಲ್ಪಿಸಲು ಫಲಾನುಭವಿಗಳ ಮಾಹಿತಿ ಸಂಗ್ರಹಿಸಿದ್ದು, ಪರಿಶೀಲಿಸಿ ಹಂತ ಹಂತವಾಗಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ತಿಳಿಸಿ ನಿಗಮವ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಸಭೆಗೆ ಮಾಹಿತಿ ನೀಡಿದರು.
23rd April 2025
ಬೀದರ. ಏ. 22 :- ಪ್ರಸಕ್ತ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಸಾಧನೆಗೈದ ಇಲ್ಲಿಯ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಮಂಗಳವಾರ ಸನ್ಮಾನಿಸಲಾಯಿತು.
ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಅವರು ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ ಸತ್ಕರಿಸಿ, ಪ್ರೋತ್ಸಾಹಿಸಿದರು.
23rd April 2025
ಮಲ್ಲಮ್ಮ ನುಡಿ ವಾರ್ತೆ
ಭಾಲ್ಕಿ: ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ ಆದರ್ಶ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ರಾಜ್ಯ ಪಾಲ ಥಾವರಚಂದ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಲಿಂ.ಡಾ.ಚನ್ನಬಸವ ಪಟ್ಟದ್ದೇವರ ೨೬ನೇ ಸ್ಮರಣೋತ್ಸವ ನಿಮಿತ್ಯ ನಡೆದ ವಚನ ಜಾತ್ರೆ ೨೦೨೫ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಭಾಗದ ನಡೆದಾಡುವ ದೇವರೆಂದೇ ಖ್ಯಾತರಾದ ಲಿಂ. ಡಾ. ಚನ್ನಬಸವ ಪಟ್ಟದ್ದೇವರು, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ದೀನ, ದಲಿತರ ಉದ್ಧಾರಕ್ಕಾಗಿ ಹಲವಾರು ಕಾರ್ಯಗಳನ್ನು ಮಾಡಿ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ತತ್ವಾದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ಹೇಳಿದರು.
ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸನ್ನಿಧಾನ ವಹಿಸಿ ಮಾತನಾಡಿದರು. ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಥಣಿಯ ಪ್ರಭು ಚನ್ನಬಸವ ಸ್ವಾಮಿಗಳು, ಲೋಕ ಸಭಾ ಸದಸ್ಯ ಸಾಗರ ಈಶ್ವರಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟಿಲ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ನಾರಂಜಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಡಿ.ಕೆ.ಸಿದ್ರಾಮ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಎಸ್.ಪಿ. ಪ್ರದೀಪ ಗುಂಟಿ, ಡಿವಾಯ್ಎಸ್ಪಿ ಶಿವಾನಂದ ಪವಾಡಶೆಟ್ಟಿ, ಭಾರತೀಯ ಬಸವ ಬಳಗದ ಶಕುಂತಲಾ ಬೆಲ್ದಾಳೆ ಉಪಸ್ಥಿತರಿದ್ದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು. ಡಾ. ಅಮೀತ ಅಷ್ಟೂರೆ ವಂದಿಸಿದರು.
23rd April 2025
ಬೀದರ (ಕರ್ನಾಟಕ ವಾರ್ತೆ) ಏಪ್ರಿಲ್.22: 2025-26ನೇ ಸಾಲಿಗೆ ಜಿಲ್ಲೆಯಲ್ಲಿನ ಪ್ರತಿಷ್ಠಿತ ಶಾಲೆಯ (ಕನ್ನಡ ಮಾಧ್ಯಮ) ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು 6ನೇ ತರಗತಿಗೆ ಅರ್ಹತಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲು ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ https://swdservices.karnataka.gov.in/EducationPrestigious/authentication/login?redirectUrl=%2Fprofile ಮೂಲಕ ಆನ್ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಬೀದರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹತೆಗಳು: ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 2.50 ಲಕ್ಷಗಳೊಳಗಿರಬೇಕು. ಬಡತನ ರೇಖೆಗಿಂತ ಕೆಳಗಿನ ಮಟ್ಟದ ಹಾಗೂ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ವಿಫಲರಾಗಿರುವ ಅತಿ ಹಿಂದುಳಿದ ವರ್ಗದವರಿಗೆ ಈ ಸೌಲಭ್ಯವನ್ನು ನೀಡಲು ಉದ್ದೇಶಿಸಲಾಗಿರುತ್ತದೆ. ಪೌರ ಕಾರ್ಮಿಕರ ಮಕ್ಕಳು. ಸಫಾಯಿ ಕರ್ಮಚಾರಿಗಳ ಮಕ್ಕಳು. ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಮಕ್ಕಳು. ದೇವದಾಸಿ ರವರ ಮಕ್ಕಳು, ಅಂಗವಿಕಲತೆಯನ್ನು ಹೊಂದಿರುವವರು. ಕೋವೀಡ್ ಮುಂತಾದ ಪ್ರಕೃತಿ ವಿಕೋಪದಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು. ಏಕ ಪೋಷಕ ಮಕ್ಕಳು. ಯೋಜನಾ ನಿರಾಶ್ರಿತರ ಮಕ್ಕಳು. ಕೊಳಗೇರಿಗಳಲ್ಲಿ ವಾಸಿಸುತ್ತಿರುವವರ ಮಕ್ಕಳು. ಸಾಲ ಬಾಧೆಯಿಂದ ಆತ್ಮಹತ್ಯೆಗೆ ಗುರಿಯಾದವರ ಮಕ್ಕಳು. ದೌರ್ಜನ್ಯದಲ್ಲಿ ನೊಂದವರ ಮಕ್ಕಳು. ಮಾಜಿ ಸೈನಿಕರ ಮಕ್ಕಳು. ಕೃಷಿ ಕಾರ್ಮಿಕರ ಮಕ್ಕಳು. ಜೀತ ವಿಮುಕ್ತ ಮಕ್ಕಳು.
