

1st March 2025

ತಾಳಿಕೋಟಿ: ಕಳೆದ 30 ವರ್ಷಗಳಿಂದ ಕಣ್ಣಿನ ತಜ್ಞ ವೈದ್ಯರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಡಾ.ಪ್ರಭುಗೌಡ ಲಿಂಗದಳ್ಳಿ ಅವರ ಸೇವೆ ಅನನ್ಯ ಹಾಗೂ ಅನುಕರಣೀಯ ವಾಗಿದೆ ಎಂದು ನಾವದಗಿ ಬ್ರಹನ್ಮಠದ ಪೂಜ್ಯಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ಹೇಳಿದರು. ತಾಲೂಕಿನ ನಾವದಗಿ ಗ್ರಾಮದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದ ಶಾಖಾ ಮಠ ಬ್ರಹನ್ಮಠದಲ್ಲಿ ಗುರು ಪಟ್ಟಾಧಿಕಾರ ಮಹೋತ್ಸವದ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ, ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ವಿಜಯಪುರ ಹಾಗೂ ಬ್ರಹನ್ಮಠ ನಾವದಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷದಲ್ಲಿಯೂ ಡಾ.ಪ್ರಭುಗೌಡರ ಅನುಗ್ರಹ ಆಸ್ಪತ್ರೆ ಸಿಬ್ಬಂದಿಗಳು ಶಿಬಿರದಲ್ಲಿ ತಮ್ಮ ಸೇವೆಯನ್ನು ನೀಡಿದ್ದರು ಎಂದ ಅವರು ಈ ಶಿಬಿರದಲ್ಲಿ ಕಣ್ಣು,ಹೃದಯ ಕಾಯಿಲೆಗೆ, ಬೆನ್ನು ಮೂಳೆಗೆ ಸಂಬಂಧಿಸಿದ ಕಾಯಿಲೆಗಳ ತಪಾಸಣೆ ನಡೆಸಲಾಗುವುದು, ಇಂಥಹ ಉಚಿತ ಆರೋಗ್ಯ ಶಿಬಿರಗಳಿಂದ ಸಮಾಜದಲ್ಲಿರುವ ಬಡವರಿಗೆ ತುಂಬಾ ಅನುಕೂಲವಾಗುತ್ತದೆ. ಈ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರನ್ನು ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.ಶಿಬಿರದಲ್ಲಿ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗೆ 130 ಜನರು ತಪಾಸಣೆ ಮಾಡಿಸಿಕೊಂಡರು,ಇದರಲ್ಲಿ 25 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆಮಾಡಲಾಯಿತು. ಅದೇ ರೀತಿ ಹೃದಯ ಹಾಗೂ ಬೆನ್ನು ಮೂಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಸುಮಾರು 175 ಜನರು ತಪಾಸಣೆ ಮಾಡಿಸಿಕೊಂಡು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಕರಬಸಯ್ಯ ಹಿರೇಮಠ,ಡಾ.ರಾಜಕುಮಾರ್ ಗುರಲಿಂಗಯ್ಯ ಹಿರೇಮಠ, ಡಾ. ಶಿವರಾಜ್ ಹಿರೇಮಠ ಸಿಂಧನೂರ,ಡಾ.ಆರಿಫ್ ಮನಿಯಾರ,ಡಾ. ಪ್ರವೀಣ್ ಹಿರೇಮಠ, ಮಹಾಂತೇಶ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ಸಿಬ್ಬಂದಿಗಳು ಇದ್ದರು.ನಿವೃತ್ತ ಶಿಕ್ಷಕ ಬಸವರಾಜ ಗೊರಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ದೇಶನೂರಿನ ವಿಕಾಸ ಪ್ರಾಥಮಿಕ ಮತ್ತು ಪ್ರೌಢಶಾಲೆಯಿಂದ ನೀಡಿದ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿಗೆ ಸತ್ಕಾರ

ಮಾಜಿ ಶಾಸಕನ ಪುತ್ರನ ಹತ್ಯೆಗೆ ಅನೈತಿಕ ಸಂಬಂಧ ಕಾರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