
19th April 2025
ಬೀದರ್: ಏ.18 :- ೧೫ರ ರಾತ್ರಿ ಪತ್ರಕರ್ತ ರವಿ ಭೂಸಂಡೆ ಅವರ ಮೇಲೆ ಹಲ್ಲೆ ಮಾಡಿರುವ ಅರಣ್ಯ ಸಿಬ್ಬಂದಿ ದಸ್ತಗೀರ ಸೇರಿ ನಾಲ್ಕು ಜನ ಹಲ್ಲೆ ಮಾಡಿದ್ದರು. ಇಂದು ದಸ್ತಗೀರರನ್ನು ಇಲ್ಲಿಯ ಪ್ರಾದೆಶಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಅಮಾನತ್ತು ಆದೇಶ ಹೊರಡಿಸಿದ್ದಾರೆ. ಆದರೆ ಇನ್ನುಳಿದ ಮೂವರಾದ ಸಂಗಮೇಶ, ಗಜಾನಂದ ಹಾಗೂ ಶಾಂತಕುಮಾರ ಈ ಮೂವರನ್ನು ಸಹ ಅಮಾನತ್ತು ಮಾಡಬೇಕು. ಇನ್ನು ಮೂವರನ್ನು ಸಹ ಪತ್ತೆ ಹಚ್ಚಿ ಅವರಿಗೂ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಆದೇಶ ನೀಡಿದ್ದಾರೆಂದ ಮಾತ್ರಕ್ಕೆ ರಾತ್ರಿ ಸಸಿ ನೆಡುವುದು ಪ್ರಕೃತಿಗೆ ಒಳ್ಳೆಯದಲ್ಲ. ರಾತ್ರಿ ಆದ ಮೇಲೆ ಮರಗಳನ್ನು ಕಡಿಯಬಾರದು, ಹೂ ಕೀಳಬಾರದೆಂದು ನಮ್ಮ ಹಿರಿಯರು ಹೇಳುತ್ತಾರೆ. ಅಂಥದರಲ್ಲಿ ಇವರು ರಾತ್ರಿ ಸಸಿಗಳನ್ನು ನೆಡಲು ಹೇಳಿ ಯಾರಿಗೆ ಮೆಚ್ಚಿಸಲು ಸಚಿವರು ಹೊರಟಿದ್ದಾರೆ? ಎಂದು ಪ್ರಶ್ನೆ ಮಾಡಿರುವ ಬಂಗ್ಲೆ ಅವರು, ಇದ್ದ ಸಸಿಗೆ ನೀರು ಹಾಕಿದರೆ ಸಾಕೆಂದು ಹೇಳಿದರು.
ಪತ್ರಕರ್ತನಾದವನಿಗೆ ತನ್ನ ವೃತ್ತಿ ಧರ್ಮ ಪಾಲಿಸಲು ಸಂಪೂರ್ಣ ಅಧಿಕಾರವಿದೆ. ನಮ್ಮ ಅಧಿಕಾರ ಹನನ ಮಾಡುವ ಹಕ್ಕು ಯಾರಿಗೂ ಇಲ್ಲ. ಅಂಥದರಲ್ಲಿ ಪತ್ರಕರ್ತ ರವಿ ಸುದ್ದಿ ಮಾಡಲು ಮುಂದಾದರೆ ಮನಬಂದಂತೆ ಅವನ ಮೇಲೆ ಹಲ್ಲೆ ಮಾಡುವುದು, ಜಾತಿ ನಿಂದನೆ ಮಾಡುವ ಮೂಲಕ ಇಡೀ ಅಧಿಕಾರಿ ವರ್ಗದ ಮಾನ ಹರಾಜು ಮಡಿರುವ ತಪ್ಪಿತಸ್ತ ಎಲ್ಲರ ಮೇಲೂ 307 ಹಾಗೂ ಕಿಡ್ನಾö್ಯಪಿಂಗ್ ಕೆಸ್ ದಾಖಲಿಸಬೇಕಿತ್ತು. ಆದರೆ ಪೋಲಿಸ್ ಅಧಿಕಾರಿಗಳು ನಾಮಕೆ ವಾಸ್ತೆ ಕೇಸ್ ದಾಖಲಿಸಿರುವುದಕ್ಕೆ ಯಾರ ಒತ್ತಡವಿದೆ? ಎಂದು ಪ್ರಶ್ನೆ ಮಾಡಿರುವ ಅವರು, ಕೂಡಲೇ ಹಲ್ಲೆ ಎಸಗಿದ ಇನ್ನುಳಿದ ಮೂವರ ಮೇಲು ಅಮಾನತ್ತು ಶಿಕ್ಷೆ ಆಗಬೇಕು ಜೊತೆಗೆ ಇನ್ನು ಮೂವರ ಪತ್ತೆ ಹಚ್ಚಿ ಅವರ ಮೇಲೂ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಕಾನಿಪ ಧ್ವನಿ ಸಂಘಟನೆ ವಿಭಾಗೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಪಗಡೆ ಮಾತನಾಡಿ, ಹಲ್ಲೆ ಮಾಡುವ ಸಂದರ್ಭದಲ್ಲಿ ಹಲ್ಲೆಗೈದ ಅರಣ್ಯ ಸಿಬ್ಬಂದಿಗಳು ಸಚಿವ ಈಶ್ವರ ಖಂಡ್ರೆಯವರಿಗೆ ಹೋಗಿ ಹೇಳು ಎಂದು ಗದರಿಸುವ ಮೂಲಕ ಖಂಡ್ರೆಯವರನ್ನು ಹಿಯಾಳಿಸಲು ಅವರ ಇಲಾಖೆಯ ಸಿಬ್ಬಂದಿಗಳೆ ಹೋರಟಿದ್ದಾರೆ ಎನ್ನುವಂಗಾಯ್ತು. ಪತ್ರಕರ್ತ ರವಿ ಕುಡಿದಿದ್ದಾನೆ ಎಂದು ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಈಗಾಗಲೇ ರವಿ ಕುಡಿದಿಲ್ಲ ಎಂಬ ವೈದ್ಯಕೀಯ ವರದಿ ಬಂದಿದೆ. ಆದರೆ ಅರಣ್ಯ ಸಿಬ್ಬಂದಿಗಳು ಕುಡಿದಿರುವ ಬಗ್ಗೆ ಸಹ ಟೆಸ್ಟ್ ಆಗಬೇಕು, ತಪ್ಪಿತಸ್ತ ಎಲ್ಲರ ಮೇಲೂ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
18th April 2025
ಮಲ್ಲಮ್ಮ ನುಡಿ ವಾರ್ತೆ
