

8th March 2025

ಬೆಂಗಳೂರು:
ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ನೀಡಿದ್ದ ಭರವಸೆಯಂತೆ
ಬಜೆಟ್ನಲ್ಲಿ ಪತ್ರಕರ್ತರಿಗೆ ಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿ ಆರೋಗ್ಯ ಯೋಜನೆ ಘೊಷಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಧನ್ಯವಾದ ತಿಳಿಸಿದ್ದಾರೆ.
ಪತ್ರಕರ್ತರಿಗೆ ಪ್ರತ್ಯೇಕ ಹೆಲ್ತ್ ಸ್ಕೀಂ ತರಬೇಕು ಎನ್ನುವುದು ಬಹಳ ವರ್ಷಗಳ ಹೋರಾಟ. ಈ ನಿಟ್ಟಿನಲ್ಲಿ ಯೋಜನೆ ಪ್ರಪ್ರಥಮ ಬಾರಿಗೆ ೋಷಣೆಯಾಗಿದೆ. ಇದನ್ನು ಸ್ವಾಗತಿಸೋಣ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ನಿವೃತ್ತ ಪತ್ರಕರ್ತರ ಮಾಸಾಶನವನ್ನು 12 ಸಾವಿರದಿಂದ 15 ಸಾವಿರಕ್ಕೆ ಮತ್ತು ಅವಲಂಬಿತರಿಗೆ 6 ಸಾವಿರದಿಂದ 7500ಕ್ಕೆ ಹೆಚ್ಚಳ ಮಾಡಿರುವುದಕ್ಕೂ ಧನ್ಯವಾದ ತಿಳಿಸಿದ್ದಾರೆ.
ಸಂಘದ ಹಕ್ಕೊತ್ತಾಯಕ್ಕೆ ಸ್ಪಂದಿಸಿ ಈ ನಿಟ್ಟಿನಲ್ಲಿ ಬೇಡಿಕೆ ಈಡೇರಿಸಲು ಸಹಕಾರ ನೀಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾದ ಕೆ.ವಿ.ಪ್ರಭಾಕರ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ.
ಯೋಜನೆ ವಿಸ್ತರಿಸಲಿ:
ಆರೋಗ್ಯ ಯೋಜನೆಯನ್ನು ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಸೀಮಿತ ಮಾಡದೇ, ಮುಂದೆ ವಾರ್ತಾ ಇಲಾಖೆಯಿಂದ ಮಾನ್ಯತೆ ಪಡೆದಿರುವ ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರಿಗೆ ವಿಸ್ತರಿಸಬೇಕು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಒತ್ತಾಯಿಸಿದ್ದಾರೆ.

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ "ಗಿಳಿವಿಂಡು "ಸಮಗ್ರ ಅಭಿವೃದ್ದಿಗಾಗಿ ಕೇರಳ - ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