ಪ್ರಮುಖವಾಗಿ ಈ ಮೇಲಿನ ಹಿಂದುಳಿದ ವರ್ಗದವರಿಗೆ ಹಾಗೂ 5ನೇ ತರಗತಿಯಲ್ಲಿ ತೇರ್ಗಡೆಯಾಗಿ ಶೇಕಡಾ 60% ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮುಖ್ಯತೆ ನೀಡಲಾಗುವುದು.
23rd April 2025
ಯಾದಗಿರಿ : ಕನ್ನಡದ ಆದ್ಯ ವಚನಕಾರ ದೇವರ ದಾಸಿಮಯ್ಯ ಜನ್ಮಸ್ಥಳ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮುದನೂರ.ಬಿ ಗ್ರಾಮದಲ್ಲಿರುವ ಕ್ಷೇತ್ರವನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಸಮಗ್ರ ಅಭಿವೃದ್ಧಿಪಡಿಸಿ ಪ್ರವಾಸೋಧ್ಯಮ ಕ್ಷೇತ್ರವನ್ನಾಗಿ ಮಾರ್ಪಡಿಸಿ ಎಂದು ಕರ್ನಾಟಕ ರಾಜ್ಯ ಹಟಗಾರ ಸಮಾಜದ ಅಧ್ಯಕ್ಷ ಆರ್.ಸಿ ಗಾಳೆ ನೇತೃತ್ವದಲ್ಲಿ ನಿಯೋಗ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರ ಕಛೇರಿಯಲ್ಲಿ ಸಚಿವರನ್ನು ಹಾಗೂ ರಾಯಚೂರ ಸಂಸದ ಜಿ. ಕುಮಾರ ನಾಯಕ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದಲ್ಲಿಯೇ ದಾಸಿಮಯ್ಯ ಕ್ಷೇತ್ರ ಹಲವಾರು ವಿಶೇಷಗಳಿಂದ ಕೂಡಿದೆ, ೭ ಪುಸ್ಕರಣಿಗಳಿವೆ, ಸರ್ಕಾರ ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗೆ ೫ ಕೋಟಿ ರೂ. ಮಂಜೂರು ಮಾಡಿದೆ, ಅದರಲ್ಲಿ ೩ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ, ಈಗಾಗಲೇ ಅಲ್ಲಿ ೪ ಪುಸ್ಕರಣಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಭವ್ಯ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ, ಆದರೆ ಭಕ್ತರನ್ನು ಕಾಡುತ್ತಿರುವ ಪ್ರಮುಖ ಪ್ರಶ್ನೆ ಏನೆಂದರೇ ದೇವಸ್ಥಾನದ ಮೇಲೆ ಗ್ರಾಮದ ಜನರು ೧೬೦ ಮನೆಗಳನ್ನು ಕಟ್ಟಿಕೊಂಡಿದ್ದಾರೆ, ಇದರಿಂದ ಅಭಿವೃದ್ಧಿಗೆ ತೊಂದರೆಯಾಗತ್ತಿದೆ, ಕೂಡಲೇ ಸ್ಥಳಾಂತರಿಸಬೇಕು ಎಂದು ವಿವರಿಸಿದರು.
ಈ ಹಿಂದೆ ಅಲ್ಲಿ ಶಾಸಕರ ಅನುದಾನದಲ್ಲಿ ಸಭಾ ಭವನ ನಿರ್ಮಾಣ ಮಾಡಲಾಗಿದೆ, ಆದರೆ ಆ ನಿವೇಶನ ನೀಡಿದ ಮಾಲಿಕ ಒತ್ತುವರಿ ಮಾಡಿಕೊಂಡಿದ್ದಾನೆ, ಅವನಿಂದ ಬಿಡಿಸಬೇಕು, ಜಿಲ್ಲಾಡಳಿತದಿಂದ ಈಗಾಗಲೇ ಗ್ರಾಮದ ಹೊರ ವಲಯದಲ್ಲಿ ೧೦ ಎಕರೆ ಜಮೀನು ಮಂಜೂರಿ ಮಾಡಲಾಗಿದೆ, ಅಲ್ಲಿ ೨೦೦ ಮನೆಗಳನ್ನು ನಿರ್ಮಾಣ ಮಾಡಲು ಲೆಔಟ್ ಅಭಿವೃದ್ಧಿ ಪಡಿಸಿಬೇಕು.