ಚಿಟಗುಪ್ಪ:- ಬೀದರನಲ್ಲಿ ಪತ್ರಕರ್ತ ರವಿ ಬಸವರಾಜ ಭೂಸಂಡೆ ಅವರ ಮೇಲೆ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಿರುವ ನಾಲ್ಕು ಜನ ಅರಣ್ಯ ಇಲಾಖೆಯ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿವುದರ ಜತೆಗೆ ಅವರನ್ನು ಸೇವೆಯಿಂದ ವಜಾ ಮಾಡುವಂತೆ ಆಗ್ರಹಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ತಹಸಿಲ್ದಾರ ಮಂಜುನಾಥ ಪಂಚಾಳ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ದಸ್ತಗೀರ, ಶಾಂತಕುಮಾರ, ಗಜಾನಂದ ಹಾಗೂ ಸಂಗಮೇಶ ಎಂಬುವವರು ಪತ್ರಕರ್ತ ರವಿ ಭೂಸಂಡೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮತ್ತು ಕಾಲರ ಪಟ್ಟಿ ಹಿಡಿದು ಎಳೆದಾಡಿರುವ ವಿಡಿಯೋ ವೈರಲ್ ಆಗಿದ್ದು ಈ ಅಮಾನವೀಯ ಘಟನೆಗೆ ಕಾರಣರಾದವರನ್ನು ಈ ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುವ ಮೂಲಕ ರಾಜ್ಯ ವ್ಯಾಪಿ ಹೋರಾಟ ನಡೆಸಲಾಗುವುದು ಎಂದರು. ಚಿಟಗುಪ್ಪ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ ಗಂಜಿ, ಹುಮನಾಬಾದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೂರ್ಯೋಧನ ಹೂಗಾರ, ಉಪಾಧ್ಯಕ್ಷ ಕೃಷ್ಣಾಚಾರ ಪಂಚಾಳ, ಪ್ರಧಾನ ಕಾರ್ಯದರ್ಶಿ ಸೈಯದ ಮುಸ್ತಫಾ ಖಾದ್ರಿ, ಪತ್ರಕರ್ತರಾದ ರಾಜಕುಮಾರ ಆರ್. ಹಡಪದ, ವಿದ್ಯಾಸಾಗರ ಕಟ್ಟಿಮನಿ, ಮೊಯಿಯೋದ್ದಿನ ಲಾಥೋಡಿ, ಸೈಯದ ಅಜೀಮ, ಸಲಾವುದ್ದಿನ ಸಿದ್ದಿಕ, ಸಂಗಮೇಶ ಜವಾದಿ, ಗುಂಡು ಅತಿವಾಳ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
15th April 2025
ಶಹಾಪುರ, ಗೊಂಬೆಕುಣಿತ, ಕಣಿ ಹಲಿಗಿಕುಣಿತ, ಹಾಗೂ ನಾನಾ ವೇಶಭೂಷಣಗಳಿಂದ ಮಕ್ಕಳ ಕೊಲಾಟ, ಡೊಳ್ಳು ಕುಣಿತ, ಹಲಿಗೆ ನಿನಾದಗಳ ಮಧ್ಯದಲ್ಲಿ ರಾಷ್ಟಿçÃಯ ಹೆದ್ದಾರಿಯೂದ್ದಕ್ಕೂ ವಿಶ್ವರತ್ನ ಡಾ,ಬಾಬಾಸಾಹೇಬ ಅಂಬೇಡ್ಕರವರ ಪ್ರತಿಮೆಯ ಭವ್ಯ ಮೇರವಣಿಗೆಯಲ್ಲಿ, ಡಾ,ಬಿ,ಆರ್,ಅಂಬೇಡ್ಕರವರ ೧೩೪ ನೆಯ ಜಯಂತೋತ್ಸವ ಸಂಭ್ರಮದ ಸಡಗರಗಳಿಂದ ಜರುಗಿತು, ಬುದ್ದನಗರದ ಡಾ, ಬಾಬಾಸಾಹೇಬ ಅಂಬೇಡ್ಕರವರ ಪ್ರತಿಮೆಯಿಂದ ಸಾಗಿದ ಮೇರವಣಿಗೆ ಹಳೆ ಬಸ್ ನಿಲ್ದಾಣ ಮತ್ತು ಬಸವೇಶ್ವರ ವೃತ್ತದಿಂದ ಸಿಪಿಎಸ್, ಶಾಲಾ ಮೈದಾನದವರೆಗೂ ಸಾಗಿತ್ತು, ಸಂಧರ್ಭದಲ್ಲಿ
15th April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಎ.೧೪-ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ, ಸಧ್ಯಕ್ಕೆ ಸಮಾಜದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ದೃಷ್ಠಿಯಿಂದ ಜಿಲ್ಲೆಯ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ಏ.೨೦ ರಂದು ಪಂಚಮಸಾಲಿ ಸಮಾಜದ ರಾಜ್ಯಮಟ್ಟದ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸ್ವಾಮೀಜಿ, ಅಂದಿನ ಸಭೆಯಲ್ಲಿ ಪಂಚಮಸಾಲಿ ಸಮಾಜದ ರಾಷ್ಟç, ರಾಜ್ಯ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಚಿವರು, ಶಾಸಕರು ಸೇರಿದಂತೆ ಸಮಾಜದ ಎಲ್ಲ ಜನರು ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು ಎಂದು ಹೇಳಿದರು.
ಮೀಸಲಾತಿ ಹೋರಾಟ ಪ್ರಾರಂಭಿಸಿದ್ದರಿAದಾಗಿ ಇಂದು ಸಮಾಜದ ಸಂಘಟನೆ ಜಗತ್ತಿನಾದ್ಯಂತ ಸದೃಢವಾಗಿದೆ. ನನ್ನ ಉದ್ದೇಶ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವುದು ಹಾಗೂ ಸಮಾಜಕ್ಕೆ ನ್ಯಾಯ ಒದಗಿಸುವುದಾಗಿದೆ ಎಂದ ಸ್ವಾಮೀಜಿ, ನಾನು ಸಮಾಜದ ಯಾವುದೇ ವ್ಯಕ್ತಿ ಪರವಾಗಿ ಹೋರಾಟ ಮಾಡಿಲ್ಲ. ಸಮಾಜದ ಹಿತಕ್ಕಾಗಿ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದರು.
ಸಮಾಜ ಸಂಘಟನೆಯ ಸಂದರ್ಭದಲ್ಲಿ ಕೆಲವರಲ್ಲಿ ಭಿನ್ನಾಭಿಪ್ರಾಯ, ಗೊಂದಲಗಳು ಇರುವುದು ಸಹಜ. ಇನ್ನು ಕೆಲವರು ಅಜ್ಞಾನ, ಆಸೆ, ಆಮಿಷಗಳಿಗೆ ಒಳಗಾಗಿ ಟೀಕೆ, ಟಿಪ್ಪಣೆ ಮಾಡುತ್ತಾರೆ. ಆದರೂ ನಾನು ಯಾರಿಗೂ ಉತ್ತರಿಸುವುದಿಲ್ಲ. ನಾವು ಮಾಡುವ ಕಾರ್ಯಗಳು ಒಳ್ಳೆಯದು ಎನ್ನುವವರೂ ನಮ್ಮವರೇ, ಒಳ್ಳೆಯದಲ್ಲ ಎನ್ನುವವರೂ ನಮ್ಮವರೇ. ಹೀಗಾಗಿ ಅವರನ್ನು ವಿರೋಧಿಸುವುದಿಲ್ಲ ಎಂದು ಹೇಳಿದ ಬಸವಜಯಮೃತ್ಯುಂಜಯ ಸ್ವಾಮೀಜಿ, ನಾನು ಭೌತಿಕತೆಗೆ ಒಳಗಾಗಿಲ್ಲ. ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಹೇಳಿದರು.
ನಾನು ಪೀಠ ಕಟ್ಟಿದ್ದು ಬಯಲಲ್ಲೇ. ಅಲ್ಲೇ ಇದ್ದು ಸಮಾಜ ಸಂಘಟನೆ ಮಾಡಿದ್ದೇನೆ. ಆಸ್ತಿ, ಅಂತಸ್ತು ಯಾವುದೂ ನನಗೆ ಮುಖ್ಯ ಅಲ್ಲ. ನನ್ನ ಸಮಾಜ ಮುಖ್ಯ. ಸಮಾಜದ ಪ್ರತಿಯೊಬ್ಬ ವ್ಯಕ್ತಿ ಏನು ಸಲಹೆ ಕೊಡುತ್ತಾನೋ ಆ ರೀತಿ ನಡೆದುಕೊಳ್ಳುತ್ತೇನೆ. ಯಾರು ಏನೇ ಅಂದರೂ ಸಮಾಜದ ಹಿತದೃಷ್ಠಿಯಿಂದ ಸಹಿಸಿಕೊಂಡು ಬರುತ್ತಿದ್ದೇನೆ ಎಂದು ಹೇಳಿದ ಅವರು, ಉಂಟಾಗಿರುವ ಎಲ್ಲ ಭಿನ್ನಾಭಿಪ್ರಾಯಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಏ.೨೦ ರಂದು ಸಭೆಯನ್ನು ಕರೆಯಲಾಗಿದೆ ಎಂದರು.
ಮಠದ ಪೀಠಾಧಿಪತಿ ಬದಲಾವಣೆ ವಿಷಯದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಅವರು ನನ್ನನ್ನು ತಪ್ಪಾಗಿ ಅರ್ಥೆÊಸಿಕೊಂಡಿದ್ದಾರೆ. ಯಾರೆಲ್ಲಾ ಟೀಕೆ ಮಾಡಿದ್ದಾರೆ ಅವರೆಲ್ಲರೂ ನಮ್ಮವರೇ. ಅವರಿಗೆ ದೇವರು ಸದ್ಬುದ್ಧಿ ಕೊಡಲಿ. ಶ್ರೀ ಪೀಠದ ಬಗ್ಗೆ ಗೌರವ, ಅಭಿಮಾನ ಹೊಂದಿರುವ ಎಲ್ಲರೂ ಏ.೨೦ರ ಸಭೆಗೆ ಬರ್ತಾರೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
15th April 2025
ಬೀದರ. ಏ. 14 :- ನಗರದ ಶಿವನಗರದ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
25th March 2025
ಗುರುಮಠಕಲ. ಮಾ. 24. ನಗರದ ಪುರಸಭೆ ಕಾರ್ಯಾಲಯದ ಸಾಮಾನ್ಯ ಸಭೆ ಮತ್ತು 2025-26 ನೇ ಸಾಲಿನ ಆಯ-ವ್ಯಯದ (ಬಜೆಟ್) ಮಂಜೂರಾತಿ ಸಭೆಯನ್ನು
ಮಾನ್ಯ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಆರ್ ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು , ಬೆಳಿಗ್ಗೆ 10.30 ನಿ.ಕ್ಕೆ ಪ್ರಾರಂಭವಾದ ಸಾಮಾನ್ಯ ಸಭೆ ಮತ್ತು ಬಜೆಟ್ ಮಂಡನೆಯು ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಭಾರತಿ ದಂಡೊತಿ ಸಮ್ಮುಖದಲ್ಲಿ ಕೆಳಕಂಡ