ಈಗಾಗಲೇ ಜಿಲ್ಲಾಡಳಿತದಿಂದ ೪ ಪುಸ್ಕರಣಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಅದರಂತೆ ಇನ್ನೂಳಿದ ಮರಳುತೀರ್ಥ, ಲಕ್ಷö್ಮಣತೀರ್ಥ, ಸಂಗಮ ತೀರ್ಥ ಪುಸ್ಕರಣಿಗಳನ್ನು ಅಭಿವೃದ್ಧಿಪಡಿಸಬೇಕು, ಇದರಿಂದ ಪ್ರವಾಸಿಗರಿಗೂ ಹಾಗೂ ರೈತರಿಗೂ ಅನುಕೂಲತೆಯಾಗುತ್ತದೆ ಎಂದು ಮನವಿ ಮಾಡಿದರು.
ಮುಜರಾಯಿ ಇಲಾಖೆಯಿಂದ ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆಯಾದ ೨ ಕೋಟಿ ರೂ. ಅನುದಾನ ಜಮಾ ಮಾಡಬೇಕು, ದೇವಸ್ಥಾನ ಸುತ್ತ-ಮುತ್ತ ಸ್ಥಳ ಸರ್ವೇ ಮಾಡಿಸಿ, ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಯೋಗದೊಂದಿಗೆ ಮಾತನಾಡಿದ ಸಚಿವ ದರ್ಶನಾಪೂರ, ದಾಸಿಮಯ್ಯ ಕ್ಷೇತ್ರ ಒಂದು ಸುಂದರ ನಿಸರ್ಗದಲ್ಲಿದೆ, ಆ ಕ್ಷೇತ್ರ ಅಭಿವೃದ್ಧಿಪಡಿಸಬೇಕೆಂಬುದು ಸರ್ಕಾರದ ಅಭಿಲಾಷೆಯಾಗಿದೆ, ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ನಾನು, ಸಂಸದರು ಸೂಚನೆ ನೀಡಿದ್ದೇವೆ, ಅಲ್ಲದೇ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಿದ್ದೇವೆ, ಎಲ್ಲದಕ್ಕೂ ಗ್ರಾಮಸ್ಥರು ಸಹಕರಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ನಾನು ಎಲ್ಲಾ ಹಂತಗಳಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದೇನೆ, ನಿಮ್ಮೇಲ್ಲರ ಅಪೇಕ್ಷೆಯಂತೆ ದಾಸಿಮಯ್ಯ ಕ್ಷೇತ್ರವನ್ನು ಪ್ರವಾಸೋಧ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ತಿಳಿಸಲಾಗುವುದು ಎಂದು ಭರವಸೆ ನೀಡಿದರು.
23rd April 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ 7ನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣ ಅಭಿಯಾನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕ್ವೆಸಾನ್ ಕಚೇರಿ ಸಭಾಂಗಣದಲ್ಲಿ ಏಪ್ರಿಲ್ 19 ರಂದು ನಡೆಯಿತು.
ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಜಿಲ್ಲೆಯಲ್ಲಿರುವ ಜಾನುವಾರುಗಳಿಗೆ ಕಾಲುಬಾಯಿ ರೋಗದ ವಿರುದ್ಧ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆಯನ್ನು ಹಾಕಲು ಏಪ್ರಿಲ್ 21 ರಿಂದ ಜೂನ್ 04 ರವರೆಗೆ ಲಸಿಕಾ ಅಭಿಯಾನವನ್ನು ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ರೋಗ ಲಸಿಕಾ ಅಭಿಯಾನದ ಪೋಸ್ಟರ್ಗಳನ್ನು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ರೈತರಿಗೆ ಆರ್ಥಿಕ ಸಂಕಷ್ಟ ಉಂಟು ಮಾಡುವ ಕಾಲುಬಾಯಿ ರೋಗದಿಂದ ರಾಜ್ಯವನ್ನು ಮುಕ್ತ ಮಾಡಲು ಸಾರ್ವಜನಿಕರು ಸಹಕರಿಸಬೇಕು. ಅದೇ ರೀತಿ ಜಿಲ್ಲೆಯಲ್ಲಿ ಈ ಅಭಿಯಾನವನ್ನು ಸಮರ್ಪಕವಾಗಿ ಹಮ್ಮಿಕೊಂಡು, ಜಿಲ್ಲೆಯ ಎತ್ತು, ಹೋರಿ, ಹಸು, ಎಮ್ಮೆ ಮತ್ತು ಸಂಬAಧಿಸಿದ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ಲಸಿಕಾ ಅಭಿಯಾನದ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಪಶು ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.