ಪ್ರಮುಖ ವಿಷಯಗಳು ಚರ್ಚಿಸಿ ನಿರ್ಣಯ ತೆಗೆದು ಕೊಳ್ಳಲಾಯಿತು. ಆಸ್ತಿ ತೆರಿಗೆ ದರ ಪರಿಷ್ಕರಣೆ ಶೇಕಡ 3℅ ಹೆಚ್ಚಳ. ಆದಾಯ ಮತ್ತು ಖರ್ಚಿನ ವಿವರ ನೀಡಿ ಅನಧಿಕೃತ ಪುರಸಭೆ ಪರವಾನಿಗೆ ಇಲ್ಲದ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳುವ ಕುರಿತು, ಪುರಸಭೆ ಜಾಹೀರಾತು ಫಲಕ 3 ರೂಪಾಯಿ/ಚದರ ಫೂಟ್ ಹಾಗೂ ಜಾಹೀರಾತಿಗಾಗಿ ಬಳಸುವ ನೆಲಬಾಡಿಗೆ ವಾರ್ಷಿಕವಾಗಿ 30000 ರೂಪಾಯಿ ನಿಗದಿ ಮಾಡಲಾಗಿದೆ, ವರ್ಗಾವಣೆ ಶುಲ್ಕ ಯಥಾಸ್ಥಿತಿ ಕಾಯ್ದುಕೊಳ್ಳಲು ತೀರ್ಮಾನಿಸಲಾಯಿತು. ಅಂಬೇಡ್ಕರ್ ಕಲ್ಯಾಣ ಮಂಟಪ ಮೂಲಭೂತ ಸೌಕರ್ಯ ಕಲ್ಪಿಸಿ ಬಾಡಿಗೆ 5000 ರೂಪಾಯಿ ನಿಗದಿ ಮಾಡಲಾಯಿತು. ಬಸ್ ನಿಲ್ದಾಣ ದಿಂದ ಕೆ. ಹೆಚ್. ಡಿ. ಸಿ. ಕಾಲೋನಿ ವರೆಗಿನ ಮಾಂಸ ಅಂಗಡಿಗಳ ತೆರವು ಗೊಳಿಸುವ ಕುರಿತು ಚರ್ಚೆ ಮಾಡಲಾಯಿತು. ನೀರು ಶುದ್ದೀಕರಣ ಘಟಕಗಳ ಕುರಿತು ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಸೃಜಿಸಿರುವ ವಸತಿ ವಿನ್ಯಾಸಗಳ ಅನುಮೋದನೆಯ ಕುರಿತು ಚರ್ಚೆ ಮಾಡಲಾಯಿತು ಯು. ಜಿ. ಡಿ. ಕುರಿತು ಸಾಕಷ್ಟು ಸಮಸ್ಸೆಗಳ ಬಗ್ಗೆ ಚರ್ಚಿಸಲಾಯಿತು. ರಾಜಕುಮಾರ್ ಹಬೀಬ್ ಇಂಜಿನಿಯರ್ ಶೀಘ್ರದಲ್ಲಿ ಅಮೃತ 2.0 ಹಾಗೂ ಯು. ಜಿ. ಡಿ ಕುರಿತು ಪುರಸಭೆ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಕರೆಯಲು ಪುರಸಭೆ ಸದಸ್ಯರ ತೀರ್ಮಾನ. ಇದೇ ವಾರದಲ್ಲಿ ಗುರುಮಠಕಲ್ ನಗರದ ಬಸ್ ನಿಲ್ದಾಣದಿಂದ ನಾರಾಯಣಪೆಟ್ ಕ್ರಾಸ್ ವರೆಗಿನ ರಸ್ತೆ ನಿರ್ಮಾಣ ಕಾರ್ಯಕ್ರಮ ಪ್ರಾರಂಭ ಮಾಡುವದಾಗಿ ಲ್ಯಾಂಡ್ ಆರ್ಮಿ ಯಾದಗಿರಿ ಸಹಾಯಕ ಇಂಜಿನಿಯರ ತಿಳಿಸಿದರು. ಪುರಸಭೆ ಆಯಾ ವ್ಯಯ ವಿವರಿಸಲಾಯಿತು.ಈ ಸಭೆಯಲ್ಲಿ ಪುರಸಭೆ ಚುನಾಯಿತ ಸದಸ್ಯರು, ನಾಮ ನಿರ್ದೇಶನ ಸದಸ್ಯರು, ಪುರಸಭೆ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು, ಹಾಜರಿದ್ದರು.
25th March 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಮಾ.೨೪-ಮನುಷ್ಯ ದುಷ್ಟರ ಸಂಗ ಮಾಡಿ ದುಷ್ಕರ್ಮಿಯಾಗದೇ ಸಜ್ಜನರ ಸಂಗ ಮಾಡಿ ಸತ್ಕರ್ಮಗಳಿಂದ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹೇಳಿದರು.
ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಸ್ಥಳೀಯ ಹೇಮ ವೇಮನ ಸದ್ಬೋಧನ ಪೀಠ ನೀಲಪ್ಪ ಬಾಳಕ್ಕನವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ಮಹಾಯೋಗಿ ವೇಮನರ ೧೭೮ ನೆಯ ಮಾಸಿಕ ತತ್ವ ಚಿಂತನ ಕಾರ್ಯಕ್ರಮದಲ್ಲಿ ವೇಮನರ ವಚನ ಕುರಿತು ಸದ್ಬೋಧನೆ ನೀಡಿದರು.
ಮಹಾನುಭಾವರು, ಶರಣರು, ಸಂತರು, ಯೋಗಿಗಳು ತಮ್ಮ ಅಂತರAಗದ ಚಕ್ಷುವಿನಿಂದ ಪರಮಾತ್ಮನನ್ನು ಕಂಡವರು. ಹಾಗೆಯೇ ಮನುಷ್ಯ ತನ್ನ ಮನಸ್ಸನ್ನು ಸಚ್ಛವಾಗಿರಿಸಿಕೊಂಡು ನೀತಿವಂತನಾಗಿ ಬಾಳಿ ಪರೋಪಕಾರದ ಕಾರ್ಯಗಳನ್ನು ಗೈದು ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದ ಗುರೂಜಿ, ದುಷ್ಟರ ಸಂಗ ಮಾಡಿ ದುಷ್ಕರ್ಮಿಯಾಗದೇ ಸಜ್ಜನರ ಸಂಗದಿAದ ಸತ್ಕರ್ಮಿಯಾಗಿ ಬಾಳಬೇಕು ಎಂದು ಹೇಳಿದರು.
ಅತಿಥಿಯಾಗಿದ್ದ ನಿವೃತ್ತ ಶಿಕ್ಷಕ ಡಿ.ಪಿ.ಅಮಲಝರಿ, ಬದುಕಿನ ಅರ್ಥ ತಿಳಿದುಕೊಂಡವನಲ್ಲಿ ನೀತಿವಂತಿಕೆ ಇರುತ್ತದೆ. ಆ ದಿಸೆಯಲ್ಲಿ ಮನುಷ್ಯ ಸತ್ಸಂಗ, ಸತ್ಕಾರ್ಯಗಳಲ್ಲಿ ಪಾಲ್ಗೊಂಡು ಪುನೀತನಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಸಂಜಯ ನಡುವಿನಮನಿ, ವ್ಯಕ್ತಿ ಎಷ್ಟು ದಿನ ಬದುಕಿದ ಎನ್ನುವುದು ಮುಖ್ಯವಲ್ಲ, ಯಾವ ರೀತಿ ಬದುಕಿದ ಅನ್ನುವುದು ಮುಖ್ಯ. ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ಬದುಕು, ಅವರು ನೀಡಿದ ಸಂದೇಶಗಳು ಎಲ್ಲರ ಬಾಳಿಗೂ ಬೆಳಕಾಗಿವೆ ಎಂದು ಹೇಳಿದರು.
ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ ಅಧ್ಯಕ್ಷತೆ ವಹಿಸಿದ್ದರು.
24th February 2025
ಕಲಬುರಗಿ,ಫೆ.೨೨(ಕರ್ನಾಟಕ ವಾರ್ತೆ) ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಜಾತ್ರೆ ಮೈದಾನದಲ್ಲಿ ಇದೇ ಫೆಬ್ರವರಿ ೨೪ ರಿಂದ ೧೦ ದಿನಗಳ ಕಾಲ ರಾಷ್ಟ್ರ ಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳು ತಯ್ಯಾರಿಸಿದ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುವುದರಿಂದ ೧೦ ದಿನಯುದ್ದಕ್ಕೂ ಸ್ಬಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಶನಿವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಸರಸ್ ಮೇಳ ಸಂಬAಧ ರಚಿಸಲಾಗಿರುವ ವಿವಿಧ ಸಮಿತಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಸ ಸಂಗ್ರಹಣೆಗೆ ಪಾಲಿಕೆ ವತಿಯಿಂದ ಹೆಚ್ಚಿನ ಪೌರಕಾರ್ಮಿಕರನ್ನು ನೇಮಿಸಬೇಕು. ಅಲ್ಲಲ್ಲಿ ಬಯೋ ಟಾಯಲೆಟ್ ವ್ಯವಸ್ಥೆ ಮಾಡಬೇಕು ಎಂದರು.
ರಾಷ್ಟ್ರ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇದಾಗಿರುವುದರಿಂದ ಮಾರಾಟಕ್ಕೆ ಜನ ಬರ್ತಾರೆ. ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಬೇಕು. ಪ್ರತಿ ದಿನ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಇರುವುದರಿಂದ ಸಹಜವಾಗಿಯೇ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪಾರ್ಕಿಂಗ್ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿ ಮಾಡಬೇಕು. ಸುಗಮ ಸಂಚಾರಕ್ಕೆ ಹೆಚ್ಚಿನ ಟ್ರಾಫಿಕ್ ಸಿಬ್ಬಂದಿ ನಿಯೋಜನೆ ಜೊತೆಗೆ ಜಾತ್ರೆ ಮೈದಾನ ಸುತ್ತ ಸೈನೇಜ್ ಬೋರ್ಡ್ ಅಳವಡಿಸಬೇಕು ಎಂದರು.
ಸಾAಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಎಂದ ಜಿಲ್ಲಾಧಿಕಾರಿಗಳು, ಎರಡು ಶಿಪ್ಟ್ ನಲ್ಲಿ ವೈದ್ಯರು ಕೆಲಸ ನಿರ್ವಹಿಸುವಂತೆ ಅಂಬುಲೆನ್ಸ್ ವಾಹನದ ಜೊತೆಗೆ ಒಂದು ವೈದ್ಯಕೀಯ ತಂಡ ಮತ್ತು ಮುಂಜಾಗ್ರತೆಯಾಗಿ ಅಗ್ನಿ ಅವಘಡ ನಿಯಂತ್ರಣಕ್ಕೆ ಅಗ್ನಿಶಾಮಕ ತಂಡ ಸ್ಥಳದಲ್ಲಿ ತೈನಾತಿಸಬೇಕು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.
ಬೇಸಿಗೆ ಇರುವ ಕಾರಣ ಕುಡಿಯುವ ನೀರು ನಿರಂತರ ಪೂರೈಸುವ ವ್ಯವಸ್ಥೆ ಆಗಬೇಕು. ವಿವಿಧ ರಾಜ್ಯಗಳಿಂದ ಬರುವ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಊಟದ ವ್ಯವಸ್ಥೆ, ವಸತಿ ಎಲ್ಲವು ಅಚ್ಚುಕಟಾಗಿ ಮಾಡಲು ಪರಸ್ಪರ ಅಧಿಕಾರಿಗಳು ಸಮನ್ವಯ ಸಾಧಿಸಬೇಕು. ಮೇಳ ಯಶಸ್ಸಿಗೆ ವೇದಿಕೆ, ಆಹಾರ, ಸಆರಿಗೆ, ಸಆಂಸ್ಕೃತಿಕ, ಮಾಧ್ಯಮ, ನೀರು ಸರಬರಾಜು ಹಾಗೂ ನೈರ್ಮಲ್ಯ, ಸುರಕ್ಷಾ, ಅಗ್ನಿಶಾಮಕ ಹೀಗೆ ಒಟ್ಟು ೮ ಸಮಿತಿಗಳನ್ನು ರಚಿಸಿ ಕೆಲಸ ಕಾರ್ಯ ಹಂಚಿಕೆ ಮಾಡಿದ್ದು, ಅದರಂತೆ ಅಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ಚಾಚು ತಪ್ಪದೆ ಮಾಡಬೇಕು ಎಂದರು.
ಕಲಬುರಗಿ ಮೂರನೇ ರಾಷ್ಟ್ರೀಯ ಮೇಳಕ್ಕೆ ಸಾಕ್ಷಿ: ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದ ಕಾರ್ಯಕ್ರಮ ವ್ಯವಸ್ಥಾಪಕ ಎಂ.ಕೆ. ಅಲಿ ಮಾತನಾಡಿ ೨೦೧೮ ರಿಂದ ಈ ರೀತಿಯ ರಾಷ್ಟ್ರ ಮಟ್ಟದ ಸರಸ್ ಮೇಳ ಆಯೋಜಿಸಲಾಗುತ್ತಿದೆ. ಬೆಂಗಳೂರು, ಬೆಳಗಾವಿಯಲ್ಲಿ ಈಗಾಗಲೆ ಮಾಡಿದ್ದು, ಕಲಬುರಗಿ ಮೂರನೇ ಮೇಳಕ್ಕೆ ಸಾಕ್ಣಿಯಾಗಲಿದೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾರಾಟ ಮೇಳ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
23rd February 2025
ಮಲ್ಲಮ್ಮ ನುಡಿ ವಾರ್ತೆ
ಯಾದಗಿರಿ :ಫೆ.22: ಪ್ರಸಕ್ತ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ, ಕಾರಣ ಗ್ರಾಮೀಣ ಭಾಗದ ಜನರು ತಮ್ಮಮಕ್ಕಳಿಗೆ ತಪ್ಪದೇ ಗುಣಮಟ್ಟದ ಶಿಕ್ಷಣ ಒದಗಿಸಿ, ಅದರಿಂದ ಮಾತ್ರ ಅವರು ಮುಂದೆ ಗುರಿ ತಲುಪಿ,
ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಕಾಣಲೂ ಸಾಧ್ಯ ಎಂದು ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು. ಜಿಲ್ಲೆಯಹುಣಸಗಿ ತಾಲ್ಲೂಕಿನ ಮುದನೂರ (ಕೆ)ಗ್ರಾಮದ ಶ್ರೀ ದೇವರ ದಾಸಿಮಯ್ಯ ಶಿಕ್ಷಣ ಸಂಸ್ಥೆಯ ಹಮ್ಮಿಕೊಂಡಿದ್ದ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯನ್ನು ನಡೆಸುವುದು
ಒಂದು ಸವಾಲಿನ ಕೆಲಸ,
ಉನ್ನತ ಸಂಸ್ಕಾರಮನೆತನದಲ್ಲಿ ಜನಿಸಿದ ಶಾಂತರಡ್ಡಿ ಚೌದ್ರಿ ಅವರು, ಇಂಜಿನಿಯರ್ ಪದವಿದರರು, ಬೇರೆ ಕಡೆ ಅವರಿಗೆ ಕೆಲಸ ಮಾಡಲು ಲಕ್ಷಾಂತರ ರೂ.ಹಣ ವೇತನ ಸಿಗುತ್ತಿತ್ತು, ಆದರೆ ಅವರು ಶೈಕ್ಷಣಿಕ ಹಿಂದುಳಿದರುವ ತಮ್ಮ ಭಾಗದಲ್ಲಿ ಕನ್ನಡದ ಆಧ್ಯ ವಚನಕಾರ ದೇವರ
ದಾಸಿಮಯ್ಯ ಅವರ ಹುಟ್ಟೂರು ಸಹ ಇದೆ ಗ್ರಾಮವಾಗಿದೆ.ಅವರ ಹೆಸರಿನಲ್ಲಿ 1995ರಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ, ಕನ್ನಡ ಮಾಧ್ಯಮದಲ್ಲಿಹೈಸ್ಕೂಲ್‌ವರೆಗೆ ವಿಧ್ಯಾರ್ಥಿಗಳಿಗೆ ವಿಧ್ಯಾದಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು
400
ಹೇಳಿದರು.
ಜಿ.ಪಂ ಮಾಜಿಸದಸ್ಯಹೆಚ್.ಸಿ
ಪಾಟೀಲ್ ರಾಜನಕೋಳೂರ
ಮಾತನಾಡಿ,ಯಾವುದೇ ವ್ಯಕ್ತಿ ಸಾಧನೆಮಾಡಬೇಕಾದರೆಮೊದಲು
ಆಸಕ್ತಿ, ಶ್ರದ್ಧೆ, ಛಲ, ನಿರಂತರ ಪರಿಶ್ರಮ ಹೊಂದಿರಬೇಕು, ಆದಿಶೆಯಲ್ಲಿ ಚೌದ್ರಿಯವರು ಅನೇಕ ಕಷ್ಟಗಳ ಮದ್ಯೆ 15 ಕೋಣೆಗಳ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಿ, ಹಲವಾರು ವಿಧ್ಯಾವಂತರಿಗೆ ಶಿಕ್ಷಕ ಪವಿತ್ರ ಕೆಲಸ ನೀಡುವ ಜೊತೆಗೆ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ, ಇಲ್ಲಿ ಅಭ್ಯಾಸ ಮಾಡಿದ ವಿಧ್ಯಾರ್ಥಿಗಳು ಹಲವಾರು
ಕ್ಷೇತ್ರಗಳಲ್ಲಿ ಗುರಿ ತಲುಪಿ ಶಾಲೆಗೆ ತರಲೀ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಾಂತರಡ್ಡಿಚೌದ್ರಿಅಧ್ಯಕ್ಷತೆವಹಿಸಿ
ಮಾತನಾಡಿ, ನಾನು ಬದುಕಿನಲ್ಲಿ ಕಷ್ಟಗಳೇ ಬದುಕಿನ ಜೀವಂತ ಲಕ್ಷಣಗಳು ಎಂದು ಅರಿತು ಎಲ್ಲರ ಸಹಕಾರದಿಂದ ಈ ಭಾಗದಲ್ಲಿ ಶೈಕ್ಷಣಿಕ
ಬದಲಾವಣೆಗೆ ನಿರಂತರ ಕೆಲಸ
ಮಾಡುತ್ತಿದ್ದೇನೆ, ಇದರಿಂದ ನನಗೆ ಆತ್ಮತೃಪ್ತಿ ಇದೆ, ನನ್ನ ಬದುಕಿನ ಇನ್ನೊಂದು ಮಹತ್ವದ ಕೆಲಸ ದೇವರ ದಾಸಿಮಯ್ಯ ಕ್ಷೇತ್ರವನ್ನು ಪ್ರವಾಸೋಧ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಯಾಗಿ ನೋಡುವುದೇನನ್ನಕನಸಾಗಿದೆ, ಜನಪ್ರತಿನಿಧಿಗಳು,ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿ, ಕೆಲಸ ಮಾಡಿದಾಗ ಮಾತ್ರ ನಮ್ಮ ಗ್ರಾಮ ರಾಜ್ಯದ ಗಮನ ಸೆಳೆಯುತ್ತದೆ ಎಂದುಭಾವುಕರಾಗಿ ತಮ್ಮ ಅಭಿಪ್ರಾಯಗಳನ್ನು
ಹಂಚಿಕೊಂಡರು.
ಇಂದು
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ ದೇವಾಪೂರದ ಜಡಿ ಶಾಂತಲಿಂಗೇಶ್ವರ ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯರು ಆಶೀರ್ವಚನ ನೀಡಿ, ನಾವೂ ಅನೇಕ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕೆಲವರು ಆರಂಭಿಸಿ ಸರ್ಕಾರದಿಂದ ಹಾಗೂ ಖಾಸಗಿ ಸಾಕಷ್ಟು ಹಣ ಸಂಪಾದಿಸಿರುವುದನ್ನು ಕಂಡಿದ್ದೇವೆ. ಆದರೆ ಇಲ್ಲಿ ಚೌದ್ರಿಯವರು ತಮ್ಮ ಸ್ವ- ಂತ 15 ಎಕರೆ ಜಮೀನನ್ನು ಮಾರಾಟ ಮಾಡಿ ಉತ್ತಮ ಶಾಲೆ ನಿರ್ಮಾಣ ಮಾಡಿ, ಎಲ್ಲಾ ವರ್ಗದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡಿಸಿ, ಶಿಕ್ಷಣ ಒದಗಿಸುತ್ತಿರುವ ಕಾರ್ಯ ನಾವೂ ರಾಜ್ಯದಲ್ಲಿ ಬೇರೆಲ್ಲೂ ಕಾಣಲೂ ಸಾಧ್ಯವಿಲ್ಲ ಎಂದು
ನುಡಿದರು.
ಕಾರ್ಯಕ್ರಮದಲ್ಲಿ ರಜತ ಮಹೋತ್ಸವದ ಜ್ಞಾನಸಿರಿಯ ತವನಿಧಿಸ್ಮರಣ ಸಂಚಿಕೆ-2025
ಬಿಡುಗಡೆ ಮಾಡಲಾಯಿತು.
ವೇದಿಕೆ ಮೇಲೆ ಕೋರಿ
ಸಿದ್ದೇಶ್ವರ ಕಂಠಿ ಮಠದ ಸಿದ್ಧ ಚನ್ನಮಲ್ಲಿಕಾರ್ಜುನಸ್ವಾಮಿಜಿ, ಕೂಡ್ಲಿಗಿಯ ಬಾಬಾ ಮಠದ ಮೃತ್ಯುಂಜಯ, ಕೆಂಭಾವಿ ಹಿರೇಮಠದ ಚನ್ನಬಸವ ಸ್ವಾಮಿಜಿ,ಸಣ್ಣಕೆಪ್ಪ ಬಂಡೆಪ್ಪನಳ್ಳಿ, ಬಸಯ್ಯ ಸೋಮಶೇಖರ ಮಠ ಯಾಳಗಿ, ಗಿರಿಧರ
ರಾಜ್ಯ ಶಿವಾಚಾರ್ಯ ಹಿರೇಮಠ
ಮುದನೂರ,
ಬಬ್ದುಗೌಡ, ಸುರೇಶ ಸಜ್ಜನ್, ವಿಶ್ವನಾಥರಡ್ಡಿದರ್ಶನಾಪೂರ, ರಾಜಾ ಮುಕುಂದ ನಾಯಕ, ಪ್ರಕಾಶ ಅಂಗಡಿ, ರವೀಂದ್ರ ಕೊಡೆಕಲ್, ವಿರೇಶ ನಿಷ್ಟೆ, ಜಯಲಲೀತಾ ಪಾಟೀಲ್, ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನರಡ್ಡಿಹತ್ತಿಕುಣಿ, ಡಿ.ಸಿ ಪಾಟೀಲ್ ಕೆಂಭಾವಿ, ಕೃಷ್ಣಾರೆಡ್ಡಿ, ಮುಖ್ಯಗುರುಗಳಾದ ಮಹೇಶ ತಾತರಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸೇವು ಜಾದವನಿರೂಪಿಸಿದರೆ, ರಮೇಶಹೂವಿನಹಳ್ಳಿಸ್ವಾಗತಿಸಿದರು, ವಿಜಯಕುಮಾರ ಕರೆಕಲ್ ವಂದಿಸಿದರು.
ನಂತರಶಾಲಾವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರನ್ನು ಆಕರ್ಷಿಸಿತು.
4th October 2024
ಮಲ್ಲಮ್ಮ ನುಡಿ ವಾರ್ತೆ
ಮಾದಿಗ ಸಮುದಾಯಕ್ಕಾದ ಅನ್ಯಾಯ ಸರಪಡಿಸಿ : ದಂಡೋರಾ
ವರದಿ M ರಫೀಕ್ ಪಟೇಲ್
ಯಾದಗಿರಿ : ಇತ್ತಿಚೆಗೆ ಹುಣಸಿಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ಮಾದಿಗ ಸಮಾಜದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಬೇಕು, ಕೃತ್ಯ ಎಸಗಿದ ವ್ಯಕ್ತಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕೆಂದು ಮಾದಿಗ ದಂಡೋರ ರಾಜಾದ್ಯಕ್ಷ ಅಧ್ಯಕ್ಷ ನರಸಪ್ಪ ದಂಡೋರಾ ಒತ್ತಾಯಿಸಿದರು.
ನಗರದ ಹಿರೆ ಅಗತಿಯಿಂದ ಪಾದಯಾತ್ರೆಯ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಪ್ರಕರಣ ದಾಖಲಿಸಿ ಒಂದು ತಿಂಗಳು ಕಳೆದರು ಆರೋಪಿ ಬಂದಿಸಿಲ್ಲ, ಡಿಸಿ ಹಾಗೂ ಎಸ್ ಪಿ ಅವರು ಗ್ರಾಮಕ್ಕೆ ಕಾಟಾಚಾರಕ್ಕೆ ಭೇಟಿ ನೀಡಿ ಆರೋಪಿಗಳನ್ನು ರಕ್ಷಣೆ ಮಾಡಿದ್ದಾರೆ. ಯಾವ ಕಾರಣಕ್ಕೆ ಅವರನ್ನು ಬಂಧಿಸಿಲ್ಲಾ ಎಂದು ಎಂದು ಕಿಡಿ ಕಾರಿದರು.
ಕೆ.ಬಿ ವಾಸು ಮಾತನಾಡಿ, ಸಮಾಜಕ್ಕೆ ಅನ್ಯಾಯವಾದರೆ ನಾವು ಸಹಿಸುವುದಿಲ್ಲಾ ಸಮಾಜಕ್ಕೆ ಅನ್ಯಾಯವಾದರೆ ನಾವು ಎಂದು ಸಹಿಸುವುದಿಲ್ಲಾ. ನ್ಯಾಯಕ್ಕಾಗಿ ಹೋರಾಟ ಮಾಡಲು ಯಾವಾಗಲೂ ಸಿದ್ದರಾಗಿದ್ದೇವೆ ಎಂದರು.
ನಾಗಮ್ಮ ಕಟ್ಟಿಮನಿ ಮಾತನಾಡಿ, ಮಾದಿಗ ಸಮಾಜ ಮಗಳಿಗೆ ಅತ್ಯಾಚಾರ ಮಾಡಿದ ಅರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿ, ನಾಗರೀಕಸಮಾಜಕ್ಕಾದ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ತೆಲಾಂಗಣದ ಲತಾ ಮಾದಿಗ ಮಾತನಾಡಿ, ಕರ್ನಾಟಕದ ರಾಜ್ಯದಲ್ಲಿ ಮಾದಿಗ ಸಮಾಜಕ್ಕೆ ಮಹಿಳೆಯರಿಗೆ ಮಾತ್ರ ಬಹಿಷ್ಕಾರ ಹಾಕಿಲ್ಲಾ, ಇದು ನಮ್ಮ ಸಮಾಜಕ್ಕೆ ಬಹಿಷ್ಕಾರ ಹಾಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ರಾಜು ಹದನೂರ್ ಮಾತನಾಡಿ, ಅತ್ಯಾಚಾರಿಗಳನ್ನು ಕೂಡಲೇ ಬಂದಿಸಬೇಕು. ಕುಟುಂಬಕ್ಕೆ ರಕ್ಷಣೆ ನೀಡಬೇಕು. ಈ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು. ಡಿಸಿ ಮತ್ತು ಎಸ್ ಪಿ ಅವರು ಪ್ರತಿಭಟನೆ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದರು. ಎಡಿಸಿ ಬಂದು ಆರೋಪಿಗಳನ್ನು ಕೂಡಲೇ ಬಂಧಿಸುವAತೆ ಭರವಸೆ ನೀಡಿದ್ದಾಗ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ನಂದಕೂಮಾರ ಬಾಂಬೇಕರ್ ಮಾತನಾಡಿ, ದಲಿತ, ಶೋಷಿತ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಿ, ಪ್ರಕರಣ ರಾಜ್ಯಾದ್ಯಂತ ಸುದ್ದಿಯಾದ ಈ ಘಟನೆ ನಡೆದು ಸುಮಾರು ದಿನಗಳು ಕಳೆದರೂ ನಮ್ಮ ಧ್ವನಿ ಸರ್ಕಾರಕ್ಕೆ ಕೇಳಿಸುತ್ತಿಲ್ವಾ, ಅದರ ವಿರುದ್ಧ ಕ್ರಮ ಕೈಗೊಂಡಿಲ್ಲಾ, ಆರೋಪಿಯನ್ನು ಯಾಕೆ ಬಂದಿಸಿಲ್ಲಾ ಉತ್ತರಿಸಿ ಎಂದರು.
ಪ್ರತಿಭಟನಾ ಪಾದಯಾತ್ರೆಯು ಹಿರೆ ಅಸಗಿಯಿಂದ, ಕನಕ ವೃತ್ತ, ಅಂಬೇಡ್ಕರ್ ವೃತ್ತ, ತಹಸೀಲ್ದಾರ ಕಚೇರಿ, ಶಾಸ್ತ್ರೀ ವೃತ್ತದಿಂದ ಸುಭಾಷ್ಚಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.